ನವದೆಹಲಿ: ಭಾರತದ ಪ್ರಸಿದ್ಧ ಶಾಸ್ತ್ರೀಯ ನೃತ್ಯ ಪ್ರಕಾರಗಳಾದ ಭರತನಾಟ್ಯ ಮತ್ತು ಕೂಚಿಪುಡಿ ಹಿರಿಯ ಕಲಾವಿದೆ ಯಾಮಿನಿ ಕೃಷ್ಣಮೂರ್ತಿ (84) ಅವರು ಶನಿವಾರ ಇಲ್ಲಿನ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
7 ತಿಂಗಳಿನಿಂದ ಐಸಿಯುನಲ್ಲಿ ಚಿಕಿತ್ಸೆ: "ಯಾಮಿನಿ ಕೃಷ್ಣಮೂರ್ತಿ ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದರು. ಕಳೆದ ಏಳು ತಿಂಗಳಿಂದ ಐಸಿಯುನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದರು" ಎಂದು ಯಾಮಿನಿ ಅವರ ಮ್ಯಾನೇಜರ್ ಗಣೇಶ್ ತಿಳಿಸಿದ್ದಾರೆ.
ಅಪೋಲೋ ಆಸ್ಪತ್ರೆ ಹೇಳಿಕೆ ಬಿಡುಗಡೆ ಮಾಡಿದ್ದು, "ವೈದ್ಯರ ತಂಡದ ಅತ್ಯುತ್ತಮ ಪ್ರಯತ್ನದ ಹೊರತಾಗಿಯೂ ಡಾ.ಯಾಮಿನಿ ಕೃಷ್ಣಮೂರ್ತಿ ಶನಿವಾರ ಮಧ್ಯಾಹ್ನ ನಿಧನರಾದರು. ಸಂತಾಪಗಳು" ಎಂದು ತಿಳಿಸಿದೆ.
Sangeet Natak Akademi and its associate bodies deeply mourn the sad demise of Yamini Krishnamurti, a leading Bharatanatyam exponent, Sangeet Natak Akademi Fellow, and Padma Vibhushan Awardee, who passed away today. Heartfelt condolences to the bereaved ones and prayers to the… pic.twitter.com/TrSCS4NPB8
— Sangeet Natak Akademi (@sangeetnatak) August 3, 2024
ಇಹಲೋಕದ ನಾಟ್ಯ ಮುಗಿಸಿದ ವಿಶಾರದೆ: ಡಿಸೆಂಬರ್ 20, 1940ರಂದು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿಯಲ್ಲಿ ಯಾಮಿನಿ ಕೃಷ್ಣಮೂರ್ತಿ ಜನಿಸಿದರು. ತಂದೆ ಎಂ.ಕೃಷ್ಣಮೂರ್ತಿ ಸಂಸ್ಕೃತ ವಿದ್ವಾಂಸರು. ಐದನೇ ವಯಸ್ಸಿನಲ್ಲೇ ಚೆನ್ನೈನ ಕಲಾಕ್ಷೇತ್ರ ಸ್ಕೂಲ್ ಆಫ್ ಡ್ಯಾನ್ಸ್‌ನಲ್ಲಿ ಪೌರಾಣಿಕ ಭರತನಾಟ್ಯ ನೃತ್ಯಗಾರ್ತಿ ರುಕ್ಮಿಣಿ ದೇವಿ ಅರುಂಡೇಲ್ ಮಾರ್ಗದರ್ಶನದಲ್ಲಿ ಯಾಮಿನಿ ನೃತ್ಯ ತರಬೇತಿ ಪಡೆದರು. ಕೂಚಿಪುಡಿ ನೃತ್ಯದಲ್ಲಿ ಪ್ರವೀಣೆಯಾಗಿದ್ದ ಯಾಮಿನಿ, ಪಂಕಜ್ ಚರಣ್ ದಾಸ್ ಮತ್ತು ಕೇಲುಚರಣ್ ಮೊಹಾಪಾತ್ರ ಅವರಿಂದ ಒಡಿಸ್ಸಿ ಶಾಸ್ತ್ರೀಯ ನೃತ್ಯ ಕಲಿಯುವ ಮೂಲಕ ತಮ್ಮ ಕಲಾ ಸಾಧನೆಯನ್ನು ಮತ್ತಷ್ಟು ವಿಸ್ತರಿಸಿದ್ದರು. ವಿವಿಧ ನೃತ್ಯ ಪ್ರಕಾರಗಳನ್ನು ಕಲಿಯುವುದರೊಂದಿಗೆ, ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ವೀಣೆ ತರಬೇತಿ ಪಡೆದರು.
ಮೇರು ಸಾಧನೆಗೆ ಸಂದ ಪ್ರಶಸ್ತಿಗಳು ಹಲವು: 1968ರಲ್ಲಿ 28ನೇ ವಯಸ್ಸಿನಲ್ಲಿ ಪದ್ಮಶ್ರೀ, 2001ರಲ್ಲಿ ಪದ್ಮಭೂಷಣ ಮತ್ತು 2016ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗಳು ಯಾಮಿನಿ ಅವರ ಸಾಧನೆಯನ್ನು ಹುಡುಕಿಕೊಂಡು ಬಂದವು. 1977ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯೂ ಲಿಭಿಸಿತು.
ಗಣ್ಯರ ಸಂತಾಪ: ಭರತನಾಟ್ಯಕ್ಕೆ ಯಾಮಿನಿ ಕೃಷ್ಣಮೂರ್ತಿ ನೀಡಿದ ಕೊಡುಗೆಗಳ ಬಗ್ಗೆ ಮಾತನಾಡಿದ ಹಿರಿಯ ನರ್ತಕಿ ಮತ್ತು ಯಾಮಿನಿ ಅವರ ಶಿಷ್ಯೆ ರಮಾ ವೈದ್ಯನಾಥನ್, ''ಯಾಮಿನಿ ಕೃಷ್ಣಮೂರ್ತಿಯವರು ನೃತ್ಯ ಪ್ರಕಾರಕ್ಕೆ ಶಕ್ತಿ, ಆಕರ್ಷಣೆ ಮತ್ತು ಗ್ಲಾಮರ್ ತಂದುಕೊಟ್ಟವರು. ಭರತನಾಟ್ಯ ಒಂದೇ ಅಲ್ಲ, ಶಾಸ್ತ್ರೀಯ ನೃತ್ಯದತ್ತ ಹೆಚ್ಚು ಗಮನಹರಿಸಿದ್ದರು. ನೃತ್ಯಕ್ಕೆ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡಿದ್ದರು. ಸುಮಾರು 40 ವರ್ಷಗಳ ಹಿಂದೆ ಅವರ ಮೊದಲ ವಿದ್ಯಾರ್ಥಿಯಾಗಿದ್ದ ನಾನು ತುಂಬಾ ಅದೃಷ್ಟಶಾಲಿ'' ಎಂದು ಕೊಂಡಾಡಿದರು.
Just got the sad news of the passing away of India’s great dancer Yamini Krishnamurthy, Padmabhushan & Padma Vibhushan awardee. She blazed like a meteor across the sky, the firmament of the Indian dance art. She was my senior. We all looked up to her. #YaminiKrishnamurthy pic.twitter.com/2QKbhdXSo0
— Sonal Mansingh (@sonal_mansingh) August 3, 2024
'ಯಾಮಿನಿ ಭಾರತೀಯ ನೃತ್ಯಕಲೆಯ ಆಕಾಶ': ಮಾಜಿ ರಾಜ್ಯಸಭಾ ಸಂಸದೆ ಮತ್ತು ಭರತನಾಟ್ಯ ನೃತ್ಯಗಾರ್ತಿ ಸೋನಾಲ್ ಮಾನ್ಸಿಂಗ್ ಪ್ರತಿಕ್ರಿಯಿಸಿ, "ಭಾರತದ ಶ್ರೇಷ್ಠ ನರ್ತಕಿ, ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರಾದ ಯಾಮಿನಿ ಕೃಷ್ಣಮೂರ್ತಿ ನಿಧನದ ಸುದ್ದಿ ತಿಳಿದು ತೀವ್ರ ನೋವಾಯಿತು. ಯಾಮಿನಿ ಆಕಾಶದಲ್ಲಿ ಉಲ್ಕೆಯಂತೆ ಪ್ರಜ್ವಲಿಸಿದ್ದರು. ಅವರು ಭಾರತೀಯ ನೃತ್ಯ ಕಲೆಯ ಆಕಾಶ. ನನ್ನ ಸೀನಿಯರ್ ಆಗಿದ್ದರು'' ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸ್ಮರಿಸಿದ್ದಾರೆ.
ಪ್ರಸಿದ್ಧ ಕೂಚಿಪುಡಿ ದಂಪತಿ ರಾಜಾ ಮತ್ತು ರಾಧಾ ರೆಡ್ಡಿ ಪ್ರತಿಕ್ರಿಯಿಸಿ, ''ಯಾಮಿನಿ ಕೃಷ್ಣಮೂರ್ತಿ ನಟರಾಜನ ಪಾದದಲ್ಲಿ ಮೋಕ್ಷ ಪಡೆದಿದ್ದಾರೆ" ಎಂದು ತಿಳಿಸಿದ್ದಾರೆ.
ಭರತನಾಟ್ಯ ಮತ್ತು ಕೂಚಿಪುಡಿ ಪ್ರೀಮಾ ಡೊನ್ನಾ, ಭರತನಾಟ್ಯ ಪ್ರತಿಪಾದಕಿ ಜಯಲಕ್ಷ್ಮಿ ಈಶ್ವರ್ ಹಾಗೂ ಸಂಗೀತ ನಾಟಕ ಅಕಾಡೆಮಿ ಸಾಮಾಜಿಕ ಜಾಲತಾಣದಲ್ಲಿ ಯಾಮಿನಿ ನಿಧನಕ್ಕೆ ಸಂತಾಪ ಸೂಚಿಸಿದೆ.
ಇದನ್ನೂ ಓದಿ: ವಯನಾಡ್ ಭೀಕರ ಭೂಕುಸಿತ: ಅವಶೇಷದಡಿ ಸಿಲುಕಿದ ಜೀವಗಳ ಉಸಿರಾಟ ಪತ್ತೆ ಮಾಡಿದ ರಡಾರ್! - WAYANAD LANDSLIDES