ETV Bharat / entertainment

ಪ್ಯಾನ್ ಇಂಡಿಯಾ ಕ್ರೇಜ್​ನಿಂದ ಸಿನಿಮಾ ಇಂಡಸ್ಟ್ರಿಗೆ ದೊಡ್ಡ ಹೊಡೆತ: ನಿರ್ದೇಶಕ ಓಂ ಸಾಯಿಪ್ರಕಾಶ್​ - DIRECTOR OM SAIPRAKASH

ಕನ್ನಡ ಚಿತ್ರರಂಗ ಹಾಗೂ ಪ್ಯಾನ್​ ಇಂಡಿಯಾ ಸಿನಿಮಾಗಳ ಬಗ್ಗೆ ನಿರ್ದೇಶಕ ಹಾಗೂ ನಿರ್ಮಾಪಕ ಓಂ ಸಾಯಿಪ್ರಕಾಶ್​ 'ಈಟಿವಿ ಭಾರತ'ದ ಜೊತೆಗೆ ಮಾತನಾಡಿದ್ದಾರೆ.

DIRECTOR OM SAIPRAKASH
ನಿರ್ದೇಶಕ ಓಂ ಸಾಯಿಪ್ರಕಾಶ್ (ETV Bharat)
author img

By ETV Bharat Karnataka Team

Published : Nov 7, 2024, 1:14 PM IST

Updated : Nov 7, 2024, 4:15 PM IST

ಕಾರವಾರ: "ಪ್ಯಾನ್ ಇಂಡಿಯಾ ಕ್ರೇಜ್‌ನಿಂದಾಗಿ ಸಿನಿಮಾ ಇಂಡಸ್ಟ್ರಿಗೆ ದೊಡ್ಡ ಹೊಡೆತ ಬಿದ್ದಿದೆ. ಸಣ್ಣ ಸಿನಿಮಾಗಳು ಇದರಿಂದ ಮೇಲೇಳಲಾಗದ ಪರಿಸ್ಥಿತಿಗೆ ಬಂದು ತಲುಪಿವೆ" ಎಂದು ನಟ ನಿರ್ಮಾಪಕ, ನಿರ್ದೇಶಕ ಓಂ ಸಾಯಿಪ್ರಕಾಶ್ ಹೇಳಿದ್ದಾರೆ.

ಕಾರವಾರ ಕೊಡಿಬಾಗ ಸಾಯಿಕಟ್ಟಾದ ಶ್ರೀ ಶಿರಡಿ ಸಾಯಿಬಾಬಾ ಮಂದಿರದ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಅವರು, "ದುಡ್ಡು ಇದ್ದವರು ದೊಡ್ಡ ದೊಡ್ಡ ಸಿನಿಮಾ ಮಾಡಬಹುದು. ಆದರೆ ಯಾರೊಬ್ಬರೂ ಸಿನಿಮಾ ಇಂಡಸ್ಟ್ರಿಯನ್ನು ರಕ್ಷಣೆ ಮಾಡಬೇಕು ಎಂಬುದರ ಬಗ್ಗೆ ಯೋಚನೆ ಮಾಡುತ್ತಿಲ್ಲ. ಇಷ್ಟು ದಿನಗಳ ಕಾಲ ಸಿನಿಮಾ ಇಂಡಸ್ಟ್ರಿಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಬಂದಿರುವ ಹಳೆಯ ಕಲಾವಿರ ಬಗ್ಗೆ ಯೋಚನೆ ಮಾಡಬೇಕಾಗಿದೆ." ಎಂದು ಹೇಳಿದರು.

ನಿರ್ದೇಶಕ ಓಂ ಸಾಯಿಪ್ರಕಾಶ್​ (ETV Bharat)

ಚಿಕ್ಕ ಚಿತ್ರಗಳಿಗೆ ದೊಡ್ಡ ಮಟ್ಟದ ಪೆಟ್ಟು: "ಈ ಹಿಂದೆ ಶುಕ್ರವಾರ ಎಂದರೆ ಹಬ್ಬದ ವಾತಾವರಣ ಇರುತ್ತಿತ್ತು. ಆದರೆ ಈಗ ಎರಡು ಸಾವಿರ ಮೂರು ಸಾವಿರಕ್ಕೆ ಟಿಕೆಟ್ ಮಾರಿಕೊಂಡು ಮೂರು ದಿನದಲ್ಲಿ ದುಡ್ಡು ಮಾಡಿಕೊಂಡು ಹೋಗುತ್ತಿದ್ದಾರೆ. ಇದರಿಂದ ಅದೆಷ್ಟೋ ಥಿಯೇಟರ್​ಗಳು ಮುಚ್ಚುತ್ತಿವೆ. ಒಮ್ಮೆ ಈ ರೀತಿಯ ಸಿನಿಮಾ ನೋಡಿದ ಮೇಲೆ ಮತ್ತೆ ಜನ ಥಿಯೇಟರ್ ಬಳಿ ಬರುವುದಿಲ್ಲ. ಆದರೆ ಈ ಹಿಂದೆ 50 ರೂ.ಗೆ ಸಿನಿಮಾ ನೋಡಬಹುದಿತ್ತು. ಇಂದು 300 ಚಿತ್ರ ಬಂದರೂ ಕೂಡ ಸ್ಟ್ಯಾಂಪ್ ಪೇಪರ್ ಸಿಗದಂತಾಗಿದೆ. ಬ್ರ್ಯಾಂಡ್ ಇಲ್ಲದ ಸಿನಿಮಾಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಜನ ಥಿಯೇಟರ್​ಗೆ ಬರುವುದನ್ನು ಬಿಟ್ಟಿದ್ದಾರೆ. ಹೇಗಿದ್ದರೂ ಓಟಿಟಿಯಲ್ಲಿ ಬರುತ್ತದೆ ಎಂದು ನಾಲ್ಕೈದು ಮಂದಿ ಸೇರಿ ಸಬ್​ಸ್ಕ್ರಿಪ್ಷನ್​ ಮಾಡಿಕೊಂಡು ವರ್ಷವಿಡೀ ಸಿನಿಮಾ ನೋಡುತ್ತಿದ್ದಾರೆ" ಎಂದು ಬೇಸರ ವ್ಯಕ್ತಪಡಿಸಿದರು.

ವೈಯಕ್ತಿಕ ಹಾಗೂ ಸಿನಿಮಾ ಜೀವನವೇ ಬೇರೆ: ಡಾ.ರಾಜ್‌ಕುಮಾರ್ ರೀತಿಯ ನಟರು ಕನ್ನಡ ಸಿನಿಮಾ ಇಂಡ್ರಸ್ಟ್ರಿಯಲ್ಲಿ ಇತ್ತೀಚೆಗೆ ಕಾಣಸಿಗದ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಜೀವನದಲ್ಲಿ ಕೋಪ, ಪ್ರತೀಕಾರ ನಮಗೆ ಶತ್ರುಗಳು. ಒಂದು ಒಳ್ಳೆ ಸ್ಥಾನದಲ್ಲಿದ್ದಾಗ ನಮ್ಮ ಮಾತು, ವರ್ತನೆ ಧರ್ಮವಾಗಿರಬೇಕು. ವೈಯಕ್ತಿಕ ಹಾಗೂ ಸಿನಿಮಾ ಜೀವನವೇ ಬೇರೆ ಬೇರೆ. ಚಿತ್ರರಂಗದಲ್ಲಿ ಅವಕಾಶ ಪಡೆದ ಎಲ್ಲ ಕಲಾವಿದರು ಅಣ್ಣಾವ್ರ ನಡತೆಯನ್ನು ಫಾಲೋ ಮಾಡುವ ಅವಶ್ಯಕತೆ ಇದೆ. ಸಮಾಜ ಸೇವೆ ಮೂಲಕ ಕಲಾವಿದರು ನಿಮ್ಮ ಹಿಂದಿರುವ ಕೋಟ್ಯಂತರ ಅಭಿಮಾನಿಗಳ ಮನಸ್ಸನ್ನು ಮೊದಲು ಗೆಲ್ಲುವ ಕೆಲಸ ಮಾಡಬೇಕು. ಅಣ್ಣಾವ್ರು ಮತ್ತು ಪುನೀತ್ ರಾಜ್‌ಕುಮಾರ್ ಅವರು ಮಾಡಿದ ಸೇವಾ ಕಾರ್ಯಗಳು ಇಂದು ಕೋಟ್ಯಂತರ ಅಭಿಮಾನಿಗಳನ್ನು ಗೆಲ್ಲಲು ಸಾಧ್ಯವಾಗಿದೆ. ಭಗವಂತ ಕೊಟ್ಟಿರುವ ಬ್ರಹ್ಮಾಸ್ತ್ರವನ್ನು ಸೇವೆಗೆ ಬಳಸಬೇಕೇ ಹೊರತು ಇನ್ನೊಬ್ಬರಿಗೆ ತೊಂದರೆ ಕೊಡಲು ಯಾವ ಕಲಾವಿದರು ಬಳಸಬಾರದು. ಆಗ ಮಾತ್ರ ಕಲಾವಿದರ ಅಭಿಮಾನಿಗಳನ್ನು ಗೆಲ್ಲಲು ಸಾಧ್ಯವಿದೆ" ಎಂದರು.

ನಿರ್ದೇಶಕ ಓಂ ಸಾಯಿಪ್ರಕಾಶ್​ (ETV Bharat)

ದರ್ಶನ್ ಕುರಿತು ಪ್ರತಿಕ್ರಿಯಿಸಿದ ಅವರು, "ದರ್ಶನ್‌ಗೆ ಸ್ವಲ್ಪ ಕೋಪ ಜಾಸ್ತಿ. ಅದನ್ನು ಕಂಟ್ರೋಲ್ ಮಾಡಿಕೊಂಡರೆ ತುಂಬಾ ಒಳ್ಳೆಯ ವ್ಯಕ್ತಿ. ತುಂಬಾ ಸೇವಾ ಕಾರ್ಯಗಳನ್ನು ಮಾಡಿದ್ದಾರೆ. ಇನ್ನು ಕೂಡ ಮಾಡಲು ಸಾಕಷ್ಟು ಅವಕಾಶಗಳು ಕೂಡ ಇದೆ. ಭಗವಂತ ಅವರಿಗೆ ನಿರೀಕ್ಷೆಯಂತೆ ಕೊಟ್ಟಿದ್ದಾನೆ. ಅವರಲ್ಲಿ ತುಂಬಾ ಒಳ್ಳೆಯತನವಿದೆ. ಇದು ಗೊತ್ತಿಲ್ಲದೆ ಮಾಡಿದ ತಪ್ಪು ಆಗಿರಬಹುದು. ಆ ತಪ್ಪಿಗೆ ಇದೀಗ ನೋವು ಅನುಭವಿಸುತ್ತಿದ್ದಾರೆ. ಅವನನ್ನು ನೋಡಿ ನಾವೆಲ್ಲರೂ ಕಲಿಯಬೇಕಾಗಿದೆ. ಅವರ ಮೇಲೆ ಸಾಕಷ್ಟು ನಿರ್ಮಾಕರು ಕೋಟ್ಯಂತರ ರೂ. ಹಣ ಹಾಕಿದ್ದಾರೆ. ಕೋಟ್ಯಂತರ ಅಭಿಮಾನಿಗಳು ಪ್ರಾರ್ಥನೆ ಮಾಡುತ್ತಿದ್ದಾರೆ. ತಂದೆ ತೂಗುದೀಪ ಅವರ ಆಶೀರ್ವಾದ ಅವರ ಮೇಲಿದೆ" ಎಂದು ಹೇಳಿದರು.

ನಿರ್ಮಾಪಕ ಈ ರಿಸ್ಕ್​ ಎದುರಿಸಲೇಬೇಕು: "ನಿರ್ಮಾಪಕ ಗುರುಪ್ರಸಾದ್​ ಒಳ್ಳೆಯ ವ್ಯಕ್ತಿ. ಸತತವಾಗಿ ಮೂರು ಯಶಸ್ವಿ ಚಿತ್ರಗಳನ್ನು ಮಾಡಿದ್ದರು. ಆದರೆ ಚಟ ಎನ್ನುವುದು ಇಂದಲ್ಲ ನಾಳೆ ನಮ್ಮನ್ನು ಮುಗಿಸುತ್ತದೆ. ಗುರುಪ್ರಸಾದ್ ಅವರು ಕೂಡ ಸಣ್ಣಪುಟ್ಟ ತಪ್ಪು ಮಾಡಿರಬಹುದು. ಕುಡಿಯುವುದರಿಂದ ಮಾತ್ರ ಅಷ್ಟೊಂದು ನಷ್ಟ ಆಗಿರಲು ಸಾಧ್ಯವಿಲ್ಲ. ಅವರ ವೈಯಕ್ತಿಕ ಜೀವನವು ಸರಿ ಇರಲಿಲ್ಲ ಎನ್ನುವ ಬಗ್ಗೆ ಕೇಳಿದ್ದೇನೆ. ಅವರ ಇತ್ತೀಚಿಗಿನ ಯಾವ ಸಿನಿಮಾಗಳು ಅಷ್ಟೊಂದು ಸಕ್ಸಸ್ ನೀಡಿರಲಿಲ್ಲ. ಸಾಲ ತೀರಿಸುವ ಶಕ್ತಿ ಇದ್ದರೆ ಮಾತ್ರ ಸಾಲ ಮಾಡಬೇಕು. ಸಾಲ ಮಾಡಿಯೇ ಸಿನಿಮಾ ಮಾಡಬೇಕು ಎಂಬುದು ಈಗ ಇಲ್ಲ. ನಮ್ಮ ಕಾಲದಲ್ಲಿ ಎಲ್ಲರೂ ಶೇರ್ ಮಾಡಿಕ್ಕೊಳ್ಳುತ್ತಿದ್ದೆವು. ಸಿನಿಮಾದಲ್ಲಿ ಕೆಲಸ ಮಾಡುವವರಿಗೆ ಪ್ರತಿಯೊಬ್ಬರಿಗೆ ಸಂಬಳ ನೀಡಲಾಗುತ್ತದೆ. ಆದರೆ ನಿರ್ಮಾಪಕನಿಗೆ ಸಂಬಳ ಸಿನಿಮಾ ರಿಲೀಸ್ ಆದಮೇಲೆ ಸಿಗುವಂತದ್ದು. ಅದು ಬರಲೂಬಹುದು ಬರದೆಯೂ ಇರಬಹುದು. ಈ ರಿಸ್ಕ್​ ಪ್ರತಿಯೊಬ್ಬ ನಿರ್ಮಾಪಕರು ಎದುರಿಸಲೇಬೇಕಾಗಿದೆ" ಎಂದರು.

ನಿರ್ದೇಶಕ ಓಂ ಸಾಯಿಪ್ರಕಾಶ್​ (ETV Bharat)

"ಇಂದು ಸಿನಿಮಾ ಇಂಡಸ್ಟ್ರಿಯಲ್ಲಿ ಕಲಾವಿದರು ಪ್ಯಾನ್ ಇಂಡಿಯಾ ಎಂಬ ಮಾಯೆಯಲ್ಲಿ ಬಿದ್ದಿದ್ದಾರೆ. ಅವರು ಯಾರೂ ಕನ್ನಡಕ್ಕೆ ಏನು ಬೇಕು ಎಂಬುದನ್ನು ಯೋಚನೆ ಮಾಡುತ್ತಿಲ್ಲ. ಒಂದು ಕಾಲದಲ್ಲಿ ಸಂಗೀತವೇ ಸಿನಿಮಾವನ್ನು ಗೆಲ್ಲಿಸುವಷ್ಟರ ಮಟ್ಟಿಗೆ ಇತ್ತು. ಆದರೆ ದೇವರ ಹಾಡುಗಳು ಎಲ್ಲಿಯೂ ಕೇಳುವುದಿಲ್ಲ. ಅಲ್ಲದೆ ಬೆರಳೆಣಿಕೆಯಷ್ಟು ಸಿನಿಮಾ ವಿತರಕರು ಕೆಲಸ ಮಾಡುತ್ತಿದ್ದಾರೆ. ಇದರಿಂದ ನಿರ್ಮಾಪಕರೇ ಸಿನಿಮಾ ಮಾಡಿ ಥಿಯೇಟರ್‌ಗೆ ತೆರಳಿ ಹಂಚುವ ಪರಿಸ್ಥಿತಿ ಬಂದಿದೆ. ಆದರೆ ನಿರ್ಮಾಪಕರು ಸಿನಿಮಾ ಮಾಡಬಹುದೇ ವಿನಃ ಈ ರೀತಿ ಮಾಡಲು ಸಾಧ್ಯವಿಲ್ಲ. ಆ ಕಾಲದಲ್ಲಿ ಸಿನಿಮಾ ಪ್ರಚಾರವನ್ನು ಹಂಚಿಕೆದಾರರೇ ನೋಡಿಕೊಳ್ಳುತ್ತಿದ್ದರು." ಎಂದು ಹೇಳಿದರು.

ಈಗ ಸಿನಿಮಾಗಳಲ್ಲಿ ಟೀಂ ವರ್ಕ್​ ಇಲ್ಲ: "ಆದರೆ ಈಗ ಹೊಂಬಾಳೆಯಂತಹ ಕೆಲವೇ ಸಂಸ್ಥೆಗಳು ಇವೆ. ಅವರು ಒಳ್ಳೆ ಸಿನಿಮಾ ಮಾಡಲು ಒಳ್ಳೆ ಕಲಾವಿದರನ್ನೇ ಆಯ್ದುಕೊಳ್ಳುತ್ತಾರೆ. ಆದರೆ ಪ್ರಸ್ತುತ ಬಿಡುಗಡೆಯಾಗುವ 300 ಸಿನಿಮಾಗಳಿಗೆ ಅನುಭವವೇ ಇಲ್ಲದ ಕಲಾವಿದರು ಆಯ್ಕೆಯಾಗುತ್ತಾರೆ. ಈ ಹಿಂದೆ ಡಾ. ರಾಜ್​ಕುಮಾರ್ ಸೇರಿದಂತೆ ಹಲವು ಕಲಾವಿದರು ಅದೆಷ್ಟೋ ವರ್ಷಗಳ ಕಾಲ ತಪಸ್ಸು ಮಾಡಿ ನಟರಾಗಿದ್ದಾರೆ. ಆದರೆ ಈಗಿನ ಕಲಾವಿದರಿಗೆ ನಾಳೆಯೇ ದೊಡ್ಡ ನಟನಾಗಬೇಕು ಎಂಬ ಹಂತಕ್ಕೆ ಸಿನಿಮಾ ಇಂಡಸ್ಟ್ರಿ ಬಂದಿದೆ. ಚಿತ್ರರಂಗದಲ್ಲಿ ಪ್ರತಿಭೆಗಿಂತ ಆಸೆಯೇ ಹೆಚ್ಚಾಗಿದೆ. ಇದೀಗ ಸಿನಿಮಾಗಳಲ್ಲಿ ಟೀಂ ವರ್ಕ್​ ಇಲ್ಲ. ನಿರ್ಮಾಪಕರು, ನಿರ್ದೇಶಕರು, ಸಂಭಾಷಣೆ ಕೊನೆಗೆ ನಟನೆಯನ್ನು ಕೂಡ ಅವರೇ ಮಾಡುತ್ತಿದ್ದಾರೆ. ಸಕ್ಸಸ್ ಆಗಿರುವ ಹಿರಿಯ ನಿರ್ಮಾಪಕರು, ನಿರ್ದೇಶಕರ ಸಲಹೆ ಪಡೆದು ಸಿನಿಮಾ ನಿರ್ಮಾಣಕ್ಕೆ ಮುಂದಾಗಬೇಕು" ಎಂದು ಸಲಹೆ ನೀಡಿದರು.

ನಿರ್ದೇಶಕ ಓಂ ಸಾಯಿಪ್ರಕಾಶ್​ (ETV Bharat)

"ಸತ್ಯ ಸಾಯಿಬಾಬಾ ಅವರ ಜೀವನಚರಿತ್ರೆಯುಳ್ಳ ಸಿನಿಮಾ ಮಾಡಬೇಕು ಎಂಬುದು ಕನಸಾಗಿತ್ತು. ಈ ಕನಸನ್ನು ಬಾಬಾ ಅವರೇ ನನಸು ಮಾಡಬೇಕು. ಸ್ಕ್ರಿಪ್ಟ್ ಮಾಡಿದ್ದೇನೆ. ನಿರ್ಮಾಪಕರು ಇದ್ದಾರೆ. ಶಿರಡಿ ಬಾಬಾ ಅವರ ಭಕ್ತನಾಗಿ ಭಗವಾನ್ ಶ್ರೀ ಸಾಯಿಬಾಬಾ ಸಿನಿಮಾ ಮಾಡಿದ್ದೇನೆ. ಇದೀಗ ಸತ್ಯ ಸಾಯಿಬಾಬಾ ಅವರ ಭಕ್ತರಾಗಿ ಅವರ ಸಿನಿಮಾ ಮಾಡಬೇಕು ಎಂದುಕೊಂಡಿದ್ದೇನೆ. ಆದರೆ ಕಮರ್ಸಿಯಲ್ ಇದೀಗ ಬಹಳಷ್ಟು ಕಷ್ಟವಿದೆ. ಈ ಹಿಂದೆ ಹಳೆಯ ಕಲಾವಿದರ ಅದೆಷ್ಟೋ ಸಿನಿಮಾಗಳನ್ನು ಹಿಟ್ ಮಾಡಿದ್ದೇವೆ. ಸದ್ಯ ಸೂಕ್ತ ಕಲಾವಿದರು, ನಿರ್ಮಾಪಕರು ಸಿಗದ ಸ್ಥಿತಿ ಇರುವುದರಿಂದ ನಾವೇ ಎಲ್ಲವನ್ನು ಹುಡುಕಿ ಮಾಡಬೇಕಾಗಿದೆ. ಬಾಬಾ ಅವರು ಇದಕ್ಕೆ ದಾರಿ ತೋರುವ ನಂಬಿಕೆ ಇದೆ" ಎಂದು ಹೇಳಿದರು.

ಇದನ್ನೂ ಓದಿ: 'ಮೇಘ' ಮೂಲಕ ಮತ್ತೆ ಅದೃಷ್ಟ ಪರೀಕ್ಷೆಗಿಳಿದ ಕಿರಣ್ ರಾಜ್: ಶೀಘ್ರದಲ್ಲೇ ಬಿಡುಗಡೆ ದಿನಾಂಕ ಘೋಷಣೆ

Last Updated : Nov 7, 2024, 4:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.