ETV Bharat / entertainment

ಸೂಪರ್ ಸ್ಟಾರ್ಸ್ ಸಲ್ಮಾನ್ ಖಾನ್-ಕಮಲ್ ಹಾಸನ್ ಸ್ಕ್ರೀನ್​ ಶೇರ್: ಆ್ಯಕ್ಷನ್​ ಸಿನಿಮಾಗೆ ಅಟ್ಲೀ ಆ್ಯಕ್ಷನ್​ ಕಟ್ - Atlee next movie - ATLEE NEXT MOVIE

ಆ್ಯಕ್ಷನ್-ಪ್ಯಾಕ್ಡ್ ಸಿನಿಮಾಗಾಗಿ ಸೂಪರ್ ಸ್ಟಾರ್​ಗಳಾದ ಸಲ್ಮಾನ್ ಖಾನ್ ಮತ್ತು ಕಮಲ್ ಹಾಸನ್ ಅವರೊಂದಿಗೆ ಜನಪ್ರಿಯ ನಿರ್ದೇಶಕ ಅಟ್ಲೀ ಮಾತುಕತೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.

Salman Khan, Atlee and Kamal Haasan
ಸಲ್ಮಾನ್ ಖಾನ್, ಅಟ್ಲೀ, ಕಮಲ್​ ಹಾಸನ್​​ (IANS image)
author img

By ETV Bharat Karnataka Team

Published : Jul 2, 2024, 2:02 PM IST

'ಜವಾನ್​' ಎಂಬ ಬ್ಲಾಕ್​ಬಸ್ಟರ್ ಸಿನಿಮಾ ಮೂಲಕ ತಮ್ಮ ಜನಪ್ರಿಯತೆಯನ್ನು ದುಪ್ಪಟ್ಟುಗೊಳಿಸಿಕೊಂಡ ನಿರ್ದೇಶಕ ಅಟ್ಲೀ, ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರೊಂದಿಗೆ ಬಿಗ್​ ಬಜೆಟ್ ಆ್ಯಕ್ಷನ್-ಪ್ಯಾಕ್ಡ್ ಥ್ರಿಲ್ಲರ್ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಸದ್ದು ಮಾಡಿತ್ತು. ಲೇಟೆಸ್ಟ್ ವರದಿಗಳ ಪ್ರಕಾರ, ಅಟ್ಲೀ ಅವರೀಗ ಸಲ್ಮಾನ್ ಖಾನ್ ಮತ್ತು ಕಮಲ್ ಹಾಸನ್ ಅವರೊಂದಿಗೆ ತಮ್ಮ ಮುಂದಿನ ಪ್ರಾಜೆಕ್ಟ್ ಕುರಿತು ಮಾತುಕತೆ ನಡೆಸುತ್ತಿದ್ದಾರೆ. ಸನ್ ಪಿಕ್ಚರ್ಸ್ ನಿರ್ಮಾಣದ ಈ ಬಿಗ್​​-ಬಜೆಟ್ ಸಿನಿಮಾದಲ್ಲಿ ಇಬ್ಬರು ನಾಯಕರ ಕಥೆಯಿರಲಿದೆ. ಬಾಲಿವುಡ್​​ನ ಸೂಪರ್​ ಸ್ಟಾರ್ ಸಲ್ಮಾನ್ ಖಾನ್ ಜೊತೆ ತಮಿಳಿನ ಟಾಪ್​ ಹೀರೋ ಕಮಲ್​ ಹಾಸನ್​​​ ನಟಿಸೋದು ಅಧಿಕೃತವಾದರೆ, ಸಿನಿಪ್ರಿಯರಿಗೆ ಮನರಂಜನೆಯ ರಸದೌತಣ ಪಕ್ಕಾ.

ಪ್ರೊಜೆಕ್ಟ್​ನ ಆಪ್ತ ಮೂಲಗಳ ಪ್ರಕಾರ, ಹಲವು ತಿಂಗಳುಗಳಿಂದ ಅಟ್ಲೀ ಈ ಇಬ್ಬರು ಸೆಲೆಬ್ರಿಟಿಗಳೊಂದಿಗೆ ಚರ್ಚೆ ನಡೆಸುತ್ತಿದ್ದಾರೆ. ಡ್ಯುಯಲ್-ಹೀರೋ ಪ್ರಾಜೆಕ್ಟ್​​​ಗೆ ಇಂಡಿಯನ್​ ಸೂಪರ್ ಸ್ಟಾರ್​ಗಳ ಸಹಕಾರ ಅಗತ್ಯವಿದೆ. ಅತ್ಯಂತ ಜನಪ್ರಿಯ ನಟರು, ಹೆಸರಾಂತ ನಿರ್ದೇಶಕ ಸೇರಿ ಸಿನಿಮಾ ಮಾಡಿದ್ರೆ, ಹೇಗೆ ಮೂಡಿಬರಬಹುದು? ಎಂಬುದನ್ನು ನೇವೇ ಊಹಿಸಿ.

ಸ್ಟಾರ್ ನಟರು ಸಿನಿಮಾಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದರೂ, ಈ ತಿಂಗಳ ಕೊನೆಗೆ ಎಲ್ಲವೂ ಅಧಿಕೃತಗೊಳ್ಳುವ ನಿರೀಕ್ಷೆ ಇದೆ. ಕೆಲ ಮೂಲಗಳ ಪ್ರಕಾರ, "ಇದು ಇಬ್ಬರು ಸೂಪರ್‌ ಸ್ಟಾರ್‌ಗಳಿಗೆ ಅರ್ಹವಾದ ಪ್ರೊಜೆಕ್ಟ್​​. ಕಮಲ್ ಹಾಸನ್ ಮತ್ತು ಸಲ್ಮಾನ್ ಖಾನ್ ಇಬ್ಬರೂ ಅಟ್ಲೀ ಸಿನಿಮಾ ಬಗ್ಗೆ ಉತ್ಸಾಹ ತೋರಿಸಿದ್ದಾರೆ. ಜೊತೆಗೆ, ಒಟ್ಟಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದಾರೆ. ಎರಡೂ ಕಡೆಯಿಂದಲೂ ಉತ್ಸಾಹ ವ್ಯಕ್ತವಾಗಿದೆ. ಅದಾಗ್ಯೂ, ಈ ತಿಂಗಳ ಕೊನೆಯಲ್ಲಿ ಸಿನಿಮಾದ ಸಂಪೂರ್ಣ ನಿರೂಪಣೆಯನ್ನು ಕೇಳಿದ ನಂತರ ಅಧಿಕೃತವಾಗಿ ಗ್ರೀನ್​ ಸಿಗ್ನಲ್​​ ಸಿಗಲಿದೆ".

ಇದನ್ನೂ ಓದಿ: ಎಲ್ಲೆಡೆ ಕಲ್ಕಿ ಕ್ರೇಜ್​​ ; ಮೊದಲ ಸೋಮವಾರ 'ಕಲ್ಕಿ 2898 ಎಡಿ' ಕಲೆಕ್ಷನ್​ ಎಷ್ಟು? ​ - Kalki Collection

ಇದು, ಈ ಇಬ್ಬರು ಜನಪ್ರಿಯ ತಾರೆಯರೊಂದಿಗೆ ಅಟ್ಲೀ ಅವರ ಮೊದಲ ಸಿನಿಮಾವಾಗಲಿದೆ. ಹಾಗಾಗಿ ಪ್ರೇಕ್ಷಕರು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ವರದಿಗಳ ಪ್ರಕಾರ, "ಜವಾನ್ ನಂತರ, ಅಟ್ಲೀ ಮತ್ತೊಂದು ಅದ್ಭುತ ಆ್ಯಕ್ಷನ್​ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಹೆಸರಾಂತ ನಟರೊಂದಿಗೆ ಮಾತುಕತೆ ಮುಂದುವರಿಸಿದ್ದಾರೆ. ಮುಂದಿನ ವರ್ಷಾರಂಭದಲ್ಲಿ ಸಿನಿಮಾ ಬಿಡುಗಡೆಗೊಳಿಸಲು ಉದ್ದೇಶಿಸಿದ್ದಾರೆ. ಮುಂದಿನ ತಿಂಗಳೊಳಗೆ ಇಬ್ಬರೂ ನಟರಿಂದ ಗ್ರೀನ್​ ಸಿಗ್ನಲ್​​​ ಪಡೆದುಕೊಳ್ಳುವ ಭರವಸೆಯಲ್ಲಿದ್ದಾರೆ''.

ಇದನ್ನೂ ಓದಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ಹರ್ಷಿಕಾ ಪೂಣಚ್ಚ-ಭುವನ್​ ಪೊನ್ನಣ್ಣ; ಅಕ್ಟೋಬರ್​ಗೆ ಕಂದನ ಜನನ - Harshika Poonacha Pregnant

ಅದೇನಿದ್ದರೂ ಈ ಪ್ರೊಜೆಕ್ಟ್​ ಬಗ್ಗೆ ಅಧಿಕೃತ ಮಾಹಿತಿ ನಿರೀಕ್ಷಿಸಲಾಗಿದೆ. ಈ ಸಿನಿಮಾಗೂ ಮುನ್ನ, ಎ.ಆರ್ ಮುರುಗದಾಸ್ ನಿರ್ದೇಶನದ ಸಿಕಂದರ್ ಚಿತ್ರವನ್ನು ಸಲ್ಮಾನ್​​ ಪೂರ್ಣಗೊಳಿಸಬೇಕಿದೆ. ಇದರ ನಂತರ ಅಟ್ಲೀ ಸಿನಿಮಾದೆಡೆಗೆ ಹೋಗುವ ನಿರೀಕ್ಷೆಯಿದೆ. ಇದಲ್ಲದೇ, ಕಮಲ್ ಹಾಸನ್ ಅವರು ಥಗ್ ಲೈಫ್ ಮತ್ತು ಇಂಡಿಯನ್ 3 ಚಿತ್ರೀಕರಣವನ್ನು ಪೂರ್ಣಗೊಳಿಸುವ ನಿರೀಕ್ಷೆ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.