ETV Bharat / entertainment

'ನಿರೂಪಣೆ ನೀವಿಲ್ಲದೇ ಅಪೂರ್ಣ ಅಪರ್ಣಾ ಅಕ್ಕ': ಅನುಶ್ರೀ ಕಂಬನಿ - Anushree - ANUSHREE

ಖ್ಯಾತ ನಿರೂಪಕಿ ಅಪರ್ಣಾ ನಿಧನಕ್ಕೆ ಕಂಬನಿ ಮಿಡಿದಿರುವ ನಿರೂಪಕಿ ಅನುಶ್ರೀ, 'ಕನ್ನಡಕ್ಕೆ ಒಬ್ಬರೇ ಮಾಹಾ ನಿರೂಪಕಿ. ಅದು ನೀವು' ಎಂದು ಸಂತಾಪ ಸೂಚಿಸಿದ್ದಾರೆ.

Anushree on Aparna
ನಿರೂಪಕಿ ಅಪರ್ಣಾ, ಅನುಶ್ರೀ (ETV Bharat)
author img

By ETV Bharat Karnataka Team

Published : Jul 12, 2024, 11:41 AM IST

ಕನ್ನಡ ಚಿತ್ರರಂಗ ಕಂಡ ಖ್ಯಾತ ನಿರೂಪಕಿ ಅಪರ್ಣಾ ಇನ್ನು ನೆನಪಷ್ಟೇ. ಶ್ವಾಸಕೋಶದ ಕ್ಯಾನ್ಸರ್​​​ನಿಂದ ಬಳಲುತ್ತಿದ್ದ ಇವರು ಗುರುವಾರ ತಮ್ಮ 57ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಚಿತ್ರರಂಗ, ಅಭಿಮಾನಿಗಳು, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು, ಜನಸಾಮಾನ್ಯರು ಸಂತಾಪ ಸೂಚಿಸಿದ್ದಾರೆ.

ಅದರಂತೆ, ಹಲವು ವರ್ಷಗಳಿಂದ ಅಪರ್ಣಾ ಅವರೊಂದಿಗೆ ಬಾಂಧವ್ಯ ಹೊಂದಿದ್ದ ಮತ್ತೋರ್ವ ಖ್ಯಾತ ನಿರೂಪಕಿ ಅನುಶ್ರೀ ಕೂಡ ಕಂಬನಿ ಮಿಡಿದಿದ್ದಾರೆ. ನೀವಿಲ್ಲದೇ ನಿರೂಪಣೆ ಅಪೂರ್ಣ ಎಂದು ಹೃದಯಸ್ಪರ್ಶಿ ಬರಹಗಳನ್ನು ಹಂಚಿಕೊಂಡಿದ್ದಾರೆ.

'ಕನ್ನಡಕ್ಕೆ ಒಬ್ಬರೇ ಮಹಾ ನಿರೂಪಕಿ': ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋ ಹಂಚಿಕೊಂಡ ಆ್ಯಂಕರ್ ಅನುಶ್ರೀ, ''ನಿರೂಪಣೆಗೆ ಘನತೆ ನೀವು. ಕನ್ನಡಕ್ಕೆ ಶೋಭೆ ನೀವು. ನಿರೂಪಣೆ ನೀವಿಲ್ಲದೇ ಅಪೂರ್ಣ ಅಪರ್ಣಾ ಅಕ್ಕ. ತೀವ್ರ ದುಃಖ, ನಿರಾಶೆ. ಬಿಗ್​​​ ಬಾಸ್​​ ಕಾರ್ಯಕ್ರಮದಲ್ಲಿ ನಿಮ್ಮನ್ನು ಭೇಟಿಯಾದ ಕ್ಷಣ ಇಂದಿಗೂ ಹಸಿರಾಗಿದೆ. ಅಂದು ಇಂದು ಎಂದೆಂದೂ ಕನ್ನಡಕ್ಕೆ ಒಬ್ಬರೇ ಮಾಹಾ ನಿರೂಪಕಿ. ಅದು ನೀವು. ಓಂ ಶಾಂತಿ'' ಎಂದು ಬರೆದಿದ್ದಾರೆ.

ಇದನ್ನೂ ಓದಿ: ಅಮೋಘ ನಿರೂಪಣಾ ಶೈಲಿಯ ಮೂಲಕ ಕನ್ನಡ ಭಾಷೆ ಬೆಳಗಿಸಿದ ಅಪರ್ಣಾ - Aparna

ಈ ವಿಡಿಯೋ ಬಿಗ್​ ಬಾಸ್​ನ ಭಾವನಾತ್ಮಕ ಕ್ಷಣಗಳನ್ನು ಒಳಗೊಂಡಿದೆ. ಇದರಲ್ಲಿ ಅಪರ್ಣಾರನ್ನು ಅಪ್ಪಿಕೊಂಡ ಅನುಶ್ರೀ ಕಣ್ಣೀರಿಡುತ್ತಾ, ಅಮ್ಮನೊಂದಿಗೆ ಮಾತನಾಡುತ್ತಿದ್ದೇನೆ ಎನ್ನುವ ದೃಶ್ಯವಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.