ETV Bharat / entertainment

ಅಬ್ಬಬ್ಬಾ, ಆರ್​ಆರ್​ಆರ್​ ದಾಖಲೆ ಪುಡಿಗಟ್ಟಿದ 'ಪುಷ್ಪ 2': ಮೊದಲ ದಿನವೇ ಅತಿ ಹೆಚ್ಚು ಕಲೆಕ್ಷನ್​ ಮಾಡಿದ ಸಿನಿಮಾವಿದು - PUSHPA 2 COLLECTION

ರಾಷ್ಟ್ರಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್​​​​ ನಟನೆಯ 'ಪುಷ್ಪ 2' ನಿರೀಕ್ಷಿಸಿದಂತೆ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿದೆ. ಅಂಕಿ- ಅಂಶಗಳು ಈ ಕೆಳಗಿನಂತಿದೆ.

Pushpa 2 Box Office Collections Day 1
ಪುಷ್ಪ 2 ಬಾಕ್ಸ್​ ಆಫೀಸ್​ ಕಲೆಕ್ಷನ್​ (Photo: Film poster)
author img

By ETV Bharat Entertainment Team

Published : Dec 6, 2024, 11:30 AM IST

'ಪುಷ್ಪ 2: ದಿ ರೂಲ್​​'. ಭಾರತೀಯ ಚಿತ್ರರಂಗದಲ್ಲಿ ಧೂಳೆಬ್ಬಿಸಿರುವ ಸಿನಿಮಾ. ಬಹು ಸಮಯದಿಂದ ಸಖತ್​ ಸದ್ದು ಮಾಡುತ್ತಾ ಬಂದಿದ್ದ ಈ ಬಿಗ್​ ಬಜೆಟ್​ ಪ್ರಾಜೆಕ್ಟ್​ ಕಳೆದ ದಿನ ಬಹಳ ಅದ್ಧೂರಿಯಾಗಿ ವಿಶ್ಬದಾದ್ಯಂತ ಚಿತ್ರಮಂದಿರಗಳನ್ನು ಪ್ರವೇಶಿಸಿದೆ. ದಿ ಮೋಸ್ಟ್​ ಎಕ್ಸ್​​ಪೆಕ್ಟೆಡ್​ ಸೀಕ್ವೆಲ್​​ಗೆ ಕೋಟ್ಯಂತರ ಅಭಿಮಾನಿಗಳಿಂದ ಗ್ರ್ಯಾಂಡ್​​ ವೆಲ್​​ಕಮ್​​ ಸಿಕ್ಕಿದೆ. ನಿರೀಕ್ಷಿಸಿದಂತೆ ಸುಕುಮಾರ್​ ಆ್ಯಕ್ಷನ್​ ಕಟ್​ ಹೇಳಿದ್ದ ಈ ಚಿತ್ರ ಬಾಕ್ಸ್​​ ಆಫೀಸ್​ನಲ್ಲೂ ಕಮಾಲ್​ ಮಾಡಿದೆ.

ಮೈತ್ರಿ ಮೂವಿ ಮೇಕರ್ಸ್ ಮತ್ತು ಮುತ್ತಂಸೆಟ್ಟಿ ಮೀಡಿಯಾ ನಿರ್ಮಾಣದ ಸಿನಿಮಾಗೆ ಸುಕುಮಾರ್ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಪುಷ್ಪ ರಾಜ್​ ಪಾತ್ರದಲ್ಲಿ ಅಲ್ಲು ಅರ್ಜುನ್, ಶ್ರೀವಲ್ಲಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಮತ್ತು ಭನ್ವರ್ ಸಿಂಗ್ ಶೇಖಾವತ್ ಪಾತ್ರದಲ್ಲಿ ಫಹಾದ್ ಫಾಸಿಲ್ ಭನ್ವರ್ ಸಿಂಗ್ ಶೇಖಾವತ್ ಮುಂದುವರಿದಿದ್ದಾರೆ. ನಿರೀಕ್ಷಿಸಿದಂತೆ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ದೊಡ್ಡ ಮಟ್ಟದ ವ್ಯವಹಾರ ನಡೆಸಿದೆ.

ಆರ್​ಆರ್​ಆರ್​​ ದಾಖಲೆ ಬ್ರೇಕ್​: 'ಪುಷ್ಪ 2: ದಿ ರೂಲ್​​' ತನ್ನ ಮೊದಲ ದಿನ ಅನೇಕ ದಾಖಲೆಗಳನ್ನು ಪುಡಿಗಟ್ಟಿದೆ. ಒಟ್ಟಾರೆ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿದೆ.​​​ ಡಿಸೆಂಬರ್ 4ರ ಮಿಡ್​ನೈಟ್​ ಪ್ರಿವ್ಯೂವ್​​ನಿಂದ 10 ಕೋಟಿ ರೂಪಾಯಿಯಿಂದ ಪ್ರಾರಂಭವಾದ ಬಾಕ್ಸ್​ ಆಫೀಸ್ ಅಂಕಿ - ಅಂಶ ಭಾರತದಲ್ಲಿ 175 ಕೋಟಿ ರೂಪಾಯಿಗಳನ್ನೂ ದಾಟಿದೆ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಆರಂಭಿಕ ಅಂದಾಜಿನ ಪ್ರಕಾರ, ಪುಷ್ಪ 2 ಭಾರತದಲ್ಲಿ 175.1 ಕೋಟಿ ರೂಪಾಯಿ (ನೆಟ್​​ ಕಲೆಕ್ಷನ್​​) ಗಳಿಸಿದೆ. ಈ ಅಂಕಿ - ಅಂಶ 2022ರ ಬ್ಲಾಕ್​ಬಸ್ಟರ್​​ 'ಆರ್​ಆರ್​ಆರ್'​​ ದಾಖಲೆಯನ್ನು ಬ್ರೇಕ್​ ಮಾಡಿದೆ.

ರಾಮ್​ ಚರಣ್​​ ಮತ್ತು ಜೂನಿಯರ್​ ಎನ್​ಟಿಆರ್​ ಮುಖ್ಯಭೂಮಿಕೆಯ ಆರ್​ಆರ್​ಆರ್​ ಭಾರತದಲ್ಲಿ 156 ಕೋಟಿ (ಗ್ರಾಸ್​ ಕಲೆಕ್ಷನ್​) ರೂಪಾಯಿ ಸಂಗ್ರಹಿಸಿತ್ತು. ಹಿಂದಿನ ಈ ದಾಖಲೆ ಮೀರಿಸಿ, ಪುಷ್ಪ 2 ಭಾರತದಲ್ಲಿ ಈವರೆಗೆ ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್​ ಮಾಡಿದ ಸಿನಿಮಾವಾಗಿ ಹೊರಹೊಮ್ಮಿದೆ. ವಿಶ್ವಾದ್ಯಂತದ ಗಳಿಕೆಯನ್ನು ಇನ್ನೂ ಘೋಷಿಸಲಾಗಿಲ್ಲ. ಆದರೆ ಆರ್​​ಆರ್​ಅರ್​ನ ಜಾಗತಿಕ ಬಾಕ್ಸ್ ಆಫೀಸ್ ದಾಖಲೆಯನ್ನೂ ಕೂಡಾ ಪುಷ್ಪ 2 ಮೀರಿಸಲಿದೆ ಎಂಬ ನಿರೀಕ್ಷೆಯಿದೆ.

ದಾಖಲೆಗಳು ನಾಶ, ಪುಷ್ಪ 2ರ ಪ್ರಮುಖ ಸಾಧನೆಗಳು ಇಲ್ಲಿವೆ:

  • ಭಾರತೀಯ ಚಲನಚಿತ್ರೋದ್ಯಮದಲ್ಲೇ ವಿಶ್ವದಾದ್ಯಂತ ಅತಿ ಹೆಚ್ಚು ಕಲೆಕ್ಷನ್​ ಮಾಡಿದ ಸಿನಿಮಾ (ಆರ್​ಆರ್​ಆರ್​ನ ಜಾಗತಿಕ ಕಲೆಕ್ಷನ್​​ - 223 ಕೋಟಿ ರೂಪಾಯಿ).
  • ಪ್ರೀಮಿಯರ್ ಸೇರಿ ಭಾರತದಲ್ಲಿ ಮೊದಲ ದಿನ 200 ಕೋಟಿ ರೂಪಾಯಿ ದಾಟಿದ ಚೊಚ್ಚಲ ಚಿತ್ರ.
  • ಒಂದೇ ದಿನ ತೆಲುಗು ಮತ್ತು ಹಿಂದಿ ಎರಡರಲ್ಲೂ 50 ಕೋಟಿಗೂ ಅಧಿಕ ಹಣ ಗಳಿಸಿದ ಮೊದಲ ಸಿನಿಮಾ.
  • ಬುಕ್‌ಮೈಶೋನಲ್ಲಿ ಒಂದೇ ಗಂಟೆಯಲ್ಲಿ ಅತಿ ಹೆಚ್ಚು ಟಿಕೆಟ್‌ಗಳು ಮಾರಾಟವಾದ ಸಿನಿಮಾ. ಕಲ್ಕಿ 2898 ಎಡಿ ಮೀರಿಸಿದ ಪುಷ್ಪ 2.

ಪುಷ್ಪ 2 ಬಾಕ್ಸ್​​ ಆಫೀಸ್​​ ಕಲೆಕ್ಷನ್​ - ಮೊದಲ ದಿನದ ಒಂದು ನೋಟ:

ಪ್ರೀಮಿಯರ್ ಶೋಗಳು (ಬುಧವಾರ): 10 ಕೋಟಿ ರೂಪಾಯಿ.

ಮೊದಲ ದಿನದ ಸಂಗ್ರಹ (ಗುರುವಾರ): 165 ಕೋಟಿ ರೂಪಾಯಿ.

ಭಾಷಾವಾರು ಅಂಕಿಅಂಶಗಳು:

ತೆಲುಗು85 ಕೋಟಿ ರೂಪಾಯಿ.
ಹಿಂದಿ67 ಕೋಟಿ ರೂಪಾಯಿ.
ತಮಿಳು7 ಕೋಟಿ ರೂಪಾಯಿ.
ಕನ್ನಡ1 ಕೋಟಿ ರೂಪಾಯಿ.
ಮಲಯಾಳಂ 5 ಕೋಟಿ ರೂಪಾಯಿ.
ಒಟ್ಟು175.1 ಕೋಟಿ ರೂಪಾಯಿ.

ಇದನ್ನೂ ಓದಿ: ಕ್ಯಾಪ್ಟನ್​ ಆದ ಗೌತಮಿ: ಮೋಕ್ಷಿತಾಗೆ ಮುಳುವಾಯ್ತಾ ಸ್ವಾಭಿಮಾನ/ಅಹಂಕಾರ?

ಪುಷ್ಪ 2 VS ಆರ್​ಆರ್​ಆರರ್​ (ತೆರೆಕಂಡ ದಿನದ ಕಲೆಕ್ಷನ್​):

ಭಾಷೆಪುಷ್ಪ 1ಆರ್​ಆರ್​ಆರ್​
ತೆಲುಗು85 ಕೋಟಿ ರೂ.103.13 ಕೋಟಿ ರೂ.
ಹಿಂದಿ67 ಕೋಟಿ ರೂ.20.07 ಕೋಟಿ ರೂ.
ತಮಿಳು67 ಕೋಟಿ ರೂ.6.5 ಕೋಟಿ ರೂ.
ಮಲಯಾಳಂ5 ಕೋಟಿ ರೂ.3.1 ಕೋಟಿ ರೂ.
ಕನ್ನಡ1 ಕೋಟಿ ರೂ.0.2 ಕೋಟಿ ರೂ.
ಭಾರತದ ನೆಟ್​ ಕಲೆಕ್ಷನ್​165 ಕೋಟಿ ರೂ.133 ಕೋಟಿ ರೂ.

(ಗಮನಿಸಿ: ಪ್ರೀಮಿಯರ್ ಶೋಗಳನ್ನು ಹೊರತುಪಡಿಸಿ ಈ ಅಂಕಿಅಂಶಗಳನ್ನು ಒದಗಿಸಲಾಗಿದೆ).

ETV Bharat Logo

Copyright © 2025 Ushodaya Enterprises Pvt. Ltd., All Rights Reserved.