ETV Bharat / entertainment

ಮಗಳ ಜನ್ಮದಿನ ಆಚರಿಸಿದ ಐಶ್ವರ್ಯಾ ರೈ, ಅಭಿಷೇಕ್​ ಬಚ್ಚನ್ ಗೈರು: ಡಿವೋರ್ಸ್ ವದಂತಿಗೆ ಮತ್ತಷ್ಟು ರೆಕ್ಕೆಪುಕ್ಕ - AISHWARYA RAI

ಐಶ್ವರ್ಯಾ ರೈ ಬಚ್ಚನ್​ ಪುತ್ರಿ ಆರಾಧ್ಯ ಬಚ್ಚನ್ ಅವರ 13ನೇ ಹುಟ್ಟುಹಬ್ಬ ಆಚರಿಸಿದ್ದು, ಪತಿ ಅಭಿಷೇಕ್ ಬಚ್ಚನ್ ಗೈರಾಗಿದ್ದಾರೆ.

Aishwarya Rai Celebrates Daughter's Birthday
ಆರಾಧ್ಯ ಜನ್ಮದಿನ ಆಚರಿಸಿದ ಐಶ್ವರ್ಯಾ (Photo: ANI)
author img

By ETV Bharat Entertainment Team

Published : Nov 21, 2024, 6:45 PM IST

ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ವಿಶೇಷ ಸೋಷಿಯಲ್​ ಮೀಡಿಯಾ ಪೋಸ್ಟ್​ ಮೂಲಕ ಗಮನ ಸೆಳೆದಿದ್ದಾರೆ.​ ತಮ್ಮ ಜೀವನದ ಎರಡು ಮಹತ್ವದ ಕ್ಷಣಗಳನ್ನು ಆಚರಿಸಿರುವ ಫೋಟೋಗಳನ್ನು ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಶನಿವಾರದಂದು ಮಗಳು ಆರಾಧ್ಯ ಬಚ್ಚನ್ ಅವರ 13ನೇ ಹುಟ್ಟುಹಬ್ಬವಾದರೆ, ಇಂದು (ನವೆಂಬರ್ 21) ತಂದೆ ದಿ.ಕೃಷ್ಣರಾಜ್ ರೈ ಜನ್ಮದಿನ. ಎರಡೂ ದಿನಗಳ ಸಂಭ್ರಮ ಸಾರುವ ಫೋಟೋಗಳನ್ನು ಹಂಚಿಕೊಂಡಿದ್ದು, ಪತಿ, ನಟ ಅಭಿಷೇಕ್ ಬಚ್ಚನ್ ಮಾತ್ರ ಕಾಣಿಸಿಕೊಂಡಿಲ್ಲ. ಇದು ಡಿವೋರ್ಸ್ ವದಂತಿ ಹೆಚ್ಚಳಕ್ಕೆ ಕಾರಣವಾಗಿದೆ.

ಬುಧವಾರದಂದು ಶೇರ್ ಆಗಿರುವ ಪೋಸ್ಟ್​​ನಲ್ಲಿ, ಐಶ್ವರ್ಯಾ ಮತ್ತು ಆರಾಧ್ಯ ಜೋಡಿಯ ಹಲವು ಸುಂದರ ಕ್ಷಣಗಳನ್ನು ಕಾಣಬಹುದು. ಐಶ್ವರ್ಯಾರ ತಂದೆ ಕೃಷ್ಣರಾಜ್ ರೈ ಅವರ ಫೋಟೋದೆದುರು ತಾಯಿ ಮಗಳು ಶ್ರದ್ಧಾಂಜಲಿ ಸಲ್ಲಿಸುತ್ತಿರುವುದನ್ನು ಈ ಫೋಟೋಗಳಲ್ಲಿ ಕಾಣಬಹುದು. ಮಾಜಿ ವಿಶ್ವ ಸುಂದರಿ ಶೇರ್ ಮಾಡಿರುವ ಪೋಸ್ಟ್ ಮತ್ತು ಕ್ಯಾಪ್ಸನ್​​​ ಪ್ರೀತಿ, ಕೃತಜ್ಞತಾ ಭಾವದಿಂದ ತುಂಬಿದೆ. ತಮ್ಮ ತಂದೆ ಮತ್ತು ಮಗಳನ್ನು ತಮ್ಮ ಜೀವನದ 'ಶಾಶ್ವತ ಪ್ರೀತಿ' ಎಂದು ಉಲ್ಲೇಖಿಸಿದಂತಿದೆ.

ಇದನ್ನೂ ಓದಿ: ಎ.ಆರ್ ರೆಹಮಾನ್ ಬೆನ್ನಲ್ಲೇ ವಿಚ್ಛೇದನ ಘೋಷಿಸಿದ ಮೋಹಿನಿ: ವದಂತಿಗಳನ್ನುದ್ದೇಶಿಸಿ ವಕೀಲರು ಹೇಳಿದ್ದಿಷ್ಟು

ಈ ಫೋಟೋಗಳಲ್ಲಿ, ನವೆಂಬರ್ 16 ರಂದು ಮಗಳು ಆರಾಧ್ಯ ಅವರ 13ನೇ ವರ್ಷದ ಹುಟ್ಟುಹಬ್ಬವನ್ನು ಐಶ್​ ವಿಶೇಷವಾಗಿ ಆಚರಿಸಿರುವುದು ಕಂಡುಬಂದಿದೆ. ತಮ್ಮ ತಂದೆಗೆ ಗೌರವ ಸಲ್ಲಿಸುವುದರ ಜೊತೆ ಜೊತೆಗೆ, ಅಜ್ಜನ ಕೈಯನ್ನು ಹಿಡಿದಿರುವ ಬಾಲ್ಯ ಆರಾಧ್ಯಳ ಸ್ಪೆಲ್​ ಫೋಟೋ, ಮಗು ಆರಾಧ್ಯಗೆ ಐಶ್ವರ್ಯಾ ಚುಂಬಿಸುತ್ತಿರುವ ಫೋಟೋ ಸೇರಿ ಒಂದೆರಡು ಹಳೇ ಸುಂದರ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಈ ಸಾಲಿನ ಬರ್ತ್​ಡೇ ಸೆಲೆಬ್ರೇಶನ್​ನ ಒಂದು ಅಟ್ರ್ಯಾಕ್ಟಿವ್​ ಫೋಟೋ ಕೂಡಾ ಇದೆ. ಚಿತ್ರವೊಂದರಲ್ಲಿ "ಅಫೀಶಿಯಲ್​ ಆಗಿ ಟೀನೇಜರ್​ ಆಗಿದ್ದೀಯಾ ಆರಾಧ್ಯ" ಎಂದು ಬರೆದಿರುವ ಫೋಟೋ ಸಹ ನೆಟ್ಟಿಗರ ಗಮನ ಸೆಳೆದಿದೆ.

ಇದನ್ನೂ ಓದಿ: ನಾನು ಸಿಂಗಲ್​ ಆಗಿರುತ್ತೇನೆಂದು ಅನಿಸುತ್ತದೆಯೇ? ಲವ್​ ಲೈಫ್​ ಬಗ್ಗೆ ಬಾಯ್ಬಿಟ್ಟ ವಿಜಯ್​ ದೇವರಕೊಂಡ

ಐಶ್ವರ್ಯಾ ಅವರ ಈ ಸೋಷಿಯಲ್​ ಮೀಡಿಯಾ ಪೋಸ್ಟ್ ಅವರ ವೈಯಕ್ತಿಕ ಜೀವನದ ಮೇಲೆ ಗಮನ ಹರಿಯುವಂತೆ ಮಾಡಿದೆ. ಬರ್ತ್​ಡೇ ಪಾರ್ಟಿಯಲ್ಲಿ ಅಭಿಷೇಕ್ ಬಚ್ಚನ್ ಅವರ ಅನುಪಸ್ಥಿತಿ ಮತ್ತೊಮ್ಮೆ ಊಹಾಪೂಹಗಳಿಗೆ ತುಪ್ಪ ಸುರಿದಂತಿದೆ. ಐಶ್ವರ್ಯಾ ಮತ್ತು ಅಭಿಷೇಕ್ ಕೊನೆಯ ಬಾರಿಗೆ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜೋಡಿಯ ಅದ್ಧೂರಿ ವಿವಾಹ ಸಮಾರಂಭದಲ್ಲಿ. ಜೋಡಿ ಪ್ರತ್ಯೇಕವಾಗಿ ಆಗಮಿಸಿದರಾದರೂ, ಕಾರ್ಯಕ್ರಮ ನಡೆದ ಸ್ಥಳದಲ್ಲಿ ಒಟ್ಟಿಗೆ ಕುಳಿತಿದ್ದ ಫೋಟೋ ವೈರಲ್​ ಆಗಿತ್ತು. ಸಾರ್ವಜನಿಕವಾಗಿ ಜೊತೆಯಾಗಿ ಹೆಚ್ಛಾಗಿ ಕಾಣಿಸಿಕೊಳ್ಳದ ಹಿನ್ನೆಲೆ ಡಿವೋರ್ಸ್ ವದಂತಿ ಉಲ್ಭಣಗೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.