ETV Bharat / entertainment

'ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದರು': ಕರಾಳ ದಿನಗಳನ್ನು ನೆನಪಿಸಿಕೊಂಡ ಖ್ಯಾತ ನಟಿ - ಭೂಮಿ ಪೆಡ್ನೇಕರ್ ಲೈಂಗಿಕ ದೌರ್ಜನ್ಯ

ಬಾಲಿವುಡ್​​ ನಟಿ ಭೂಮಿ ಪಡ್ನೇಕರ್​ ತಮ್ಮ ಕಿರಿ ವಯಸ್ಸಿನಲ್ಲಿ ಎದುರಿಸಿದ ಕಠಿಣ ಕ್ಷಣಗಳನ್ನು ಬಹಿರಂಗಪಡಿಸಿದ್ದಾರೆ.

Bhumi Pednekar
ನಟಿ ಭೂಮಿ ಪೆಡ್ನೇಕರ್
author img

By ETV Bharat Karnataka Team

Published : Feb 3, 2024, 6:52 PM IST

ನಟಿ ಭೂಮಿ ಪೆಡ್ನೇಕರ್ ಸಾಮಾಜಿಕ ಸಮಸ್ಯೆಗಳ ಬಗ್ಗೆ ತಮ್ಮ ದನಿ ಎತ್ತುತ್ತಲೇ ಬಂದಿದ್ದಾರೆ. ಇದೀಗ ನಟಿ ತಮ್ಮ ಬಹುನಿರೀಕ್ಷಿತ 'ಭಕ್ಷಕ್' ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಈ ಚಿತ್ರದಲ್ಲಿ ಅವರು, ಬಾಲಕಿಯರ ಆಶ್ರಯತಾಣದಲ್ಲಿ ನಡೆಯೋ ದೌರ್ಜನ್ಯಗಳನ್ನು ಬಹಿರಂಗಪಡಿಸುವ ಮತ್ತು ಅಧಿಕಾರಿಗಳ ಹಿಡಿತದಲ್ಲಿ ಆ ಯುವ ಜೀವಗಳನ್ನು ರಕ್ಷಿಸುವ ದಿಟ್ಟ ಪತ್ರಕರ್ತೆ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಪ್ರಚಾರದ ಸಂದರ್ಭದಲ್ಲಿ, ಭೂಮಿ ಪಡ್ನೇಕರ್ 14ನೇ ವಯಸ್ಸಿನಲ್ಲಿ ತಾವು ಅನುಭವಿಸಿದ ಭಯಾನಕ ಘಟನೆಗಳ ಬಗ್ಗೆ ಮಾತನಾಡಿದ್ದಾರೆ.

ಭಕ್ಷಕ್ ಪ್ರಮೋಶನ್​ ವೇಳೆ, ಭೂಮಿ ತಮ್ಮ ಕರಾಳ ದಿನಗಳನ್ನು ನೆನಪಿಸಿಕೊಂಡರು. ತಮ್ಮ ಕುಟುಂಬಸ್ಥರೊಂದಿಗೆ ಉತ್ಸವವೊಂದರಲ್ಲಿ ಭಾಗಿಯಾಗಿದ್ದ ವೇಳೆ ಈ ಘಟನೆ ಸಂಭವಿಸಿತ್ತು. "ಮತ್ತೆ ಮತ್ತೆ ಅನುಚಿತವಾಗಿ ಸ್ಪರ್ಶಿಸಲ್ಪಡುತ್ತಿದ್ದೆ, ಆಗ ನಾನು ಬಹಳ ಆತಂಕಕ್ಕೆ ಒಳಗಾಗಿದ್ದೆ" ಎಂದು ತಿಳಿಸಿದ್ದಾರೆ.

ತನ್ನ ಕುಟುಂಬದೊಂದಿಗೆ ಇದ್ದರೂ ಕೂಡ ಆ ಘಟನೆ ನನ್ನನ್ನು ಭಯಭೀತಗೊಳಿಸಿತ್ತು. ಆ ಸಮಯದಲ್ಲಿ ಏನನ್ನೂ ಹೇಳಲು ಸಾಧ್ಯವಾಗಲಿಲ್ಲ. "ಅಂದಿನ ಅನುಭವ ನನಗೆ ಇನ್ನೂ ನೆನಪಿದೆ. ನನಗೆ ಚಿವುಟಿದ್ದನ್ನು ಇಂದಿಗೂ ನೆನಪಿಸಿಕೊಳ್ಳುತ್ತೇನೆ. ಇದು ನಿಮ್ಮ ದೇಹ ನೆನಪಿಸಿಕೊಳ್ಳುತ್ತಿರುವಂತೆ. ಇವುಗಳು ನೀವು ಹೊರಬರಲು ಸಾಧ್ಯವಾಗದ ಆಘಾತಗಳು" ಎಂದು ಭೂಮಿ ಕರಾಳ ಕ್ಷಣಗಳನ್ನು ಹಂಚಿಕೊಂಡರು. ಜನಸಮೂಹದ ನಡುವೆ ಅಂತಹ ವ್ಯಕ್ತಿಯನ್ನು ಗುರುತಿಸುವುದು ಸವಾಲೇ ಸರಿ ಎಂದು ಕೂಡ ನಟಿ ತಿಳಿಸಿದರು.

ಇದನ್ನೂ ಓದಿ: 'ಫೇಕ್​ ಡೆತ್​ ನ್ಯೂಸ್'; ​ಪೂನಂ ಪಾಂಡೆಗೆ ಸೆಲೆಬ್ರಿಟಿಗಳಿಂದ ಛೀಮಾರಿ, ನಟಿ ಪರ ನಿಂತ ಆರ್​ಜಿವಿ!

"ನಮ್ಮ ಶಾಲೆಯ ಹೊರಗೆ ಅಸಭ್ಯ ವರ್ತನೆಗಳನ್ನೂ ಎದುರಿಸಿದಂತಹ ಸ್ನೇಹಿತರನ್ನೂ ಸಹ ನಾನು ಹೊಂದಿದ್ದೇನೆ. ನಮ್ಮ ಶಾಲಾ ದಿನಗಳ ಸಂದರ್ಭ ಜುಹು ಪ್ರದೇಶದಲ್ಲಿ ಆಟೋರಿಕ್ಷಾ ಚಾಲಕನಿದ್ದನು. ಶಾಲೆಯ ಹೊರಗೆ ಅಲ್ಲ, ಅಲ್ಲೇ ಸುತ್ತಮುತ್ತಲಿನಲ್ಲಿ ಆಟೋ ಓಡಿಸುತ್ತಿದ್ದ. ನಾವು ಶಾಲೆಯಿಂದ ಮನೆಗೆ ಹಿಂತಿರುಗುವ ಸಂದರ್ಭ ಅವನು ಅನುಚಿತವಾಗಿ ವರ್ತಿಸುತ್ತಿದ್ದ. ಇಂಥ ನಡವಳಿಕೆ ನಮಗೆ ತೊಂದರೆಯನ್ನುಂಟುಮಾಡುತ್ತದೆ. ಅದನ್ನು ಸಹಜ ಎಂದು ಸ್ವೀಕರಿಸಲು ಹೇಗೆ ಸಾಧ್ಯ?'' ಎಂದು ಪ್ರಶ್ನಿಸಿದರು.

ಇದನ್ನೂ ಓದಿ: 'I am alive': ನಾನು ಜೀವಂತವಾಗಿದ್ದೇನೆಂದು ಹೇಳಿಕೊಂಡ ನಟಿ ಪೂನಂ ಪಾಂಡೆ

ಈ ಘಟನೆಗಳು ವ್ಯಕ್ತಿಗಳನ್ನು ಆಘಾತಕ್ಕೀಡುಮಾಡುತ್ತದೆ. ನಿಮಗೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದು ಕೂಡ ತಿಳಿಯುವುದಿಲ್ಲ ಎಂದು ಮಹಿಳೆಯರ ಪರಿಸ್ಥಿತಿ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ. ಭೂಮಿ ಪೆಡ್ನೇಕರ್ ಅಭಿನಯದ ಕ್ರೈಮ್ ಥ್ರಿಲ್ಲರ್ 'ಭಕ್ಷಕ್' ಸಿನಿಮಾವನ್ನು ಪುಲ್ಕಿತ್ ನಿರ್ದೇಶಿಸಿದ್ದಾರೆ. ಈ ಚಿತ್ರ ಇದೇ ಫೆಬ್ರವರಿ 9ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.