ETV Bharat / entertainment

ಆ ಒಂದು ಹಾಡು ಹಿಟ್ ಆಗದೇ ಇದ್ದಿದ್ದರೆ ನಾನು ನನ್ನ ಸಿನಿಮಾ ಜೀವನವನ್ನೇ​​​​​ ಬಿಟ್ಟು ಬಿಡುತ್ತಿದ್ದೆ: ಸೋನಾಲಿ ಬೇಂದ್ರೆ - Sonali Bendre

author img

By ETV Bharat Karnataka Team

Published : Apr 25, 2024, 11:49 AM IST

ಸಂದರ್ಶನವೊಂದರಲ್ಲಿ ನಟಿ ಸೋನಾಲಿ ಬೇಂದ್ರೆ ವೃತ್ತಿಜೀವನದ ಕಠಿಣ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

Sonali Bendre
ಸೋನಾಲಿ ಬೇಂದ್ರೆ

ಬಾಲಿವುಡ್‌ನಲ್ಲಿ ಭದ್ರ ಸ್ಥಾನ ಪಡೆದಿರುವ ಅನೇಕ ನಾಯಕಿಯರು ದಕ್ಷಿಣ ಪ್ರೇಕ್ಷಕರಿಗೂ ಪರಿಚಿತರು. ಆ ಪಟ್ಟಿಯಲ್ಲಿ ಸೋನಾಲಿ ಬೇಂದ್ರೆ (49) ಕೂಡ ಒಬ್ಬರು. ಹಲವು ಭಾಷೆಗಳಲ್ಲಿ ನಟಿಸಿ ಹೆಸರು ಸಂಪಾದಿಸಿದ್ದಾರೆ. ನಟಿಯ ವೆಬ್​ ಸೀರಿಸ್​​ 'ದಿ ಬ್ರೋಕನ್ ನ್ಯೂಸ್‌'ನ ಎರಡನೇ ಸೀಸನ್ ಮೇ 3ರಂದು ಬರಲಿದೆ. ಈ ಹಿನ್ನೆಲೆ ಸಂದರ್ಶನದಲ್ಲಿ ಭಾಗಿಯಾಗಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ವೃತ್ತಿಜೀವನ, ಪಾತ್ರಗಳ ಆಯ್ಕೆ ಮತ್ತು ತಾವು ಎದುರಿಸಿದ ಸವಾಲುಗಳ ಬಗ್ಗೆ ಮಾತನಾಡಿದ್ದಾರೆ.

"ನಾನು ತರಬೇತಿ ಪಡೆದ ನೃತ್ಯಗಾರ್ತಿಯಲ್ಲ. ಸಿನಿಮಾಗಳಿಗೆ ಎಂಟ್ರಿ ಕೊಟ್ಟಾಗ ನನ್ನ ನೃತ್ಯದ ಬಗ್ಗೆ ಸಾಕಷ್ಟು ಟೀಕೆಗಳು ಎದುರಾದವು. ಅನೇಕ ನೃತ್ಯ ನಿರ್ದೇಶಕರು ನನ್ನನ್ನು ಗದರಿಸುತ್ತಿದ್ದರು. ಆಗ ನನಗೆ ಡ್ಯಾನ್ಸ್ ಮಾಡಲು ಸಾಧ್ಯವಾಗದಿದ್ದರೆ, ನಾನು ನಟಿಯಾಗುವುದಿಲ್ಲ ಎಂದು ಭಾವಿಸಿದೆ. ನಂತರ ಎಷ್ಟೇ ಸಮಯ ಸಿಕ್ಕರೂ ಡ್ಯಾನ್ಸ್ ಅಭ್ಯಾಸ ಮಾಡಲು ಶುರು ಮಾಡಿದೆ. ತರಬೇತಿ ಪಡೆಯುತ್ತಿದ್ದೆ. ಆದರೆ ಐದು ಚಿತ್ರಗಳ ನಂತರ ನನಗೆ 'ಹಮ್ಮ ಹಮ್ಮ' ಹಾಡು ಸಿಕ್ಕಿತು ಎಂದು ತಿಳಿಸಿದರು.

ಇಂಡಸ್ಟ್ರಿಯಲ್ಲಿ ಮುಂದುವರಿಯಲು ಧೈರ್ಯ ಸಿಕ್ಕಿತು: "ಪ್ರಭುದೇವ ಸಹೋದರ ರಾಜು ಜೊತೆ ಡ್ಯಾನ್ಸ್ ಮಾಡುವಾಗ ಅವರ ತಂದೆ ಸುಂದರ್ ಮಾಸ್ಟರ್ ಕೂಡ ಸೆಟ್‌ನಲ್ಲಿದ್ದರು. ಮಣಿರತ್ನಂ ಸರ್ ಯಾವಾಗಲೂ ಲಾಂಗ್ ಶಾಟ್‌ಗಳನ್ನು ತೆಗೆಯುತ್ತಿದ್ದರು. ಹಾಗಾಗಿ ಇಡೀ ಹಾಡನ್ನು ಒಂದೇ ಶಾಟ್‌ನಲ್ಲಿ ಪೂರ್ಣಗೊಳಿಸಿದ್ದೇವೆ. ಆಗ ಸುಂದರ್‌ ಮಾಸ್ಟರ್ ನನ್ನ ಡ್ಯಾನ್ಸ್‌ ಇಷ್ಟಪಟ್ಟು 100 ರೂ. ಕೊಟ್ಟಿದ್ದರು. ಇದು ನನಗೆ ಇಂಡಸ್ಟ್ರಿಯಲ್ಲಿ ಮುಂದುವರಿಯಲು ಧೈರ್ಯ ಕೊಟ್ಟಿತು'' ಎಂದು ತಿಳಿಸಿದರು.

ಪ್ರಸ್ತುತ ನನ್ನ ವಯಸ್ಸಿಗೆ ತಕ್ಕಂತ ಪಾತ್ರಗಳು ಸಿಗುತ್ತಿವೆ ಎಂದು ನಾನು ಭಾವಿಸುತ್ತೇನೆ. ಚಿತ್ರರಂಗದಲ್ಲಿ ಮಹಿಳಾ ಕಲಾವಿದರು ಅವಕಾಶಗಳಿಗಾಗಿ ಹೋರಾಡಬೇಕಾಗಿದೆ. ಆದರೀಗ ಬದಲಾವಣೆಗಳು ಕಂಡುಬರುತ್ತಿವೆ. ಬದಲಾವಣೆಗಳನ್ನು ನೋಡಿ ಸಂತೋಷವಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಧನುಷ್​​ ನಟನೆಯ 'ಕುಬೇರ'ನ ಸುತ್ತ ಕುತೂಹಲ: ಫೋಟೋ ಹಂಚಿಕೊಂಡ ರಶ್ಮಿಕಾ ಮಂದಣ್ಣ - Rashmika Mandanna

ಸೋನಾಲಿ, ನಿರ್ಮಾಪಕ ಗೋಲ್ಡಿ ಬೆಹ್ಲ್ ಅವರೊಂದಿಗೆ ದಾಂಪತ್ಯ ಜೀವನ ಸಾಗಿಸುತ್ತಿದ್ದಾರೆ. 2005ರಲ್ಲಿ ಮಗನ ಜನನದ ನಂತರ ಚಲನಚಿತ್ರಗಳಿಂದ ವಿರಾಮ ತೆಗೆದುಕೊಂಡರು. ಕೊನೆಯದಾಗಿ 2013ರಲ್ಲಿ ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ ದೊಬಾರಾ ಚಿತ್ರದಲ್ಲಿ ಕಾಣಿಸಿಕೊಂಡರು. ನಂತರ, ಗ್ಲ್ಯಾಮರ್ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಅಥವಾ ಚಿತ್ರಗಳಿಂದ ಸಂಪೂರ್ಣವಾಗಿ ದೂರ ಉಳಿಯಲು ನಾನು ಬಯಸುವುದಿಲ್ಲ ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದರು. ಬಳಿ ಇಂಡಿಯಾಸ್ ಗಾಟ್ ಟ್ಯಾಲೆಂಟ್, ಇಂಡಿಯಾಸ್ ಬೆಸ್ಟ್ ಡ್ರಾಮಾಬಾಜ್ ಮತ್ತು ಅಜೀಬ್ ದಸ್ತಾನ್ ಹೈ ಯೆ ನಂತಹ ಶೋಗಳಲ್ಲಿ ಕಾಣಿಸಿಕೊಂಡರು. 2018 ರಲ್ಲಿ ಸೋನಾಲಿ ಕ್ಯಾನ್ಸರ್ ವಿರುದ್ಧ ಹೋರಾಡಿರುವುದು ನಿಮಗೆ ತಿಳಿದಿರುವ ವಿಚಾರವೇ.

ಇದನ್ನೂ ಓದಿ: ಸಲ್ಮಾನ್​ ಮನೆ ಮೇಲಿನ ದಾಳಿ ಪ್ರಕರಣ: ಶೂಟರ್​​ನ ಆಪ್ತರು ಪೊಲೀಸ್​ ವಶಕ್ಕೆ - Salman Firing Case

'ಬ್ರೋಕನ್ ನ್ಯೂಸ್ ಸೀಸನ್ 1' 2022ರಲ್ಲಿ ತೆರೆಕಂಡಿತ್ತು. ಎರಡನೇ ಸೀಸನ್ ಶೀಘ್ರದಲ್ಲೇ ಬರಲಿದೆ. ಆವಾಜ್ ಭಾರತಿ ಸುದ್ದಿ ವಾಹಿನಿಯ ಸಂಪಾದಕಿ ಅಮೀನಾ ಖುರೇಷಿ ಪಾತ್ರದಲ್ಲಿ ಸೋನಾಲಿ ಬೇಂದ್ರೆ ನಟಿಸಿದ್ದಾರೆ. ಜೈದೀಪ್ ಅಹ್ಲಾವತ್, ಶ್ರಿಯಾ ಪಿಲ್ಗಾಂವ್ಕರ್, ಇಂದ್ರನಿಲ್ ಸೇನ್​ಗುಪ್ತಾ ಮತ್ತು ಕಿರಣ್ ಕುಮಾರ್ ಪ್ರಮುಖ ಪಾತ್ರಗಳಲ್ಲಿದ್ದು, ವಿನಯ್ ವೈಕುಲ್ ನಿರ್ದೇಶಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.