ETV Bharat / entertainment

ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಭೇಟಿಯಾದ ಚಿರಂಜೀವಿ

author img

By ETV Bharat Karnataka Team

Published : Feb 10, 2024, 8:22 AM IST

Updated : Feb 10, 2024, 8:54 AM IST

ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾದ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ತೆಲಂಗಾಣ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಅಭಿನಂದನೆ ತಿಳಿಸಿದ್ದಾರೆ.

chiranjeevi met Tamilisai Soundararajan
ತಮಿಳಿಸೈ ಸೌಂದರರಾಜನ್ ಭೇಟಿಯಾದ ಚಿರಂಜೀವಿ

ಭಾರತೀಯ ಚಿತ್ರರಂಗದಲ್ಲಿನ ಜೀವಮಾನದ ಸಾಧನೆ ಮತ್ತು ಸಮಾಜ ಸೇವೆ ಗುರುತಿಸಿ ಕೇಂದ್ರ ಸರ್ಕಾರ ಸೌತ್ ಸಿನಿಮಾ ಇಂಡಸ್ಟ್ರಿಯ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಿದೆ. ಜನವರಿ 25 ರಂದು ಭಾರತದ ಪ್ರತಿಷ್ಠಿತ ಪದ್ಮ ಪ್ರಶಸ್ತಿ ಪುರಸ್ಕೃತರ ಪಟ್ಟಿ ಅನಾವರಣಗೊಳಿಸಲಾಗಿತ್ತು. ಸಿನಿ ವಲಯದಲ್ಲಿ ಚಿರಂಜೀವಿ ಅವರು ಈ ಗೌರವಕ್ಕೆ ಪಾತ್ರರಾಗಲಿದ್ದು, ಅಭಿಮಾನಿಗಳೂ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಹೆಸರಾಂತ ನಟನಿಗೆ ಅಭಿನಂದನೆ ತಿಳಿಸಿದ್ದಾರೆ. ಹಲವರು ನಟನನ್ನು ಭೇಟಿಯಾಗಿ ಉತ್ತಮ ಕ್ಷಣಗಳನ್ನು ಕಳೆದಿದ್ದಾರೆ.

ತೆಲಂಗಾಣ ರಾಜ್ಯಪಾಲರನ್ನು ಭೇಟಿಯಾದ ಚಿರಂಜೀವಿ: ತೆಲಂಗಾಣ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ರಾಜಭವನಕ್ಕೆ ಭೇಟಿ ನೀಡುವಂತೆ ಹಿರಿಯ ನಟ ಚಿರಂಜೀವಿ ಅವರನ್ನು ಆಹ್ವಾನಿಸಿದ್ದರು. ರಾಜ್ಯಪಾಲರ ವಿಶೇಷ ಆಹ್ವಾನದ ಮೇರೆಗೆ ಫೆಬ್ರವರಿ 9, ಶುಕ್ರವಾರದಂದು ಮೆಗಾಸ್ಟಾರ್ ರಾಜಭವನಕ್ಕೆ ಆಗಮಿಸಿ ರಾಜ್ಯಪಾಲರನ್ನು ಭೇಟಿ ಮಾಡಿದರು. ರಾಜ್ಯಪಾಲರು, ನಟನ ಸಾಧನೆ ಗುರುತಿಸಿ, ಅಭಿನಂದನೆ ತಿಳಿಸಿ ಸನ್ಮಾನಿಸಿದರು. ಈ ವಿಶೇಷ ಕ್ಷಣವನ್ನು ನಟ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಧನ್ಯವಾದ ತಿಳಿಸಿದ್ದಾರೆ.

ಶುಕ್ರವಾರದಂದು ರಾಜಭವನದಲ್ಲಿ ಚಿರಂಜೀವಿ ಅವರನ್ನು ರಾಜ್ಯಪಾಲರಾದ ತಮಿಳಿಸೈ ಸೌಂದರರಾಜನ್ ಬಹಳ ಸಂತಸದಿಂದ ಸ್ವಾಗತಿಸಿದರು. ನಟನಿಗೆ ಶಾಲು ಹೊದಿಸಿ, ಪುಷ್ಪಗುಚ್ಛ ನಿಡಿ ಗೌರವಿಸಿದರು. ನಂತರ ಭಗವಾನ್ ಸುಬ್ರಮಣ್ಯಂ ಸ್ವಾಮಿಯ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಿದರು. ಬಳಿಕ ಇಬ್ಬರೂ ಕೆಲ ವಿಷಯಗಳ ಬಗ್ಗೆ ಚರ್ಚಿಸಿದರು.

ಚಿರಂಜೀವಿ ಅವರು ರಾಜ್ಯಪಾಲರೊಂದಿಗಿನ ಈ ವಿಶೇಷ ಸಭೆಯ ಫೋಟೋಗಳು ಮತ್ತು ವಿಡಿಯೋಗಳನ್ನು ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ ಮತ್ತು ಎಕ್ಸ್ ಖಾತೆಗಳಲ್ಲಿ ಹಂಚಿಕೊಂಡು ಧನ್ಯವಾದ ಅರ್ಪಿಸಿದ್ದಾರೆ. 'ಇಂದು ರಾಜಭವನದಲ್ಲಿ ಆತಿಥ್ಯ ವಹಿಸಿದ್ದಕ್ಕಾಗಿ ಮತ್ತು ಪದ್ಮವಿಭೂಷಣ ಪುರಸ್ಕಾರಕ್ಕೆ ಶುಭ ಕೋರಿದ್ದಕ್ಕಾಗಿ ತೆಲಂಗಾಣ ರಾಜ್ಯಪಾಲರಾದ ಮೇಡಂ ತಮಿಳಿಸೈ ಸೌಂದರರಾಜನ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮೊಂದಿಗೆ ಮತ್ತು ಡಾ. ಸುಂದರರಾಜನ್ ಅವರೊಂದಿಗೆ ಸಂವಾದ ನಡೆಸಿದ್ದು ಖುಷಿ ಕೊಟ್ಟಿದೆ' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: 28 ವರ್ಷಗಳ ಬಳಿಕ ಭಾರತದಲ್ಲಿ ವಿಶ್ವ ಸುಂದರಿ ಸ್ಪರ್ಧೆ: ಸಂಪೂರ್ಣ ಮಾಹಿತಿ ನಿಮಗಾಗಿ

ವಿಡಿಯೋದಲ್ಲಿ, ಚಿರಂಜೀವಿ ಜೊತೆ ಪತ್ನಿ ಸುರೇಖಾ ಕೊನಿಡೇಲಾ ಕೂಡ ಕಾಣಿಸಿಕೊಂಡಿದ್ದಾರೆ. ರಾಜ್ಯಪಾಲರು ಚಿತ್ರರಂಗಕ್ಕೆ ಚಿರಂಜೀವಿಯವರ ಅಸಾಧಾರಣ ಕೊಡುಗೆಯನ್ನು ಶ್ಲಾಘಿಸಿದರು. ಅಲ್ಲದೇ ಸಮಾಜ ಸೇವೆಯಲ್ಲಿನ ನಟನ ಸಮರ್ಪಣೆಯನ್ನೂ ಶ್ಲಾಘಿಸಿದರು. ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮವಿಭೂಷಣ ಗೌರವಕ್ಕೆ ಪಾತ್ರರಾಗಿರೋ ಚಿರಂಜೀವಿ ಅವರು ಮುಂದಿನ ಸಿನಿಮಾ 'ವಿಶ್ವಂಭರ'. ಈಗಾಗಲೇ ಚಿತ್ರದ ಶೂಟಿಂಗ್ ಶುರುವಾಗಿದೆ. ನಟನ ಮುಂದಿನ ಚಿತ್ರಗಳ ಮೇಲೆ ಅಬಿಮಾನಿಗಳು ಕುತೂಹಲ ವ್ಯಕ್ತಪಡಿಸುತ್ತಿದ್ದು, ಅಪ್​ಡೇಟ್ಸ್ ಕೊಡುವಂತೆ ಬೇಡಿಕೆ ಇಡುತ್ತಿದ್ದಾರೆ.

ಇದನ್ನೂ ಓದಿ: ರಿಷಬ್​ ಪ್ರಗತಿ ದಾಂಪತ್ಯಕ್ಕೆ 8 ವರ್ಷಗಳ ಸಂಭ್ರಮ: ಕಾಂತಾರ ಸ್ಟಾರ್​ನ ಲವ್​ ಸ್ಟೋರಿ ಬಗ್ಗೆ ನಿಮಗೆಷ್ಟು ಗೊತ್ತು?

Last Updated : Feb 10, 2024, 8:54 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.