ETV Bharat / entertainment

ಕೇರಳದ ಹೇಮಾ ಸಮಿತಿಯಂತೆ ಕನ್ನಡದಲ್ಲೂ ಕಮಿಟಿ ರಚನೆಗೆ ಮನವಿ: ನಟ ರಕ್ಷಿತ್​​ ಶೆಟ್ಟಿಗೆ ವಿಷಯ ಗೊತ್ತಿಲ್ವೇ? - Rakshit Shetty - RAKSHIT SHETTY

ಕೇರಳದ ಹೇಮಾ ಸಮಿತಿಯಂತೆ ಕನ್ನಡದಲ್ಲೂ ಕಮಿಟಿ ರಚನೆಗೆ ಮನವಿ ಸಲ್ಲಿಕೆಯಾಗಿದ್ದು, ಜನಪ್ರಿಯ ನಟ ರಕ್ಷಿತ್​​ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

Actor Rakshit Shetty
ನಟ ರಕ್ಷಿತ್​​ ಶೆಟ್ಟಿ (ETV Bharat)
author img

By ETV Bharat Entertainment Team

Published : Sep 6, 2024, 6:48 PM IST

ನಟ ರಕ್ಷಿತ್​​ ಶೆಟ್ಟಿ (ETV Bharat)

ಬೆಂಗಳೂರು: ''ಸಮಿತಿ ರಚನೆ ಒಳ್ಳೆ ವಿಷಯ. ನಾವೂ ಕೂಡಾ ಮನವಿ ಪತ್ರಕ್ಕೆ ಸಹಿ ಹಾಕುತ್ತೇವೆ. ಸಹಿ ಮಾಡಿ ನಂತರ ಶೂಟಿಂಗ್​ ಮಾಡ್ತಾ ಕುಳಿತರೆ ಏನು ಅರ್ಥ. ನಂತರದ ಕೆಲಸಗಳನ್ನು ಸಹ ನಾವು ಮಾಡಬೇಕಾಗುತ್ತದೆ. ನೀವು ಹೇಳೋದರಿಂದ ನನಗೆ ಗೊತ್ತಾಗುತ್ತಿದೆ. ಹೊರಗೆ ಹೋಗಿ ವಿಷಯ ಏನೆಂದು ನೋಡುತ್ತೇನೆ'' ಎಂದು ಕನ್ನಡದ ಜನಪ್ರಿಯ ನಟ ರಕ್ಷಿತ್​​ ಶೆಟ್ಟಿ ತಿಳಿಸಿದ್ದಾರೆ.

'ಫೈರ್ ಫಿಲ್ಮ್ ಇಂಡಸ್ಟ್ರಿ ಫಾರ್ ಈಕ್ವಾಲಿಟಿ' ಸಂಘ ಕನ್ನಡ ಚಿತ್ರರಂಗದಲ್ಲಿನ ನಟಿಯರ ಪರಿಸ್ಥಿತಿ ಬಗ್ಗೆ ಅರಿಯಲು ಸಮಿತಿಯೊಂದನ್ನು ರಚಿಸಬೇಕು ಎಂಬ ಮನವಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದೆ. ಫೈರ್ ಅಧ್ಯಕ್ಷೆ - ಹಿರಿಯ ನಿರ್ದೇಶಕಿ ಕವಿತಾ ಲಂಕೇಶ್ ಸಹಯೋಗದಲ್ಲಿ ನಟ - ಹೋರಾಟಗಾರ ಚೇತನ್ ಅಹಿಂಸಾ, ನಟಿಯರಾದ ಶ್ರುತಿ ಹರಿಹರನ್, ನೀತು ಸೇರಿ ಗುರುವಾರದಂದು ರಾಜ್ಯದ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಬೇಡಿಕೆ ಸಲ್ಲಿಸಿದ್ದರು.

ಕಮಿಟಿ ರಚನೆ ಆಗಲೆಂದು ಸುದೀಪ್, ಕಿಶೋರ್, ನಟಿ ರಮ್ಯಾ, ಐಂದ್ರಿತಾ ರೇ, ಶರತ್ ಲೋಹಿತಾಶ್ವ ಸೇರಿದಂತೆ ಸಿನಿಮಾ ಮತ್ತು ವಿವಿಧ ಕ್ಷೇತ್ರಗಳ 150ಕ್ಕೂ ಹೆಚ್ಚು ಜನರು ಮನವಿ ಪತ್ರಕ್ಕೆ ಸಹಿ ಹಾಕಿದ್ದಾರೆ. ಇದರ ಬೆನ್ನಲ್ಲೇ ಕೆಲ ಗಣ್ಯರು ಈ ಕಮಿಟಿ ರಚನೆಯಾದ್ರೆ ಉಪಯೋಗವಾಗಲಿದೆ ಎಂಬ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಆದರೆ ಕನ್ನಡದ ಅತ್ಯಂತ ಜನಪ್ರಿಯ ನಟ, ನಿರ್ದೇಶಕ, ನಿರ್ಮಾಪಕ ರಕ್ಷಿತ್ ಶೆಟ್ಟಿ ಅವರಿಗೆ ತಮ್ಮದೇ ಚಿತ್ರರಂಗದ ಈ ಪ್ರಮುಖ ವಿಷಯದ ಬಗ್ಗೆ ಹೆಚ್ಚು ತಿಳದಿಲ್ಲವೆಂಬಂತೆ ತೋರುತ್ತಿದೆ. ತಾವು ನಿರ್ಮಿಸಿರುವ 'ಇಬ್ಬನಿ ತಬ್ಬಿದ ಇಳೆಯಲಿ' ಚಿತ್ರರಂಡದಿಂದ ಮಾಗಡಿ ರಸ್ತೆಯಲ್ಲಿರೋ ವಿರೇಶ್ ಚಿತ್ರಮಂದಿರದಲ್ಲಿ ವಿಶೇಷ ಈವೆಂಟ್​​ ಹಮ್ಮಿಕೊಳ್ಳಲಾಗಿತ್ತು. ತಾವು ನಿರ್ಮಿಸಿರುವ ಬಹುನಿರೀಕ್ಷಿತ ಚಿತ್ರದ ತಂಡದೊಂದಿಗೆ ಸಿನಿಮಾ ವೀಕ್ಷಿಸಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ್ದಾರೆ.

ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುತ್ತಾ ಈ ಬಗ್ಗೆ ನಿಮ್ಮಿಂದ ಗೊತ್ತಾಗುತ್ತಿದೆ. ಹೊರಗಡೆ ಹೋಗಿ ತಿಳಿದುಕೊಳ್ಳುತ್ತೇನೆ ಎಂದು ಉತ್ತರಿಸಿದ್ದಾರೆ.

ಇದನ್ನೂ ಓದಿ: 'ಸಂಜು ವೆಡ್ಸ್ ಗೀತಾ' ನಿರ್ದೇಶಕ ನಾಗಶೇಖರ್ ಕಾರು ಅಪಘಾತ: ಡಿಸಿಪಿ ಹೇಳಿದ್ದಿಷ್ಟು! - Director Nagashekar Car Accident

ಹಿರಿಯ ನಟಿ ನಟಿ ತಾರಾ ಅನುರಾಧ ಕೂಡಾ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಚಂದನವನದಲ್ಲಿ ಇಂಥ ಪ್ರಕರಣಗಳು ಇಲ್ಲ. ಇದ್ದರೆ ಅದನ್ನು ತೀವ್ರವಾಗಿ ಖಂಡಿಸುತ್ತೇವೆ. ವೈಯಕ್ತಿಕವಾಗಿ ನನಗೆ ಇಂಥ ಸಮಸ್ಯೆಗಳು ಎದುರಾಗಿಲ್ಲ. ಹೆಚ್ಚಿನ ಕ್ಷೇತ್ರಗಲಲ್ಲಿ ಇಂತಹ ಸಮಸ್ಯೆಗಳಿರುತ್ತವೆ. ಅದನ್ನು ಪರಿಹರಿಸಲು ಮಹಿಳಾ ಆಯೋಗವಿದೆ. ಜೊತೆಗೆ ನಮ್ಮ ಫಿಲ್ಮ್ ಚೇಂಬರ್, ಕಲಾವಿದರ ಸಂಘ ಕೂಡಾ ಇದೆ. ದೂರು ಬಂದರೆ ಅವರು ನ್ಯಾಯ ಒದಗಿಸುತ್ತಾರೆಂದು ಹೇಳಿದರು.

ಇದನ್ನೂ ಓದಿ: 'ನಟಿಯರ ಮೇಲಿನ ದೌರ್ಜನ್ಯದಂತಹ ಪ್ರಕರಣಗಳು ಕನ್ನಡ ಚಿತ್ರರಂಗದಲ್ಲಿಲ್ಲ': ತಾರಾ ಅನುರಾಧ - TARA ANURADHA REACTION

ಇವರಲ್ಲದೇ ನೆನಪಿರಲಿ ಪ್ರೇಮ್​​ ಪ್ರತಿಕ್ರಿಯಿಸಿ, ಕನ್ನಡ ಚಿತ್ರರಂಗದಲ್ಲಿ ಮಡಿವಂತಿಕೆ ಇದೆ. ಹೆಣ್ಣುಮಕ್ಕಳಿಗೆ ಒಳ್ಳೆಯದಾಗುತ್ತದೆಯಂದ್ರೆ ಸಮಿತಿ ರಚನೆಗೆ ನಮ್ಮ ಬೆಂಬಲ ಇರಲಿದೆ. ದೌರ್ಜನ್ಯದಂತಹ ಪ್ರಕರಣಗಳು ನನ್ನ ಗಮನಕ್ಕೆ ಬಂದಿಲ್ಲ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.