ETV Bharat / entertainment

ಬಿಗ್​​ ಬಾಸ್​​​ ರಾಜೀವ್ ಹನು 'ಬೇಗೂರು ಕಾಲೋನಿ‌' ಸಿನಿಮಾಗೆ ಸಾಥ್ ಕೊಟ್ಟ 'ಭೀಮ' ವಿಜಯ್​ - Beguru Colony - BEGURU COLONY

ಫ್ಲೈಯಿಂಗ್ ಕಿಂಗ್ ಮಂಜು ಕಥೆ ಬರೆದು ನಿರ್ದೇಶಿಸಿರುವ 'ಬೇಗೂರು ಕಾಲೋನಿ' ಚಿತ್ರದ ಕ್ಯಾರೆಕ್ಟರ್ ಮೋಶನ್ ಪೋಸ್ಟರ್ ಅನ್ನು 'ಭೀಮ' ಸಿನಿಮಾ ಖ್ಯಾತಿಯ ದುನಿಯಾ ವಿಜಯ್​ ಅನಾವರಣಗೊಳಿಸಿ, ಸಿನಿಮಾ ಯಶಸ್ಸಿಗೆ ಶುಭ ಹಾರೈಸಿದ್ದಾರೆ.

Beguru Colony film team
'ಬೇಗೂರು ಕಾಲೋನಿ' ಚಿತ್ರತಂಡಕ್ಕೆ ದುನಿಯಾ ವಿಜಯ್​ ಸಾಥ್ (ETV Bharat)
author img

By ETV Bharat Entertainment Team

Published : Sep 20, 2024, 1:29 PM IST

ಕನ್ನಡ ಚಿತ್ರರಂಗಕ್ಕೆ ಬಲ ತುಂಬಿರುವ 'ಭೀಮ' ಹೊಸಬರಿಗೆ ಸದಾ ಸಾಥ್ ಕೊಡುತ್ತಾರೆ. ಅದರಂತೆ, ದುನಿಯಾ ವಿಜಯ್ ಕುಮಾರ್ ಅವರೀಗ ಬಿಗ್ ಬಾಸ್ ಖ್ಯಾತಿಯ ರಾಜೀವ್ ಹನು ಅಭಿನಯದ ಹೊಸ ಸಿನಿಮಾಗೆ ತಮ್ಮ ಬೆಂಬಲ ಕೊಟ್ಟಿದ್ದಾರೆ. ಫ್ಲೈಯಿಂಗ್ ಕಿಂಗ್ ಮಂಜು ಕಥೆ ಬರೆದು ನಿರ್ದೇಶಿಸಿರುವ 'ಬೇಗೂರು ಕಾಲೋನಿ' ಚಿತ್ರದ ಕ್ಯಾರೆಕ್ಟರ್ ಮೋಶನ್ ಪೋಸ್ಟರ್ ಬಿಡುಗಡೆ ಮಾಡಿ ಸಿನಿಮಾ ಯಶಸ್ಸಿಗೆ ಶುಭ ಹಾರೈಸಿದ್ದಾರೆ.

ಇತ್ತೀಚೆಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ ಈ ಚಿತ್ರದ ಕಾರ್ಯಕ್ರಮ ನಡೆಯಿತು. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎಂ.ಎನ್.ಸುರೇಶ್, ಖ್ಯಾತ ಸಂಭಾಷಣೆಗಾರ ಮಾಸ್ತಿ ಸೇರಿದಂತೆ ಮತ್ತಿತರರು ಕಾರ್ಯಕ್ರಮಕ್ಕೆ ಮೆರುಗು ನೀಡಿದರು.

ಕಾರ್ಯಕ್ರಮದಲ್ಲಿ ವಿಜಯ್ ಕುಮಾರ್ ಮಾತನಾಡಿ, "ನಿರ್ಮಾಪಕರು ನಮ್ಮ ಊರಿನ ಕಡೆಯವರು. ಹಾಗಾಗಿ, ನಮ್ಮದು ಅಂತಾ ಸೆಳೆಯುತ್ತದೆ. ನಿರ್ಮಾಪಕ ಹಾಗೂ ನಿರ್ದೇಶಕ ಮಂಜು ಅವರಿಗೆ ಒಳ್ಳೆದಾಗಲಿದೆ. ಮಂಜು ಅವರಲ್ಲಿ ಹೋರಾಟದ ಶಕ್ತಿಯಿದೆ. ನೊಂದವರಿಗಾಗಿ ಎದೆ ತಟ್ಟಿಕೊಂಡು ನಿಲ್ಲುವವರು ಎಂದುಕೊಂಡಿದ್ದೇನೆ. ಮಂಜು ಅವರಲ್ಲಿ ಇಂತಹ ವಿಚಾರಗಳನ್ನು ಕಂಡೆ. ಹೋರಾಟದ ಕಥೆ ಇಟ್ಟುಕೊಂಡು ಮಾಡಿರುವ ಕಥೆ 'ಬೇಗೂರು ಕಾಲೋನಿ' ಎನಿಸುತ್ತದೆ. ಈ ಹೋರಾಟದ ಕಥೆ ಸರ್ಕಾರಕ್ಕೆ ಮುಟ್ಟಲಿ. ಕಾಲೋನಿ ಇಲ್ಲದೇ ನಗರ ಆಗಲ್ಲ. ಕಾಲೋನಿ ಶಕ್ತಿ ಶಕ್ತಿಯೇ. ನಗರ ಆಗುವುದು ಕಾಲೋನಿಯಿಂದ, ಅವರಿಂದನೇ ಎಲ್ಲಾ. ಕಾಲೋನಿಯವರು ಮೊದಲು ಸಿನಿಮಾ ನೋಡಿ, ಆಮೇಲೆ ಮಾಲ್​​ನವರು ಬಂದು ನೋಡ್ತಾರೆ. ರಾಜೀವ್ ಹಾರ್ಡ್ ವರ್ಕರ್. ಇಡೀ ತಂಡಕ್ಕೆ ಒಳ್ಳೆದಾಗಲಿ" ಎಂದು ಹಾರೈಸಿದರು.

Beguru Colony film team
'ಬೇಗೂರು ಕಾಲೋನಿ' ಈವೆಂಟ್​​ (ETV Bharat)

ನಿರ್ದೇಶಕ ಫ್ಲೈಯಿಂಗ್ ಕಿಂಗ್ ಮಂಜು ಮಾತನಾಡಿ, "ಕಾಲೋನಿಯಲ್ಲಿ ಎಲ್ಲಾ ರೀತಿಯ ಜನ ವಾಸ ಮಾಡ್ತಾರೆ. ಅಲ್ಲಿ ನಡೆಯುವ ಒಂದು ಸಣ್ಣ ಕಥೆ. ಇದು ಹೋರಾಟದ ಕಥೆ. ಇದರಲ್ಲಿ ಫೈಟ್ಸ್ ಚೆನ್ನಾಗಿ ಮಾಡಿದ್ದರೆ, ಆ ಕ್ರೆಡಿಟ್ ವಿಜಯ್ ಅಣ್ಣನಿಗೆ ಹೋಗಲಿ. ಸಣ್ಣ ನಿರ್ದೇಶಕನಿಗೆ ವಿಜಯ್ ಅಣ್ಣ ಸಾಥ್ ಕೊಟ್ಟಿದ್ದು, ನಾನು ಎಂದಿಗೂ ಮೆರಯುವುದಿಲ್ಲ" ಎಂದರು.

ನಟ ರಾಜೀವ್ ಹನು ಮಾತನಾಡಿ, "ಫ್ಲೈಕಿಂಗ್ ಮಂಜು ನನಗೆ ಸತತ 15 ವರ್ಷಗಳ ಪರಿಚಯ. ಅವತ್ತಿನಿಂದ ಮಂಜು ಪರಿಚಯ. ಶ್ರಮ ಜೀವಿ. ಅವರ ಪರಿಶ್ರಮ ಪರದೆ ಮೇಲೆ ಕಾಣುತ್ತಿದೆ. ಇಂದು ಇಷ್ಟು ಜನರನ್ನು ಒಟ್ಟುಗೂಡಿಸಿದ್ದು ಅವರು ಹಾಗೂ ನಿರ್ಮಾಪಕರು. ರಾಜೀವ್ ರಾಘವನಾಗಿ ನಿಂತುಕೊಳ್ತಾನೆ ಎಂಬ ನಂಬಿಕೆ ಇದೆ" ಎಂದರು.

Beguru Colony film team
'ಬೇಗೂರು ಕಾಲೋನಿ' ಚಿತ್ರತಂಡಕ್ಕೆ ದುನಿಯಾ ವಿಜಯ್​ ಸಾಥ್ (ETV Bharat)

ಇದನ್ನೂ ಓದಿ: ಶಿವಣ್ಣನ ಪಾದ ಮುಟ್ಟಿ ಆಶೀರ್ವಾದ ಪಡೆದ ಐಶ್ವರ್ಯಾ ರೈ ಪುತ್ರಿ: 'ದೊಡ್ಮನೆಗಳ ದೊಡ್ಡತನ'ವೆಂದ ನೆಟ್ಟಿಗರು - Aaradhya Touches Shivrajkumar Feet

ಆನಂದ್ ಅಡಿಯೋ ಯುಟ್ಯೂಬ್ ಚಾನಲ್​ನಲ್ಲಿ ಬೇಗೂರು ಕಾಲೋನಿ ಕ್ಯಾರೆಕ್ಟರ್ ಮೋಷನ್ ಪೋಸ್ಟರ್ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ಬರುವ ಎಲ್ಲಾ ಪಾತ್ರಧಾರಿಗಳನ್ನು ಈ ವಿಡಿಯೋದಲ್ಲಿ ಪರಿಚಯಿಸಲಾಗಿದ್ದು, ಶೀಘ್ರದಲ್ಲೇ ಚಿತ್ರತಂಡ ಟೀಸರ್ ರಿಲೀಸ್ ಮಾಡುವ ನಿರೀಕ್ಷೆಯಲ್ಲಿದೆ.

ಇದನ್ನೂ ಓದಿ: 'ಮಾರ್ನಮಿ' ಟೈಟಲ್ ಜೊತೆಗೆ ಕಥೆಯೂ ವಿಭಿನ್ನ: ನಾಯಕಿ ಚೈತ್ರಾ ಆಚಾರ್ ಹೇಳಿದ್ದೇನು? - Maarnami Movie

ಈ ಚಿತ್ರವನ್ನು ಶ್ರೀಮಾ ಸಿನಿಮಾಸ್ ಬ್ಯಾನರ್ ಅಡಿ ಎಂ.ಶ್ರೀನಿವಾಸ್ ಬಾಬು ನಿರ್ಮಾಣ ಮಾಡಿದ್ದು, ರಾಜೀವ್ ಹನು ಸೇರಿದಂತೆ ಫೈಯಿಂಗ್ ಕಿಂಗ್ ಮಂಜು, ಪಲ್ಲವಿ ಹರ್ವ, ಕೀರ್ತಿ ಭಂಡಾರಿ, ಪೋಸಾಗ್ನಿ ಕೃಷ್ಣ ಮುರಳಿ, ಬಾಲ ರಾಜವಾಡಿ ಬಣ್ಣ ಹಚ್ಚಿದ್ದಾರೆ. ವಿಜಯ್ ಸೋವರ್ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದು, ಪ್ರಮೋದ್ ತಳವಾರ್ ಸಂಕಲನ ಹಾಗೂ ಕಾರ್ತಿಕ್ ಛಾಯಾಗ್ರಹಣ, ಅಭಿನಂದನ್ ಕಶ್ಯಪ್ ಸಂಗೀತ ಚಿತ್ರಕ್ಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.