ETV Bharat / entertainment

ನನ್ನ ಬಾಲ್ಯ ವೈಭವೋಪೇತವೇನೂ ಆಗಿರಲಿಲ್ಲ, ಇದೇ ಕಾರಣಕ್ಕೆ ಯಶಸ್ಸಿನತ್ತ ಗುರಿ ನೆಟ್ಟೆ; ನಟಿ ಸಮಂತಾ - Actress Samantha Ruth Prabhu - ACTRESS SAMANTHA RUTH PRABHU

ತಮ್ಮ ಪೋಡಕಾಸ್ಟ್​ 'ಟೇಕ್​ 20'ಯಲ್ಲಿ ತಮ್ಮ ಯಶಸ್ಸಿನ ಪಯಣ ಆ ಗುರಿಯತ್ತಾ ಸಾಗಿ ಬಂದ ಹಾದಿ ಕುರಿತು ಮಾತನಾಡಿದ್ದಾರೆ ನಟಿ ಸಮಂತಾ.

Actress Samantha Ruth Prabhu has opened up about how success has been her focus since childhood

author img

By ETV Bharat Karnataka Team

Published : Apr 26, 2024, 10:35 AM IST

ಮುಂಬೈ: ನನ್ನ ಬಾಲ್ಯ ಐಷಾರಾಮಿಯಾಗಿರಲಿಲ್ಲ. ಇದೇ ಕಾರಣದಿಂದ ನಾನು ಆಗಿನಿಂದಲೇ ನನ್ನ ಗುರಿಯನ್ನು ಯಶಸ್ಸಿನತ್ತಇಡಬೇಕಾಯಿತು ಎಂದು ನಟಿ ಸಮಂತಾ ರುತ್​ ಪ್ರಭು ತಿಳಿಸಿದ್ದಾರೆ.

ತಮ್ಮ ಪೋಡಕಾಸ್ಟ್​ 'ಟೇಕ್​ 20'ಯಲ್ಲಿ ತಮ್ಮ ಯಶಸ್ಸಿನ ಪಯಣ ಆ ಗುರಿಯತ್ತಾ ಸಾಗಿ ಬಂದ ಹಾದಿ ಕುರಿತು ಮಾತನಾಡಿದ್ದಾರೆ. ಈ ಪೋಡಕಾಸ್ಟ್​ ಮೂಲಕ ನಟಿ ಸಮಂತಾ ತಮ್ಮ ಜೀವನದ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಹಿಂದಿನ ಪ್ರಸಾರದಲ್ಲಿ ತಮ್ಮ ಆರೋಗ್ಯ ಸಮಸ್ಯೆ ಕುರಿತು ಅವರು ಮಾತನಾಡಿದ್ದರು.

ಪೌಷ್ಟಿಕತಜ್ಞ ಅಲ್ಕೇಶ್ ಶರೋತ್ರಿ ಅವರೊಂದಿಗಿನ ಮಾತುಕತೆ ವೇಳೆ ಹೋರಾಟದ ಕುರಿತು ಮಾತನಾಡಿದ ಅವರು, ಆಯಾಸ ಮತ್ತು ವಿಶ್ರಾಂತಿಯ ಅಗತ್ಯತೆಯನ್ನು ದೌರ್ಬಲ್ಯದ ಸಂಕೇತ ಎಂದು ನಾನು ನಂಬಿದ್ದೇನೆ. ನಾನು ಕೇವಲ ಆರುಗಂಟೆ ನಿದ್ರೆ ಮಾಡುವ ಅಭ್ಯಾಸ ರೂಢಿಸಿಕೊಂಡಿದ್ದು, ಇದರಿಂದ ದಿನವಿಡೀ ಉತ್ಸಾಹದಾಯಕವಾಗಿರುತ್ತೇನೆ. ಅನೇಕ ಬಾರಿ ದೇಹ ದಣಿದರೂ ನಾನು ಅದನ್ನು ಒಪ್ಪಿಕೊಳ್ಳುವುದಿಲ್ಲ. 13 ಗಂಟೆ ಯಾವುದೇ ವಿರಾಮ ಇರದೇ ಕೆಲಸ ಮಾಡುತ್ತೇನೆ ಎಂದರು.

ಮುಂದುವರಿದು ಮಾತನಾಡಿದ ಅವರು, ನಾನು ಐಷಾರಾಮಿ ಬಾಲ್ಯದಲ್ಲಿ ಬೆಳೆಯಲಿಲ್ಲ. ಇದೇ ಕಾರಣಕ್ಕೆ ತುಂಬಾ ಬೇಗನೇ ನನ್ನ ಗಮನವನ್ನ ಯಶಸ್ಸಿನತ್ತ ಹರಿಸಿದೆ. ಅದನ್ನು ಮಾಡಲೇ ಬೇಕು ಎಂಬ ತೀವ್ರ ತುಡಿತ ನನ್ನಲ್ಲಿ ನಾನು ಅನುಭವಿಸುತ್ತಿದ್ದೆ. ನನ್ನ ಯಶಸ್ಸಿನ ಕಲ್ಪನೆಗೆ ನಿರಂತರ ಆಕಾರ ನೀಡಿದ್ದೆ. ಇದುವೇ ನನ್ನ ಯಶಸ್ಸಿಗೆ ಪ್ರೇರಣೆಯಾಯಿತು ಎಂದು ನಟಿ ಹೇಳಿಕೊಂಡರು.

ನೀವು ಮುಖ್ಯಭೂಮಿಕೆಯಲ್ಲಿದ್ದಾಗ ನಿಮ್ಮ ಮೇಲೆ ಸಾಕಷ್ಟು ಒತ್ತಡ ಇರುತ್ತದೆ. 22-23ನೇ ವಯಸ್ಸಿನಲ್ಲಿ ನಾನು ಈ ಸಿನಿ ಉದ್ಯಮದಲ್ಲಿ ಪ್ರಯಾಣ ಆರಂಭಿಸಿದೆ. ಕೆಲವು ಹುಡುಗಿಯರು ಇನ್ನು ಚಿಕ್ಕ ವಯಸ್ಸಿನಲ್ಲೇ ತಮ್ಮ ಪ್ರಯಾಣ ಆರಂಭಿಸುತ್ತಾರೆ. ಈ ವೇಳೆ, ಅವರಿಗೆ ಏನೂ ತಿಳಿದಿರುವುದಿಲ್ಲ. ಈ ವೇಳೆ ಇತರರು ನಮ್ಮನ್ನು ನಿರ್ದೇಶಿಸಲು ಮತ್ತು ವ್ಯಾಖ್ಯಾನಿಸಲು ಅವಕಾಶ ಮಾಡಿಕೊಡುತ್ತೇವೆ ಎಂದರು.

ಬಾಲ್ಯದಿಂದಲೂ ನಾನು ಇತರರಿಗೆ ನನ್ನನ್ನು ವ್ಯಾಖ್ಯಾನಿಸಲು ಅವಕಾಶ ನೀಡುತ್ತಿದ್ದೆ. ಇತರರ ಮೆಚ್ಚುಗೆ ಪಡೆಯಲು ನಾನು ದಣಿವರಿಯದೇ ಕೆಲಸವನ್ನು ಮಾಡುತ್ತಿದ್ದೇನೆ. ಸಮಯ ಕಳೆದಂತೆ ನನ್ನ ಸ್ವಂತ ಆಲೋಚನೆ ಮತ್ತು ಭಾವನೆಗಳು ಕಡಿಮೆಯಾದವು. ಯಶಸ್ಸು ಸಾಧಿಸಿದ ಮೇಲೆ ಭಯ ಕಾಡತೊಡಗಿತು.

ನಾನು ಯಶಸ್ಸು ಸಂಪಾದಿಸಿದ ಮೇಲೆ. ಅದನ್ನು ಕಳೆದುಕೊಳ್ಳುತ್ತೇನೆ ಎಂಬ ಭಯ ಆರಂಭವಾಯಿತು. ತಕ್ಷಣಕ್ಕೆ ನಾನು ದೊಡ್ಡ ಅವಕಾಶ ನೋಡುತ್ತಿದ್ದೆ. ವೃತ್ತಿ ಜೀವನದಲ್ಲಿ ಸದಾ ಹೋರಾಡಬೇಕು ಎಂಬ ನಂಬಿಕೆಯನ್ನು ನಾನು ಇಟ್ಟುಕೊಂಡಿದ್ದೆ ಎಂಬ ವಿಚಾರವನ್ನು ಅವರು ಇದೇ ವೇಳೆ ಬಹಿರಂಗ ಪಡಿಸಿದರು.

ಇದನ್ನೂ ಓದಿ: ಸಮಂತಾಗೆ ಸ್ಫೂರ್ತಿ ಅಲ್ಲು ಅರ್ಜುನ್​: ನಟನನ್ನು ಕೊಂಡಾಡಿದ ಖ್ಯಾತ ನಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.