ETV Bharat / entertainment

ಗೆದ್ದು ಬೀಗಿದ ತಾರೆಯರಿವರು; ಆನ್​ಸ್ಕ್ರೀನ್​​​ನಿಂದ ಸಂಸತ್​ವರೆಗೆ - ಜನಸೇವೆಗೆ ಸಜ್ಜಾದ ಸೆಲೆಬ್ರಿಟಿಗಳು - Election Results - ELECTION RESULTS

ರಾಜಕೀಯ ಹಣಾಹಣಿಯಲ್ಲಿ ವಿಜಯಶಾಲಿಯಾಗಿರೋ ತಾರೆಯರು ಜನಸೇವೆಗೆ ಸಜ್ಜಾಗಿದ್ದಾರೆ.

Celebrities who won in Election
ಚುನಾವಣೆಯಲ್ಲಿ ಗೆದ್ದ ತಾರೆಯರು (ANI/Getty/ETV Bharat)
author img

By ETV Bharat Karnataka Team

Published : Jun 5, 2024, 1:18 PM IST

ಪ್ರಜಾಫ್ರಭುತ್ವ ಭೂಮಿಯಲ್ಲಿ ಭಾರಿ ಕುತೂಹಲ ಮೂಡಿಸಿದ್ದ ಲೋಕಸಭಾ ಚುನಾಣೆಯ ಫಲಿತಾಂಶ ನಿನ್ನೆ ಹೊರಬಿದ್ದಿದೆ. ಸೋಲು-ಗೆಲುವಿನ ನೋವು-ನಲಿವಿನ ವಾತಾವರಣದಲ್ಲಿ ಭಾರತವಿದ್ದು, ಈ ಬಾರಿ ಕುತೂಹಲ ಕೊಂಚ ಹೆಚ್ಚೇ ಇತ್ತು ಎನ್ನಬಹುದು. ಮನರಂಜನಾ ಉದ್ಯಮದ ಗಣ್ಯರು ಕೂಡ ಈ ಪ್ರಜಾಪ್ರಭುತ್ವ ಹಬ್ಬದಲ್ಲಿ ಭಾಗಿಯಾಗಿದ್ದರು. ಹಿಮಾಚಲ ಪ್ರದೇಶದಿಂದ ಹಿಡಿದು ಪಶ್ಚಿಮ ಬಂಗಾಳದವರೆಗೆ ಸೆಲೆಬ್ರಿಟಿಗಳು ರಾಜಕೀಯ ಕ್ಷೇತ್ರದಲ್ಲಿ ತಮ್ಮ ಸ್ಪರ್ಧೆಯನ್ನು ಆನಂದಿಸಿದ್ದಾರೆ.

ಲೋಕಸಭಾ ಚುನಾವಣೆ 2024 ಮುಕ್ತಾಯಗೊಂಡಿದ್ದು, ಫಲಿತಾಂಶ ಘೋಷಣೆಯಾಗಿದೆ. ಈ ರಾಜಕೀಯ ಹಣಾಹಣಿಯಲ್ಲಿ ವಿಜಯಶಾಲಿಯಾಗಿರುವ ತಾರೆಯರ ಕುರಿತ ಮಾಹಿತಿ ಇಲ್ಲಿದೆ.

  • ಕಂಗನಾ ರಣಾವತ್​​: ಬಾಲಿವುಡ್‌ನ ಬೋಲ್ಡ್​​ ಬ್ಯೂಟಿ ಕಂಗನಾ ರಣಾವತ್​ ಬಿಜೆಪಿಯೊಂದಿಗೆ ರಾಜಕೀಯ ಜೀವನ ಶುರು ಮಾಡಿದ್ದಾರೆ. ರಾಜಕೀಯ ದಿಗ್ಗಜರ ತೀವ್ರ ಪೈಪೋಟಿ ನಡುವೆ ತಮ್ಮ ತವರು ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಕಂಡಿದ್ದಾರೆ. ಈಗಾಗಲೇ ರಾಜಕೀಯ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದ ವಿಕ್ರಮಾದಿತ್ಯ ಸಿಂಗ್ ಮತ್ತು ಪ್ರತಿಭಾ ಸಿಂಗ್ ಅವರ ವಿರುದ್ಧ ಕಂಗನಾ ವಿಜಯಶಾಲಿಯಾಗಿದ್ದು, ರಾಜಕೀಯ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲನ್ನು ಸೃಷ್ಟಿಸಿದ್ದಾರೆ.
  • ಸುರೇಶ್ ಗೋಪಿ: ಕೇರಳದ ತ್ರಿಶೂರ್ ಲೋಕಸಭಾ ಕ್ಷೇತ್ರದಲ್ಲಿ ಮಲಯಾಳಂ ನಟ ಸುರೇಶ್ ಗೋಪಿ ಗೆಲುವು ಕಂಡಿದ್ದಾರೆ. ಜಿಜೆಪಿಯಿಂದ ಆಯ್ಕೆ ಆದ ಕೇರಳ ರಾಜ್ಯದ ಮೊದಲ ಸಂಸದ ಎಂಬ ಖ್ಯಾತಿ ಗಳಿಸಿದ್ದಾರೆ. ಈ ನಟನ ಗೆಲುವು ಕೇರಳದಲ್ಲಿ ಬದಲಾಗುತ್ತಿರುವ ರಾಜಕೀಯ ಚಿತ್ರಣಕ್ಕೆ ಹಿಡಿದ ಕೈಗನ್ನಡಿಯಾಗಿದೆ.
  • ಪವನ್ ಕಲ್ಯಾಣ್: ಜನಸೇನಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್, ಆಂಧ್ರಪ್ರದೇಶದ ಪಿಠಾಪುರಂನಲ್ಲಿ ಗೆಲುವು ಸಾಧಿಸುವ ಮೂಲಕ ತಮ್ಮ ಜನಪ್ರಿಯತೆಯನ್ನು ಸಾಬೀತುಪಡಿಸಿದ್ದಾರೆ. ವೈಎಸ್‌ಆರ್‌ಸಿಪಿಯ ವಂಗಾ ಗೀತಾ ವಿಶ್ವನಾಥಂ ವಿರುದ್ಧ ಗೆಲುವು ಸಾಧಿಸಿದ್ದು, ರಾಜಕೀಯ ಕ್ಷೇತ್ರದಲ್ಲಿ ಅವರ ಜನಪ್ರಿಯತೆ ಜೊತೆಗೆ ಪ್ರಭಾವ ಸಾಬೀತಾಗಿದೆ.
  • ಅರುಣ್ ಗೋವಿಲ್: ರಮಾನಂದ್ ಸಾಗರ್ ಅವರ ರಾಮಾಯಣದಲ್ಲಿ ಭಗವಾನ್ ಶ್ರೀರಾಮನ ಪಾತ್ರದಿಂದ ಹೆಸರುವಾಸಿಯಾದ ಅರುಣ್ ಗೋವಿಲ್ ಉತ್ತರ ಪ್ರದೇಶದ ಮೀರತ್‌ನಲ್ಲಿ ಗೆಲುವು ದಾಧಿಸಿದ್ದಾರೆ. ಸ್ಮಾಲ್​​​ ಸ್ಕ್ರೀನ್​​​​ನಿಂದ ರಾಜಕೀಯ ಕ್ಷೇತ್ರಕ್ಕೆ ಬಿಜೆಪಿ ಮೂಲಕ ಅವರ ಅವರ ಪಯಣ ಸಾಗಿದೆ.
  • ಮನೋಜ್ ತಿವಾರಿ: ಭೋಜ್‌ಪುರಿ ಸೂಪರ್‌ ಸ್ಟಾರ್, ಬಿಜೆಪಿಯ ಮನೋಜ್ ತಿವಾರಿ ಈಶಾನ್ಯ ದೆಹಲಿ ಲೋಕಸಭಾ ಕ್ಷೇತ್ರದಿಂಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಅವರನ್ನು ಸೋಲಿಸಿ, ಗೆಲುವನ್ನು ತಮ್ಮದಾಗಿಸಿಕೊಂಡಿದ್ದಾರೆ.
  • ಹೇಮಾ ಮಾಲಿನಿ: ಹಿರಿಯ ನಟಿ ಹೇಮಾ ಮಾಲಿನಿ ಉತ್ತರ ಪ್ರದೇಶದ ಮಥುರಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ, ತಮ್ಮ ರಾಜಕೀಯ ಪರಾಕ್ರಮ ಪ್ರದರ್ಶಿಸಿದ್ದಾರೆ. 16 ಅಭ್ಯರ್ಥಿಗಳ ವಿರುದ್ಧ ನಟಿಯ ಈ ಗೆಲುವು ಅವರ ಜನಪ್ರಿಯತೆಗೆ ಪುರಾವೆಯಂತಿದೆ.
  • ಶತ್ರುಘ್ನ ಸಿನ್ಹಾ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಭ್ಯರ್ಥಿಯಾಗಿ ಪಶ್ಚಿಮ ಬಂಗಾಳದ ಅಸನ್ಸೋಲ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಹಿರಿಯ ನಟ ಶತ್ರುಘ್ನ​​ ಸಿನ್ಹಾ ಗೆಲುವು ಸಾಧಿಸಿದ್ದಾರೆ. ಬೆಳ್ಳಿತೆರೆಯಿಂದ ರಾಜಕೀಯ ಕ್ಷೇತ್ರದವರೆಗಿನ ಅವರ ಪಯಣ ಸಾರ್ವಜನಿಕ ಸೇವೆ ಮೇಲಿನ ಅವರ ಬದ್ಧತೆಯನ್ನು ಪ್ರದರ್ಶಿಸಿದೆ.
  • ರವಿ ಕಿಶನ್: ನಟ, ಬಿಜೆಪಿ ಅಭ್ಯರ್ಥಿ ರವಿ ಕಿಶನ್ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಭರ್ಜರಿ ಗೆಲುವು ಕಂಡಿದ್ದಾರೆ. ಅಸಾಧಾರಣ ಎದುರಾಳಿಗಳ ವಿರುದ್ಧದ ಅವರ ಈ ವಿಜಯ ರಾಜಕೀಯ ಕ್ಷೇತ್ರದಲ್ಲಿ ಅವರ ಬೆಳವಣಿಗೆ ಮತ್ತು ಪ್ರಭಾವವನ್ನು ಸೂಚಿಸಿದೆ.
  • ಜೂನ್ ಮಾಲಿಯಾ: ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ, ಬಂಗಾಳಿ ನಟಿ ಜೂನ್ ಮಾಲಿಯಾ ಪಶ್ಚಿಮ ಬಂಗಾಳದ ಮೇದಿನಿಪುರದಲ್ಲಿ ವಿಜಯಶಾಲಿಯಾಗಿದ್ದಾರೆ.
  • ಸತಾಬ್ದಿ ರಾಯ್: ಮೂರು ಬಾರಿ ತೃಣಮೂಲ ಸಂಸದರಾಗಿರುವ ಬಂಗಾಳಿ ತಾರೆ ಸತಾಬ್ದಿ ರಾಯ್ ಅವರು ಬಿರ್ಭೂಮ್‌ನಲ್ಲಿ ಗೆದ್ದು ಬೀಗಿದ್ದಾರೆ. 11 ಸ್ಪರ್ಧಿಗಳನ್ನು ಸೋಲಿಸಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಜನಸೇವೆಯ ತಮ್ಮ ಪರಂಪರೆಯನ್ನು ಮುಂದುವರಿಸಸಲು ಸಜ್ಜಾಗಿದ್ದಾರೆ.
  • ದೇವ್ ಅಧಿಕಾರಿ ಮತ್ತು ಹಿರಣ್ ಚಟರ್ಜಿ: ಪಶ್ಚಿಮ ಬಂಗಾಳದ ಘಟಾಲ್ ಕ್ಷೇತ್ರದ ರಣರಂಗಣದಲ್ಲಿ ಕಲಾವಿದರಾದ, ತೃಣಮೂಲ ಕಾಂಗ್ರೆಸ್‌ನ ದೇವ್ ಅಧಿಕಾರಿ ಮತ್ತು ಭಾರತೀಯ ಜನತಾ ಪಕ್ಷದ ಹಿರನ್ ಚಟರ್ಜಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ, ದೇವ್ ವಿಜಯಶಾಲಿಯಾಗಿ ಹೊರಹೊಮ್ಮಿದರು.
  • ನಟಿಮಣಿಯರಾದ ಲಾಕೆಟ್ ಚಟರ್ಜಿ ಮತ್ತು ರಚನಾ ಬ್ಯಾನರ್ಜಿ: ಕೋಲ್ಕತ್ತಾದಲ್ಲಿ, ಬಿಜೆಪಿಯ ಲಾಕೆಟ್ ಚಟರ್ಜಿ ಮತ್ತು ತೃಣಮೂಲ ಕಾಂಗ್ರೆಸ್‌ನ ರಚನಾ ಬ್ಯಾನರ್ಜಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ರಚನಾ ಅವರ ಚೊಚ್ಚಲ ಐತಿಹಾಸಿಕ ಗೆಲುವು ಅವರ ಪರಿಶ್ರಮದ ಶಕ್ತಿಯನ್ನು ತೋರಿಸಿದೆ.

ಇದನ್ನೂ ಓದಿ: 'ಸನಾತನ'ದ ವಿಜಯ: ಗೆಲುವಿನ ಬಳಿಕ ಬಾಲಿವುಡ್​​​ ಅಭಿನೇತ್ರಿ ಕಂಗನಾ ಪ್ರತಿಕ್ರಿಯೆ - Kangana Ranaut

2024ರ ಲೋಕಸಭೆ ಚುನಾವಣೆಗೆ ತೆರೆ ಬಿದ್ದಿದ್ದು, ಹೊಸಬರು ವಿಸೇಷವಾಗಿ ಸೆಲೆಬ್ರಿಟಿಗಳು ರಾಜಕೀಯದ ಜಗತ್ತನ್ನು ಹೇಗೆ ನಡೆಸಿಕೊಂಡು ಹೋಗುತ್ತಾರೆ ಎಂಬುದನ್ನು ನೋಡಲು ಬಹುತೇಕರು ಕಾತರರಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.