ETV Bharat / entertainment

ಬಿಗ್​ ಬಾಸ್​ ಬಿಟ್ಟು ಹೋಗಲ್ಲವೆಂದ ಜಗದೀಶ್​: ನಾಮಿನೇಷನ್‍‍ನಿಂದ ಸೇಫ್ ಆಗೋರು ಯಾರು? - BIGG BOSS KANNADA 11

''ಟಾಸ್ಕ್ ಗೆದ್ದಾಗಿದೆ; ಈಗ ನಾಮಿನೇಷನ್‍‍ನಿಂದ ಸೇಫ್ ಆಗೋರು ಯಾರು?'' ಕ್ಯಾಪ್ಷನ್​ನೊಂದಿಗೆ ಬಿಗ್​ ಬಾಸ್ ಪ್ರೋಮೋ ಅನಾವರಣಗೊಂಡಿದೆ.

Bigg Boss kannada 11
ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Poster)
author img

By ETV Bharat Entertainment Team

Published : Oct 10, 2024, 2:23 PM IST

ಕನ್ನಡದ ಜನಪ್ರಿಯ ಕಾರ್ಯಕ್ರಮವಾಗಿರುವ 'ಬಿಗ್​ ಬಾಸ್​' ಆಟ ದಿನ ಕಳೆದಂತೆ ಮತ್ತಷ್ಟು ಕುತುಹಲಕಾರಿಯಾಗಿ ಮೂಡಿಬರುತ್ತಿದೆ. ಪ್ರೀತಿ, ಸ್ನೇಹ, ಕಾಳಜಿ ಜೊತೆ ಜೊತೆಗೆ ಕೋಪ, ಕಿರುಚಾಟ, ವಾದ, ವಿವಾದಗಳೂ ಮುಂದುವರಿದಿವೆ. ಈ ಬಾರಿ ಕಿರುಚಾಟ ಕೊಂಚ ಹೆಚ್ಚೇ ಇದೆ ಅನ್ನಬಹುದು. ಅದರಂತೆ ಇಂದಿನ ಸಂಚಿಕೆಯಲ್ಲೂ ವಾದ ವಿವಾದ ದೊಡ್ಡ ಮಟ್ಟದಲ್ಲೇ ನಡೆಯಲಿದೆ ಎಂಬ ಸುಳಿವನ್ನು ವಾಹಿನಿ ಅನಾವರಣಗೊಳಿಸಿರುವ ಪ್ರೋಮೋ ಬಿಟ್ಟುಕೊಟ್ಟಿದೆ.

ಕಲರ್ಸ್ ಕನ್ನಡ ತನ್ನ ಅಧಿಕೃತ ಸೋಷಿಯಲ್​ ಮೀಡಿಯಾ ಪ್ಲ್ಯಾಟ್​ಫಾರ್ಮ್​​​ಗಳಲ್ಲಿ ''ಟಾಸ್ಕ್ ಗೆದ್ದಾಗಿದೆ; ಈಗ ನಾಮಿನೇಷನ್‍‍ನಿಂದ ಸೇಫ್ ಆಗೋರು ಯಾರು?. ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ 9:30'' ಕ್ಯಾಪ್ಷನ್​​​ನೊಂದಿಗೆ ಇಂದಿನ ಸಂಚಿಕೆಯ ಪ್ರೋಮೋ ಅನಾವರಣಗೊಳಿಸಿದೆ. ದೃಶ್ಯದಲ್ಲಿ ಟಾಸ್ಕ್​ ಆದ ಬಳಿಕ ಕ್ಯಾಪ್ಟನ್​​ ಕೊಟ್ಟ ತೀರ್ಪಿಗೆ ಸೋತ ಸ್ಪರ್ಧಿಗಳು ಅಸಮಾಧಾನ ಹೊರಹಾಕಿರುವುದನ್ನು ಕಾಣಬಹುದು.

ಅತಿ ಕಡಿಮೆ ಸಮಯದಲ್ಲಿ ಇಬ್ಬರನ್ನು ಗೆದ್ದ ತಂಡದ ಪೈಕಿ ಇಬ್ಬರನ್ನು ನಾಮಿನೇಶನ್​​​ನಿಂದ ಪಾರು ಮಾಡಬಹುದು ಎಂದು ಎಂದು ಟಾಸ್ಕ್​​ ಒಂದನ್ನು ಬಿಗ್​ ಬಾಸ್​ ಕೊಟ್ಟಿದ್ದಾರೆ. ಈ ಟಾಸ್ಕ್​ ಅನ್ನು ನರಕನಿವಾಸಿಗಳು ಗೆದ್ದಿದ್ದಾರೆ ಎಂದು ಕ್ಯಾಪ್ಟನ್​​ ಹಂಸ ಘೋಷಿಸಿದ್ದಾರೆ. ಇದು ವಾದ ವಿವಾದಕ್ಕೆ ಕಾರಣವಾಗಿದೆ. 30 ಸೆಕೆಂಡ್​ನಲ್ಲಿ ಸ್ವರ್ಗ ನಿವಾಸಿಗಳು ಆಟ ಮುಗಿಸಿದ್ದರೆ,​ 3 ನಿಮಿಷದಲ್ಲಿ ನರಕ ನಿವಾಸಿಗಳು ಆಟ ಪೂರ್ಣಗೊಳಿಸಿದ್ದಾರೆ. ಆದ್ರೆ ಸಂಪೂರ್ಣ ಆಟ ಗಮನಿಸಿ ಕ್ಯಾಪ್ಟನ್​​ ಹಂಸ ವಿಜೇತರನ್ನು ಘೋಷಿಸಿದ್ದಾರೆ. ಇದು ವಾದ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಸಂಪೂರ್ಣ ಸಂಚಿಕೆ ಇಂದು ರಾತ್ರಿ 9:30ಕ್ಕೆ ಪ್ರಸಾರ ಆಗಲಿದೆ.

ಇದನ್ನೂ ಓದಿ: ರಜನಿಕಾಂತ್ 'ವೆಟ್ಟೈಯನ್‌' ಬಿಡುಗಡೆ: ಚಿತ್ರಮಂದಿರಗಳೆದುರು ಸಂಭ್ರಮಾಚರಣೆ ಜೋರು - ವಿಡಿಯೋ ನೋಡಿ

ಇನ್ನು ಕಳೆದ ವಾರವಿಡೀ ಕಿರಿಕಿರಿ ಎಂದೇ ಸೋಷಿಯಲ್​ ಮೀಡಿಯಾಗಳಲ್ಲಿ ಗುರುತಿಸಿಕೊಂಡಿದ್ದ ಜಗದೀಶ್​​ ಅವರು ಈ ವಾರ ಮನರಂಜನೆ ಕೊಡುವಲ್ಲಿ ಯಶಸ್ವಿ ಆಗಿದ್ದಾರೆ. ಹಾಗಂತ ಕಿರುಚಾಟ ನಿಂತಿಲ್ಲ. ಜೋರು ವಾದ ಪ್ರತಿವಾದಗಳ ಜೊತೆ ಜೊತೆಗೆ, ಸ್ಪರ್ಧಿಗಳೊಡನೆ ಬೆರೆತು ಎಂಟರ್​​ಟೈನ್ಮೆಂಟ್​ ಕೊಡುತ್ತಿದ್ದಾರೆ.

ಇದನ್ನೂ ಓದಿ: ರತನ್​ ಟಾಟಾ ನಿಧನ: ಶಿವಣ್ಣ, ರಿಷಬ್​​​ ಶೆಟ್ಟಿ, ಉಪ್ಪಿ ಸೇರಿದಂತೆ ಸಿನಿಗಣ್ಯರಿಂದ ಸಂತಾಪ

ಕ್ಯಾಮರಾ ಎದುರು ಬಂದ ಅವರು, ನನಗೆ ತುಂಬಾನೇ ಖುಷಿಯಾಗುತ್ತಿದೆ. ಇಲ್ಲಿಂದ ಹೋಗಲ್ಲ. ಮೊದಲ ವಾರ ಹೋಗಬೇಕೆಂದನಿಸಿತ್ತು. ಈ ವಾರ ಹಾಗೆ ಅನಿಸಿಲ್ಲ. ನನ್ನನ್ನು ವಾಪಸ್​ ಕರೆಸಿದ ಬಿಗ್​ ಬಾಸ್​ ನಿರ್ಧಾರ ಸರಿ ಆಗಿತ್ತು. ಇದೀಗ ಪ್ರತೀ ಕ್ಷಣವನ್ನೂ ಎಂಜಾಯ್​ ಮಾಡುತ್ತಿದ್ದೇನೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.