ETV Bharat / entertainment

ತಾರಕಕ್ಕೇರಿದ ಮೊದಲ ನಾಮಿನೇಶನ್‍ ತಾಪ; ಸ್ಪರ್ಧಿಗಳ ನಡುವೆ ವಾದ ವಿವಾದ: ನಿಮ್ಮ ಪ್ರಕಾರ ಯಾರಾಗ್ತಾರೆ ನಾಮಿನೇಟ್​? - Bigg Boss Kannada 11 - BIGG BOSS KANNADA 11

''ಮೊದಲ ನಾಮಿನೇಶನ್‍ ತಾಪ ಸ್ವರ್ಗಕ್ಕೂ ವ್ಯಾಪಿಸಿದ್ಯಾ?'' ಎಂಬ ಶೀರ್ಷಿಕೆಯಡಿ ಕಲರ್ಸ್ ಕನ್ನಡ ಇಂದಿನ ಸಂಚಿಕೆಯ ಪ್ರೋಮೋ ಅನಾವರಣಗೊಳಿಸಿದ್ದು, ಸಂಪೂರ್ಣ ಸಂಚಿಕೆ ವೀಕ್ಷಿಸುವ ಪ್ರೇಕ್ಷಕರ ಕುತೂಹಲ ಹೆಚ್ಚಾಗಿದೆ.

Bigg Boss Kannada 11
ಬಿಗ್​ ಬಾಸ್​​ ಕನ್ನಡ ಸೀಸನ್​ 11 (Photo Source: Colors kannada IG)
author img

By ETV Bharat Karnataka Team

Published : Oct 1, 2024, 2:09 PM IST

'ಹೆಲ್​​ ಅಂಡ್​​​ ಹೆವೆನ್​' ಕಾನ್ಸೆಪ್ಟ್​​ ಮೂಲಕ ಆರಂಭವಾಗಿರುವ ''ಬಿಗ್​ ಬಾಸ್​​ ಕನ್ನಡ''ದ ಮನೆಯಲ್ಲಿ ಮೊದಲ ದಿನಗಳಲ್ಲೇ ನರಕ ಸೃಷ್ಟಿಯಾಗುವಂತೆ ತೋರಿದೆ. ನಗುಮೊಗದಲ್ಲಿ ಮನೆಯೊಳಗೆ ಬಲಿಗಾಲಿಟ್ಟ ಸ್ಪರ್ಧಿಗಳ ನಡುವೆ ವಾದ ವಿವಾದ ಶುರುವಾಗಿಬಿಟ್ಟಿದೆ. ಅದಕ್ಕೀಗ ಎಲಿಮಿನೇಶನ್​ಗೆ ನಾಮಿನೇಶನ್​​ ರೌಂಡ್​​ ತುಪ್ಪ ಸುರಿದಂತೆ ಕಾಣುತ್ತಿದೆ.

''ಮೊದಲ ನಾಮಿನೇಶನ್‍ ತಾಪ ಸ್ವರ್ಗಕ್ಕೂ ವ್ಯಾಪಿಸಿದ್ಯಾ?'' ಎಂಬ ಶೀರ್ಷಿಕೆಯಡಿ ಕಲರ್ಸ್ ಕನ್ನಡ ಇಂದಿನ ಸಂಚಿಕೆಯ ಪ್ರೋಮೋ ಅನಾವರಣಗೊಳಿಸಿದೆ. ''ಬಿಗ್ ಬಾಸ್ ಕನ್ನಡ ಸೀಸನ್ 11. ಸೋಮ-ಶುಕ್ರ 9:30ಕ್ಕೆ'' ಎಂದು ಬರೆದುಕೊಂಡಿದೆ. ಈ ವಿಡಿಯೋ ನೋಡಿದ್ರೆ ಇಂದಿನ ಸಂಚಿಕೆಯಲ್ಲಿ ವಾದ ವಿವಾದ ಜೋರಾಗುವಂತೆ ತೋರುತ್ತಿದೆ. ಸಂಪೂರ್ಣ ಸಂಚಿಕೆ ರಾತ್ರಿ 9:30ಕ್ಕೆ ಪ್ರಸಾರವಾಗಲಿದೆ.

ಸೀಸನ್​ 11 ಶುಭಾರಂಭ ಮಾಡಿದೆ. ಅದರಂತೆ ನಾಮಿನೇಶನ್​​ ಪ್ರಕ್ರಿಯೆಯೂ ನಡೆಯಬೇಕಲ್ಲವೇ?. ಆ ನಾಮಿನೇಶನ್​​ ಸೀನ್​ ಅನ್ನು ಇಂದಿನ ಸಂಚಿಕೆಯಲ್ಲಿ ಕಾಣಬಹುದಾಗಿದೆ. ಸಂಚಿಕೆಯಲ್ಲಿ ಜಗಳ, ವಾದ ವಿವಾದ ಇರಲಿದೆ ಎಂಬ ಸುಳಿವನ್ನು ಪ್ರೋಮೋ ಬಿಟ್ಟುಕೊಟ್ಟಿದೆ.

ಈ ವಾರದ ನಾಮಿನೇಶನ್​ ಪ್ರಕ್ರಿಯೆಯ ಎರಡನೇ ಹಂತವನ್ನು ಟಾಸ್ಕ್ ರೂಪದಲ್ಲಿ ಬಿಗ್​ ಬಾಸ್​ ನೀಡುತ್ತಿದ್ದಾರೆ ಎಂಬ ದನಿಯೊಂದಿಗೆ ಪ್ರೋಮೋ ಪ್ರಾರಂಭವಾಗಿದೆ. ಯಮುನಾ ಅವರ ಹೆಸರು ನಾಮಿನೇಶನ್​ನಲ್ಲಿ ಮೊದಲು ಕೇಳಿ ಬಂದಿದೆ. ನಂತರ ಭವ್ಯಾ ಗೌಡ ಅವರ ಹೆಸರು ಎರಡು ಬಾರಿ ಕೇಳಬಂದಿದೆ. ಜೊತೆಗೆ, ಡಾಮಿನೇಟಿಂಗ್​​ ಎಂದು ಕೂಡಾ ಇತರ ಸ್ಪರ್ಧಿಗಳು ಆರೋಪಿಸಿದ್ದಾರೆ. ನಂತರ ಗೌತಮಿ ಹೆಸರನ್ನು ಇತರ ಇಬ್ಬರು ಸ್ಪರ್ಧಿಗಳು ಹೇಳಿದ್ದಾರೆ. ನರಕ ನಿವಾಸಿಗಳ ಮೇಲೆ ಗೌತಮಿ ಅವರಿಗೆ ಸಾಫ್ಟ್​ ಕಾರ್ನರ್​​ ಇದೆ ಎಂದು ಸಹಸ್ಪರ್ಧಿ ಭವ್ಯಾ ತಿಳಿಸಿದ್ದಾರೆ. ಯಮುನಾ ಕೂಡಾ ಇದೇ ರೀತಿಯ ಕಾರಣಗಳನ್ನು ಕೊಟ್ಟಿದ್ದಾರೆ. ಹಾಗಾಗಿ, ನರಕ ನಿವಾಸಿಗಳೊಂದಿಗೆ ಸ್ವರ್ಗ ನಿವಾಸಿಗಳು ಮಾತನಾಡೋದೇ ತಪ್ಪಾ? ಎಂಬ ಚರ್ಚೆ ಜೋರಾಗೇ ನಡೆದಿದೆ. ಇದು ಸೋಷಿಯಲ್​​ ಮೀಡಿಯಾದಲ್ಲಿ ಚರ್ಚೆಗೆ ಎಡೆಮಾಡಿಕೊಟ್ಟಿದೆ.

ಇದನ್ನೂ ಓದಿ: 3 ದಿನಕ್ಕೆ 300 ಕೋಟಿ ಕಲೆಕ್ಷನ್​ ಮಾಡಿದ 'ದೇವರ' ಮೊದಲ ಸೋಮವಾರ ಗಳಿಸಿದ್ದೆಷ್ಟು ಗೊತ್ತಾ? - Devara Collection Day 4

''ಇದಕ್ಕೂ ಮೊದಲು ಬಿಗ್ ಬಾಸ್ ಮನೆಯ ಸ್ವರ್ಗನಿವಾಸಿಗಳಲ್ಲಿ ನಿಮ್ಮಿಷ್ಟದ ಕಂಟೆಂಸ್ಟೆಂಟ್ ಯಾರು?'' ಮತ್ತು ''ಬಿಗ್ ಬಾಸ್ ಮನೆಯ ನರಕ ನಿವಾಸಿಗಳಲ್ಲಿ ಸಖತ್ ಫೈಟ್ ಕೊಡೋರು ಯಾರು?'' ಎಂಬ ಕ್ಯಾಪ್ಷನ್​​ನೊಂದಿಗೆ ಚಾನಲ್​​ ಪೋಸ್ಟ್​​ಗಳನ್ನು ಶೇರ್​ ಮಾಡಿದೆ. ಪ್ರತೀ ಸ್ಪರ್ಧಿಗಳು ತಮ್ಮದೇ ಆದ ಅಭಿಮಾನಿಗಳನ್ನು ಸಂಪಾದಿಸಿದ್ದು, ಈ ವಾರ ಯಾರು ನಾಮಿನೇಟ್​ ಆಗ್ತಾರೆ?, ಮೊದಲ ವಾರವೇ ಯಾರು ಮನೆಗೆ ಹೋಗ್ತಾರೆ? ಎಂಬುದರ ಬಗ್ಗೆ ಪ್ರೇಕ್ಷಕರು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಮೊದಲ ದಿನವೇ ಬಿಗ್ ಬಾಸ್​ ಮನೆಯಲ್ಲಿ ದನಿಯೆತ್ತಿದ ಚೈತ್ರಾ ಕುಂದಾಪುರ್ - Bigg Boss Kannada 11

ETV Bharat Logo

Copyright © 2024 Ushodaya Enterprises Pvt. Ltd., All Rights Reserved.