ETV Bharat / entertainment

ಚಿರಂಜೀವಿ ಭೇಟಿಯಾದ ಅನೀಶ್ ತೇಜೇಶ್ವರ್: ಆರಾಮ್ ಅರವಿಂದ್ ಸ್ವಾಮಿ ಕಂಟೆಂಟ್ ಮೆಚ್ಚಿದ ಮೆಗಾಸ್ಟಾರ್ - ಆರಾಮ್ ಅರವಿಂದ್​​​ ಸ್ವಾಮಿ

ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿರುವ ಮೆಗಾಸ್ಟಾರ್ ಚಿರಂಜೀವಿ ಅವರನ್ನು ನಟ ಅನೀಶ್ ತೇಜೇಶ್ವರ್ ಭೇಟಿಯಾಗಿದ್ದಾರೆ.

Anish Tejeshwar meets Chiranjeevi
ಚಿರಂಜೀವಿ ಭೇಟಿಯಾದ ಅನೀಶ್ ತೇಜೇಶ್ವರ್
author img

By ETV Bharat Karnataka Team

Published : Jan 30, 2024, 6:09 PM IST

ವಿಭಿನ್ನ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಬೇಡಿಕೆ‌ ಹೊಂದಿರುವ ನಟ ಕಮ್‌ ನಿರ್ದೇಶಕ ಅನೀಶ್ ತೇಜೇಶ್ವರ್. ಕಮರ್ಶಿಯಲ್ ಸಿನಿಮಾ ಹೀರೋ ಆಗಿ ಮಿಂಚಿರುವ ಅನೀಶ್ ತೇಜೇಶ್ವರ್ ಅವರೀಗ ರೊಮ್ಯಾಂಟಿಕ್ ಹೀರೋ ಆಗಿ ತೆರೆ ಮೇಲೆ ಮಿಂಚು ಹರಿಸಲು ಸಜ್ಜಾಗಿದ್ದಾರೆ. 'ಆರಾಮ್ ಅರವಿಂದ್ ಸ್ವಾಮಿ' ನಟನ ಮುಂದಿನ ಬಹುನಿರೀಕ್ಷಿತ ಸಿನಿಮಾ. ತೆರೆ ಮೇಲೆ ಹೊಸ ಅವತಾರದಲ್ಲಿ ಬರಲು ರೆಡಿಯಾಗಿರುವ ಅವರು, ಟಾಲಿವುಡ್ ಮೆಗಾ ಸ್ಟಾರ್ ಚಿರಜೀವಿ ಜೊತೆ ಕಾಣಿಸಿಕೊಂಡಿದ್ದಾರೆ.

ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿರುವ ಮೆಗಾಸ್ಟಾರ್ ಚಿರಂಜೀವಿ ಅವರನ್ನು ನಟ ಅನೀಶ್ ತೇಜೇಶ್ವರ್ ಭೇಟಿಯಾಗಿದ್ದಾರೆ. ಇಂದು ಹೈದರಾಬಾದ್​ನ ಹೆಸರಾಂತ ನಟ ಚಿರಂಜೀವಿ ಅವರ ನಿವಾಸದಲ್ಲಿ ಭೇಟಿಯಾಗಿರೋ ಸ್ಯಾಂಡಲ್​ವುಡ್​​ ಸ್ಟಾರ್​, ಅಭಿನಂದನೆ ತಿಳಿಸಿದ್ದಾರೆ. ಇದೇ ವೇಳೆ, ತಮ್ಮ ಬಹುನಿರೀಕ್ಷಿತ ಆರಾಮ್ ಅರವಿಂದ್ ಸ್ವಾಮಿ ಚಿತ್ರದ ಕಂಟೆಂಟ್ ಅನ್ನೂ ಸಹ ತೋರಿಸಿದ್ದಾರೆ. ಸಿನಿಮಾದ ಕಂಟೆಂಟ್ ನೋಡಿ ಮೆಚ್ಚಿಕೊಂಡ ಚಿರಂಜೀವಿ ಅವರು ಅನೀಶ್ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.

ಅನೀಶ್ ತೇಜೇಶ್ವರ್ ಹುಟ್ಟುಹಬ್ಬದ ನಿಮಿತ್ತ ಬಿಡುಗಡೆಯಾಗಿದ್ದ ಆರಾಮ್ ಅರವಿಂದ್​​​ ಸ್ವಾಮಿ ಟೈಟಲ್ ಟ್ರ್ಯಾಕ್​​ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಅರ್ಜುನ್ ಜನ್ಯ ಮ್ಯೂಸಿಕ್, ನಾಗಾರ್ಜುನ್ ಶರ್ಮಾ ಸಾಹಿತ್ಯದ ಹಾಡಿಗೆ ಬೊಂಬಾಟ್ ಆಗಿ ಅನೀಶ್ ಕುಣಿದು ಕುಪ್ಪಳಿಸಿದ್ದರು. ಬಾಬಾ ಭಾಸ್ಕರ್ ಮಾಸ್ಟರ್ ಕೊರಿಯೋಗ್ರಾಫಿಯಲ್ಲಿ ಮೂಡಿಬಂದಿದ್ದ ಟೈಟಲ್ ಟ್ರ್ಯಾಕ್ 1 ಕೋಟಿಗೂ ಅಧಿಕ ವೀವ್ಸ್ ಪಡೆದುಕೊಂಡಿದೆ.

ಇದನ್ನೂ ಓದಿ: 'ಮಕ್ಬೂಲ್'ಗೆ 20 ವರ್ಷಗಳ ಸಂಭ್ರಮ: ಸೂಪರ್​ ಹಿಟ್​ ಸಿನಿಮಾದ ಇಂಟ್ರೆಸ್ಟಿಂಗ್ ವಿಚಾರಗಳಿಲ್ಲಿವೆ

ಅಕಿರ ಸಿನಿಮಾ ಖ್ಯಾತಿಯ ಶ್ರೀಕಾಂತ್ ಪ್ರಸನ್ನ, ಗುಳ್ಟು ಸಿನಿಮಾ ಖ್ಯಾತಿಯ ಪ್ರಶಾಂತ್ ರೆಡ್ಡಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ವೈವಿಬಿ ಶಿವಸಾಗರ್ ಛಾಯಾಗ್ರಹಣ, ಉಮೇಶ್ ಆರ್ ಬಿ ಸಂಕಲನ ಈ ಚಿತ್ರಕ್ಕಿದೆ.

ಇದನ್ನೂ ಓದಿ: 'ಕರಟಕ ದಮನಕ' ಟೈಟಲ್​​ ಸಾಂಗ್​ ರಿಲೀಸ್​: 'ಅಂಬಿ' ವಿಶೇಷ ವಿಡಿಯೋ ಅನಾವರಣ

ತನ್ನ ಪ್ರಮೋಷನ್ ಕಂಟೆಂಟ್​ನಿಂದಲೇ ಈಗಾಗಲೇ ಸದ್ದು ಮಾಡಿರುವ 'ಆರಾಮ ಅರವಿಂದ್ ಸ್ವಾಮಿ' ಸಿನಿಮಾಗೆ ಅಭಿಷೇಕ್ ಶೆಟ್ಟಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ನಮ್ ಗಣಿ ಬಿಕಾಂ ಪಾಸ್, ಗಜಾನನ ಅಂಡ್ ಗ್ಯಾಂಗ್ ಸಿನಿಮಾಗಳ ಮೂಲಕ ಭರವಸೆ ಮೂಡಿಸಿರೋ ಅಭಿಷೇಕ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮೂರನೇ ಸಿನಿಮಾವಿದು. ರೊಮ್ಯಾಂಟಿಕ್ ಕಾಮಿಡಿ ಸಬ್ಜೆಕ್ಟ್ ಒಳಗೊಂಡ ಆರಾಮ ಅರವಿಂದ್ ಸ್ವಾಮಿ ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.