ETV Bharat / entertainment

ನಾವು 'ಬ್ಯಾಡ್ ಬಾಯ್ಸ್' ಅಂತಿದೆ ವಿದ್ಯಾರ್ಥಿ ವಿದ್ಯಾರ್ಥಿನಿಯರ ತಂಡ - Vidyarthi Vidyarthiniyare - VIDYARTHI VIDYARTHINIYARE

'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಚಿತ್ರದ 'ಬ್ಯಾಡ್ ಬಾಯ್ಸ್' ವಿಡಿಯೋ ಸಾಂಗ್ ಇತ್ತೀಚೆಗೆ ಬಿಡುಗಡೆ ಆಗಿ ಯುವಜನತೆಯ ಗಮನ ಸೆಳೆಯುತ್ತಿದೆ.

Vidyarthi Vidyarthiniyare movie team
'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಚಿತ್ರತಂಡ
author img

By ETV Bharat Karnataka Team

Published : Apr 25, 2024, 1:54 PM IST

ಸ್ಯಾಂಡಲ್​​ವುಡ್ ಅಂಗಳದಲ್ಲಿ ಅರುಣ್ ಅಮುಕ್ತ ನಿರ್ದೇಶನದ 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ತಂಡ ಹಂತ ಹಂತವಾಗಿ ಪ್ರೇಕ್ಷಕರನ್ನು ಸೆಳೆಯೋ ಕೆಲಸ ಮಾಡುತ್ತಿದೆ. ಈಗಾಗಲೇ ಪೋಸ್ಟರ್ ಹಾಗೂ ಟೀಸರ್​ನಿಂದ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿರೋ 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಚಿತ್ರದ 'ಬ್ಯಾಡ್ ಬಾಯ್ಸ್' ವಿಡಿಯೋ ಸಾಂಗ್ ಇತ್ತೀಚೆಗೆ ಅನಾವರಣಗೊಂಡಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಹಾಡಿನ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ.

  • " class="align-text-top noRightClick twitterSection" data="">

ಪ್ರಸ್ತುತ ಯುವ ಸಮುದಾಯವನ್ನು ಆವರಿಸಿಕೊಳ್ಳುವಂತಹ ಶೈಲಿಯ ಈ ಹಾಡೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಹೆಚ್ಚೆಚ್ಚು ವೀಕ್ಷಣೆ ಪಡೆಯುತ್ತಿದೆ. ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಎಂಬ ಶೀರ್ಷಿಕೆಯೇ ಇದೊಂದು ಯುವ ಜನತೆಯ ಕಥಾನಕವನ್ನೊಳಗೊಂಡಿರುವ ಚಿತ್ರ ಎಂಬುದನ್ನು ಸಾರಿ ಹೇಳುವಂತಿದೆ. ಇದೀಗ ಬಿಡುಗಡೆಗೊಂಡಿರುವ ಬ್ಯಾಡ್ ಬಾಯ್ಸ್ ವಿಡಿಯೋ ಸಾಂಗ್ ಶೀರ್ಷಿಕೆಗೆ ಸಾಥ್ ಕೊಟ್ಟಿದೆ. ಸಾಹಿತ್ಯ, ತಾಂತ್ರಿಕತೆ ಸೇರಿದಂತೆ ಎಲ್ಲ ರೀತಿಯಿಂದಲೂ ಹೊಸತೆಂಬಂತೆ ಮೂಡಿಬಂದಿರುವ ಈ ಹಾಡಿಗೆ ವಿಜೇತ್ ಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ. ಭರ್ಜರಿ ಚೇತನ್ ಕುಮಾರ್ ಸಾಹಿತ್ಯ ಒದಗಿಸಿರುವ ಈ ಹಾಡು ವಿಜೇತ್ ಕೃಷ್ಣ, ಕೀರ್ತನಾ ಚಂದ್ರು ಮತ್ತು ಸುನೈನಾ ಕಂಠಸಿರಿಯಲ್ಲಿ ಮೂಡಿ ಬಂದಿದೆ.

Vidyarthi Vidyarthiniyare movie team
'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಚಿತ್ರತಂಡ

ಯುವ ಸಮುದಾಯಕ್ಕೆ ಹಿಡಿಸುವಂತೆ ಮೂಡಿ ಬಂದಿರುವ ಈ ಹಾಡನ್ನು ತಾಂತ್ರಿಕವಾಗಿಯೂ ಬಹಳ ವಿಶೇಷತೆಗಳೊಂದಿಗೆ ರೂಪಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಎಐ ತಂತ್ರಜ್ಞಾನ ಎಲ್ಲಾ ಕ್ಷೇತ್ರಗಳನ್ನೂ ಆವರಿಸಿಕೊಂಡಿದೆ. ಇಡೀ ದೇಶದಲ್ಲಿಯೇ ಮೊಟ್ಟ ಮೊದಲ ಬಾರಿ ಈ ಹಾಡಿಗೆ ಎಐ ಆನಿಮೇಷನ್ ನಡೆಸಲಾಗಿದೆ. ಇದಕ್ಕೆ ಸಿನಿ ಪ್ರೇಮಿಗಳ ಕಡೆಯಿಂದ ಪ್ರತಿಕ್ರಿಯೆ ಹೇಗಿರಬಹುದೆಂಬ ಕುತೂಹಲ ಚಿತ್ರತಂಡದಲ್ಲಿತ್ತು. ಆದ್ರೀಗ ವ್ಯಕ್ತವಾಗಿರುವ ಭರಪೂರ ಮೆಚ್ಚುಗೆ ಚಿತ್ರತಂಡದ ಶ್ರಮಕ್ಕೆ ಬೆಲೆ ಸಿಕ್ಕಂತಾಗಿದೆ.

ಇದನ್ನೂ ಓದಿ: ಆ ಒಂದು ಹಾಡು ಹಿಟ್ ಆಗದೇ ಇದ್ದಿದ್ದರೆ ನಾನು ನನ್ನ ಸಿನಿಮಾ ಜೀವನವನ್ನೇ​​​​​ ಬಿಟ್ಟು ಬಿಡುತ್ತಿದ್ದೆ: ಸೋನಾಲಿ ಬೇಂದ್ರೆ - Sonali Bendre

ಟ್ರೆಂಡಿಂಗ್​​ನತ್ತ ದಾಪುಗಾಲಿಡುತ್ತಿರುವ ಈ ಹಾಡಿನಲ್ಲಿ ಮನೋಜ್ ವಿವಾನ್, ಮನಸ್ವಿ, ಭಾವನಾ ಅಪ್ಪು, ಅಮರ್ ಮುಂತಾದವರು ಕಾಣಿಸಿಕೊಂಡಿದ್ದಾರೆ. ಸುಬ್ರಮಣ್ಯ ಕುಕ್ಕೆ ಮತ್ತು ಎ.ಸಿ ಶಿವಲಿಂಗೇಗೌಡ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಶ್ರೀಕಾಂತ್ ಜಿ ಕಶ್ಯಪ್ ಕಾರ್ಯಕಾರಿ ನಿರ್ಮಾಪಕರು. ಕುಮಾರ್ ಗೌಡ ಛಾಯಾಗ್ರಹಣ, ಭರ್ಜರಿ ಚೇತನ್ ಮತ್ತು ವಾಸುಕಿ ವೈಭವ್ ಸಾಹಿತ್ಯ, ಪವನ್ ಗೌಡ ಸಂಕಲನ, ಟೈಗರ್ ಶಿವು, ನರಸಿಂಹ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಅರುಣ್ ಸುರೇಶ್ ಈ ಹಾಡಿಗೆ ಛಾಯಾಗ್ರಹಣ ನಿರ್ವಹಿಸಿದ್ದಾರೆ.

ಇದನ್ನೂ ಓದಿ: ಧನುಷ್​​ ನಟನೆಯ 'ಕುಬೇರ'ನ ಸುತ್ತ ಕುತೂಹಲ: ಫೋಟೋ ಹಂಚಿಕೊಂಡ ರಶ್ಮಿಕಾ ಮಂದಣ್ಣ - Rashmika Mandanna

ಚಂದನ್ ಶೆಟ್ಟಿ, ಅಮರ್, ಭಾವನಾ, ಮಾನಸಿ, ವಿವಾನ್, ಭವ್ಯ, ಸುನೀಲ್ ಪುರಾಣಿಕ್, ಅರವಿಂದ ರಾವ್, ಸಿಂಚನಾ, ರಘು ರಾಮನಕೊಪ್ಪ, ಪ್ರಶಾಂತ್ ಸಂಬರ್ಗಿ, ಕಾಕ್ರೋಚ್ ಸುಧಿ ಮುಂತಾದವರು ನಟಿಸಿದ್ದಾರೆ. ಇನ್ನುಳಿದಂತೆ ವಿಜೇತ್ ಕೃಷ್ಣ, ವಾಸು ದೀಕ್ಷಿತ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.