ETV Bharat / entertainment

'ಸರ್ಕಾರ ಬೆಂಬಲಿಸಲಿಲ್ಲ': ನಟರ ವಿರುದ್ಧದ ಲೈಂಗಿಕ ಕಿರುಕುಳ ದೂರು ಹಿಂಪಡೆಯಲು ಮುಂದಾದ ನಟಿ

ನಟರ ವಿರುದ್ಧ ದಾಖಲಿಸಿರುವ ಲೈಂಗಿಕ ಕಿರುಕುಳ ಆರೋಪ ಪ್ರಕರಣವನ್ನು ಹಿಂಪಡೆಯಲು ನಟಿ ಮುಂದಾಗಿದ್ದಾರೆ. ಸರ್ಕಾರದ ಬೆಂಬಲ ಸಿಗಲಿಲ್ಲ ಎಂದು ಅವರು ಆರೋಪಿಸಿದ್ದಾರೆ.

Actor Mukesh
ನಟ, ಶಾಸಕ ಮುಖೇಶ್ (Photo: ETV Bharat)
author img

By ETV Bharat Entertainment Team

Published : Nov 22, 2024, 7:57 PM IST

ಎರ್ನಾಕುಲಂ (ಕೇರಳ): ಮಲಯಾಳಂ ಚಿತ್ರರಂಗದ ನಟ ಹಾಗೂ ಶಾಸಕ ಮುಖೇಶ್ ಸೇರಿದಂತೆ ಏಳು ಜನರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಪ್ರಕರಣಗಳು ದಾಖಲಾಗಿವೆ. ದೂರು ದಾಖಲಿಸಿರುವ ನಟಿಯೀಗ ತಮ್ಮ ದೂರನ್ನು ಹಿಂಪಡೆಯಲು ಸಿದ್ಧತೆ ನಡೆಸಿದ್ದಾರೆ.

ದೂರು ಹಿಂಪಡೆಯುವ ನಿರ್ಧಾರವನ್ನು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ತಿಳಿಸುವುದಾಗಿ ನಟಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮುಖೇಶ್ ಅಲ್ಲದೇ ಎಡವೆಲ ಬಾಬು, ಜಯಸೂರ್ಯ ಮತ್ತು ಮಣಿಯನ್ ಪಿಳ್ಳೈ ರಾಜು ವಿರುದ್ಧವೂ ದೂರು ದಾಖಲಿಸಿದ್ದರು. ಸರ್ಕಾರದ ಬೆಂಬಲದ ಕೊರತೆಯಿಂದಾಗಿ ಪ್ರಕರಣದಿಂದ ಹಿಂದೆ ಸರಿಯುತ್ತಿರುವುದಾಗಿ ತಮ್ಮ ಕಾರಣ ಒದಗಿಸಿದ್ದಾರೆ.

ತನ್ನ ದೂರಿಗೆ ಪ್ರತೀಕಾರವಾಗಿ ಓರ್ವರು ತಮ್ಮ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ ಎಂದು ನಟಿ ಆರೋಪಿಸಿದ್ದಾರೆ. ಚಿತ್ರರಂಗದಲ್ಲಿ ಇರುವ ನಟಿಯರ ಬಳಿ 'ಅಡ್ಜಸ್ಟ್​​ಮೆಂಟ್'ಗೆ ಯಾರೂ ಕೇಳಬಾರದು ಎಂಬುದೇ ನನ್ನ ಗುರಿ. ಆದರೆ ತನ್ನ ವಿರುದ್ಧದ ಪೋಕ್ಸೋ ಪ್ರಕರಣ ನಕಲಿ ಎಂಬುದನ್ನು ಸಾಬೀತುಪಡಿಸದ ಸರ್ಕಾರವನ್ನು ಟೀಕಿಸಿದರು. "ಮಾಧ್ಯಮಗಳು ಸಹ ನನ್ನನ್ನು ಬೆಂಬಲಿಸಲು ಮುಂದೆ ಬರಲಿಲ್ಲ" ಎಂದು ಉಲ್ಲೇಖಿಸಿದ್ದಾರೆ.

ಹಾಗಾಗಿ, 'ಎಲ್ಲಾ ಪ್ರಕರಣಗಳನ್ನು ಹಿಂಪಡೆಯುತ್ತಿದ್ದೇನೆ' ಎಂದು ದೂರುದಾರರಾದ ಅಲುವಾ ಮೂಲದ ನಟಿ ತಿಳಿಸಿದ್ದಾರೆ. ತಮ್ಮ ವಿರುದ್ಧದ ಪೋಕ್ಸೋ ಪ್ರಕರಣ ನಕಲಿ ಎಂದು ತಿಳಿದಿದ್ದರೂ ಸಹ ಪೊಲೀಸರು ಅದರ ಹಿಂದಿರುವವರನ್ನು ಬಂಧಿಸಲು ಪ್ರಯತ್ನಿಸುತ್ತಿಲ್ಲ. ಹೀಗಾಗಿ ಎಲ್ಲದರಿಂದ ಹಿಂದೆ ಸರಿಯುತ್ತಿರುವುದಾಗಿ ನಟಿ ಹೇಳಿದ್ದಾರೆ.

ಇದನ್ನೂ ಓದಿ: ವಿವಾದದ ನಂತರ ಒಂದೇ ಕಡೆ ಕಾಣಿಸಿಕೊಂಡ ನಯನತಾರಾ - ಧನುಷ್​: ಒಬ್ಬರನ್ನೊಬ್ಬರು ನಿರ್ಲಕ್ಷಿಸಿರುವ ವಿಡಿಯೋ ನೋಡಿ

ಗೌಪ್ಯ ಹೇಳಿಕೆಗಳನ್ನು ದಾಖಲಿಸಿಕೊಂಡು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಇಂತಹ ಸಂದರ್ಭ ಕ್ರಿಮಿನಲ್ ಪ್ರಕರಣದಿಂದ ಹಿಂದೆ ಸರಿಯುವುದು ಅಷ್ಟು ಸುಲಭವಲ್ಲ. ಆದರೆ, ನಟಿಯ ಈ ನಡೆ ಪ್ರಕರಣವನ್ನು ದುರ್ಬಲಗೊಳಿಸಲಿದೆ. ನಟಿಯ ಅತ್ಯಾಚಾರದ ಆರೋಪದ ಮೇಲೆ ನಟ ಮುಖೇಶ್ ಮತ್ತು ಇತರರನ್ನು ಬಂಧಿಸಲಾಗಿತ್ತು. ಆದರೆ ನ್ಯಾಯಾಲಯ ಎಲ್ಲ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರಾದ ಹಿನ್ನೆಲೆ ಅವರಾರು ಹೆಚ್ಚು ಸಮಯ ಜೈಲಿನೊಳಗಿರಲಿಲ್ಲ.

ಇದನ್ನೂ ಓದಿ: 'ಹುಡುಗೀರ ಕೈ ಹಿಡಿದು ಓಡಾಡಿದಷ್ಟು ಸುಲಭವಲ್ಲ ಬಿಗ್​ ಬಾಸ್​​ ಗೆಲ್ಲೋದು': ಇಂಥದ್ದೊಂದು ಹೇಳಿಕೆ ಬಂದಿದ್ದೇಕೆ?

ಆಗಸ್ಟ್​​ನಲ್ಲಿ, ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಮಲಯಾಳಂ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿತ್ತು. ನಟ ಜಯಸೂರ್ಯ, ನಟ ಸಿದ್ದಿಕ್, ಶಾಸಕ ಮುಖೇಶ್ ಸೇರಿ ಕೆಲವರ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದವು. ತನಿಖಾ ತಂಡ ನಟಿಯರಿಂದ ಹೇಳಿಕೆಗಳನ್ನು ದಾಖಲಿಸಿಕೊಂಡು, ತನಿಖೆ ಮುಂದುವರಿಸಿತು. ಆನಂತರ ಸೆಪ್ಟೆಂಬರ್​​ನಲ್ಲಿ, ಚಂದನವನದಲ್ಲಿ ನಟಿಯರು ಎದುರಿಸುತ್ತಿರುವ ಲೈಂಗಿಕ ಕಿರುಕುಳ ಸಮಸ್ಯೆಗಳನ್ನು ಅಧ್ಯಯನ ಮಾಡಿ ವರದಿ ತಯಾರಿಸಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸುವಂತೆ ಬೇಡಿಕೆ ಕೆಳಿ ಬಂತು. ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ (ಫೈರ್) ನಿಯೋಗ ಮುಖ್ಯಮಂತ್ರಿಯನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.