ETV Bharat / entertainment

'ಎಆರ್​​ಎಂ'​​ ಟ್ರೇಲರ್​ ಟ್ರೆಂಡಿಂಗ್​ನಲ್ಲಿ: ಟೊವಿನೋ ಥಾಮಸ್ ಸಿನಿಮಾ ವಿತರಿಸಲಿದೆ ಹೊಂಬಾಳೆ ಫಿಲ್ಮ್ಸ್ - ARM Trailer

ಮಲಯಾಳಂನ ಜನಪ್ರಿಯ ನಟ ಟೊವಿನೋ ಥಾಮಸ್ ಅಭಿನಯದ ಮುಂದಿನ ಬಹುನಿರೀಕ್ಷಿತ ಚಿತ್ರ 'ಅಜಯಂತೇ ರಂದಮ್ ಮೋಷನಂ'. ನಿನ್ನೆ ಟ್ರೇಲರ್​ ಅನಾವರಣಗೊಂಡಿದ್ದು, ಸೆಪ್ಟೆಂಬರ್ 12ರಂದು 6 ಭಾಷೆಗಳಲ್ಲಿ ಚಿತ್ರ ತೆರೆಗಪ್ಪಳಿಸಲಿದೆ. ಕನ್ನಡದ ಆವೃತ್ತಿಯನ್ನು ಹೊಂಬಾಳೆ ಫಿಲ್ಮ್ಸ್​​​ ವಿತರಿಸಲಿದೆ.

Ajayante Randam Moshanam Trailer Out
ಅಜಯಂತೇ ರಂದಮ್ ಮೋಷನಂ ಟ್ರೇಲರ್​ ರಿಲೀಸ್​​ (Poster)
author img

By ETV Bharat Karnataka Team

Published : Aug 27, 2024, 3:20 PM IST

Updated : Aug 27, 2024, 3:27 PM IST

'ಮಿನ್ನಲ್ ಮುರಳಿ' ಮತ್ತು '2018 - ಎವ್ರಿಒನ್​​ ಈಸ್ ಎ ಹೀರೋ' ಚಿತ್ರಗಳ ಮೂಲಕ ರಾಷ್ಟ್ರವ್ಯಾಪಿ ಗಮನ ಸೆಳೆದಿರುವ ಮಲೆಯಾಳಂ ನಟ ಟೊವಿನೋ ಥಾಮಸ್.‌ ಸದಾ ವಿಭಿನ್ನ ಕಥೆ ಆಯ್ಕೆ ಮಾಡಿಕೊಳ್ಳುವ ಜನಪ್ರಿಯ ನಟನೀಗ "ಎಆರ್​​ಎಂ​​" (Ajayante Randam Moshanam /ಅಜಯಂತೇ ರಂದಮ್ ಮೋಷನಂ) ಎಂಬ ಫ್ಯಾಂಟಸಿ ಪ್ಯಾನ್ ಇಂಡಿಯಾ ಚಿತ್ರದೊಂದಿಗೆ ಮತ್ತೊಮ್ಮೆ ಪ್ರೇಕ್ಷಕರೆದುರು ಬರಲು ಸಜ್ಜಾಗಿದ್ದಾರೆ. ಇದು ಜಿತಿನ್ ಲಾಲ್ ನಿರ್ದೇಶನದ ಚೊಚ್ಚಲ ಚಿತ್ರ. ಸಿನಿಮಾ ಸಂಪೂರ್ಣವಾಗಿ 3ಡಿಯಲ್ಲಿ ತಯಾರಾಗಿದೆ. ಮಲಯಾಳಂ ಇತಿಹಾಸದಲ್ಲೇ ತಾಂತ್ರಿಕ ವಿಷಯದಲ್ಲಿ ಶ್ರೀಮಂತ ಚಿತ್ರಗಳಲ್ಲಿ ಒಂದಾಗಿದೆ.

ಸೋಮವಾರ ಅನಾವರಣಗೊಂಡಿರುವ ಟ್ರೇಲರ್ ಚಿತ್ರದ ಸುತ್ತಲಿನ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ. ಮಹಿಳೆಯೋರ್ವರು ಕಥೆಯನ್ನು ವಿವರಿಸುತ್ತಾರೆ. ಹಿಂಸಾಚಾರ ಮತ್ತು ನಾಯಕನ ಪ್ರವೇಶವನ್ನು ಟ್ರೇಲರ್​ನಲ್ಲಿ ತೋರಿಸಲಾಗಿದೆ. ಎಆರ್​​ಎಂ ಭರ್ಜರಿ ಆ್ಯಕ್ಷನ್​ ಸೀನ್​ಗಳೊಂದಿಗೆ ಅದ್ಭುತ ಸಿನಿಮೀಯ ಅನುಭವ ನೀಡಲಿದೆ ಎಂಬ ಸುಳಿವನ್ನು ಈ ಟ್ರೇಲರ್​​ ಕೊಟ್ಟಿದೆ.

2 ನಿಮಿಷ 33 ಸೆಕೆಂಡ್​ಗಳುಳ್ಳ ಈ ಟ್ರೇಲರ್ ಉತ್ತರ ಕೇರಳದ ವಿವಿಧ ಸಮಯಾವಧಿಯಲ್ಲಿನ (1900, 1950 ಮತ್ತು 1990) ನಿರೂಪಣೆಗಳನ್ನು ಒಳಗೊಂಡಿದೆ. ಟೊವಿನೋ ಥಾಮಸ್​​​ ಮೂರು ವಿಭಿನ್ನ ಪಾತ್ರಗಳನ್ನು ಚಿತ್ರಿಸಿದ್ದಾರೆ. ಮಣಿಯನ್, ಕುಂಜಿಕ್ಕೆಲು ಮತ್ತು ಅಜಯನ್ ಎಂಬ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭೂಮಿಯ ಸಂಪತ್ತನ್ನು ರಕ್ಷಿಸುವ ಹೋರಾಟವಿದೆ. ಕೇರಳದ ಶ್ರೀಮಂತ ಸಂಸ್ಕೃತಿಯನ್ನು ಪ್ರದರ್ಶಿಸುತ್ತದೆ. ಒಂದು ಬಲವಾದ ಕಥೆಯೊಂದಿಗೆ ದೃಶ್ಯ ಚಮತ್ಕಾರವಿರಲಿದೆ ಎಂಬ ಭರವಸೆ ನೀಡಿದೆ.

ಎಆರ್​​ಎಂ​​ ಟೊವಿನೋ ಥಾಮಸ್ ಅವರ 50ನೇ ಚಿತ್ರವಾಗಿದ್ದು, ಟ್ರೇಲರ್​ನಿಂದ ಸಾಕಷ್ಟು ಕುತೂಹಲ ಹುಟ್ಟಿಸಿದೆ‌. ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುವ ನಿರೀಕ್ಷೆಯಿದೆ. ಭರ್ಜರಿ ಆ್ಯಕ್ಷನ್ ಸೀಕ್ವೆನ್ಸ್‌ ನಿರ್ವಹಿಸಲು ನಟ ಕಳರಿಪಯಟ್ಟುವಿನ ವ್ಯಾಪಕ ತರಬೇತಿ ಪಡೆದಿದ್ದರು. ಕಾಂತಾರ ಖ್ಯಾತಿಯ ವಿಕ್ರಮ್ ಮೂರ್ ಮತ್ತು ಫೀನಿಕ್ಸ್ ಪ್ರಭು ಸ್ಟಂಟ್ಸ್ ಸಂಯೋಜಿಸಿದ್ದಾರೆ.

ಇದನ್ನೂ ಓದಿ: 'ಚಿತ್ರರಂಗ ಮಹಿಳೆಯರಿಗೆ ಸುರಕ್ಷಿತ ಸ್ಥಳವಾಗಬೇಕು': ಮಲಯಾಳಂ ಚಿತ್ರರಂಗದ ಕರಾಳತೆ ಬಗ್ಗೆ ಪೃಥ್ವಿರಾಜ್ ಸುಕುಮಾರನ್ ಪ್ರತಿಕ್ರಿಯೆ - Prithviraj Sukumaran

ಕೃತಿ ಶೆಟ್ಟಿ, ಐಶ್ವರ್ಯಾ ರಾಜೇಶ್ ಮತ್ತು ಸುರಭಿ ಲಕ್ಷ್ಮಿ ನಾಯಕಿಯರಾಗಿದ್ದು, ಚಿತ್ರದ ಆಕರ್ಷಣೆಯನ್ನು ಹೆಚ್ಚಿಸಿದೆ. ಇಬ ಬಾಸಿಲ್ ಜೋಸೆಫ್, ಜಗದೀಶ್, ಹರೀಶ್ ಉತ್ತಮನ್, ಹರೀಶ್ ಪೆರಾಡಿ, ಪ್ರಮೋದ್ ಶೆಟ್ಟಿ ಮತ್ತು ರೋಹಿಣಿ ಸೇರಿ ಹಲವರು ಅಭಿನಯಿಸಿದ್ದಾರೆ. ಸುಜಿತ್ ನಂಬಿಯಾರ್ ಚಿತ್ರಕಥೆ ಬರೆದಿದ್ದಾರೆ ಮತ್ತು ದಿಬು ನೈನನ್ ಥಾಮಸ್ ಈ ಅದ್ಭುತ ಕೃತಿಗೆ ಸಂಗೀತ ನೀಡಿದ್ದಾರೆ. ಅತ್ಯುತ್ತಮ ಹಿನ್ನೆಲೆ ಸಂಗೀತ, ವಿಎಫ್​ಎಕ್ಸ್ ಮತ್ತು ಅತ್ಯದ್ಭುತ ದೃಶ್ಯಗಳನ್ನು ಒಳಗೊಂಡ ಎಆರ್​​ಎಂ ಭಾರತೀಯ ಚಿತ್ರರಂಗದ ಅತ್ಯಂತ ಮಹತ್ವಾಕಾಂಕ್ಷೆಯ ಚಿತ್ರಗಳಲ್ಲೊಂದಾಗಿದೆ.

ಇದನ್ನೂ ಓದಿ: ದೀರ್ಘಕಾಲದಿಂದ ಅನಾರೋಗ್ಯಕ್ಕೊಳಗಾಗಿದ್ದ ತಮಿಳು ನಟ ಬಿಜಿಲಿ ರಮೇಶ್ ನಿಧನ - Bijili Ramesh Passes Away

ಚಿತ್ರವನ್ನು ಮ್ಯಾಜಿಕ್ ಫ್ರೇಮ್ಸ್ ಮತ್ತು ಯುಜಿಎಮ್​​ ಮೋಷನ್ ಪಿಕ್ಚರ್ಸ್ ಬ್ಯಾನರ್‌ಗಳಡಿಯಲ್ಲಿ ಲಿಸ್ಟಿನ್ ಸ್ಟೀಫನ್ ಮತ್ತು ಡಾ.ಜಕಾರಿಯಾ ಥಾಮಸ್ ಅವರು ನಿರ್ಮಿಸಿದ್ದಾರೆ. ಸೆಪ್ಟೆಂಬರ್ 12ರಂದು 6 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಮಲಯಾಳಂ, ಹಿಂದಿ, ಇಂಗ್ಲಿಷ್, ತಮಿಳು, ತೆಲುಗು ಭಾಷೆಗಳಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ. ಕನ್ನಡದ ಆವೃತ್ತಿಯನ್ನು ಹೊಂಬಾಳೆ ಫಿಲ್ಮ್ಸ್ ಬಿಡುಗಡೆಗೊಳಿಸಲಿದೆ. ಇನ್ನು ತೆಲುಗಿನಲ್ಲಿ ಮೈತ್ರಿ ಮೂವಿ ಮೇಕರ್ಸ್ ಮತ್ತು ಹಿಂದಿಯಲ್ಲಿ ಅನಿಲ್ ಥಡಾನಿಯವರ ಎಎ ಫಿಲ್ಮ್ಸ್ ಬಿಡುಗಡೆ ಮಾಡುತ್ತಿದೆ.

Last Updated : Aug 27, 2024, 3:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.