ಕೊಚ್ಚಿ (ಕೇರಳ): ಇಂದು ಮುಂಜಾನೆ ನಗರದಲ್ಲಿ ಸಾಹಸ ದೃಶ್ಯದ ಚಿತ್ರೀಕರಣ ಸಂದರ್ಭ ಮಲಯಾಳಂ ನಟರಾದ ಅರ್ಜುನ್ ಅಶೋಕನ್ ಮತ್ತು ಸಂಗೀತ್ ಪ್ರತಾಪ್ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಲ್ಲಿನ ಎಂಜಿ ರಸ್ತೆಯಲ್ಲಿ ಈ ಘಟನೆ ನಡೆದಿದೆ.
"ಬ್ರೊಮ್ಯಾನ್ಸ್" ಶೀರ್ಷಿಕೆಯ ಮುಂದಿನ ಸಿನಿಮಾದ ಚೇಸ್ ಸೀನೊಂದನ್ನು ಚಿತ್ರೀಕರಿಸುವ ವೇಳೆ ನಟರು ಪ್ರಯಾಣಿಸುತ್ತಿದ್ದ ಕಾರು ಅಲ್ಲದ್ದ ಹೋಟೆಲ್ ಒಂದರ ಮುಂಭಾಗದಲ್ಲಿ ನಿಲ್ಲಿಸಿದ್ದ ಎರಡು ಬೈಕ್‌ಗಳಿಗೆ ಡಿಕ್ಕಿ ಹೊಡೆದು ಉರುಳಿದೆ. ಕಾರಿನಲ್ಲಿದ್ದ ಅರ್ಜುನ್, ಪ್ರತಾಪ್ ಸೇರಿ ಮೂವರು ಮತ್ತು ರಸ್ತೆಯಲ್ಲಿ ನಿಂತಿದ್ದ ಫುಡ್ ಡೆಲಿವರಿ ಏಜೆಂಟ್ ಸೇರಿ ಒಟ್ಟು ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ನಾಲ್ವರ ಸ್ಥಿತಿ ಸ್ಥಿರವಾಗಿದೆ.