ETV Bharat / entertainment

ಬಿಗ್‌ ಬಾಸ್‌ ಕನ್ನಡ 11 ಶುರು: ದೊಡ್ಮನೆಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳು ಇವರೇ ನೋಡಿ - Bigg Boss Kannada 11 - BIGG BOSS KANNADA 11

ಬಿಗ್‌ ಬಾಸ್‌ ಕನ್ನಡ ಸೀಸನ್ 11 ಆರಂಭವಾಗಿದೆ. ಬಿಗ್‌ಹೌಸ್‌ ಒಳಗೆ ಸ್ಪರ್ಧಿಗಳು ಆಗಮಿಸುತ್ತಿದ್ದು, ಈ ಬಾರಿ ಯಾರ್ಯಾರು ದೊಡ್ಮನೆಗೆ ಹೋಗ್ತಾರೆ ಎನ್ನುವ ಕುತೂಹಲಕ್ಕೆ ತೆರೆ ಬೀಳುತ್ತಿದೆ. ಈ ಸಲ ಬಿಗ್​ ಬಾಸ್​ಗೆ ಯಾರೆಲ್ಲಾ ಎಂಟ್ರಿ ಕೊಟ್ಟಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

bigg boss kannada
ಬಿಗ್‌ ಬಾಸ್‌ ಕನ್ನಡ 11 ಸ್ಪರ್ಧಿಗಳು (Colors Kannada X Post)
author img

By ETV Bharat Karnataka Team

Published : Sep 29, 2024, 9:59 PM IST

Updated : Sep 29, 2024, 11:01 PM IST

ಬಿಗ್​ಬಾಸ್ ಕನ್ನಡ-11 ಶುರುವಾಗಿದೆ. ವಿವಿಧ ರಂಗಗಳಲ್ಲಿ ಹೆಸರು ಮಾಡಿರುವವರು ಸೇರಿದಂತೆ ಹಲವರು ಸ್ಪರ್ಧಿಗಳಾಗಿ ಬಿಗ್​ ಮನೆಗೆ ಆಗಮಿಸುತ್ತಿದ್ದಾರೆ. ಈ ಹಿಂದಿನಂತೆಯೇ, ಈ ರಿಯಾಲಿಟಿ ಶೋ ನಿರೂಪಕರಾಗಿ ಕಿಚ್ಚ ಸುದೀಪ್​ ಸರ್ಧಾಳುಗಳನ್ನು ದೊಡ್ಮನೆಗೆ ಸ್ವಾಗತ ಮಾಡುತ್ತಿದ್ದಾರೆ. ಇದುವರೆಗಿನ ಸ್ಪರ್ಧಿಗಳ ವಿವರ ಇಲ್ಲಿದೆ.

ಬಿಗ್​ಬಾಸ್​ಗೆ ಮೊದಲ ಸ್ಪರ್ಧಿಯಾಗಿ 'ಗೀತಾ' ಸೀರಿಯಲ್​ ಮೂಲಕ ಖ್ಯಾತರಾದ ನಟಿ ಭವ್ಯಾ, ಎರಡನೇಯವರಾಗಿ ನಟಿ ಯಮುನಾ ಶ್ರೀನಿಧಿ, ಮೂರನೇ ಕಂಟೆಸ್ಟಂಟ್​ ಆಗಿ ಮಂಗಳೂರು ಮೂಲದ ಯುಟ್ಯೂಬರ್​ ಧನರಾಜ್​, ನಾಲ್ಕನೇ ಸ್ಪರ್ಧಾಳುವಾಗಿ 'ಸತ್ಯ' ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಮಿಂಚಿದ ನಟಿ ಗೌತಮಿ ಜಾಧವ್ ದೊಡ್ಮನೆಗೆ ಪ್ರವೇಶ ಮಾಡಿದ್ದಾರೆ.

ಇದನ್ನೂ ಓದಿ: '10 ವರ್ಷದಿಂದ ಒಂದು ಲೆಕ್ಕ ಈಗಿಂದ ಬೇರೇನೇ ಲೆಕ್ಕ, ಇದು ಹೊಸ ಅಧ್ಯಾಯ': 'ನೋ ವೇ, ಛಾನ್ಸೇ ಇಲ್ಲ'! ಬಿಗ್ ಬಾಸ್​​​ಗೆ ಸುದೀಪೇ ಬಾಸ್​!! - Kannada Bigg Boss

ನಂತರ ನಟಿ ಅನುಷಾ, 'ನವಗ್ರಹ' ಖ್ಯಾತಿಯ ನಟ ಧರ್ಮ ಕೀರ್ತಿರಾಜ್‌, 7ನೇ ಸ್ಪರ್ಧಿಯಾಗಿ ವಕೀಲ ಜಗದೀಶ್, ಆ ಬಳಿಕ ಧಾರವಾಹಿ ನಟ ಶಿಶಿರ್, 'ಪದ್ಮಾವತಿ' ಧಾರಾವಾಹಿ ನಟ ತ್ರಿವಿಕ್ರಮ್ ಬಿಗ್ ಬಾಸ್​ಗೆ 9ನೇ ಸ್ಪರ್ಧಿಯಾಗಿ ಪ್ರವೇಶಿಸಿದ್ದಾರೆ. ಹಲವಾರು ಧಾರಾವಾಹಿಗಳಲ್ಲಿ ಅಭಿನಯಿಸಿರುವ ನಟಿ ಹಂಸಾ 10ನೇ ಸ್ಪರ್ಧಿಯಾಗಿ ಬಿಗ್​ ಮನೆಗೆ ಎಂಟ್ರಿ ಕೊಟ್ಟರು.

ಬಿಗ್‌ ಬಾಸ್‌‌‌ ಸೀಸನ್‌‌ 10ರಲ್ಲಿ ಸ್ಪರ್ಧಿಯಾಗಿ ಮಿಂಚಿದ್ದ ಕಾಮಿಡಿ ನಟ ತುಕಾಲಿ ಸಂತೋಷ್‌‌ ಅವರ ಪತ್ನಿ ಮಾನಸ ಕೂಡ ಈ ಬಾರಿಯ ಬಿಗ್‌ ಬಾಸ್‌ಗೆ 11ನೆಯವರಾಗಿ ಆಗಮಿಸಿದ್ದಾರೆ. 12ನೇ ಸ್ಪರ್ಧಿಯಾಗಿ ಗೋಲ್ಡ್ ಸುರೇಶ್ ಬಿಗ್​ಬಾಸ್​ 11ನೇ ಆವೃತ್ತಿಗೆ ಸೇರ್ಪಡೆಗೊಂಡಿದ್ದಾರೆ.

ಆ ಬಳಿಕ 13ನೆಯವರಾಗಿ ಧಾರಾವಾಹಿ ನಟಿ ಐಶ್ವರ್ಯ ಸಿಂಧೋಗಿ, ತದನಂತರ ಭಾಷಣಗಾರ್ತಿ ಚೈತ್ರಾ ಕುಂದಾಪುರ, ನಟ ಮಂಜು ಹಾಗೂ 'ಪಾರು' ಧಾರವಾಹಿ ಖ್ಯಾತಿಯ ನಟಿ ಮೋಕ್ಷಿತಾ 16ನೇ ಸ್ಪರ್ಧಿಯಾಗಿ ಮನೆಗೆ ಪ್ರವೇಶ ಮಾಡಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಹೊಸ ಅಧ್ಯಾಯ: ಸುದೀಪ್​ ಸೂತ್ರಧಾರಿ, ವೀಕ್ಷಣೆಗೆ ನೀವ್​ ರೆಡಿನಾ? - Bigg Boss Kannada

Last Updated : Sep 29, 2024, 11:01 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.