ETV Bharat / entertainment

'ಬ್ಲಾಕ್‌ಔಟ್ 2024' ಪಟ್ಟಿಯಲ್ಲಿ ನಟಿ ಆಲಿಯಾ ಭಟ್​​ - Alia Bhatt - ALIA BHATT

ಗಾಜಾ ಬಿಕ್ಕಟ್ಟಿನ ಬಗ್ಗೆ ಮೌನ ವಹಿಸಿದ್ದಕ್ಕಾಗಿ ನಟಿ ಆಲಿಯಾ ಭಟ್ ಹೆಸರು ​​'ಬ್ಲಾಕ್‌ಔಟ್ 2024' ಪಟ್ಟಿ ಸೇರಿದೆ.

Alia Bhatt
ನಟಿ ಆಲಿಯಾ ಭಟ್​​ (ANI)
author img

By ETV Bharat Karnataka Team

Published : May 15, 2024, 4:46 PM IST

ಬಾಲಿವುಡ್ ಸ್ಟಾರ್ ನಟಿ ಆಲಿಯಾ ಭಟ್ ಇತ್ತೀಚೆಗೆ ವಿಶ್ವ ಪ್ರಸಿದ್ಧ ಫ್ಯಾಷನ್ ಈವೆಂಟ್ 'ಮೆಟ್ ಗಾಲಾ 2024'ರಲ್ಲಿ ಮ್ಯಾಜಿಕ್​ ಮಾಡಿ ಬಂದಿದ್ದಾರೆ. ಜಗತ್ತಿನ ಗಣ್ಯಾತಿಗಣ್ಯ ಸೆಲೆಬ್ರಿಟಿಗಳು ಒಂದೇ ವೇದಿಕೆಯಲ್ಲಿ ಸೇರಿ, ಫ್ಯಾಶನ್​​ ಪ್ರದರ್ಶಿಸುವ ಜನಪ್ರಿಯ ಕಾರ್ಯಕ್ರಮವಿದು. ಇಲ್ಲಿ ರಾಷ್ಟ್ರಪ್ರಶಸ್ತಿ ವಿಜೇತೆ ಆಲಿಯಾ ಭಟ್​​ ಗ್ಲ್ಯಾಮರಸ್ ಲುಕ್ ಬಿಟ್ಟು ದೇಸಿ ಲುಕ್​​ನಲ್ಲಿ ಕಾಣಿಸಿಕೊಂಡು ಸಖತ್​​ ಸದ್ದು ಮಾಡಿದ್ದರು.

ಮೆಟ್ ಗಾಲಾ 2024ರಲ್ಲಿ ಅತ್ಯಂತ ಖ್ಯಾತಿ ಪಡೆದ ತಾರೆಯರಲ್ಲಿ ಆಲಿಯಾ ಭಟ್​​ ಕೂಡ ಒಬ್ಬರು ಎಂಬುದು ಗಮನಾರ್ಹ. ಆದ್ರೆ, ಆಲಿಯಾ ಭಟ್ ಅವರ ಹೆಸರನ್ನು 'ಬ್ಲಾಕ್‌ಔಟ್ 2024' ಪಟ್ಟಿಯಲ್ಲಿ ನೋಂದಾಯಿಸಲಾಗಿದೆ. ಈವೆಂಟ್‌ನಲ್ಲಿ ವಿಶ್ವದ ಜ್ವಲಂತ ಸಮಸ್ಯೆ ಬಗ್ಗೆ ಮೌನ ವಹಿಸಿದ್ದಕ್ಕಾಗಿ ಆಲಿಯಾ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಈ ಪಟ್ಟಿಯಲ್ಲಿ ಹಲವು ವಿದೇಶಿ ತಾರೆಯರ ಹೆಸರೂ ಕೂಡ ಸೇರಿದೆ.

ಗಾಜಾ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಗೆ ಕೆಲ ವಿಶ್ವಪ್ರಸಿದ್ಧ ತಾರೆಯರು ಯಾವುದೇ ಪ್ರತಿಕ್ರಿಯೆ ನೀಡದಿರುವುದರ ಬಗ್ಗೆ ಕಳೆದ ಕೆಲ ತಿಂಗಳುಗಳಿಂದ ಚರ್ಚೆ ನಡೆಯುತ್ತಿದೆ. ಮೆಟ್ ಗಾಲಾ 2024ರ ನಂತರ, ಈ ಸಮಸ್ಯೆ ಇನ್ನಷ್ಟು ಸದ್ದು ಮಾಡಿದೆ. ಜನರು ಎಕ್ಸ್​​​ನಲ್ಲಿ ನಿರ್ಬಂಧಿಸಲಾದ ಕೆಲ ಸೆಲೆಬ್ರಿಟಿಗಳ ಪಟ್ಟಿಯನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಬಹಿಷ್ಕಾರ ಅಥವಾ ಬ್ಲಾಕಿಂಗ್​​ ಅಭಿಯಾನವು, ವಿಶ್ವ ಪ್ರಸಿದ್ಧ ವ್ಯಕ್ತಿಗಳು ಶಾಂತಿಗಾಗಿ ಕರೆ ಕೊಡಲು ತಮ್ಮ ದೊಡ್ಡ ವೇದಿಕೆಗಳನ್ನು ಬಳಸಲು ಪ್ರೇರೇಪಿಸುವ ಗುರಿಯನ್ನು ಹೊಂದಿದೆ. ಆದರೆ, ಆಲಿಯಾ ಭಟ್ ಸೇರಿದಂತೆ ವಿಶ್ವ ಪ್ರಸಿದ್ಧ ತಾರೆಗಳು ಈ ವಿಷಯದ ಬಗ್ಗೆ ಮೌನವಹಿಸಿರೋದು ಆಕ್ರೋಶಕ್ಕೆ ಕಾರಣವಾಗಿದೆ.

ಈ ಬ್ಲಾಕ್‌ಔಟ್ 2024 ಪಟ್ಟಿಯಲ್ಲಿ, ಆಲಿಯಾ ಭಟ್, ಕಿಮ್ ಕಾರ್ಡಶಿಯಾನ್, ವಿಶ್ವದ ಪ್ರಸಿದ್ಧ ಗಾಯಕ ಟೇಲರ್ ಸ್ವಿಫ್ಟ್, ಬೆಯೋನ್ಸ್, ಕೈಲಿ ಜೆನ್ನರ್, ಝೆಂಡಾಯಾ, ಮಿಲಿ ಸೈರಸ್, ಸೆಲೆನಾ ಗೊಮೆಜ್, ಕೈಲಿ ಕಾರ್ಡಶಿಯಾನ್, ಅರೆನಾ ಗ್ರಾಂಡೆ, ಡೋಜಾ ಕ್ಯಾಟ್, ಡೆಮಿ ಲೊವಾಟೊ, ಲಿಝೋ, ನಿಕ್ಕಿ ಮಿನಾಜ್, ಟ್ರಾವಿಸ್ ಸ್ಕಾಟ್, ಕೇಟಿ ಪೆರ್ರಿ, ಝಾಕ್ ಎಫ್ರಾನ್, ಜೋ ಜೋನಾಸ್, ಕೆವಿನ್ ಜೊನಾಸ್ ಮತ್ತು ಜಸ್ಟಿನ್ ಟಿಂಬರ್ಲೇಕ್ ಸೇರಿದಂತೆ ಹಲವು ತಾರೆಯರ ಹೆಸರುಗಳನ್ನು ಸೇರಿಸಲಾಗಿದೆ.

ಇದನ್ನೂ ಓದಿ: 'ಭಾವನೆಗಳನ್ನು ಗೌರವಿಸಿ': ಟ್ರೋಲಿಗರಿಗೆ ಗಾಯಕ ಪ್ರಕಾಶ್ ಕುಮಾರ್ ಮನವಿ - Prakash Saindhavi Divorce

ಆಲಿಯಾ ಭಟ್ ಎರಡನೇ ಬಾರಿಗೆ 'ಮೆಟ್ ಗಾಲಾ'ದ ರೆಡ್ ಕಾರ್ಪೆಟ್ ಮೇಲೆ ತಮ್ಮ ಬೆಡಗು ಬಿನ್ನಾಣ ಪ್ರದರ್ಶಿಸಿದ್ದಾರೆ. 2023 ರಲ್ಲಿ ನಟಿ ಮೊದಲ ಬಾರಿ ಈ ವಿಶ್ವಪ್ರತಿಷ್ಟಿತ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಇತ್ತಿಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಆಲಿಯಾ ಭಟ್​​, ಮೆಟ್ ಗಾಲಾದಲ್ಲಿ ಸೀರೆ ಧರಿಸಿ ತನ್ನ ದೇಶವನ್ನು ಪ್ರತಿನಿಧಿಸಿದ್ದು ಬಹಳ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ. ಆಲಿಯಾ ಸಬ್ಯಸಾಚಿ ಮುಖರ್ಜಿ ಅವರ ಡಿಸೈನರ್ ಸೀರೆಯನ್ನು ಧರಿಸಿದ್ದರು.

ಇದನ್ನೂ ಓದಿ: ಚಂದು ಚಾಂಪಿಯನ್‌ ಪೋಸ್ಟರ್​: ದೈಹಿಕ ರೂಪಾಂತರಕ್ಕೆ ಒಳಗಾದ ಕಾರ್ತಿಕ್ ಆರ್ಯನ್ - Chandu Champion Poster

ಬ್ಲಾಕ್‌ಔಟ್ ಅನ್ನೋದು ಟಿಕ್‌ಟಾಕ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ನಡೆಯುತ್ತಿರುವ ಡಿಜಿಟಲ್​​ ಪ್ರೊಟೆಸ್ಟ್. ಖ್ಯಾತ ಸೆಲೆಬ್ರಿಟಿಗಳನ್ನು ಬ್ಲಾಕ್​ ಮಾಡೋದು, ಟೀಕೆ ವ್ಯಕ್ತಪಡಿಸುವ ಮೂಲಕ ಅವರ ಜನಪ್ರಿಯತೆಯನ್ನು ಕಡಿಮೆ ಮಾಡೋ ಪ್ರಯತ್ನ ಇದು. #blockout ಮತ್ತು #blockout2024 ನಂತಹ ಹ್ಯಾಶ್‌ಟ್ಯಾಗ್‌ಗಳು ಹೆಚ್ಚು ಚಾಲ್ತಿಯಲ್ಲಿದೆ. ಜಾಗತಿಕ ಬಿಕ್ಕಟ್ಟಿನ ಬಗ್ಗೆ ಮೌನ ವಹಿಸಿದ ನಟ ನಟಿಯರನ್ನು ಸೋಷಿಯಲ್​​ ಮೀಡಿಯಾ ಪ್ಲಾಟ್​ಫಾರ್ಮ್​ಗಳಲ್ಲಿ ಬ್ಲಾಕ್​ ಮಾಡೋ ಮೂಲಕ ಜನರು ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.