ETV Bharat / entertainment

ಭಾರತದಲ್ಲಿ ಅಂತರ್​ಧರ್ಮೀಯ ಮದುವೆ: ಸ್ವರಾ ಭಾಸ್ಕರ್ ಹೇಳಿದ್ದೇನು? - Swara Bhasker

ಭಾರತದಲ್ಲಿ ಅಂತರ್​ಧರ್ಮೀಯ ದಂಪತಿ ಎದುರಿಸುವ ಸವಾಲುಗಳ ಬಗ್ಗೆ ಬಾಲಿವುಡ್​ ನಟಿ ಸ್ವರಾ ಭಾಸ್ಕರ್ ಮಾತನಾಡಿದ್ದಾರೆ.

Sonakshi Zaheer and Swara Bhasker
ಸೋನಾಕ್ಷಿ ಜಹೀರ್ ಜೋಡಿ, ಸ್ವರಾ ಭಾಸ್ಕರ್ (Instagram)
author img

By ETV Bharat Karnataka Team

Published : Jun 19, 2024, 7:39 PM IST

ಕಳೆದ ವರ್ಷಾರಂಭದಲ್ಲಿ ಸಮಾಜವಾದಿ ಪಕ್ಷದ ಫಹಾದ್ ಅಹ್ಮದ್ ಅವರನ್ನು ಮದುವೆಯಾದ ಬಾಲಿವುಡ್​ ನಟಿ ಸ್ವರಾ ಭಾಸ್ಕರ್ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಟ್ರೋಲಿಂಗ್​ ಎದುರಿಸಿದ್ದರು. ಇದೀಗ ಅವರು, ಭಾರತದಲ್ಲಿ ಅಂತರ್​ಧರ್ಮೀಯ ದಂಪತಿ ಸಾಕಷ್ಟು ಟೀಕೆಗೆ ಒಳಗಾಗುತ್ತಾರೆ ಎಂದು ಹೇಳಿದ್ದಾರೆ. ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಜೂನ್ 23ರಂದು ಮದುವೆಯಾಗಲಿದ್ದು, ಸ್ವರಾ ಭಾಸ್ಕರ್ ಅಂತರ್​ಧರ್ಮೀಯ ಮದುವೆ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ, ಲವ್ ಜಿಹಾದ್ ಪರಿಕಲ್ಪನೆ ಆಧುನಿಕ ಭಾರತದಲ್ಲಿ ಪ್ರಚಲಿತದಲ್ಲಿರುವ ವಿಷಯ ಎಂದು ವಿಷಾದಿಸಿದರು. ಅಂತರ್​ಧರ್ಮೀಯ ಜೋಡಿಗಳು ಟೀಕೆಗೊಳಗಾಗುತ್ತಾರೆ, ಪ್ರೇಮಿಗಳ ದಿನದಂದೂ ಸಹ ಅವರ ಮೇಲೆ ಹಲ್ಲೆಗಳಾಗುತ್ತವೆ ಎಂದರು.

ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಸಂಬಂಧದ ಬಗ್ಗೆ ಪ್ರಶ್ನಿಸಿದಾಗ, ''ಇಬ್ಬರು ವಯಸ್ಕರ ಖಾಸಗಿ ಜೀವನದ ವಿಚಾರಗಳಲ್ಲಿ ಹೊರಗಿನವರ ಅಭಿಪ್ರಾಯಗಳು ಅನಗತ್ಯ. ರಿಜಿಸ್ಟರ್ ಮ್ಯಾರೇಜ್, ನಿಕಾಹ್ ಅಥವಾ ಆರ್ಯ ಸಮಾಜ ಸಂಪ್ರದಾಯದಲ್ಲಿ ಮದುವೆಯಾಗುವ ನಿರ್ಧಾರವು ಅವರವರ ವೈಯಕ್ತಿಕ ಆಯ್ಕೆಯಾಗಿದ್ದು, ಅದನ್ನು ಗೌರವಿಸಬೇಕು. ಇದು ಪುರುಷ-ಮಹಿಳೆ ಮತ್ತು ಅವರ ಕುಟುಂಬಕ್ಕೆ ಸಂಬಂಧಿಸಿದ ವಿಚಾರ. ಇದು ಸೋನಾಕ್ಷಿ ಅವರ ಜೀವನ. ನಟಿ ತಮ್ಮ ಬಾಳ ಸಂಗಾತಿಯನ್ನು ಆರಿಸಿಕೊಂಡಿದ್ದಾರೆ. ಅವರ ಸಂಗಾತಿ ನಟಿಯನ್ನು ತಮ್ಮ ಜೀವನಕ್ಕೆ ಆರಿಸಿದ್ದಾರೆ. ಸದ್ಯ ಈ ವಿಚಾರ ಅವರ ಮತ್ತು ಅವರ ಕುಟುಂಬಗಳಿಗೆ ಸಂಬಂಧಿಸಿದ್ದು. ಇದು ಸಮಯ ವ್ಯರ್ಥ ವಾಡುವಂತಹ ಚರ್ಚೆ ಎಂದು ನನಗನಿಸುತ್ತಿದೆ" ಎಂದು ತಿಳಿಸಿದರು.

ಇದನ್ನೂ ಓದಿ: ಸಿನಿಮಾ ಆಗ್ತಿದೆ ಹೈದರಾಬಾದ್ ಅತ್ಯಾಚಾರ, ಕೊಲೆ ಪ್ರಕರಣ; ಪ್ರಮುಖ ಪಾತ್ರದಲ್ಲಿ ಕರೀನಾ - Kareena Kapoor Khan

ಸೋನಾಕ್ಷಿ ಮತ್ತು ಜಹೀರ್ ಅವರ ವಿವಾಹದ ನಂತರ, ಅವರ ಮಕ್ಕಳಿಗೆ ಹೆಸರಿಡುವುದು ಸೇರಿದಂತೆ ದಂಪತಿಯ ನಿರ್ಧಾರಗಳ ಬಗ್ಗೆ ಮಾತನಾಡುವುದನ್ನು ಕೆಲವರು ಮುಂದುವರಿಸುತ್ತಾರೆ. ಈ ಬಗ್ಗೆ ವಿವರಿಸಲು ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ದಂಪತಿಯ ಮಕ್ಕಳು ಹಾಗೂ ತಮ್ಮ (ಸ್ವರಾ) ಮಗುವಿನ ಉದಾಹರಣೆಗಳನ್ನು ಉಲ್ಲೇಖಿಸಿದ್ದಾರೆ. ಇದು ಮೂರ್ಖತನ. ಆದರೆ ಇಂತಹ ವಿಚಾರಗಳು ಶೀಘ್ರದಲ್ಲೇ ಕೊನೆಗೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: 'ದಿ ಬ್ಲಫ್' ಶೂಟಿಂಗ್ ವೇಳೆ ನಟಿ ಪ್ರಿಯಾಂಕಾ ಚೋಪ್ರಾಗೆ ಗಾಯ - Priyanka Chopra Injured

ETV Bharat Logo

Copyright © 2024 Ushodaya Enterprises Pvt. Ltd., All Rights Reserved.