ETV Bharat / entertainment

ಚೈತ್ರಾ ಕುಂದಾಪುರ ಪ್ರಕರಣಗಳ ಲೆಕ್ಕ ಕೊಟ್ಟ ಜಗದೀಶ್​: '50 ಅಲ್ಲ 100 ಕೇಸ್​ ಹಾಕಿಸಿಕೊಳ್ತೀನಿ' ಎಂದ ಲೇಡಿ ಸ್ಪರ್ಧಿ - BIGG BOSS

ಜಗದೀಶ್​​ ಅವರು ಚೈತ್ರಾ ಕುಂದಾಪುರ ಅವರ ಪ್ರಕರಣಗಳ ಸಂಖ್ಯೆ ಎತ್ತಿದ್ದು, ಬಿಗ್​ ಬಾಸ್​ ಮನೆಯಲ್ಲಿ ದೊಡ್ಡ ಜಗಳ ನಡೆದಿದೆ.

Bigg Boss Poster
ಬಿಗ್​ ಬಾಸ್​ ಪೋಸ್ಟರ್ (Social Media)
author img

By ETV Bharat Entertainment Team

Published : Oct 15, 2024, 4:02 PM IST

ಬಿಗ್​ ಬಾಸ್​ ಕನ್ನಡ ಸೀಸನ್​ 11 ಮೂರನೇ ವಾರದ ಆಟ ಮುಂದುವರಿಸಿದೆ. ಜಗಳ, ಕಿರುಚಾಟ, ವಾದ ವಿವಾದಗಳು ಲೆಕ್ಕಕ್ಕಿಂತ ಕೊಂಚ ಹೆಚ್ಚೇ ಎನ್ನಬಹುದು. ಇಂದಿನ ಸಂಚಿಕೆಯಲ್ಲಿ ಚೈತ್ರಾ ಕುಂದಾಪುರ ವರ್ಸಸ್ ಜಗದೀಶ್​​ ಅವರ ಮಾತಿನ ಅಬ್ಬರವನ್ನು ನೋಡಬಹುದು.

ಎರಡು ವಾರಗಳ ಹಿಂದೆ 'ಬಿಗ್​ ಬಾಸ್​ ಕನ್ನಡ ಸೀಸನ್​ 11'ರ ಸ್ಪರ್ಧಿಗಳ ಪಟ್ಟಿ ರಿವೀಲ್​ ಆದಾಗ ಅಚ್ಚರಿ ಮೂಡಿಸಿದ ಹೆಸರು ಚೈತ್ರಾ ಕುಂದಾಪುರ. ಹೊರ ಪ್ರಪಂಚದಲ್ಲಿ ಅವರ ಮೇಲೆ ಕೆಲ ಆರೋಪಗಳು ಕೇಳಿಬಂದು ಪ್ರಕರಣಗಳೂ ದಾಖಲಾಗಿದ್ದವು. ಮಾತುಗಾರ್ತಿ ಎಂದೇ ಹೆಸರುವಾಸಿಯಾಗಿದ್ದ ಚೈತ್ರಾ ಬಿಗ್​ ಬಾಸ್​ ಮನೆಯೊಳಗೆ ಎಂಟ್ರಿ ಕೊಟ್ಟಾಗ ಈ ಮನೆಯಲ್ಲಿ ಮಾತಿನ ಯುದ್ಧ ನಡೆಯುತ್ತದೆ ಎಂದೇ ಭಾವಿಸಿದ್ದರು. ಆದ್ರೆ ನಿರೀಕ್ಷಿಸಿದ್ದಷ್ಟು ಮಾತು ಚೈತ್ರಾ ಅವರಿಂದ ಬರಲಿಲ್ಲ. ಹಾಗಂತಾ ಸುಮ್ಮನೆಯೂ ಕುಳಿತಿಲ್ಲ. ಎದುರಾಳಿಗಳ ಮಾತಿಗೆ ಚಾಟಿ ಬೀಸುವ ಕೆಲಸ ಮುಂದುವರಿಸಿದ್ದಾರೆ. ವಾರಾಂತ್ಯದ ಎಪಿಸೋಡ್​ನಲ್ಲಿ ಅವರಿಗೆ ಸಿಕ್ಕ ಸಲಹೆ ಬಳಿಕ ಮತ್ತಷ್ಟು ಸಕ್ರಿಯರಾಗಿದ್ದಾರೆ. ಅದರಂತೆ ಇದೀಗ ಜಗದೀಶ್ ಎದುರು ದನಿ ಏರಿಸಿದ್ದಾರೆ.

ಚೈತ್ರಾ ಕುಂದಾಪುರ ವಿರುದ್ಧ ಹೊರಗಡೆ ಹಲವು ಪ್ರಕರಣಗಳು ದಾಖಲಾಗಿದ್ದವು. ಇದರ ಲೆಕ್ಕವನ್ನು ಬಿಗ್​ ಬಾಸ್​ ಮನೆಯಲ್ಲಿ ಜಗದೀಶ್ ಅವರು ಕೊಟ್ಟಿದ್ದಾರೆ. ಇದು ವಾಕ್ಸಮರಕ್ಕೆ ಕಾರಣವಾಗಿದೆ. ಇಬ್ಬರ ನಡುವೆ ದೊಡ್ಡ ಜಗಳವೇ ನಡೆದು ಹೋಗಿದೆ.

''ನೀನಾ? ನಾನಾ? ಅಂತ ವಾಗ್ಯುದ್ಧಕ್ಕೆ ನಿಂತ ಜಗದೀಶ್‌ ಹಾಗೂ ಚೈತ್ರಾ'' ಬಿಗ್ ಬಾಸ್ ಕನ್ನಡ ಸೀಸನ್ 11. ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್​ ಅಡಿ ಬಿಗ್​ ಬಾಸ್​ ಇಂದಿನ ಪ್ರೋಮೋ ಅನಾವರಣಗೊಳಿಸಿದೆ. ಇದು ಸಂಪೂರ್ನ ಸಂಚಿಕೆ ವೀಕ್ಷಿಸುವ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.

ಇದನ್ನೂ ಓದಿ: ಚಾನಲ್​ನೊಂದಿಗಿನ ನನ್ನ ಸಂಬಂಧ ಅದ್ಭುತ, ನನ್ನವರು ಆರೋಪಗಳನ್ನು ಎದುರಿಸುತ್ತಿರುವಾಗ ಸುಮ್ಮನೆ ಕೂರುವವನಲ್ಲ: ಸುದೀಪ್​​

ಚೈತ್ರಾ ಕುಂದಾಪುರ ಮತ್ತು ಜಗದಿಶ್​ ನಡುವೆ ಯಾವುದೇ ವಿಷಯವಾಗಿ ಕಿರಿಕ್​ ಶುರುವಾಗಿದೆ. ಮಾತಿಗೆ ಮಾತು ಕೊಡುವ ಭರದಲ್ಲಿ ಜಗದೀಶ್​ ಅವರು, ಆಕೆ ಏನ್​ ಮಾತಾಡ್ತಾಳೆ ಚೈತ್ರಾ. ನನಗೂ ಫಾಲೋವರ್ಸ್ ಇದ್ದಾರೆ. ಆಕೆ ಮೇಲೆ 28 ಕೇಸ್​ಗಳಿವೆ ಎಂದಿದ್ದಾರೆ. ಪ್ರಕರಣಗಳ ಸಂಖ್ಯೆ ಕೊಟ್ಟಿದ್ದು ಚೈತ್ರಾ ಅವರನ್ನು ಕೆರಳಿಸಿದೆ. ಅದಕ್ಕೆ ಪ್ರತಿಕ್ರಿಯಿಸಿದ ಅವರು, ನನ್ ಕೇಸ್​ ಬಗ್ಗೆ ಮಾತನಾಡಲು ಯಾವನಿಗೂ ಯೋಗ್ಯತೆ ಇಲ್ಲ. 50 ಅಲ್ಲ 100 ಕೇಸ್​ ಹಾಕಿಸಿಕೊಳ್ತೀನಿ. ಇವರಪ್ಪನಿಗೆ ಹೊಡೆದು ನಾನು ಕೇಸ್​ ಹಾಕಿಸಿಕೊಂಡಿಲ್ಲ. ಯಾವನಾದ್ರೂ ಅಪ್ಪನಿಗೆ ಹುಟ್ಟಿದ್ರೆ ನನ್ನ ಕಣ್ಣೆದುರು ಬಂದು ಮಾತನಾಡಲಿ ಎಂದು ಚೈತ್ರಾ ಸವಾಲ್​ ಹಾಕಿದ್ದಾರೆ. ಪ್ರೋಮೋ ಕೊನೆಯಲ್ಲಿ ಇಬ್ಬರೂ ಪರಸ್ಪರ ಗುರಾಯಿಸಿಕೊಂಡು ನೋಡುತ್ತಿರುವ ದೃಶ್ಯ ನೋಡುಗರ ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: 'ನಾನು ಅನ್​​​ಫಿಟ್​​ ಅನಿಸ್ತಿದೆ': ಬಿಗ್​ ಬಾಸ್​ ಮನೆಯಲ್ಲಿ ಧನರಾಜ್​ ಕಣ್ಣೀರು; ಬ್ಯಾಗ್​ ಪ್ಯಾಕ್ ಮಾಡಲು ಸಲಹೆ

ಇದಕ್ಕೂ ಮೊದಲು 'ಅತಿಥಿಯೋ, ಆಟಗಾರನೋ? ಫುಲ್ ಕನ್‌ಫ್ಯೂಶನ್!' ಬಿಗ್ ಬಾಸ್ ಕನ್ನಡ ಸೀಸನ್ 11. ಸೋಮ-ಶುಕ್ರ ರಾತ್ರಿ 9:30 ಎಂಬ ಕ್ಯಾಪ್ಷನ್​ನೊಂದಿಗೆ ಪ್ರೋಮೋ ಬಿಡುಗಡೆ ಆಗಿದ್ದು, ಧನರಾಜ್​​ ಭಾವುಕರಾಗಿ ಕಣ್ಣೀರಿಟ್ಟಿರುವುದನ್ನು ಕಾಣಬಹುದು. ಕ್ಯಾಪ್ಟನ್​​ ಶಿಶಿರ್​ ಅವರು ಧನರಾಜ್​ ಆಚಾರ್​ ಅವರನ್ನು ನೇರವಾಗಿ ನಾಮಿನೇಟ್​​ ಮಾಡಿದ್ದಾರೆ. ಈ ಹಿನ್ನೆಲೆ ನಾನು ಅನ್​ಫಿಟ್​ ಅನಿಸ್ತಿದೆ ಎಂದು ಧನರಾಜ್​ ಕುಗ್ಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.