ETV Bharat / bharat

ಮಣಿಪುರ ಹಿಂಸಾಚಾರ: ಈಶಾನ್ಯ ರಾಜ್ಯಕ್ಕೆ ಮತ್ತೆ 50 ಸಿಎಪಿಎಫ್ ತುಕಡಿಗಳನ್ನ ರವಾನಿಸಿದ ಕೇಂದ್ರ - MANIPUR VOILENCE

ಜಿರಿಬಾಮ್​ನಲ್ಲಿ ನವೆಂಬರ್​ 12ರಂದು ಉಲ್ಬಣಗೊಂಡ ಹಿಂಸಾಚಾರದ ಬಳಿಕ ಕೇಂದ್ರ ಗೃಹ ಸಚಿವಾಲಯ ಹೆಚ್ಚುವರಿಯಾಗಿ 15 ಸಿಆರ್​ಪಿಎಫ್​ ಮತ್ತು ಐದು ಬಿಎಸ್​ಎಫ್​ ತಂಡಗಳೊನ್ನಳಗೊಂಡ 20 ಸಿಎಪಿಎಫ್​​​ ತುಕಡಿಗಳನ್ನು ನಿಯೋಜಿಸಿತ್ತು.

centre-to-send-50-more-capf-companies-to-manipur-this-week
ಮಣಿಪುರ ಹಿಂಸಾಚಾರ ಹೆಚ್ಚುವರಿ ಸೇನೆ ಹಿಯೋಜನೆ (ಎಎನ್​ಐ)
author img

By PTI

Published : Nov 18, 2024, 3:24 PM IST

ನವದೆಹಲಿ: ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಈಶಾನ್ಯ ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವುದು ಸವಾಲುದಾಯಕವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 5000 ಭದ್ರತಾ ಸಿಬ್ಬಂದಿಗಳನ್ನೊಳಗೊಂಡ ಹೆಚ್ಚುವರಿ 50 CAPF ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದೆ.

ಜಿರಿಬಾಮ್​ನಲ್ಲಿ ನವೆಂಬರ್​ 12ರಂದು ಉಲ್ಬಣಗೊಂಡ ಹಿಂಸಾಚಾರದ ಬಳಿಕ ಕೇಂದ್ರ ಗೃಹ ಸಚಿವಾಲಯ ಹೆಚ್ಚುವರಿಯಾಗಿ 15 ಸಿಆರ್​ಪಿಎಫ್​ ಮತ್ತು ಐದು ಬಿಎಸ್​ಎಫ್​ ತಂಡಗಳೊನ್ನಳಗೊಂಡ 20 ಸಿಎಪಿಎಪ್​ ತುಕಡಿಗಳನ್ನು ಈಗಾಗಲೇ ನಿಯೋಜಿಸಿತ್ತು. ಆದರೂ ಮಣಿಪುರದಲ್ಲಿ ಹಿಂಸಾಚಾರ ನಿಯಂತ್ರಣಕ್ಕೆ ಬರುತ್ತಿಲ್ಲ.

ಈ ವಾರ ಮತ್ತೆ 50 ತುಕಡಿಗಳನ್ನು ನಿಯೋಜಿಸಿದ್ದು, ಇದರಲ್ಲಿ 35 ಸಿಆರ್​ಪಿಎಫ್​ ಇದ್ದು, 15 ಬಿಎಸ್​ಎಫ್​ ತುಕಡಿಗಳಿವೆ ಎಂದು ಪಿಟಿಐ ವರದಿ ಮಾಡಿದೆ. ಮಣಿಪುರದಲ್ಲಿ ಈಗಾಗಲೇ ಸಿಆರ್​ಪಿಎಫ್​ ಪ್ರಧಾನ ನಿರ್ದೇಶಕ ಎ ಡಿ ಸಿಂಗ್​ ಮತ್ತು ಕೇಂದ್ರ ಶಸಾಸ್ತ್ರ ಪೊಲೀಸ್​ ಪಡೆಯ ಹಿರಿಯ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ.

ಕಳೆದ ವರ್ಷ ಮೇ ತಿಂಗಳಲ್ಲಿ ಈಶಾನ್ಯ ರಾಜ್ಯದಲ್ಲಿ ಭುಗಿಲೆದ್ದ ಹಿಂಸಾಚಾರದಿಂದ ಇಲ್ಲಿಯವರೆಗೆ ರಾಜ್ಯದಲ್ಲಿ 218 ಸಿಎಪಿಎಫ್​ ತುಕಡಿಗಳನ್ನು ಈ ರಾಜ್ಯದಲ್ಲಿ ನಿಯೋಜಿಸಲಾಗಿದೆ. ಇದೀಗ ನಿಯೋಜಿಸಿರುವ ಹೊಸ 50 ಘಟಕಗಳು ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ನಿರ್ವಹಣೆಗೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ಮಾಡಿಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ಮಣಿಪುರದಲ್ಲಿ ಶನಿವಾರ ಮತ್ತು ಭಾನುವಾರ ನಡೆದ ಹಿಂಸಾಚಾರದ ಬಳಿಕ ಕೇಂದ್ರ ಗೃಹ ಸಚಿವಾಲಯ ರಾಜ್ಯದ ಭದ್ರತಾ ಪರಿಸ್ಥಿತಿ ಕುರಿತು ಪ್ರಮುಖ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಲ್ಲ ಅಗತ್ಯ ಕ್ರಮ ನಿರ್ವಹಿಸುವಂತೆ ಸೂಚಿಸಿ ಭದ್ರತಾ ಪಡೆ ನಿಯೋಜನೆಗೆ ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿತು.

ಶಸಾಸ್ತ್ರ ಹೊಂದಿರುವ ಎರಡು ಸಮುದಾಯದ ಗುಂಪುಗಳು ಹಿಂಸಾಚಾರದಲ್ಲಿ ತೊಡಗಿದ್ದು, ಅನೇಕ ಜನರು ಜೀವ ಕಳೆದು ಕೊಂಡಿದ್ದಾರೆ. ಇಲ್ಲಿಯವರೆಗೆ 220ಕ್ಕೂ ಹೆಚ್ಚು ಮಂದಿ ಜೀವ ಬಿಟ್ಟಿದ್ದಾರೆ. ಅಷ್ಟೇ ಅಲ್ಲ ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ.

ಮೂರು ಎಫ್​ಐಆರ್​ ದಾಖಲಿಸಿದ ಎನ್​ಐಎ: ಮಣಿಪುರದ ಇತ್ತೀಚಿನ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ ಮೂರು ಪ್ರಕರಣಗಳನ್ನು ದಾಖಲಿಸಿ ವಿಚಾರಣೆ ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರಕರಣಗಳಲ್ಲಿ ಮಣಿಪುರ ಪೊಲೀಸರು ಸಹ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ನವೆಂಬರ್​ 13ರಂದು ಭಯೋತ್ಪಾದಕ ವಿರೋಧಿ ಕಾರ್ಯಾಚರಣೆ ಅಡಿ ಈ ಪ್ರಕರಣಗಳನ್ನು ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ.

ಶಸ್ತ್ರ ಸಜ್ಜಿತ ಭಯೋತ್ಪಾದಕರ ಗುಂಪು ಜಿರಿಬಾಮ್​ನಲ್ಲಿ ಮಹಿಳೆಯ ಕೊಲೆ ಸಂಬಂದ ಎಫ್​ಐಆರ್​ ದಾಖಲಾಗಿದೆ. ಇನ್ನು ಜಕುರ್ದೊರ್​ ಕಾರೊಂಗ್​ನಲ್ಲಿ ಸಿಆರ್​ಪಿಎಫ್​ ಸಿಬ್ಬಂದಿ ಮೇಲೆ ಹಲ್ಲೆ ಮತ್ತು ಶಸ್ತ್ರ ಸಜ್ಜಿತ ಭಯೋತ್ಪಾದಕರು ಜಿರಿಬಾಮ್​ನ ಬೊರೊಬೆಕ್ರಾ ಪೊಲೀಸ್​ ಠಾಣೆ ಮೇಲೆ ಹಲ್ಲೆ ಹಾಗೂ ಬೊರೊಬೆಕ್ರಾದಲ್ಲಿನ ಮನೆಗೆ ಬೆಂಕಿ ಮತ್ತು ಮನೆ ಸುಟ್ಟ ಪ್ರಕರಣದಲ್ಲಿ ಎನ್​​​ಐಎ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: ಮಣಿಪುರ ಹಿಂಸಾಚಾರ: ಅಧಿಕಾರಿಗಳೊಂದಿಗೆ ಇಂದೂ ಕೂಡ ಅಮಿತ್‌ ಶಾ ವರ್ಚುಯಲ್​ ಸಭೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.