ETV Bharat / entertainment

ಶಿವಣ್ಣನ ಪಾದ ಮುಟ್ಟಿ ಆಶೀರ್ವಾದ ಪಡೆದ ಐಶ್ವರ್ಯಾ ರೈ ಪುತ್ರಿ: 'ದೊಡ್ಮನೆಗಳ ದೊಡ್ಡತನ'ವೆಂದ ನೆಟ್ಟಿಗರು - Aaradhya Touches Shivrajkumar Feet - AARADHYA TOUCHES SHIVRAJKUMAR FEET

ಇತ್ತೀಚೆಗಷ್ಟೇ ಪ್ರತಿಷ್ಠಿತ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ದುಬೈನಲ್ಲಿ ಅದ್ಧೂರಿಯಾಗಿ ನಡೆಯಿತು. ಬಾಲಿವುಡ್​ ಮತ್ತು ಸ್ಯಾಂಡಲ್​ವುಡ್​ ದಂತಕಥೆಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು.

Shivrajkumar, Aaradhya and Aishwarya Rai Bachchan
ಶಿವರಾಜ್​ಕುಮಾರ್​, ಆರಾಧ್ಯ, ಐಶ್ವರ್ಯಾ ರೈ ಬಚ್ಚನ್ (ETV Bharat, ANI)
author img

By ETV Bharat Karnataka Team

Published : Sep 20, 2024, 12:43 PM IST

Updated : Sep 20, 2024, 12:49 PM IST

ಹೈದರಾಬಾದ್​​: ವರನಟ ಡಾ.ರಾಜ್​​ಕುಮಾರ್​​ ಕುಟುಂಬ ಭಾರತೀಯ ಚಿತ್ರರಂಗ, ಅದರಲ್ಲೂ ವಿಶೇಷವಾಗಿ ಸೌತ್​ ಸಿನಿಮಾ ಇಂಡಸ್ಟ್ರಿಯಲ್ಲಿ ತನ್ನದೇ ಆದ ಜನಪ್ರಿಯತೆ ಹೊಂದಿದೆ. ನಟ ಶಿವರಾಜ್​​​ಕುಮಾರ್​​​ ಅವರೀಗ ರಾಜ್​ ಕುಟುಂಬವನ್ನು ಪ್ರತಿನಿಧಿಸುತ್ತಾ, ಸ್ಯಾಂಡಲ್​ವುಡ್​​ ಪರಂಪರೆಯನ್ನು ಮುಂದುವರಿಸಿದ್ದಾರೆ. ಮತ್ತೊಂದೆಡೆ, ಬಚ್ಚನ್​​ ಕುಟುಂಬ ಹಾಗು ಐಶ್ವರ್ಯಾ ರೈ ಬಚ್ಚನ್​​ ಬಗ್ಗೆಯೂ ವಿಶೇಷ ಪರಿಚಯ ಬೇಕೆನಿಸದು. ಇತ್ತೀಚಿಗೆ ಚಿತ್ರರಂಗದ ದಂತಕಥೆಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು ಮಾಡಿದ್ದಾರೆ.

ಹೌದು, ಇತ್ತೀಚೆಗಷ್ಟೇ ಪ್ರತಿಷ್ಠಿತ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ಅದ್ಧೂರಿಯಾಗಿ ಜರುಗಿತು. ಸೆಪ್ಟೆಂಬರ್ 14-15ರ ಶನಿವಾರ ಮತ್ತು ಭಾನುವಾರ ದುಬೈನಲ್ಲಿ ಸೌತ್ ಇಂಡಿಯನ್ ಇಂಟರ್​ನ್ಯಾಷನಲ್ ಮೂವೀ ಅವಾರ್ಡ್ಸ್ (SIIMA) 2024 ನಡೆದಿದ್ದು, ಸೋಷಿಯಲ್​ ಮೀಡಿಯಾದಲ್ಲಿ ಈಗಲೂ ಫೋಟೋ ವಿಡಿಯೋಗಳು ಸದ್ದು ಮಾಡುತ್ತಿವೆ. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಸಿನಿ ಗಣ್ಯರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ದಕ್ಷಿಣ ಚಿತ್ರರಂಗದ ಅಸಾಧಾರಣ ಪ್ರತಿಭೆಗಳನ್ನು ಈ ಸೈಮಾ ವೇದಿಕೆಯಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶನಿವಾರ (ಸೆಪ್ಟೆಂಬರ್​ 14) ಕನ್ನಡ ಹಾಗೂ ತೆಲುಗು ಚಿತ್ರರಂಗದವರನ್ನು ಗೌರವಿಸುವ ಕೆಲಸ ನಡೆದರೆ, ಭಾನುವಾರದಂದು ತಮಿಳು ಮತ್ತು ಮಲಯಾಳಂ ಸಿನಿ ಸಂಭ್ರಮಕ್ಕೆ ಸೈಮಾ ವೇದಿಕೆ ಸಾಕ್ಷಿಯಾಯಿತು. ಎರಡು ದಿನಗಳ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸೌತ್​ ಸಿನಿಮಾ ಸ್ಟಾರ್ಸ್ ಒಂದೇ ಸೂರಿನಡಿ ಕಾಣಿಸಿಕೊಂಡರು. ಮೂಲತಃ ಕರುನಾಡಿನ ಕರಾವಳಿಯವರಾದ ಬಾಲಿವುಡ್​ ಬೆಡಗಿ, ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್​​ ಕೂಡಾ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು.

ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್' ಚಿತ್ರದ ಎರಡೂ ಭಾಗಗಳಲ್ಲಿ ಐಶ್ವರ್ಯಾ ರೈ ಬಚ್ಚನ್ ಪ್ರಮುಖ ಪಾತ್ರ ಮಾಡಿದ್ದಾರೆ. 2022 ಮತ್ತು 2023ರಲ್ಲಿ ಈ ಸಿನಿಮಾಗಳು ತೆರೆಕಂಡು ಸೂಪರ್​ ಹಿಟ್​​ ಆಗಿವೆ. ಪೊನ್ನಿಯಿನ್ ಸೆಲ್ವನ್ 2 ಸಿನಿಮಾದಲ್ಲಿನ ಅಮೋಘ ಅಭಿನಯಕ್ಕಾಗಿ ಐಶ್ವರ್ಯಾ ರೈ ಬಚ್ಚನ್ ಅವರು ಸೈಮಾ ಸಮಾರಂಭದಲ್ಲಿ ಅತ್ಯುತ್ತಮ ನಟಿ (ಕ್ರಿಟಿಕ್ಸ್) ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಮಗಳು ಆರಾಧ್ಯ ಜೊತೆ ಕಾಣಿಸಿಕೊಂಡಿರುವ ನಟಿಯ ಹಲವು ಫೋಟೋ, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗಿವೆ.

ಇದನ್ನೂ ಓದಿ: ಐಶ್ವರ್ಯಾ ರೈ ಆಸ್ಪತ್ರೆಗೆ ರವಾನಿಸಲು ಅನಿಲ್​ ಅಂಬಾನಿಯ ಪ್ರೈವೇಟ್​ ಜೆಟ್​​ ತರಿಸಿದ್ದ ಅಮಿತಾಭ್​ ಬಚ್ಚನ್​​ - Amitabh Aishwarya

ಅತ್ಯುತ್ತಮ ನಟಿ (ಕ್ರಿಟಿಕ್ಸ್) ಪ್ರಶಸ್ತಿ ಸ್ವೀಕರಿಸಿ ವೇದಿಕೆಯಿಂದ ಕೆಳಗಿಳಿಯುತ್ತಿದ್ದಂತೆ ಮಗಳು ಆರಾಧ್ಯ ಓಡಿ ಬಂದು ತಾಯಿಗೆ ಮುದ್ದಾದ ಅಪ್ಪುಗೆ ಕೊಟ್ಟರು. ಇವರ ಜೊತೆ ಸೌತ್​ ಸೂಪರ್​ ಸ್ಟಾರ್ ಚಿಯಾನ್​ ವಿಕ್ರಮ್​ ಕೂಡಾ ಇದ್ದರು. ಅದೇ ವೇಳೆ ನಟ ಶಿವರಾಜ್​ಕುಮಾರ್​ ಕೂಡಾ ಅಲ್ಲೇ ಕಾಣಿಸಿಕೊಂಡರು. ಐಶ್ವರ್ಯಾ ರೈ ಶಿವಣ್ಣನೊಂದಿಗೆ ಬಹಳ ಆತ್ಮೀಯವಾಗಿ ಮಾತುಕತೆ ನಡೆಸಿದರು. ಪುತ್ರಿ ಆರಾಧ್ಯ ಅವರನ್ನು ಕೂಡಾ ಪರಿಚಯ ಮಾಡಿಕೊಟ್ಟರು. ಈ ವೇಳೆ, ಸ್ಯಾಂಡಲ್​ವುಡ್​ ಸೂಪರ್​ ಸ್ಟಾರ್​​ ಮಾಜಿ ವಿಶ್ವಸುಂದರಿಯ ಮಗಳನ್ನು ಮಾತನಾಡಿಸಿದ್ದು, ಆರಾಧ್ಯ ಶಿವಣ್ಣನ ಪಾದ ಸ್ಪರ್ಶಿಸಿ ಆಶೀರ್ವಾದ ಪಡೆದರು. ಶಿವಣ್ಣ ಆರಾಧ್ಯ ತಲೆ ಮೇಲೆ ಕೈ ಇಟ್ಟು ಆಶೀರ್ವಾದ ಮಾಡಿದ್ದಾರೆ. ಈ ವಿಡಿಯೋ ಕಳೆದರೆಡು ದಿನಗಳಲ್ಲಿ ವೈರಲ್​ ಆಗಿ ವ್ಯಾಪಕ ಮೆಚ್ಚುಗೆ ಗಳಿಸಿದೆ. 'ದೊಡ್ಮನೆಗಳ ದೊಡ್ಡತನ' ಎಂಬ ಅರ್ಥದಲ್ಲಿ ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಶಿವಣ್ಣನಿಗೆ ಎದ್ದು ನಿಂತು ಚಪ್ಪಾಳೆ ಹೊಡೆದ ದಕ್ಷಿಣ ಚಿತ್ರರಂಗದ ಗಣ್ಯರು: ವಿಡಿಯೋ ನೋಡಿ - Standing Ovation to Shivarajkumar

Last Updated : Sep 20, 2024, 12:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.