ETV Bharat / entertainment

ಜೈಲಿನಲ್ಲಿರುವ ನಟ ದರ್ಶನ್ ಭೇಟಿಯಾಗಿದ್ದು ಒಟ್ಟು 30 ಮಂದಿ: ಯಾರೆಲ್ಲಾ ಗೊತ್ತಾ? - Darshan

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೇಲು ಸೇರಿರುವ ನಟ ದರ್ಶನ್ ಅವರನ್ನು ಈವರೆಗೆ ಒಟ್ಟು 30 ಮಂದಿ ಭೇಟಿಯಾಗಿದ್ದಾರೆ. ಆರ್​​ಟಿಐ ಮೂಲಕ ಸಾಮಾಜಿಕ ಕಾರ್ಯಕರ್ತ ನರಸಿಂಹಮೂರ್ತಿ ಎಂಬವರು ಸಲ್ಲಿಸಿದ್ದ ಅರ್ಜಿಗೆ ಕಾರಾಗೃಹ ಇಲಾಖೆ ಮಾಹಿತಿ ನೀಡಿದೆ.

actor Darshan
ನಟ ದರ್ಶನ್ (ETV Bharat)
author img

By ETV Bharat Entertainment Team

Published : Aug 5, 2024, 7:58 PM IST

ಬೆಂಗಳೂರು: ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸೆರೆವಾಸ ಅನುಭವಿಸುತ್ತಿರುವ ನಟ ದರ್ಶನ್ ಕುಶಲೋಪರಿ ವಿಚಾರಿಸಲು ಪರಪ್ಪನ ಅಗ್ರಹಾರ ಜೈಲಿಗೆ ಪತ್ನಿ, ಮಗ, ಸಂಬಂಧಿಕರು ಹಾಗೂ ಉದ್ಯಮದ ಸ್ನೇಹಿತರು ಆಗಾಗ್ಗೆ ಭೇಟಿ ನೀಡುತ್ತಿದ್ದಾರೆ.

30 people Met Darshan in jail - details here
ದರ್ಶನ್ ಭೇಟಿಯಾದವರ ಮಾಹಿತಿ (ETV Bharat)

ಜೂನ್ 25ರಿಂದ ಜುಲೈ 26ರ ಅವಧಿಯಲ್ಲಿ 30 ಮಂದಿ ಭೇಟಿ ನೀಡಿದ್ದಾರೆ. ಪತಿಯ ಯೋಗಕ್ಷೇಮ ವಿಚಾರಿಸಲು ವಿಜಯಲಕ್ಷ್ಮೀ ನಾಲ್ಕು ಬಾರಿ ಭೇಟಿ ಕೊಟ್ಟಿದ್ದರೆ, ಸಹೋದರ ದಿನಕರ್ ತೂಗುದೀಪ ಮೂರು ಬಾರಿ ಜೈಲಿಗೆ ಬಂದಿದ್ದಾರೆ.

ಯಾವ ದಿನ, ಯಾರ‍ೆಲ್ಲಾ ಭೇಟಿ ಕೊಟ್ಟಿದ್ದರು?

  • ಜುಲೈ 1ರಂದು ದರ್ಶನ್ ತಾಯಿ ಮೀನಾ.
  • ಜೂನ್ 24ರಂದು ಪತ್ನಿ ವಿಜಯಲಕ್ಷ್ಮೀ.
  • ಜೂನ್ 29ರಂದು ನಟಿ ರಕ್ಷಿತಾ. ನಮೂದು ಪುಸ್ತಕದಲ್ಲಿ ಸ್ನೇಹಿತೆ ಎಂದು ದಾಖಲಾಗಿದೆ.
  • ಜುಲೈ 1ರಂದು ದರ್ಶನ್ ತಾಯಿ ಮೀನಾ ತೂಗುದೀಪ ಹಾಗೂ ತಮ್ಮ ದಿನಕರ್ ತೂಗುದೀಪ.
  • ಜುಲೈ 2ರಂದು ಸಮತಾ, ಪುಸ್ತಕದಲ್ಲಿ ತಂಗಿ ಎಂದು ನಮೂದು.
  • ಜುಲೈ 10ರಂದು ಪತ್ನಿ ವಿಜಯಲಕ್ಷ್ಮೀ, ಮಗ, ಸುಶಾಂತ, ಚಂದ್ರಶೇಖರ್.
  • ಜುಲೈ 11ರಂದು ನಟ ಧನ್ವಿರ್, ಚಂದ್ರಶೇಖರ್, ನಾಗೇಶ್, ಸುನೀಲ್, ಶಿವಕುಮಾರ.
  • ಜುಲೈ 15ರಂದು ಪತ್ನಿ ವಿಜಯಲಕ್ಷ್ಮೀ, ನಿತಿನ್, ದಿನಕರ್, ಅನುಶ್ ಶೆಟ್ಟಿ.
  • ಜುಲೈ 19ರಂದು ದರ್ಶನ್ ಪುಟ್ಣಣ್ಣಯ್ಯ, ರಾಘವ, ತರುಣ್ ಕಿಶೋರ್, ಹೇಮಂತ, ನವೀನ, ಕಿರ್ತನ್, ಕುಮಾರ್.
  • ಜುಲೈ 22ರಂದು ವಿನೋದ್, ದಿನಕರ್, ಸುಶಾಂತ ನಾಯ್ಡು, ಶ್ರೀನಿವಾಸ್, ವಿಜಯಲಕ್ಷ್ಮೀ.
  • ಜುಲೈ 25ರಂದು ಸಾಧುಕೋಕಿಲ, ಸಚ್ಚಿದಾನಂದ, ಹರಿಕೃಷ್ಣ, ರಾಮಮೂರ್ತಿ, ಭೋಜರಾಜ.

ಇದನ್ನೂ ಓದಿ: ರೇಣುಕಾಸ್ವಾಮಿ‌ ಕೊಲೆ‌ ಪ್ರಕರಣ: ಆ.14ರ ವರೆಗೆ‌ ನಟ ದರ್ಶನ್​ಗೆ ನ್ಯಾಯಾಂಗ ಬಂಧನ ವಿಸ್ತರಣೆ - Darshan Judicial Custody Extended

ಆಗಸ್ಟ್​​ 1ರಂದು ಈ ಹಿಂದಿನ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯವಾಗಲಿರುವ ಹಿನ್ನೆಲೆಯಲ್ಲಿ ವಿಚಾರಣೆ ನಡೆದಿತ್ತು. ವಾದ-ಪ್ರತಿವಾದ ಆಲಿಸಿದ 24ನೇ ಎಸಿಎಂಎಂ ನ್ಯಾಯಾಲಯ, ನ್ಯಾಯಾಂಗ ಬಂಧನವನ್ನು ಆಗಸ್ಟ್ 14ರವರೆಗೆ ವಿಸ್ತರಿಸಿದೆ. ಸರ್ಕಾರದ ಪರ ವಕೀಲರು ವಾದ ಮಂಡಿಸಿ, ಜಾಮೀನು ಮಂಜೂರಾತಿಗೆ ಆಕ್ಷೇಪಿಸಿ ಪ್ರಮುಖ 11 ಅಂಶಗಳನ್ನು ಉಲ್ಲೇಖಿಸಿದ್ದರು. ಈ ಮೂಲಕ ಪ್ರಕರಣದ ತನಿಖೆಯ ಹಂತದಲ್ಲಿ ಜಾಮೀನು ನೀಡಬಾರದು ಎಂದು ವಿವರಿಸಿದ್ದರು.

ಇದನ್ನೂ ಓದಿ: ಹುಬ್ಬಳ್ಳಿ ಶ್ರೀಸಿದ್ದಾರೂಢ ಮಠದ ಧರ್ಮದರ್ಶಿಯಿಂದ ದರ್ಶನ್​​​​​ಗೆ ಸಿದ್ದಾರೂಢರ ಚರಿತ್ರೆ ಪುಸ್ತಕ ರವಾನೆ - Siddharoodha Charitre to Darshan

ETV Bharat Logo

Copyright © 2024 Ushodaya Enterprises Pvt. Ltd., All Rights Reserved.