ಹೈದರಾಬಾದ್: ಟಾಲಿವುಡ್ ಸ್ಟಾರ್ ಪ್ರಭಾಸ್ ಅಭಿನಯದ ಕಲ್ಕಿ 2898 AD ಸಿನಿಮಾ 2024ರಲ್ಲಿ ಭಾರತೀಯ ಚಲನಚಿತ್ರೋದ್ಯಮಕ್ಕೆ ಗೇಮ್ ಚೇಂಜರ್ ಆಗಿದೆ. ಜೂನ್ 27 ರಂದು ಬಿಡುಗಡೆಯಾದಾಗಿನಿಂದ, ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಅಸಾಧಾರಣವಾಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಇದೀಗ ಚಿತ್ರಮಂದಿರಗಳಲ್ಲಿ ಒಂದು ತಿಂಗಳು ಪೂರ್ಣಗೊಳಿಸಿದೆ. ನಾಗ್ ಅಶ್ವಿನ್ ನಿರ್ದೇಶಿಸಿದ ಈ ಪೌರಾಣಿಕ ಸೈನ್ಸ್ ಫಿಕ್ಷನ್ ಹೊಸ ದಾಖಲೆಗಳನ್ನು ನಿರ್ಮಿಸಿದೆ.
ಬಾಕ್ಸ್ ಆಫೀಸ್ ಮೈಲಿಗಲ್ಲುಗಳು: ಜವಾನ್ ಮೀರಿಸಿದ ಕಲ್ಕಿ 2898 AD: ಕಲ್ಕಿ 2898 AD ಈ ವರ್ಷದ ಅತಿ ದೊಡ್ಡ ಹಿಟ್ ಆಗಿದೆ. ಜೊತೆಗೆ ಭಾರತೀಯ ಚಿತ್ರರಂಗದಲ್ಲಿ ಬಾಹುಬಲಿ 2: ದಿ ಕನ್‌ಕ್ಲೂಷನ್, ಕೆಜಿಎಫ್ 2, ಮತ್ತು RRR ನಂತರ ನಾಲ್ಕನೇ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿದೆ. ಭಾರತದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ಶಾರುಖ್ ಖಾನ್ ಅಭಿನಯದ ಜವಾನ್ ಸ್ಥಾನವನ್ನು ಚಿತ್ರ ಹಿಂದಿಕ್ಕಿದೆ. ಜವಾನ್ ಒಟ್ಟು 640.25 ಕೋಟಿ ರೂ. ಗಳಿಕೆ ಕಂಡಿತ್ತು.
ಸಿನಿಮೋದ್ಯಮದ ಟ್ರ್ಯಾಕರ್ Sacnilk ಪ್ರಕಾರ, 41ನೇ ದಿನದ ಆರಂಭಿಕ ಅಂದಾಜು ಸೀರಿಸಿಕೊಂಡು, ಕಲ್ಕಿ 2898 AD ಎಲ್ಲಾ ಭಾಷೆಗಳಲ್ಲಿ 640.38 ಕೋಟಿ ರೂಪಾಯಿ ಗಳಿಕೆಯನ್ನು ದಾಟಿದೆ. ಭಾರತದಲ್ಲಿ ಜವಾನ್ ಸಿನಿಮಾದ ಜೀವಿತಾವಧಿಯ ಸಂಗ್ರಹವನ್ನು ಹಿಂದಿಕ್ಕಿದೆ. ಸದ್ಯಕ್ಕೆ, ಕಲ್ಕಿ ನಿವ್ವಳ ಮತ್ತು ಒಟ್ಟು ಸಂಗ್ರಹಗಳಲ್ಲಿ ಮುಂಚೂಣಿಯಲ್ಲಿದೆ.
ಸಂಖ್ಯೆ | ಚಲನಚಿತ್ರ (ಬಿಡುಗಡೆಯ ವರ್ಷ) | ವಿಶ್ವಾದ್ಯಂತ | ಇಂಡಿಯಾ ನೆಟ್ | ಭಾರತದ ಒಟ್ಟು | ಸಾಗರೋತ್ತರ | ಬಜೆಟ್ | ಬಾಕ್ಸ್ ಆಫೀಸ್ ತೀರ್ಪು |
1. | ಬಾಹುಬಲಿ 2 ದಿ ಕನ್‌ಕ್ಲೂಷನ್ (2017) | ರೂ. 1788.06 ಕೋಟಿ | ರೂ. 1030.42 ಕೋಟಿ | ರೂ. 1416.9 ಕೋಟಿ | ರೂ. 371.16 ಕೋಟಿ | ರೂ. 250 ಕೋಟಿ | ಸಾರ್ವಕಾಲಿಕ ಬ್ಲಾಕ್ಬಸ್ಟರ್ |
2. | ಕೆಜಿಎಫ್ ಅಧ್ಯಾಯ 2 (2022) | ರೂ. 1215 ಕೋಟಿ | ರೂ. 859.7 ಕೋಟಿ | ರೂ. 1000.85 ಕೋಟಿ | ರೂ. 214.15 ಕೋಟಿ | ರೂ. 100 ಕೋಟಿ | ಸಾರ್ವಕಾಲಿಕ ಬ್ಲಾಕ್ಬಸ್ಟರ್ |
3. | RRR (2022) | ರೂ. 1230 ಕೋಟಿ | ರೂ. 782.2 ಕೋಟಿ | ರೂ. 915.85 ಕೋಟಿ | ರೂ. 314.15 ಕೋಟಿ | ರೂ. 550 ಕೋಟಿ | ಬ್ಲಾಕ್ಬಸ್ಟರ್ |
4. | ಕಲ್ಕಿ 2898 AD (2024, ಇನ್ನೂ ಪ್ರದರ್ಶನಗೊಳ್ಳುತ್ತಿದೆ) | ರೂ. 1100 ಕೋಟಿ | ರೂ. 640.38 ಕೋಟಿ | ರೂ. 760.1 ಕೋಟಿ | ರೂ. 274.50 ಕೋಟಿ | ರೂ.600 ಕೋಟಿ | ಬ್ಲಾಕ್ಬಸ್ಟರ್ |
5. | ಜವಾನ್ (2023) | ರೂ. 1160 ಕೋಟಿ | ರೂ. 640.25 ಕೋಟಿ | ರೂ. 760 ಕೋಟಿ | ರೂ. 400 ಕೋಟಿ | ರೂ. 300 ಕೋಟಿ | ಸಾರ್ವಕಾಲಿಕ ಬ್ಲಾಕ್ಬಸ್ಟರ್ |
(ಆಗಸ್ಟ್ 6, 2024 ರಂತೆ ಕಲ್ಕಿ ಬಾಕ್ಸ್ ಆಫೀಸ್ ಗಳಿಕೆ. ಅಂಕಿ - ಅಂಶ ಮೂಲ ಸ್ಯಾಕ್‌ನಿಲ್ಕ್ ಮತ್ತು ಚಿತ್ರದ ತಯಾರಕರು. ಕಲ್ಕಿ ಇಂಡಿಯಾ ನೆಟ್ 41ದಿನದ ಆರಂಭಿಕ ಅಂದಾಜುಗಳನ್ನು ಒಳಗೊಂಡಿದೆ.)
ಗಳಿಕೆಯ ಸ್ಥಗಿತ: ಮೊದಲ ವಾರದಲ್ಲಿ ಕಲ್ಕಿ 2898 AD 414.85 ಕೋಟಿ ರೂ. ಗಳಿಸಿತ್ತು. ಎರಡನೇ ವಾರದಲ್ಲಿ ರೂ. 128.5 ಕೋಟಿ, ಮೂರನೇ ವಾರದಲ್ಲಿ ರೂ. 56.1 ಕೋಟಿ, ನಾಲ್ಕನೇ ವಾರದಲ್ಲಿ ರೂ. 24.4 ಕೋಟಿ ಮತ್ತು ಐದನೇ ವಾರದಲ್ಲಿ ರೂ 12.1 ಕೋಟಿಗಳೊಂದಿಗೆ ಗಳಿಕೆ ಮುಂದುವರೆದಿದೆ. ಇದೀಗ ಚಿತ್ರ ಆರನೇ ವಾರಕ್ಕೆ ಕಾಲಿಟ್ಟಿದ್ದು, ಶುಕ್ರವಾರ 65 ಲಕ್ಷ ರೂ., ಶನಿವಾರ 1.35 ಕೋಟಿ ರೂ., ಭಾನುವಾರ 1.85 ಕೋಟಿ ರೂ., ಸೋಮವಾರ ರೂ. 50 ಲಕ್ಷ ಗಳಿಸುವ ಮೂಲಕ ಒಟ್ಟು ದೇಶೀಯ ಸಂಗ್ರಹ ರೂ. 640.15 ಕೋಟಿಗೆ ತಲುಪಿದೆ ಎಂದು ಸ್ಯಾಕ್ನಿಲ್ಕ್ ವರದಿ ಮಾಡಿದೆ.
ಮುಂಬರುವ ಸ್ಪರ್ಧೆ: ಜವಾನ್ ಸಿನಿಮಾದ ಥಿಯೇಟರ್ ಪ್ರದರ್ಶನ ಎಂಟನೇ ವಾರದಲ್ಲಿ ಕೊನೆಗೊಂಡರೆ, ಕಲ್ಕಿ 2898 AD ಇನ್ನೂ ಆರನೇ ವಾರದಲ್ಲಿದೆ. ಮತ್ತು ಇನ್ನೂ ಕೆಲವು ವಾರಗಳು ಮುಂದುವರಿಯಲಿದೆ. ಸ್ತ್ರೀ 2, ವೇದಾ ಮತ್ತು ಖೇಲ್ ಖೇಲ್ ಮೇ ಸೇರಿದಂತೆ ಆಗಸ್ಟ್ 15 ರಂದು ಬಿಡುಗಡೆಗೊಳ್ಳುತ್ತಿರುವ ಹೊಸ ಸಿನಿಮಾಗಳ ಜೊತೆಗೆ ಸ್ಪರ್ಧೆಸಬೇಕಾಗಿದೆ. ಪ್ರಸ್ತುತ ಡೆಡ್‌ಪೂಲ್ ಮತ್ತು ವೊಲ್ವೆರಿನ್ ಸಿನಿಮಾಗಳ ಜೊತೆಗೆ ಸ್ಪರ್ಧಿಸುತ್ತಾ ಮುಂದೆ ಸಾಗಿದೆ.
ಚಲನಚಿತ್ರದ ವಿಶಿಷ್ಟ ಮನವಿ: ಕಲ್ಕಿ 2898 AD ಸಿನಿಮಾದಲ್ಲಿ ತಂತ್ರಜ್ಞಾನ ಮತ್ತು ಧರ್ಮದ ಅಂಶಗಳ ಸಂಯೋಜನೆಯೊಂದಿಗೆ ಹಿಂದೂ ಪುರಾಣವನ್ನು ಸೈನ್ಸ್ ಫಿಕ್ಷನ್ ರೂಪದಲ್ಲಿ ನೀಡಲಾಗಿದೆ. ಇದರಲ್ಲಿ ಅಮಿತಾಭ್ ಬಚ್ಚನ್, ಕಮಲ್ ಹಾಸನ್, ಪ್ರಭಾಸ್, ಮತ್ತು ದೀಪಿಕಾ ಪಡುಕೋಣೆ ಸೇರಿದಂತೆ ಪ್ರಬಲ ಪಾತ್ರವರ್ಗವಿದೆ. ಎಸ್ ಎಸ್ ರಾಜಮೌಳಿ, ರಾಮ್ ಗೋಪಾಲ್ ವರ್ಮಾ, ದುಲ್ಕರ್ ಸಲ್ಮಾನ್, ವಿಜಯ್ ದೇವರಕೊಂಡ, ಮತ್ತು ಮೃಣಾಲ್ ಠಾಕೂರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: OTTಗಳಲ್ಲಿ ಒಳ್ಳೆಯ ಕಂಟೆಂಟ್ ಇರುವ ಸಿನಿಮಾಗಳಿಗೆ ಬೆಲೆ ಇಲ್ಲ: ರಿಷಬ್ ಶೆಟ್ಟಿ ಅಸಮಾಧಾನ - Rishab Shetty