ETV Bharat / entertainment

ಮಲಯಾಳಂ ಚಿತ್ರರಂಗದ 7 ನಟರ ವಿರುದ್ಧ ವಿವಿಧ ಪೊಲೀಸ್​ ಠಾಣೆಗಳಲ್ಲಿ ಪ್ರಕರಣ ದಾಖಲು - Case registered against 7 actors

ಮಲಯಾಳಂ ಚಿತ್ರರಂಗದ ಪ್ರಮುಖ 7 ನಟರ ವಿರುದ್ಧ ನಟಿಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದು, ಬುಧವಾರ ವಿಶೇಷ ತನಿಖಾ ತಂಡದ ಜಿ.ಪೂಂಗುಡಲಿ ಹಾಗೂ ಅಜೀತಾ ಬೇಗಂ ಅವರು ಅಲುವಾದಲ್ಲಿರುವ ನಟಿಯ ಫ್ಲ್ಯಾಟ್​ಗೆ​ ತೆರಳಿ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದರು.

Case registered against 7 people in actress's sexual assault complaint
ಮಲಯಾಳಂ ಚಿತ್ರರಂಗದ 7 ನಟರ ವಿರುದ್ಧ ವಿವಿಧ ಪೊಲೀಸ್​ ಠಾಣೆಗಳಲ್ಲಿ ಪ್ರಕರಣ ದಾಖಲು (ETV Bharat)
author img

By ETV Bharat Entertainment Team

Published : Aug 29, 2024, 12:43 PM IST

ಮಲಯಾಳಂ ಚಿತ್ರರಂಗದ ಪ್ರಮುಖ ಏಳು ನಟರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ನಟಿಯ ಹೇಳಿಕೆಗಳನ್ನು ವಿಶೇಷ ತನಿಖಾ ತಂಡ ಬುಧವಾರ ದಾಖಲಿಸಿಕೊಂಡಿದ್ದು, ಇದರ ಬೆನ್ನಲ್ಲೇ ಆ ನಟರ ವಿರುದ್ಧ ವಿವಿಧ ಪೊಲೀಸ್​ ಠಾಣೆಗಳನ್ನು ಪ್ರಕರಣ ದಾಖಲಾಗಿದೆ. ಮುಕೇಶ್, ಜಯಸೂರ್ಯ, ಮಣಿಯನ್​ಪಿಳ್ಳ ರಾಜು, ಇಡವೇಲ ಬಾಬು, ಪ್ರೊಡಕ್ಷನ್ ಟೀಂನ ನೋಬಲ್, ವಿಚು ಮತ್ತು ವಕೀಲ ವಿ.ಎಸ್.ಚಂದ್ರಶೇಖರನ್ ವಿರುದ್ಧ ಪ್ರಕರಣ ದಾಖಲಾಗಿದೆ.

AMMA ಸಂಘಟನೆಯ ಸದಸ್ಯತ್ವ ನೀಡುವುದಾಗಿ ಹೇಳಿ ಚಿತ್ರಹಿಂಸೆ ನೀಡಿದ್ದಾರೆ ಎಂಬ ದೂರಿನ ಮೇರೆಗೆ ನಟ ಇಡವೇಲ ಬಾಬು ವಿರುದ್ಧ ಪ್ರಕರಣ ದಾಖಲಾಗಿದೆ. ಎರ್ನಾಕುಲಂ ಉತ್ತರ ಪೊಲೀಸರು ನಟಿಯ ಹೇಳಿಕೆ ಆಧಾರದ ಮೇಲೆ ಸೆಕ್ಷನ್​ 376ರ ಅಡಿ ಜಾಮೀನು ರಹಿತ ಸೆಕ್ಷನ್​ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

'ದಾ ತಡಿಯಾ' ಸಿನಿಮಾದ ಸೆಟ್​ನಲ್ಲಿ ತನಗೆ ಚಿತ್ರಹಿಂಸೆ ನೀಡಲು ಯತ್ನಿಸಿದ್ದ ಎನ್ನುವ ನಟಿಯ ಹೇಳಿಕೆ ಆಧಾರದಲ್ಲಿ ನಟ ಮಣಿಯನ್​ಪಿಳ್ಳ ರಾಜು ವಿರುದ್ಧ ಫೋರ್ಟ್​ ಕೊಚ್ಚಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರೊಡಕ್ಷನ್​ ಕಂಟ್ರೋಲರ್​ ನೋಬಲ್​ ವಿರುದ್ಧವೂ ಪಲರಿವಟ್ಟಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಟಿ ನೀಡಿದ ಲೈಂಗಿಕ ದೌರ್ಜನ್ಯದ ದೂರಿನ ಮೇರೆಗೆ ತಿರುವನಂತಪುರಂ ಕಂಟೋನ್ಮೆಂಟ್​ ಠಾಣೆಯ ಪೊಲೀಸರು ನಟ ಜಯಸೂರ್ಯ ವಿರುದ್ಧ ಪ್ರಕರಣ ದಾಖಲಿದ್ದಾರೆ. ಸೆಕ್ರೆಟರಿಯೇಟ್​ನ ವಾಶ್​ರೂಮ್​ನಲ್ಲಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಎಫ್​ಐಆರ್​ನಲ್ಲಿ ಹೇಳಲಾಗಿದೆ. ಐಪಿಸಿ ಸೆಕ್ಷನ್​ 354, 354 ಎ ಮತ್ತು 509 ರ ಅಡಿ ಪ್ರಕರಣ ದಾಖಲಾಗಿದೆ. ನಟನ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಮಹಿಳೆಯರ ಮೇಲೆ ಅವಮಾನ ಜೊತೆಗೆ ಜಾಮೀನು ರಹಿತ ಆರೋಪಗಳನ್ನು ಮಾಡಲಾಗಿದೆ.

ಲೈಂಗಿಕ ಕಿರುಕುಳದ ದೂರಿನ ಅಡಿ ನಟ ಹಾಗೂ ಶಾಸಕ ಎಂ. ಮುಕೇಶ್​ ವಿರುದ್ಧವೂ ಪ್ರಕರಣ ದಾಖಲಾಗಿದೆ. ಕೊಚ್ಚಿ ನಟಿ ನೀಡಿದ ದೂರಿನ ಮೇರೆಗೆ ಮರಡು ಪೊಲೀಸರು ಜಾಮೀನು ರಹಿತ ಸೆಕ್ಷನ್​ ಅಡಿ, ಐಪಿಸಿ ಸೆಕ್ಷನ್​ 354, 509 ಹಾಗೂ 452ರ ಅಡಿ ಪ್ರಕರಣ ದಾಖಲಿಸಿದ್ದಾರೆ.

ಸಾಮಾಜಿಕ ಜಾಲತಾಣಗಳ ಮೂಲಕ ಆರೋಪಗಳ ಸುರಿಮಳೆಯನ್ನ ಹರಿಸಿದ್ದ ಕೊಚ್ಚಿಯ ನಟಿಯೊಬ್ಬರು ವಿಶೇಷ ತನಿಖಾ ತಂಡಕ್ಕೆ ಈ-ಮೇಲ್​ ಮೂಲಕ ದೂರು ಸಲ್ಲಿಸಿದ್ದರು. ಈ ಹಿನ್ನೆಲೆ ಬುಧವಾರ ವಿಶೇಷ ತನಿಖಾ ತಂಡದ ಜಿ.ಪೂಂಗುಡಲಿ ಹಾಗೂ ಅಜೀತಾ ಬೇಗಂ ಅವರು ಅಲುವಾದಲ್ಲಿರುವ ನಟಿಯ ಫ್ಲ್ಯಾಟ್​ಗೆ​ ತೆರಳಿ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದರು. ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಹೊರಬಿದ್ದ ಬೆನ್ನಲ್ಲೇ ಮಲಯಾಳಂ ಚಿತ್ರರಂಗದ ಹಲವು ನಟಿಯರು ನಟರ ವಿರುದ್ಧ ಗಂಭೀರ ಆರೋಪಗಳನ್ನು ಮಾಡುತ್ತಿದ್ದಾರೆ.

ಇದನ್ನೂ ಓದಿ: ನಟ ಜಯಸೂರ್ಯ ಸೇರಿ 7 ಜನರ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ನಟಿಯರ ಹೇಳಿಕೆ ದಾಖಲು - Sexual Allegations Against Actors

ETV Bharat Logo

Copyright © 2024 Ushodaya Enterprises Pvt. Ltd., All Rights Reserved.