ETV Bharat / entertainment

ಪ್ರೇಕ್ಷಕರೊಂದಿಗೆ ಶ್ರೀಮುರಳಿ; 'ಬಘೀರ' ವೀಕ್ಷಿಸಿದ ಪುನೀತ್​ ಪುತ್ರಿ; ಹೀಗಿದೆ ಚಿತ್ರ ವೀಕ್ಷಕರ ಅಭಿಪ್ರಾಯ

ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಬಘೀರ ಅದ್ಧೂರಿಯಾಗಿ ಬಿಡುಗಡೆಗೊಂಡಿದೆ.

Bagheera Grand release
'ಬಘೀರ' ಬಿಡುಗಡೆ (ETV Bharat)
author img

By ETV Bharat Entertainment Team

Published : 4 hours ago

'ಬಘೀರ', ಶೀರ್ಷಿಕೆಯಿಂದಲೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಖತ್​ ಕ್ರೇಜ್ ಹುಟ್ಟಿಸಿದ್ದ ಚಿತ್ರ. ರೋರಿಂಗ್ ಸ್ಟಾರ್ ಶ್ರೀಮುರಳಿ ಎರಡು ಶೇಡ್​ಗಳಲ್ಲಿ ಕಾಣಿಸಿಕೊಂಡಿರುವ ಬಘೀರ ಸಿನಿಮಾ ದೀಪಾವಳಿ ಹಬ್ಬಕ್ಕೆ ರಾಜ್ಯಾದ್ಯಂತ 250ಕ್ಕೂ ಹೆಚ್ಚು ಚಿತ್ರಮಂದಿಗಳಲ್ಲಿ ಬಿಡುಗಡೆ ಆಗುವ ಮೂಲಕ ಪಟಾಕಿ ಸಿಡಿಸಿದೆ. ಫಸ್ಟ್ ಡೇ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ.

ಭರಾಟೆ ಹಾಗೂ ಮದಗಜ ಬಳಿಕ ಶ್ರೀಮುರಳಿ ಬಘೀರ ಸಿನಿಮಾದಲ್ಲಿ ಪಾತ್ರಕ್ಕೆ ಮಾಡಿಕೊಂಡಿರುವ ಮೇಕ್ ಓವರ್​ಗೆ ಸಿನಿ ಪ್ರೇಮಿಗಳು ಉಘೇ ಉಘೇ ಅನ್ನುತ್ತಿದ್ದಾರೆ. ಚಿತ್ರದಲ್ಲಿ ಶ್ರೀಮುರಳಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಪೊಲೀಸ್ ಅಂದ್ರೆ ಹೀಗೆ ಇರಬೇಕು ಎಂಬ ಮಟ್ಟಿಗೆ ಶ್ರೀಮುರಳಿ ಸಿಲ್ವರ್ ಸ್ಕ್ರೀನ್ ಮೇಲೆ ಅಬ್ಬರಿಸಿದ್ದಾರೆ.

'ಬಘೀರ' ಸಂಭ್ರಮಾಚರಣೆ (ETV Bharat)

ಪೊಲೀಸ್ ಅಧಿಕಾರಿ ವೇದಾಂತ್ ಅಂದ್ರೆ ಶ್ರೀಮುರಳಿ ಏಕೆ ಕಾನೂನನ್ನು ಕೈಗೆ ತೆಗೆದುಕೊಳ್ಳುತ್ತಾರೆ? ಸೂಪರ್ ಹೀರೋ ವೇಷದಲ್ಲಿ ಅಪರಾಧಿಗಳನ್ನು ಹೇಗೆ ಮಟ್ಟ ಹಾಕುತ್ತಾರೆ? ಅನ್ನೋದು ಬಘೀರ ಚಿತ್ರದ ಕಥೆ. ಶ್ರೀಮುರಳಿ ಪೊಲೀಸ್ ಅಧಿಕಾರಿ ಜೊತೆಗೆ ಕನ್ನಡದ ಸೂಪರ್ ಹೀರೋ ಬಘೀರನಾಗಿ ಸಿನಿ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸುತ್ತಾರೆ. ಎರಡು ಪಾತ್ರಕ್ಕೆ ಶ್ರೀಮುರಳಿ ಮಾಡಿಕೊಂಡಿರುವ ಸಿದ್ಧತೆ ನೋಡುಗರಿಗೆ ವ್ಹಾವ್​ ಅನಿಸಿದೆ. ಇದು ಶ್ರೀಮುರಳಿ ಸಿನಿಮಾ ಕೆರಿಯರ್​ನಲ್ಲಿ ದಿ ಬೆಸ್ಟ್ ಸಿನಿಮಾ ಅಂತಾ ಈ ಚಿತ್ರ ವೀಕ್ಷಕರು ಹೇಳುತ್ತಿದ್ದಾರೆ.

ಇನ್ನು, ಶ್ರೀಮುರಳಿ ಪಾತ್ರದ ಜೊತೆಗೆ ತಂದೆಯಾಗಿ ಅಚ್ಯುತ್ ಕುಮಾರ್, ತಾಯಿಯಾಗಿ ಸುಧಾರಾಣಿ ಹಾಗೂ ಅಪ್ಪಟ ಕನ್ನಡದ ಹುಡುಗಿಯಾಗಿ ರುಕ್ಮಿಣಿ ವಸಂತ್ ಪ್ರೇಕ್ಷಕರಿಗೆ ಇಷ್ಟ ಆಗ್ತಾರೆ. ರುಕ್ಮಿಣಿ ವಸಂತ್​ ಅವರ ಸೀನ್​​ ಹೆಚ್ಚು ಇಲ್ಲ ಅಂದ್ರು ಹಾಡು ಮತ್ತು ಕೆಲ ಸೀನ್​ಗಳಲ್ಲಿ ಪ್ರೇಕ್ಷಕರ ಹೃದಯ ಗೆಲ್ಲುತ್ತಾರೆ. ಉಳಿದಂತೆ ಪ್ರಕಾಶ್ ರಾಜ್, ರಂಗಾಯಣ ರಘು, ರಾಮಚಂದ್ರ ರಾಜು, ಪ್ರಮೋದ್ ಶೆಟ್ಟಿ, ಶರತ್ ಲೋಹಿತಾಶ್ವ ಕೊಟ್ಟ ಪಾತ್ರಗಳಲ್ಲಿ ಗಮನ ಸೆಳೆಯುತ್ತಾರೆ. ಕೆಜಿಎಫ್ ಖ್ಯಾತಿಯ ರಾಮ್ ಅರ್ಧ ಸುಟ್ಟ ಮುಖದಿಂದ ಭಯ ಹುಟ್ಟಿಸುವ ಮಾಫಿಯಾ ಗುರು ಆಗಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.

ಪ್ರೇಕ್ಷಕರೊಂದಿಗೆ ಶ್ರೀಮುರಳಿ (ETV Bharat)

ಈ ಚಿತ್ರದ ಪ್ರಮುಖ​ ಪಿಲ್ಲರ್​ಗಳಂದ್ರೆ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಕ್ಯಾಮರಾ ಮ್ಯಾನ್ ಎ.ಜೆ ಶೆಟ್ಟಿ. ಸಂಗೀತ ಹಾಗೂ ಹಿನ್ನೆಲೆ ಸಂಗೀತ ಪ್ರೇಕ್ಷಕರಿಗೆ ಹಿಡಿಸಿದೆ. ಪ್ರತಿ ಪಾತ್ರಗಳು ಪ್ರೇಕ್ಷಕರನ್ನು ತಲುಪುವಂತೆ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ. ಸಾಹಸ ನಿರ್ದೇಶಕ ಚೇತನ್ ಡಿಸೋಜಾ ಅವರ ಆ್ಯಕ್ಷನ್ಸ್ ಸಖತ್ ಥ್ರಿಲ್ ಕೊಡುತ್ತದೆ. ಪ್ರಶಾಂತ್ ನೀಲ್ ಬರೆದಿರುವ ಕಥೆಯನ್ನು ಡಾ. ಸೂರಿ ಅಚ್ಚುಕಟ್ಟಾಗಿ ಪ್ರಸೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Watch: ಶ್ರೀಮುರಳಿ, ರುಕ್ಮಿಣಿ ವಸಂತ್ ನಟನೆಯ 'ಬಘೀರ' ಬಿಡುಗಡೆ: ಅಭಿಮಾನಿಗಳ ಸಂಭ್ರಮ

ಕನ್ನಡ ಚಿತ್ರರಂಗ ಮಾತ್ರವಲ್ಲದೇ ಬಹುಭಾಷೆಯಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿರುವ ಹೊಂಬಾಳೆ ಫಿಲ್ಮ್ಸ್​ನ ನಿರ್ಮಾಪಕ ವಿಜಯ್ ಕಿರಂಗದೂರ್ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾರೆ. ಭಾಷೆಗಳಲ್ಲಿ ಸೂಪರ್ ಹೀರೋ ಚಿತ್ರಗಳನ್ನು ನೋಡಿದ್ದೇವೆ. ಈಗ ಕನ್ನಡದಲ್ಲಿ ಬಘೀರ ಮೊದಲ ಬೆಸ್ಟ್ ಸೂಪರ್ ಹೀರೋ ಸಿನಿಮಾ ಆಗಲಿದೆ ಅನ್ನೋದು ಸಿನಿಮಾ ನೋಡಿದವರ ರಿಯಾಕ್ಷನ್.

ಚಿತ್ರ ವೀಕ್ಷಕರ ಅಭಿಪ್ರಾಯ (ETV Bharat)

ಇದನ್ನೂ ಓದಿ: ಶಿವಣ್ಣನ ಟಗರು ಸಾಂಗ್​ಗೆ ಯಶ್​ ಮಸ್ತ್​ ಡ್ಯಾನ್ಸ್​​: ಮಗನ ಬರ್ತ್​ಡೇ ಪಾರ್ಟಿ ವಿಡಿಯೋ ವೈರಲ್​

ಈ ಚಿತ್ರವನ್ನು ನಾಯಕ ನಟ ಶ್ರೀಮುರಳಿ ಕುಟುಂಬದ ಜೊತೆಗೆ ಪುನೀತ್ ರಾಜ್​ಕುಮಾರ್ ಅವರ ಎರಡನೇ ಮಗಳು ವಂದಿತಾ, ಖಳನಟ ಗರುಡ ರಾಮ್ ಸೇರಿದಂತೆ ಸಾಕಷ್ಟು ಸಿನಿಮಾ ಗೆಳೆಯರು ನೋಡಿ ಮೆಚ್ಚಿಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.