ETV Bharat / entertainment

ಡಿವೋರ್ಸ್ ವದಂತಿ ನಡುವೆ ಪ್ಯಾರಿಸ್ ಫ್ಯಾಶನ್ ವೀಕ್​​​ನಲ್ಲಿ ಮಿಂಚು ಹರಿಸಿದ ನೀಲಿ ಕಣ್ಣಿನ ಚೆಲುವೆ - Aishwarya Rai - AISHWARYA RAI

ನೀಲಿ ಕಣ್ಣಿನ ಚೆಲುವೆ ಐಶ್ವರ್ಯಾ ರೈ ಬಚ್ಚನ್​​​ ಇತ್ತೀಚೆಗೆ ಪ್ಯಾರಿಸ್ ಫ್ಯಾಶನ್ ವೀಕ್​​​ನಲ್ಲಿ ತಮ್ಮ ಬೆಡಗು ಭಿನ್ನಾಣ ಪ್ರದರ್ಶಿಸಿದ್ದಾರೆ. ಅದಕ್ಕೂ ಮುನ್ನ ತಮ್ಮ ವೆಡ್ಡಿಂಗ್​​ ರಿಂಗ್​​ ಪ್ರದರ್ಶಿಸಿ ನೆಟ್ಟಿಗರ ಗಮನ ಸೆಳೆದಿದ್ದರು.

Aishwarya Rai Bachchan
ಐಶ್ವರ್ಯಾ ರೈ ಬಚ್ಚನ್​​​ (Photo: Getty Images)
author img

By ETV Bharat Karnataka Team

Published : Sep 24, 2024, 1:23 PM IST

ಹೈದರಾಬಾದ್: ಜನಪ್ರಿಯ ತಾರಾ ಜೋಡಿ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಸಂಬಂಧದ ಸುತ್ತಲಿರುವ ಊಹಾಪೋಹಗಳ ನಡುವೆ ನೀಲಿ ಕಣ್ಣಿನ ಚೆಲುವೆ ಇತ್ತೀಚೆಗೆ ಪ್ಯಾರಿಸ್ ಫ್ಯಾಶನ್ ವೀಕ್​​​ನಲ್ಲಿ ತಮ್ಮ ಬೆಡಗು ಭಿನ್ನಾಣ ಪ್ರದರ್ಶಿಸಿದ್ದಾರೆ. ಬಹು ನಿರೀಕ್ಷಿತ ಪ್ರದರ್ಶನಕ್ಕೂ ಮುನ್ನ ತಮ್ಮ ವೆಡ್ಡಿಂಗ್​​ ರಿಂಗ್​​ ಪ್ರದರ್ಶಿಸಿ ನೆಟ್ಟಿಗರ ಗಮನ ಸೆಳೆದಿದ್ದರು. ಇದೀಗ ರಾಂಪ್‌​​ ವಾಕ್ ಮೂಲಕ ಮತ್ತೊಮ್ಮೆ ನೆಟಿಜನ್​ಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.​​​ ಐಶ್ವರ್ಯಾ ರೈ ಬಚ್ಚನ್​​​ ಅವರನ್ನು ''ಕ್ವೀನ್​ ಆಫ್​​ ರಾಂಪ್ಸ್'' ಎಂದು ಏಕೆ ಕರೆಯುತ್ತಾರೆಂಬುದನ್ನು ಪ್ಯಾರಿಸ್ ಫ್ಯಾಶನ್ ವೀಕ್​​​ನಲ್ಲಿ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.

ಬಲೂನ್-ಹೆಮ್ ರೆಡ್​ ಡ್ರೆಸ್​​​​ನಲ್ಲಿ 50ರ ಹರೆಯದ ನಟಿ ತಮ್ಮ ಸೊಬಗು ಪ್ರದರ್ಶಿಸಿದ್ದಾರೆ. ತಮ್ಮ ಕೇಶರಾಶಿಯನ್ನು ಸಡಿಲವಾಗಿ ಬಿಟ್ಟಿದ್ದು, ರೆಡ್​ ಡಾರ್ಕ್​​ ಲಿಪ್​​ಸ್ಟಿಕ್​​​ನಲ್ಲಿ ಬಹಳ ಸುಂದರವಾಗಿ ಕಾಣಿಸಿಕೊಂಡರು. ಆತ್ಮವಿಶ್ವಾಸದಿಂದ ರನ್‌ವೇಯಲ್ಲಿ ಹೆಜ್ಜೆ ಹಾಕುತ್ತ ''ಲಾರಿಯಲ್ ಪ್ಯಾರಿಸ್'' ಅನ್ನು ಬಹಳ ಸೊಬಗಿನಿಂದ ಪ್ರತಿನಿಧಿಸಿದರು. ಭಾರತೀಯ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿರುವ ಭಾವಸೂಚಕ 'ನಮಸ್ತೆ'ಯೊಂದಿಗೆ ಫ್ರೆಂಚ್ ಪ್ರೇಕ್ಷಕರನ್ನು ಸ್ವಾಗತಿಸಿದ್ದು, ನಟಿಯ ಆ ಕ್ಷಣ ಸ್ಮರಣೀಯವಾಗಿಸಿದೆ.

Aishwarya Rai Bachchan
ಐಶ್ವರ್ಯಾ ರೈ ಬಚ್ಚನ್​​​ (Photo: Getty Images)

"ಟ್ರೆಂಡ್​ ಸೆಟ್ಟರ್​​ಗಳು ಪ್ರತೀ ಸೀಸನ್​ಗೂ ಬದಲಾಗಬಹುದು, ಆದ್ರೆ ಐಕಾನ್​ಗಳು ಜೀವಿತಾವಧಿಯಲ್ಲಿ ಉಳಿಯುತ್ತಾರೆ" ಎಂಬ ಮಾತನ್ನು ಐಶ್ವರ್ಯಾ ಎಂದಿನಂತೆ ಸಾಕಾರಗೊಳಿಸಿದ್ದಾರೆ. ಸ್ಟೈಲ್​​ ಮತ್ತು ಗ್ರೇಸ್​ನ ಶಾಶ್ವತ ಸಂಕೇತವಾಗಿ ಐಶ್ವರ್ಯಾ ಉಳಿದುಕೊಂಡಿದ್ದಾರೆ.

ಈವೆಂಟ್‌ನಲ್ಲಿ ಭಾರತೀಯ ಚಿತ್ರರಂಗದ ಬಹುಬೇಡಿಕೆ ನಟಿಯ ವಿಶಿಷ್ಟ ಕೇಶ ವಿನ್ಯಾಸ ಹೆಚ್ಚಿನವರ ಗಮನ ಸೆಳೆಯಿತು. ಎಂದಿನಂತೆ ಮಗಳು ಆರಾಧ್ಯ ಅವರೊಂದಿಗೆ ಕಾಣಿಸಿಕೊಂಡರು. ತಾಯಿ-ಮಗಳ ಜೋಡಿಯು ಮ್ಯಾಚಿಂಗ್​​ ಔಟ್​​ಫಿಟ್​ನಲ್ಲಿ ಸೋಮವಾರ ಕಾಣಿಸಿಕೊಂಡರು. ಐಶ್ವರ್ಯಾ ಚಿಕ್ ಬ್ಲ್ಯಾಕ್ ಸ್ಟಿಲೆಟೊಸ್ ಜೊತೆ ಸ್ಟೈಲಿಶ್ ಲಾಂಗ್ ಕೋಟ್ ಧರಿಸಿದ್ದರೆ, ಆರಾಧ್ಯ ತಮ್ಮ ತಾಯಿಯ ನೋಟವನ್ನೇ ಪ್ರತಿಬಿಂಬಿಸಿದಂತೆ ತೋರಿತು. ಅಮ್ಮ- ಮಗಳ ಸೊಗಸಾದ ನೋಟ ಸಾಮಾಜಿಕ ಜಾಲತಾಣದಲ್ಲಿ ಜಾಗ ಗಿಟ್ಟಿಸಿಕೊಂಡಿದೆ.

ಇದನ್ನೂ ಓದಿ: ಮಲೈಕಾ ಅರೋರಾ ಮಲತಂದೆಯ ಪ್ರಾರ್ಥನಾ ಸಭೆ: ಅರ್ಜುನ್​​ ಕಪೂರ್​, ಕರೀನಾ ಸೇರಿ ಸೆಲೆಬ್ರಿಟಿಗಳು ಭಾಗಿ - Malaika Arora

ವಿಡಿಯೋವೊಂದರಲ್ಲಿ, ಐಶ್ವರ್ಯಾ ಹಾಲಿವುಡ್ ತಾರೆಗಳಾದ ಇವಾ ಲಾಂಗೋರಿಯಾ ಮತ್ತು ಕ್ಯಾಮಿಲಾ ಕ್ಯಾಬೆಲ್ಲೊ ಅವರೊಂದಿಗೆ ಮಾತನಾಡುತ್ತಿರುವುದನ್ನು ಕಾಣಬಹುದು. ಮತ್ತೊಂದು ವಿಡಿಯೋದಲ್ಲಿ ಈ ಮೂವರು ಒಟ್ಟಿಗೆ ಪೋಸ್ ನೀಡುತ್ತಿರುವುದನ್ನು ನೋಡಬಹುದಾಗಿದೆ. ಆರಾಧ್ಯ ಅವರ ಪಕ್ಕದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಐಶ್ವರ್ಯಾ ರೈ - ಅಭಿಷೇಕ್​​ ಬಚ್ಚನ್ ವಿಚ್ಛೇದನ ವದಂತಿ; ಎಲ್ಲಾ ಗಾಸಿಪ್​ಗೆ ಬ್ರೇಕ್​ ಹಾಕಿತು ಆ ಒಂದು ರಿಂಗ್​! - Aishwarya Abhishek

ಇನ್ನು ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಬಚ್ಚನ್​​ ವಿಚ್ಛೇದನ ಪಡೆಯಲಿದ್ದಾರೆ ಎಂಬುದು ವದಂತಿಯಷ್ಟೇ. ಬಾಲಿವುಡ್​ ತಾರಾ ದಂಪತಿಯ ಸಂಬಂಧದಲ್ಲಿ ಬಿರುಕು ಮೂಡಿದೆ ಎಂಬ ಊಹಾಪೋಹ ಬಹಳ ದಿನಗಳಲ್ಲಿ ದೊಡ್ಡ ಮಟ್ಟದಲ್ಲೇ ಸದ್ದು ಮಾಡುತ್ತಿದೆ. ಆದ್ರೆ ಇತ್ತೀಚೆಗೆ ಐಶ್ವರ್ಯಾ ಧರಿಸಿದ್ದ ಉಂಗುರ ಊಹಾಪೋಹಗಳಿಗೆ ಫುಲ್​ ಸ್ಟಾಪ್​ ಇಟ್ಟಿದೆ. ವೆಡ್ಡಿಂಗ್​​ ರಿಂಗ್​ ಧರಿಸಿದ್ದ ಹಿನ್ನೆಲೆ ಅಪಾರ ಸಂಖ್ಯೆಯ ಅಭಿಮಾನಿಗಳು ನಟಿಯ ಪರ ಬ್ಯಾಟಿಂಗ್​​ ಮಾಡಿದ್ದಾರೆ. ಡಿವೋರ್ಸ್ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಪರ ವಿರೋಧ ಮಾತುಗಳು ಮುಂದುವರಿದಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.