ETV Bharat / entertainment

ಪುಷ್ಪ 2 ಕಲೆಕ್ಷನ್​​​​: ಅಬ್ಬಬ್ಬಾ 6 ದಿನಗಳಲ್ಲಿ ₹1,000 ಕೋಟಿ; ಭಾರತದಲ್ಲೆಷ್ಟು? ಸಂಪೂರ್ಣ ಮಾಹಿತಿ

ಅಲ್ಲು ಅರ್ಜುನ್ ಮುಖ್ಯಭೂಮಿಕೆಯ 'ಪುಷ್ಪ 2: ದಿ ರೂಲ್' ಜಾಗತಿಕವಾಗಿ ಶೀಘ್ರವೇ 1,000 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದ ಸಿನಿಮಾವಾಗಿ ಹೊರಹೊಮ್ಮಿದೆ. ಭಾರತದಲ್ಲಿ ಚಿತ್ರದ ಪ್ರದರ್ಶನ ಹೇಗಿದೆ ಎಂಬುದರ ಮಾಹಿತಿ ಇಲ್ಲಿದೆ.

Pushpa 2 Box Office Collection
ಪುಷ್ಪ 2 ಬಾಕ್ಸ್​ ಆಫೀಸ್​​ ಕಲೆಕ್ಷನ್​​ (Photo: Film Poster)
author img

By ETV Bharat Entertainment Team

Published : 7 hours ago

ಕಳೆದ ಗುರುವಾರ ಚಿತ್ರಮಂದಿರ ಪ್ರವೇಶಿಸಿದ 'ಪುಷ್ಪ 2: ದಿ ರೂಲ್‌' ಚಿತ್ರದ ಬಾಕ್ಸ್​ ಆಫೀಸ್​ ಪ್ರಯಾಣ ಅದ್ಭುತವಾಗಿದೆ. ದೊಡ್ಡ ಮಟ್ಟದ ಯಶಸ್ಸು ಕಂಡಿದ್ದ 'ಪುಷ್ಪ: ದಿ ರೈಸ್‌'ನ ಮುಂದುವರಿದ ಭಾಗವಾಗಿ ಬಂದ 'ಪುಷ್ಪ 2: ದಿ ರೂಲ್‌' ನಿರೀಕ್ಷೆಯಂತೆ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಟಿದೆ. ಬಿಗ್​ ಬಜೆಟ್​ ಸಿನಿಮಾ ದೊಡ್ಡ ಅಭಿಮಾನಿ ಬಳಗವನ್ನು ತಲುಪುವಲ್ಲಿ ಯಶ ಕಂಡಿದೆ. ಸಿನಿಮಾ ಸುತ್ತಲಿದ್ದ ಸದ್ದು, ಆಕರ್ಷಣೆಯನ್ನು ನಿಜವೆಂದು ತನ್ನ ವ್ಯವಹಾರದ ಮೂಲಕ ಸಾಬೀತುಪಡಿಸಿದೆ. ಸಿನಿಮಾ ತನ್ನ ಆರಂಭಿಕ ವಾರಾಂತ್ಯದಲ್ಲಿ ಹಲವು ದಾಖಲೆಗಳನ್ನು ಬ್ರೇಕ್​ ಮಾಡೋ ಮೂಲಕ ಗ್ರ್ಯಾಂಡ್ ಎಂಟ್ರಿಕೊಟ್ಟು ಬಾಕ್ಸ್​ ಆಫೀಸ್​ನಲ್ಲಿ ತನ್ನ ಉತ್ತಮ ಪ್ರಯಾಣ ಮುಂದುವರಿಸಿದೆ. ದಿನ ಕಳೆದಂತೆ ಕಲೆಕ್ಷನ್‌ನಲ್ಲಿ ಕೊಂಚ ಕುಸಿತವಾಗಿದ್ದರೂ ಒಟ್ಟು ವ್ಯವಹಾರ ಅದ್ಭುತ ಎನ್ನಬಹುದು.

6 ದಿನಗಳಲ್ಲಿ ಚಿತ್ರದ ಒಟ್ಟು ಕಲೆಕ್ಷನ್​​: 'ಪುಷ್ಪ 2: ದಿ ರೂಲ್‌' ತನ್ನ ಮೊದಲ ಸೋಮವಾರ ಕಲೆಕ್ಷನ್​ನಲ್ಲಿ ಭಾರಿ ಕುಸಿತ ಎದುರಿಸಿತು. ಭಾರತದಲ್ಲಿನ ವ್ಯವಹಾರವನ್ನು ಗಮನಿಸಿದರೆ ಶೇ.54.31 ರಷ್ಟು ಇಳಿಕೆ ಆಗಿತ್ತು. ಯಾವುದೇ ಸಿನಿಮಾವಾದ್ರೂ ಕೂಡಾ ಇಂತಹ ಕುಸಿತ ಸಾಮಾನ್ಯ ಎನ್ನಬಹುದು. ದಿನ ಕಳೆದಂತೆ ಈ ಅಂಕಿ ಅಂಶಗಳು ಇಳಿಕೆ ಆಗುತ್ತಾ ಹೋಗೋದು ಸಹಜ. ಮರುದಿನ ಅಂದರೆ ಮಂಗಳವಾರ ಶೇ.18.70 ರಷ್ಟು ಇಳಿಕೆಯಾಗಿದೆ. ಈ ಕುಸಿತದ ಹೊರತಾಗಿಯೂ, 6 ದಿನಗಳಲ್ಲಿ ಚಿತ್ರದ ಒಟ್ಟು ಕಲೆಕ್ಷನ್​ 1,000 ಕೋಟಿ ರೂಪಾಯಿ ಆಗಿದೆ. ಕೆಲವೇ ದಿನಗಳಲ್ಲಿ ಸಾವಿರ ಕೋಟಿ ದಾಟಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಪುಷ್ಪ 2 ಪಾತ್ರವಾಗಿದೆ.

ದೇಶಿಯ ಕಲೆಕ್ಷನ್​​? ಇನ್ನು, ಭಾರತದ ವ್ಯವಹಾರ ಗಮನಿಸಿದ್ರೆ 6 ದಿನಗಳಲ್ಲಿ ಬರೋಬ್ಬರಿ 645.95 ಕೋಟಿ ರೂಪಾಯಿ (ನೆಟ್​ ಕಲೆಕ್ಷನ್​) ಕಲೆಕ್ಷನ್​ ಆಗಿದೆ.

ಪುಷ್ಪ 2 - ದಿನ 6 - ಬಾಕ್ಸ್ ಆಫೀಸ್ ಸಂಪೂರ್ಣ ಮಾಹಿತಿ: ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್​​ ಸ್ಯಾಕ್ನಿಲ್ಕ್​ ಮಾಹಿತಿ ಪ್ರಕಾರ, ಪುಷ್ಪ 2 ತನ್ನ ಆರನೇ ದಿನ ಅಂದರೆ ಮಂಗಳವಾರದಂದು ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ 52.50 ಕೋಟಿ ರೂ. (ನೆಟ್​ ಕಲೆಕ್ಷನ್​​) ಗಳಿಸಿದೆ. ಚಿತ್ರದ ಹಿಂದಿ ಆವೃತ್ತಿ ಈ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಹಿಂದಿ ಒಂದರಿಂದಲೇ 38 ಕೋಟಿ ರೂಪಾಯಿ ಬಂದಿದೆ. ತೆಲುಗಿನಿಂದ 11 ಕೋಟಿ ರೂಪಾಯಿ ಸಂಗ್ರಹವಾದ್ರೆ, ತಮಿಳುನಾಡಿನಿಂದ 2.60 ಕೋಟಿ ರೂ., ಕನ್ನಡ ಭಾಷೆಯಲ್ಲಿ 0.40 ಕೋಟಿ ರೂ. ಮತ್ತು ಮಲಯಾಳಂನಿಂದ 0.50 ಕೋಟಿ ರೂ.ನ ವ್ಯವಹಾರ ನಡೆದಿದೆ.

ಇದನ್ನೂ ಓದಿ: 'ಮೋಕ್ಷಿತಾ ಕರೆಕ್ಟ್​​, ಗೆಳೆಯ ಗೆಳತಿ ಇನ್ನಿರೋದಿಲ್ಲ, ಮುಗಿಸ್ತಿದ್ದೇನೆ': ಟಾಸ್ಕ್​​ ಹೊಡೆತಕ್ಕೆ ಮಂಜು ಗೌತಮಿ ಫ್ರೆಂಡ್​ಶಿಪ್​ ಪೀಸ್​ ಪೀಸ್​!

ಹಿಂದಿ ಮಾರುಕಟ್ಟೆಯಲ್ಲಿ ದಕ್ಷಿಣದ ಸಿನಿಮಾ ಪುಷ್ಪ 2ರ ಕ್ರೇಜ್ ದೊಡ್ಡ ಮಟ್ಟದಲ್ಲಿದೆ. ಸಾಮಾನ್ಯವಾಗಿ, ದಕ್ಷಿಣ ಭಾರತದ ಸಿನಿಮಾಗಳು ಹಿಂದಿ ಮಾರುಕಟ್ಟೆಯಲ್ಲಿ ಗಮನಾರ್ಹ ಪರಿಣಾಮ ಬೀರಲು ಹೆಣಗಾಡುತ್ತವೆ. ಆದ್ರೆ ಪುಷ್ಪ 2 ಹಿಂದಿ ಆವೃತ್ತಿಯಿಂದ ಹೆಚ್ಚು ಕಲೆಕ್ಷನ್​ ಮಾಡೋ ಮೂಲಕ ಹೊಸ ಮಾನದಂಡವನ್ನು ಸೃಷ್ಟಿಸಿದೆ.

  • ಪುಷ್ಪ 2 ಕಲೆಕ್ಷನ್​​ - ದಿನನಿತ್ಯದ ಅಂಕಿಅಂಶ:
ದಿನಇಂಡಿಯಾ ನೆಟ್​ ಕಲೆಕ್ಷನ್​​
ಪ್ರೀಮಿಯರ್​ ಶೋ10.65 ಕೋಟಿ ರೂ.
ದಿನ 1164.25 ಕೋಟಿ ರೂ.
ದಿನ 293.8 ಕೋಟಿ ರೂ.
ದಿನ 3119.25 ಕೋಟಿ ರೂ.
ದಿನ 4141.5 ಕೋಟಿ ರೂ.
ದಿನ 564.45 ಕೋಟಿ ರೂ.
ದಿನ 652.50 ಕೋಟಿ ರೂ. (ಆರಂಭಿಕ ಅಂದಾಜು)
ಒಟ್ಟು645.95 ಕೋಟಿ ರೂ.

ಇದನ್ನೂ ಓದಿ: ಐಶ್​-ಅಭಿ ಡಿವೋರ್ಸ್​​ ರೂಮರ್ಸ್​​ ನಡುವೆ ತಮ್ಮ ಕುಟುಂಬದಲ್ಲಿನ ಪ್ರೇಮ ವಿವಾಹಗಳ ಬಗ್ಗೆ ಮಾತನಾಡಿದ ಅಮಿತಾಭ್​​ ಬಚ್ಚನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.