ETV Bharat / entertainment

ದುಬೈನಲ್ಲಿ ಮೇಣದ ಪ್ರತಿಮೆ ಅನಾವರಣ: ಮುಂಬೈ ವಿಮಾನ ನಿಲ್ದಾಣದಲ್ಲಿ ನಟ ಅಲ್ಲು ಅರ್ಜುನ್ - Allu Arjun - ALLU ARJUN

ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ತಮ್ಮ ಮೇಣದ ಪ್ರತಿಮೆ ಅನಾವರಣಗೊಳಿಸಲು ದುಬೈಗೆ ಭೇಟಿ ನೀಡುವ ಮೊದಲು ನಟ ಅಲ್ಲು ಅರ್ಜುನ್ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು.

Actor Allu Arjun
ನಟ ಅಲ್ಲು ಅರ್ಜುನ್
author img

By ETV Bharat Karnataka Team

Published : Mar 22, 2024, 5:28 PM IST

ಹೈದರಾಬಾದ್ : ದುಬೈನ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ನಟ ಅಲ್ಲು ಅರ್ಜುನ್ ಅವರ ಮೇಣದ ಪ್ರತಿಮೆ ಅನಾವರಣಗೊಳ್ಳಲು ಸಿದ್ದವಾಗಿದೆ. ಈ ಕಾರ್ಯಕ್ರಮಕ್ಕೆ ತೆರಳುವ ಮೊದಲು ಇಂದು ಮುಂಜಾನೆ ಮುಂಬೈ ವಿಮಾನ ನಿಲ್ದಾಣದಲ್ಲಿ ಅವರು ಕಾಣಿಸಿಕೊಂಡರು.

ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ, ನಟ ಬೂದು ಬಣ್ಣದ ಕಾರ್ಗೋ ಪ್ಯಾಂಟ್‌ ಹಾಗೂ ಬಿಳಿ ಟಿ-ಶರ್ಟ್​ನ್ನು ಧರಿಸಿದ್ದಾರೆ. ಬಿಳಿ ಸ್ನೀಕರ್ಸ್ ಮತ್ತು ಕೂಲ್ ಶೇಡ್‌ಗಳೊಂದಿಗೆ ನಟ ಅಲ್ಲು ಅರ್ಜುನ್​ ಕಾಣಿಸಿಕೊಂಡರು.

2023ರಲ್ಲಿ ನಟ ಅಲ್ಲು ಅರ್ಜುನ್ ತನ್ನ ಮೇಣದ ಪ್ರತಿಮೆ ವೀಕ್ಷಿಸಲು ದುಬೈನ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂಗೆ ಭೇಟಿ ನೀಡಿದ್ದರು. 2023ರಲ್ಲೇ ಪ್ರತಿಮೆ ಅನಾವರಣಗೊಳ್ಳಬೇಕಾಗಿತ್ತು. ಆದರೆ ಅದು ಕಾರಣಾಂತರಗಳಿಂದ ವಿಳಂಬವಾಯಿತು. ಇದೀಗ, ಮ್ಯೂಸಿಯಂ ಅಂತಿಮವಾಗಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಲು ಸಿದ್ಧವಾಗಿದೆ. ಹೀಗಾಗಿ ಅಲ್ಲು ಅರ್ಜುನ್ ಈವೆಂಟ್‌ಗಾಗಿ ದುಬೈಗೆ ಹಾರಲಿದ್ದಾರೆ.

ಮ್ಯೂಸಿಯಂನ ಅಧಿಕೃತ ಪುಟದಿಂದ ಹಂಚಿಕೊಂಡ ವಿಡಿಯೋದಲ್ಲಿ ಹೀಗೆ ಹೇಳಿದೆ. ಮೇಣದ ಆಕೃತಿಯ ಮೊದಲ ನೋಟಕ್ಕೆ ನಿಮಗೆ ಅವಕಾಶ ಕಲ್ಪಿಸಲಿದೆ. ಕಪ್ಪು ಬಣ್ಣದ ಉಡುಪಿನ ಮೇಲೆ ಕೆಂಪು ಜಾಕೆಟ್ ಧರಿಸಿರುವ ಪ್ರತಿಮೆ ಅಲ್ಲು ಅರ್ಜುನ್ ಮ್ಯೂಸಿಯಂಗೆ ಆಗಮಿಸುವುದರೊಂದಿಗೆ ಸಾರ್ವಜನಿಕರ ದರ್ಶನಕ್ಕೆ ತೆರೆದುಕೊಳ್ಳುತ್ತದೆ. ಅವರ ಹಿಟ್ ಚಲನಚಿತ್ರ ಪುಷ್ಪಾ: ದಿ ರೈಸ್‌ನ ಭಂಗಿಯು ಇದಾಗಿದೆ ಎಂದಿದೆ.

ನಟ ಅಲ್ಲು ಅರ್ಜುನ್ ಪ್ರಸ್ತುತ ತಮ್ಮ ಹೊಸ ಚಿತ್ರ ಪುಷ್ಪ: ದಿ ರೂಲ್ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಅವರು ಇತ್ತೀಚೆಗೆ ವಿಶಾಖಪಟ್ಟಣಂ ಮತ್ತು ಆಂಧ್ರಪ್ರದೇಶದ ಯಾಗಂಟಿ ದೇವಸ್ಥಾನದಲ್ಲಿ ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಿದ್ದಾರೆ. ಇದರೊಂದಿಗೆ ಅವರು ಟಿ-ಸೀರೀಸ್ ಫಿಲ್ಮ್ಸ್ ಸಹಯೋಗದೊಂದಿಗೆ ಸಂದೀಪ್ ರೆಡ್ಡಿ ವಂಗಾ ಅವರೊಂದಿಗಿನ ಚಿತ್ರ ಸೇರಿದಂತೆ ಇತರ ಯೋಜನೆಗಳನ್ನು ಹೊಂದಿದ್ದಾರೆ. ಅವರ ಮುಂಬರುವ ಎಲ್ಲಾ ಸಿನಿಮಾಗಳನ್ನು ಅಭಿಮಾನಿಗಳು ಕಾತರದಿಂದ ನಿರೀಕ್ಷಿಸುತ್ತಿದ್ದಾರೆ.

ಇದನ್ನೂ ಓದಿ : ಸಮಂತಾಗೆ ಸ್ಫೂರ್ತಿ ಅಲ್ಲು ಅರ್ಜುನ್​: ನಟನನ್ನು ಕೊಂಡಾಡಿದ ಖ್ಯಾತ ನಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.