ETV Bharat / entertainment

'ಸದ್ದು', ಯಾರೂ ತುಟಿಕ್​ ಪಿಟಿಕ್​ ಅನ್ನೋ ಹಾಗಿಲ್ಲ! ತಾಳ್ಮೆ ಕಳೆದುಕೊಂಡ ಬಿಗ್ ​​ಬಾಸ್​: ಸ್ಪರ್ಧಿಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು? - BBK 11

ಬಿಗ್​ ಬಾಸ್​​ ಮನೆಯಲ್ಲಿ ದೊಡ್ಡ ಗಲಾಟೆ ನಡೆದಿದ್ದು, ಬಿಗ್​ ಬಾಸ್​ ಕೋಪಗೊಂಡಿದ್ದಾರೆ.

BBK 11
ಬಿಗ್​ ಬಾಸ್ ಕನ್ನಡ ಸೀಸನ್​ 11 (Photo: Bigg Boss Poster)
author img

By ETV Bharat Entertainment Team

Published : Oct 16, 2024, 11:08 AM IST

ಬಿಗ್​ ಬಾಸ್​​ನ ಈ ಸೀಸನ್​​ ಅಭಿನಯ ಚಕ್ರವರ್ತಿ ಸುದೀಪ್​ ನಡೆಸಿಕೊಡುವ ಕೊನೆಯ ಸೀಸನ್​​. ಹಾಗಾಗಿ ಎಲ್ಲರೂ ಸೇರಿ ಕಾರ್ಯಕ್ರಮವನ್ನು ಅತ್ಯುತ್ತಮವಾಗಿ ನಡೆಸಿಕೊಡೋಣ ಎಂದು ತಿಳಿಸಿದ್ದರು. ಅದೆಷ್ಟೋ ಗಂಭೀರ ವಿಷಯಗಳಿದ್ದರೂ ಕೂಡಾ ನಿರೂಪಕ ಸುದೀಪ್​​ ಅವರು ಅವನ್ನು ನಯವಾಗೇ ತಿದ್ದಿ ತೀಡಿದ್ದರು. ಆದರೆ ಸ್ಪರ್ಧಿಗಳ ಜಗಳ, ಕಿರುಚಾಟ, ವಾದ ವಿವಾದಗಳು ಎಲ್ಲೆ ಮೀರುತ್ತಿದೆ. ಇನ್ನೇನು ಹೊಡೆದುಕೊಳ್ತಾರಾ ಅನ್ನೋವಷ್ಟರ ಮಟ್ಟಿಗೆ ಗಲಾಟೆಗಳು ನಡೆಯುತ್ತಿವೆ. ಮನೆಯ ಶಾಂತಿ ಕಾಪಾಡುವ ಜವಾಬ್ದಾರಿ ಕ್ಯಾಪ್ಟನ್​​ ಶಿಶಿರ್​ ಅವರ ಮೇಲಿತ್ತು. ಇದೀಗ ಬಿಗ್​ ಬಾಸೇ ಮಧ್ಯಪ್ರವೇಶಿಸಿದ್ದಾರೆ. ಅವರ ಮಾತು, ದನಿಯನ್ನು ಗಮನಿಸಿದರೆ ತಾಳ್ಮೆ ಕಳೆದುಕೊಂಡಂತೆ ತೋರುತ್ತಿದೆ.

ಕನ್ನಡದ ಅತ್ಯಂತ ಜನಪ್ರಿಯ ಕಾರ್ಯಕ್ರಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರೋ ''ಬಿಗ್​ ಬಾಸ್​ ಸೀಸನ್​ 11'' ಮೂರನೇ ವಾರದ ಮಧ್ಯದಲ್ಲಿದೆ. ಕಳೆದ ಎಲ್ಲಾ ಸೀಸನ್​ಗಳಿಗೆ ಹೋಲಿಸಿದರೆ ಜಗಳ, ಕಿರುಚಾಟ, ವಾದ ವಿವಾದಗಳು ಈ ಬಾರಿ ಹೆಚ್ಚಾಗಿದೆ. ಅದರಲ್ಲೂ ಮೊದಲೆರಡು ವಾರಗಳಲ್ಲಿ ಈ ಮಟ್ಟಿನ ಕಿರುಚಾಟ ಬಹುಶಃ ನಡೆದಿರಲಿಕ್ಕಿಲ್ಲ. ಅದರಂತೆ 3ನೇ ವಾರವೂ ಬಿಗ್​ ಫೈಟ್ ನಡೆಯುತ್ತಿವೆ.​

ತಾಳ್ಮೆ ಕಳೆದುಕೊಂಡರಾ ಬಿಗ್​ ಬಾಸ್​: ''ಇತಿ - ಮಿತಿ ಎಲ್ಲವೂ ಮರೆತ ಸ್ಪರ್ಧಿಗಳು!'' ಬಿಗ್ ಬಾಸ್ ಕನ್ನಡ ಸೀಸನ್ 11. ಸೋಮ - ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್​​ನೊಂದಿಗೆ ಬಿಗ್​ ಬಾಸ್​ ತನ್ನ ವಿವಿಧ ಸೋಷಿಯಲ್​ ಮೀಡಿಯಾ ಪ್ಲ್ಯಾಟ್​ಫಾರ್ಮ್​​ಗಳಲ್ಲಿ ಇಂದಿನ ಸಂಚಿಕೆಯ ಪ್ರೋಮೋ ಅನಾವರಣಗೊಳಿಸಿದೆ. ಮನೆಯಲ್ಲಿ ದೊಡ್ಡ ಗಲಾಟೆ ನಡೆದಿದೆ, ಬಿಗ್​ ಬಾಸ್​​ ತಾಳ್ಮೆ ಕಳೆದುಕೊಳ್ಳುವಂತಾಗಿದೆ ಮತ್ತು ಆಕ್ರೋಶಗೊಂಡು ಸ್ಪರ್ಧಿಗಳ ವಿರುದ್ಧ ದನಿ ಏರಿಸುವಂತಾಗಿದೆ ಎಂಬುದರ ಸುಳಿವನ್ನು ಈ ಪ್ರೋಮೋ ಬಿಟ್ಟುಕೊಟ್ಟಿದೆ.

ಎಂದಿನಂತೆ ಇಂದು ಕೂಡಾ ನಾಮಿನೇಶನ್​ ಪ್ರಕ್ರಿಯೆ ನಡೆಯಲಿದೆ. ಈ ವಾರ ಎಲಿಮಿನೇಶನ್​ಗೆ ನೇರ ನಾಮಿನೇಶನ್​ ಮಾಡುವ ಅವಕಾಶವನ್ನು ಬಿಗ್​​ ಬಾಸ್​ ಕ್ಯಾಪ್ಟನ್​ಗೆ ಕೊಡುತ್ತಿದ್ದಾರೆ. ಪ್ರತಿದಿನ ಈ ನಾಮಿನೇಶನ್​ಗಳು ನಡೆಯುತ್ತಿದೆ. ಅದರಂತೆ ಇಂದು ಸಹ ನಡೆದಿದೆ.

ಇದನ್ನೂ ಓದಿ: ಬಿಗ್​ ಬಾಸ್​​ ಶೋನಲ್ಲಿ ಜಗದೀಶ್ ಅಶ್ಲೀಲ ಪದ ಬಳಕೆ: 'ಎಲ್ಲವೂ ಗಮನದಲ್ಲಿದೆ' - ಈ ವಾರವಾದ್ರೂ ಸೀರಿಯಸ್​​ ಕ್ಲಾಸ್​ ಕೊಡ್ತಾರಾ ಕಿಚ್ಚ

ಕ್ಯಾಪ್ಟನ್​ ಮೊದಲ ನಾಮಿನೇಷನ್​ ಇವರು: ಪ್ರೋಮೋದಲ್ಲಿ, ನನ್ನ ಮೊದಲನೇ ನಾಮಿನೇಶನ್​ ಧರ್ಮ ಅವರು ಎಂದು ಕ್ಯಾಪ್ಟನ್​ ಶಿಶಿರ್​​ ತಿಳಿಸಿದ್ದಾರೆ. ಆ ಪ್ರಕಾರ, ಧರ್ಮ ಕಹಿ ಜ್ಯೂಸ್ ಕುಡಿದಿದ್ದಾರೆ. ಧರ್ಮ ಅವರನ್ನು ಟಾರ್ಗೆಟ್​ ಮಾಡಲಾಗುತ್ತಿದೆ ಎಂದು ಜಗದೀಶ್​ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಮಾನಸಾ ಪ್ರತಿಕ್ರಿಯಿಸಿ, ಎಲ್ಲಾ ವಿಷಯದಲ್ಲೂ ಬಾಯ್​ ಹಾಕ್ತೀರಲ್ವಾ? ಎಂದು ತಿಳಿಸಿದ್ದಾರೆ. ನೀವ್ ಯಾರ್​ ಮಾತಾಡೋಕೆ ಎಂದು ಜಗದೀಶ್​ ಎಗರಿದ್ದಾರೆ. ಇಬ್ಬರ ಮಾತಿನ ಚಕಮಕಿ ಜೋರಾಗಿದೆ. ಮನೆ ಮಂದಿ ಮಧ್ಯಪ್ರವೇಶಿಸುವಂತಾಗಿದೆ. ಉಗ್ರಂ ಮಂಜು ಮತ್ತು ತ್ರಿವಿಕ್ರಮ್​​ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಏನ್​ ನಿನ್​ ಮನೆಗ್​ ಬಂದಿದ್ದೀನಾ, ಥೂ ನಿನ್​ ಯೋಗ್ಯತೆಗೆ, ಹೋಗೋಲೆ, ನೀನ್​​ ಹೋಗೋಲೆ ಎಂಬ ಮಾತುಗಳು ಬಂದಿವೆ. ಜಗದೀಶ್​ ಮಂಜು ಎದುರು ಬದುರಾಗಿ ಕಿಡಿ ಕಾರಿದ್ದಾರೆ. ಸ್ಪರ್ಧಿಗಳು ಉಗ್ರಾವತಾರ ಎತ್ತಿದ ಕ್ಷಣ ಬಿಗ್​ ಬಾಸ್​ನ ಕರೆ ಬಂದಿದೆ. ನಂತರ ಆದೇಶ ಬಂದಿದೆ.

ಇದನ್ನೂ ಓದಿ: 'ಚಿತ್ರರಂಗಕ್ಕೆ ಕಾಶೀನಾಥ್ ಕೊಡುಗೆ ಅಪಾರ': ಪುತ್ರ ಅಭಿಮನ್ಯು ಸಿನಿಮಾಗೆ ಸುದೀಪ್​ ಸಪೋರ್ಟ್

ಇದು ಬಿಗ್​​ ಬಾಸ್​. ಎಲ್ಲರೂ ಸೋಫಾದಲ್ಲಿ ಕುಳಿತುಕೊಳ್ಳಿ ಎಂದು ಬಹಳ ಸಿಟ್ಟಿನಲ್ಲಿ ತಿಳಿಸಿದ್ದಾರೆ. ಅದಾಗ್ಯೂ ಸ್ಪರ್ಧಿಗಳು ತಮ್ಮ ಗಲಾಟೆ ಮುಂದುವರಿಸಿದ್ದಾರೆ. ಸಿಟ್ಟಿಗೆದ್ದ ಬಿಗ್​ ಬಾಸ್ 'ಸದ್ದು' ಎಂದು ಜೋರಾಗಿ ತಿಳಿಸಿದ್ದಾರೆ. ​​''ಯಾರೂ ತುಟಿಕ್​ ಪಿಟಿಕ್​ ಅನ್ನೋ ಹಾಗಿಲ್ಲ!'' ಎಂದು ಬಹಳ ಆಕ್ರೋಶದಲ್ಲಿ ಸೂಚಿಸಿದ್ದಾರೆ. ನಂತರ, ಇಡೀ ಮನೆ ಸದಸ್ಯರು ಸೋಫಾ ಮೇಲೆ ಬಂದು ಕುಳಿತಿರೋದನ್ನು ಕಾಣಬಹುದು. ಮುಂದೆ ಏನಾಗಬಹುದು ಎಂದು ವೀಕ್ಷಕರ ಕುತೂಹಲ ಕೆರಳಿದೆ. ಈ ಬಾರಿ ಗಲಾಟೆ ಹೆಚ್ಚಾಯ್ತೆ? ಸೀಸನ್​ 11ರ ಸ್ಪರ್ಧಿಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.