ETV Bharat / entertainment

ಬರ್ತ್​​ಡೇ ಗರ್ಲ್ ಆಲಿಯಾ ಭಟ್​​ ಮುಂದಿನ ಚಿತ್ರಗಳಿವು: ರಾಷ್ಟ್ರಪ್ರಶಸ್ತಿ ವಿಜೇತ ನಟಿಯ ಸಿನಿಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆ - Alia Bhatt Birthday

ರಾಷ್ಟ್ರಪ್ರಶಸ್ತಿ ವಿಜೇತ ನಟಿ ಆಲಿಯಾ ಭಟ್​ಗೆ ಇಂದು ಜನ್ಮದಿನದ ಸಂಭ್ರಮ. ಬಾಲಿವುಡ್​ನ ಬಹು ಬೇಡಿಕೆಯ ಈ ನಟಿಯ ಮುಖ್ಯಭೂಮಿಕೆಯ ಮುಂದಿನ ಚಿತ್ರಗಳ ಮಾಹಿತಿ ಇಲ್ಲಿದೆ.

Birthday girl Alia Bhatt
ಬರ್ತ್​​ಡೇ ಗರ್ಲ್ ಆಲಿಯಾ ಭಟ್
author img

By ETV Bharat Karnataka Team

Published : Mar 15, 2024, 2:07 PM IST

ಬಾಲಿವುಡ್ ನಟಿ ಆಲಿಯಾ ಭಟ್ ಇಂದು 31ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಬಹುಮುಖ ಪ್ರತಿಭೆಗೆ ಹೆಸರುವಾಸಿಯಾಗಿರುವ ನಟಿ 2012ರಲ್ಲಿ ಸ್ಟೂಡೆಂಟ್ ಆಫ್ ದಿ ಇಯರ್ ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದರು. ನಂತರ ಹೈವೇ, ಗಲ್ಲಿ ಬಾಯ್, ಡಾರ್ಲಿಂಗ್ಸ್, ಗಂಗೂಬಾಯಿ ಕಥಿಯಾವಾಡಿ, ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ, ಬ್ರಹ್ಮಾಸ್ತ್ರದಂತಹ ಸಿನಿಮಾಗಳಲ್ಲಿ ಅದ್ಭುತ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸೋ ಮೂಲಕ ಪ್ರೇಕ್ಷಕರನ್ನು ಮನರಂಜಿಸುವಲ್ಲಿ ಯಶ ಕಂಡಿದ್ದಾರೆ. ಆರಂಭದಲ್ಲಿ ಬಂದ ಟೀಕೆ-ಟ್ರೋಲ್​​​ಗಳನ್ನು ಸಮರ್ಥವಾಗಿ ಎದುರಿಸಿ, ಸದ್ಯ ಮೆಚ್ಚುಗೆಯ ಮಳೆ ಸ್ವೀಕರಿಸುತ್ತಿದ್ದಾರೆ. ಬಾಲಿವುಡ್​​​ನ ಬಹುಬೇಡಿಕೆ ನಟಿಯರ ಸಾಲಿನಲ್ಲಿ ಅಗ್ರ ಕ್ರಮಾಂಕದಲ್ಲಿದ್ದಾರೆ.

ಪ್ರೇಮಕಥೆಯಿಂದ ಹಿಡಿದು ಆ್ಯಕ್ಷನ್-ಪ್ಯಾಕ್ಡ್ ಸಿನಿಮಾಗಳಲ್ಲಿ ನಟಿಸೋ ಮೂಲಕ ತಮ್ಮ ಬಹುಮುಖ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಸೂಪರ್ ಹಿಟ್ ಗಂಗೂಬಾಯಿ ಕಥಯಾವಾಡಿ ಸಿನಿಮಾದಲ್ಲಿನ ಅದ್ಭುತ ನಟನೆಗೆ ಕಳೆದ ವರ್ಷ ರಾಷ್ಟ್ರಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದಾರೆ. ಯಶಸ್ವಿ ವೃತ್ತಿಜೀವನ ಮುನ್ನಡೆಸುತ್ತಿರುವ ನಟಿಯ ಮುಂದಿನ ಚಿತ್ರಗಳ ಮೇಲೆ ಸಿನಿಪ್ರಿಯರು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ನಟಿಯ ಮುಂಬರುವ ಸಿನಿಮಾಗಳ್ಯಾವುವು? ಎಂಬುದನ್ನು ನೋಡೋಣ ಬನ್ನಿ.

1. ಜಿಗ್ರಾ: ಇದು ನಟಿಯ ಮುಂದಿನ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ವೇದಾಂಗ್ ರೈನಾ ಜೊತೆ ತೆರೆ ಹಂಚಿಕೊಂಡಿದ್ದು, ಸಹೋದರರ ಕಥೆ ಎಂದು ನಂಬಲಾಗಿದೆ. ಕರಣ್ ಜೋಹರ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಆಲಿಯಾ ನಟನೆ ಜೊತೆ ಸಹನಿರ್ಮಾಪಕಿಯಾಗಿಯೂ ಕೆಲಸ ಮಾಡಿದ್ದಾರೆ. ಇದೇ ಸಾಲಿನ ಸೆಪ್ಟೆಂಬರ್ 27ರಂದು ಜಿಗ್ರಾ ತೆರೆಗಪ್ಪಳಿಸಲಿದೆ. ವಾಸನ್ ಬಾಲಾ ನಿರ್ದೇಶನದ ಈ ಚಿತ್ರದ ಮೇಲೆ ಸಿನಿಪ್ರಿಯರು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.

2. ಲವ್ ಆ್ಯಂಡ್​ ವಾರ್: ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಮುಂದಿನ ಬಹುನಿರೀಕ್ಷಿತ ಪ್ರಾಜೆಕ್ಟ್ 'ಲವ್ & ವಾರ್'ನಲ್ಲಿ ಆಲಿಯಾ ಭಟ್, ರಣ್​​​ಬೀರ್ ಕಪೂರ್ ಮತ್ತು ವಿಕ್ಕಿ ಕೌಶಲ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. 2025ರ ಕ್ರಿಸ್ಮಸ್​ ಸಂದರ್ಭ ಚಿತ್ರ ತೆರೆಕಾಣೋ ನಿರೀಕ್ಷೆಯಿದೆ. 2022ರ ಸೂಪರ್ ಹಿಟ್ ಸಿನಿಮಾ ಗಂಗೂಬಾಯಿ ಕಥಿವಾಡಿ ಬಳಿಕ ಸಂಜಯ್ ಲೀಲಾ ಬನ್ಸಾಲಿ ಮತ್ತು ಆಲಿಯಾ ಭಟ್ ಕಾಂಬಿನೇಶನ್​ನಲ್ಲಿ ಬರುತ್ತಿರುವ ಎರಡನೇ ಚಿತ್ರವಿದು.

3. ಜೀ ಲೆ ಜರಾ: ಫರ್ಹಾನ್ ಅಖ್ತರ್ ಅವರ ಜೀ ಲೇ ಜರಾ ಸಿನಿಮಾದ ಚಿತ್ರೀಕರಣವನ್ನು ಆಲಿಯಾ ಇನ್ನಷ್ಟೇ ಪ್ರಾರಂಭಿಸಬೇಕಿದೆ. ಬಹುಬೇಡಿಕೆ ತಾರೆಯರಾದ ಪ್ರಿಯಾಂಕಾ ಚೋಪ್ರಾ ಮತ್ತು ಕತ್ರಿನಾ ಕೈಫ್ ಅವರೊಂದಿಗೆ ಆಲಿಯಾ ತೆರೆ ಹಂಚಿಕೊಳ್ಲಲಿದ್ದಾರೆ. ಜೋಯಾ ಅಖ್ತರ್, ಫರ್ಹಾನ್ ಅಖ್ತರ್ ಮತ್ತು ರೀಮಾ ಕಾಗ್ತಿ ಬರೆದಿರುವ ಈ ಚಿತ್ರವನ್ನು ರೀಮಾ ಕಾಗ್ತಿ, ಜೋಯಾ ಅಖ್ತರ್, ರಿತೇಶ್ ಸಿಧ್ವಾನಿ, ಫರ್ಹಾನ್ ಸೆರಿ ನಿರ್ಮಾಣ ಮಾಡಲಿದ್ದಾರೆ. ಹೃದಯಸ್ಪರ್ಶಿ ಸ್ನೇಹ ಕಥೆಯನ್ನು ಈ ಚಿತ್ರ ಒಳಗೊಂಡಿರಲಿದೆ ಎಂದು ನಂಬಲಾಗಿದೆ.

4. ಬ್ರಹ್ಮಾಸ್ತ್ರ 2: ಆಲಿಯಾ, ಪತಿ ರಣ್​​​ಬೀರ್ ಕಪೂರ್ ಜೊತೆ 'ಬ್ರಹ್ಮಾಸ್ತ್ರ: ಭಾಗ ಎರಡು - ದೇವ್‌'ನಲ್ಲಿ ಇಶಾ ಪಾತ್ರವನ್ನು ಮುಂದುವರಿಸಲು ಸಜ್ಜಾಗಿದ್ದಾರೆ. ಅಯಾನ್ ಮುಖರ್ಜಿ ನಿರ್ದೇಶನದ ಈ ಚಿತ್ರ 2026ರ ಡಿಸೆಂಬರ್​​​ನಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಮೊದಲ ಭಾಗ ಬ್ಲಾಕ್​ಬಸ್ಟರ್ ಹಿಟ್​ ಅಗಿದೆ.

ಇದನ್ನೂ ಓದಿ: ತಾಜ್​​ ಮಹಲ್​ ಪ್ಯಾಲೆಸ್​ನಲ್ಲಿ ಆಲಿಯಾ ಭಟ್​ ಬರ್ತ್​ಡೇ ಸೆಲೆಬ್ರೇಶನ್ - ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.