ETV Bharat / entertainment

ಐಷಾರಾಮಿ ಕ್ರೂಸ್​ನಲ್ಲಿ ಅನಂತ್ ಅಂಬಾನಿ ಅದ್ಧೂರಿ ಪ್ರೀ ವೆಡ್ಡಿಂಗ್​​: ಸಂಭ್ರಮಕ್ಕೆ ಬಾಲಿವುಡ್​ ತಾರೆಗಳ ಮೆರುಗು - Anant Radhika Pre Wedding - ANANT RADHIKA PRE WEDDING

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ ಜೋಡಿಯ ಎರಡನೇ ಪ್ರೀ ವೆಡ್ಡಿಂಗ್​​​ ಪ್ರೋಗ್ರಾಮ್​ಗೆ ಬಾಲಿವುಡ್​ ಸ್ಟಾರ್ಸ್ ಸಾಕ್ಷಿಯಾಗಲಿದ್ದು, ಹಲವರು ಏರ್​ಪೋರ್ಟ್​​ನಲ್ಲಿ ಕಾಣಿಸಿಕೊಂಡರು.

Janhvi Kapoor, Ananya Panday, Sara Ali Khan
ಜಾಹ್ನವಿ ಕಪೂರ್, ಅನನ್ಯಾ ಪಾಂಡೆ, ಸಾರಾ ಅಲಿ ಖಾನ್ (ANI)
author img

By ETV Bharat Karnataka Team

Published : May 29, 2024, 2:11 PM IST

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ ಜೋಡಿಯ ಎರಡನೇ ಪ್ರೀ ವೆಡ್ಡಿಂಗ್​​​ ಪ್ರೋಗ್ರಾಮ್​ಗೆ ಕ್ಷಣಗಣನೆ ಆರಂಭವಾಗಿದೆ. ಸಿನಿಮಾ, ಉದ್ಯಮ, ರಾಜಕೀಯ ಮತ್ತು ಕ್ರೀಡಾ ಲೋಕದ ಗಣ್ಯಾತಿಗಣ್ಯರು ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ವೈಭವೋಪೇತ ಸಂಭ್ರಮಕ್ಕೆ ಅಂಬಾನಿ ಫ್ಯಾಮಿಲಿ ಸಜ್ಜಾಗಿದೆ.

ಬಾಲಿವುಡ್​ ತಾರೆಯರು ಸಮಾರಂಭದ ಕೇಂದ್ರಬಿಂದು ಎಂದೇ ಹೇಳಬಹುದು. ಹೌದು, ಹೆಚ್ಚಿನ ಸಂಖ್ಯೆಯ ಕಲಾವಿದರು ಸಮಾರಂಭಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಎರಡನೇ ವಿವಾಹಪೂರ್ವ ಸಂಭ್ರಮಾಚರಣೆ ಐಷಾರಾಮಿ ಕ್ರೂಸ್​ನಲ್ಲಿ ನಡೆಯಲಿದೆ ಎಂಬುದು ವಿಶೇಷ. ಇಟಲಿಯಲ್ಲಿ ಆರಂಭಗೊಳ್ಳುವ ಈ ಕಾರ್ಯಕ್ರಮ ಜೂನ್ 1ರಂದು ಫ್ರಾನ್ಸ್‌ನಲ್ಲಿ ಕೊನೆಗೊಳ್ಳಲಿದೆ. ಜಾಗತಿಕ ಗಣ್ಯರೂ ಭಾಗವಹಿಸಲಿದ್ದಾರೆ.

ಈ ಸಡಗರದಲ್ಲಿ ಭಾಗಿಯಾಗಲು ಹೊರಟಿರುವ ನಟಿಯರಾದ ಸಾರಾ ಅಲಿ ಖಾನ್, ಜಾಹ್ನವಿ ಕಪೂರ್ ಮತ್ತು ಅನನ್ಯಾ ಪಾಂಡೆ, ಕರೀನಾ ಕಪೂರ್ ಖಾನ್​, ರಶ್ಮಿಕಾ ಮಂದಣ್ಣ, ಕರೀಷ್ಮಾ ಕಪೂರ್ ಸೇರಿದಂತೆ ಹಲವರು ಏರ್​ಪೋರ್ಟ್​​ನಲ್ಲಿ ಕಾಣಿಸಿಕೊಂಡಿದ್ದಾರೆ.

ಕರೀನಾ ಇಂದು ಬೆಳಗ್ಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಡೆನಿಮ್, ಬಿಳಿ ಟೀ ಶರ್ಟ್​​, ವೈಟ್​ ಆ್ಯಂಡ್​ ಬ್ಲ್ಯೂ ಶರ್ಟ್​​​ನಲ್ಲಿ ಕಾಣಿಸಿಕೊಂಡರು. ಹ್ಯಾಂಡ್​ಬ್ಯಾಗ್​​, ಸನ್​ಗ್ಲಾಸ್​​, ಜೊತೆಗೊಂದು ಕಪ್ ಹಿಡಿದು ಕ್ಯಾಶುವಲ್​ ಆಗಿ ಕಾಣಿಸಿಕೊಂಡರು. ಫ್ಯಾಶನ್ ಸೆನ್ಸ್‌ಗೆ ಹೆಸರುವಾಸಿಯಾಗಿರುವ ಕರೀನಾ ಸಹೋದರಿ ಕರೀಷ್ಮಾ ಕಪೂರ್, ಬ್ಲ್ಯಾಕ್​​​ ಪ್ಯಾಂಟ್​ ಶರ್ಟ್, ಬ್ಲೂ ಬ್ಲೇಜರ್, ಕ್ಯಾಪ್ ಧರಿಸಿ ಕೂಲ್ ಲುಕ್​ ಕೊಟ್ಟರು.

ನ್ಯಾಶನಲ್​ ಕ್ರಶ್​ ಖ್ಯಾತಿಯ ರಶ್ಮಿಕಾ ಮಂದಣ್ಣ ಸಹ ಏರ್​ಪೋರ್ಟ್​​ನಲ್ಲಿ ಕಾಣಿಸಿಕೊಂಡಿದ್ದು, ಅಂಬಾನಿ ಮನೆಯ ಸಮಾರಂಭಕ್ಕೆ ತೆರಳಿದ್ದಾರೆಂದು ಊಹಿಸಲಾಗಿದೆ. ಸ್ವೆಟ್‌ಶರ್ಟ್ ಸೂಟ್​ನಲ್ಲಿ ಕ್ಯೂಟ್​ ಆಗಿ ಕಾಣಿಸಿಕೊಂಡ ಕಿರಿಕ್​ ಪಾರ್ಟಿ ಬೆಡಗಿ, ಪಾಪರಾಜಿ ಮತ್ತು ಅಭಿಮಾನಿಗಳೊಂದಿಗೆ ಮಾತುಕತೆ ನಡೆಸಿ ಮುನ್ನಡೆದರು.

ಇದನ್ನೂ ಓದಿ: ಒಟಿಟಿಯಲ್ಲೂ ಗೀತಾ ಭಾರತಿ 'ರವಿಕೆ ಪ್ರಸಂಗ' ಸಖತ್​ ಸದ್ದು - Ravike Prasanga

ಸಾರಾ ಅಲಿ ಖಾನ್ ಕೂಡ ಮುಂಬೈನಿಂದ ಸಖತ್​​ ಸ್ಟೈಲ್ ಆಗಿ ತೆರಳಿದರು. ಕ್ರಾಪ್ ಟಾಪ್​ಗೆ ಹೊಂದಿಕೆಯಾಗುವ ಟ್ರ್ಯಾಕ್ ಪ್ಯಾಂಟ್‌ ಧರಿಸಿದ್ದರು. ಜಾಕೆಟ್​​ ಕೂಡ ಇತ್ತು. ಬ್ಲ್ಯಾಕ್​​ ಸ್ಲಿಂಗ್ ಬ್ಯಾಗ್, ಸ್ನೀಕರ್ಸ್, ಕ್ಯಾಟ್ ಐ ಗ್ಲಾಸ್​​​ ಧರಿಸಿ ಏರ್​ಪೋರ್ಟ್ ಲುಕ್​ ಪೂರ್ಣಗೊಳಿಸಿಕೊಂಡರು.

ಇದನ್ನೂ ಓದಿ: ಅಂಬರೀಶ್ ಜನ್ಮದಿನ: ರೆಬಲ್ ಸ್ಟಾರ್ ಕುರಿತ ಆಸಕ್ತಿಕರ ವಿಚಾರಗಳಿವು - Ambareesh Birthday

ಇನ್ನೂ ರಿತೇಶ್​ ದೇಶ್​ಮುಖ್​, ಜೆನಿಲಿಯಾ ದಂಪತಿ ತಮ್ಮಿಬ್ಬರು ಮಕ್ಕಳೊಂದಿಗೆ ಏರ್​ಪೋರ್ಟ್​​ನಲ್ಲಿ ಕಾಣಿಸಿಕೊಂಡಿದ್ದು ವಿಡಿಯೋ ವೈರಲ್​ ಆಗಿದೆ. ಇವರಲ್ಲದೇ ಹಲವು ಬಾಲಿವುಡ್​ ತಾರೆಯರ ವಿಡಿಯೋಗಳು ಸೋಷಿಯಲ್​​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಿದೆ. ರಣ್​​​ವೀರ್ ಸಿಂಗ್, ಸಚಿನ್​ ತೆಂಡೂಲ್ಕರ್ ಎಂ.ಎಸ್ ಧೋನಿ, ರಣ್​​ಬೀರ್ ಕಪೂರ್-ಆಲಿಯಾ ಭಟ್ ಕೂಡ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಪಂಚದಾದ್ಯಂತದ ಸುಮಾರು 300 ವಿಐಪಿಗಳನ್ನು ಆಹ್ವಾನಿಸಲಾಗಿದೆ. ಕಾರ್ಯಕ್ರಮಗಳಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.