ETV Bharat / entertainment

ಮೋಹಕತಾರೆ ರಮ್ಯಾ ಮದುವೆ ವದಂತಿ: 'ಇದು ಫೇಕ್'​​ ಎಂದ ನಟಿಯ ಆಪ್ತೆ - Ramya Wedding Rumors - RAMYA WEDDING RUMORS

41ರ ಹರೆಯದ ಕನ್ನಡದ ಜನಪ್ರಿಯ ನಟಿ ರಮ್ಯಾ ಸದ್ಯ ಸಿಂಗಲ್​ ಲೈಫ್​​ ಎಂಜಾಯ್​​ ಮಾಡ್ತಿದ್ದಾರೆ. ಮದುವೆ ಯಾವಾಗ ಎಂಬ ಪ್ರಶ್ನೆ ಅವರ ಅಭಿಮಾನಿಗಳಲ್ಲಿ ಬಹು ಸಮಯದಿಂದಿದೆ. ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ನಟಿಯ ಮದುವೆ ಸುದ್ದಿ ಮತ್ತೆ ಸದ್ದಾಗಿದೆ.

Ramya wedding rumors
ರಮ್ಯಾ ಮದುವೆ ವದಂತಿ (ETV Bharat)
author img

By ETV Bharat Entertainment Team

Published : Sep 9, 2024, 3:39 PM IST

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ನಂಬರ್​ ಒನ್​ ನಟಿಯಾಗಿ ಮಿಂಚಿದ್ದ ರಮ್ಯಾ ಅವರ ಮದುವೆ ಸುದ್ದಿ ಸೋಷಿಯಲ್​ ಮೀಡಿಯಾದಲ್ಲಿ ಸಖತ್​​ ಸದ್ದು ಮಾಡುತ್ತಿದೆ. 41ರ ಹರೆಯದ ನಟಿ ಸದ್ಯ ಸಿಂಗಲ್​ ಲೈಫ್​​ ಖುಷಿಯಲ್ಲಿದ್ದಾರೆ. ಮದುವೆ ಯಾವಾಗ ಎಂಬ ಪ್ರಶ್ನೆ ಅವರ ಅಭಿಮಾನಿಗಳಲ್ಲಿ ಬಹಳ ಕಾಲದಿಂದಲೂ ಇದೆ. ಇದೀಗ ಮತ್ತೆ ಮದುವೆ ಮಾತು ಶುರುವಾಗಿದೆ.

ಸ್ಯಾಂಡಲ್​ವುಡ್​ ಮತ್ತು ಸೌತ್ ಸಿನಿಮಾ ಇಂಡಸ್ಟ್ರಿಯ ಕೆಲ ಸೂಪರ್​​ ಸ್ಟಾರ್ಸ್ ಜೊತೆ ತೆರೆಹಂಚಿಕೊಂಡು ಸಾಕಷ್ಟು ಜನಪ್ರಿಯರಾಗಿದ್ದ ಸ್ಯಾಂಡಲ್​​ವುಡ್ ಕ್ವೀನ್ ಸದ್ಯ ಸಿನಿರಂಗದಿಂದ ಕೊಂಚ ದೂರ ಉಳಿದಿದ್ದಾರೆ. ಆದರೆ ಜನಪ್ರಿಯತೆ ಮಾತ್ರ ಕಡಿಮೆಯಾಗಿಲ್ಲ. ರಾಜಕೀಯಕ್ಕೆ ಎಂಟ್ರಿ ಕೊಟ್ಟು ಒಮ್ಮೆ ಸಂಸದೆಯೂ ಆದ ರಮ್ಯಾ, ಕೆಲ ಕಾಲ ಚಿತ್ರರಂಗದಿಂದ ದೂರವಾಗಿದ್ದರು. ಕಳೆದ ವರ್ಷ ನಿರ್ಮಾಪಕಿಯಾಗಿ ಹೊರಹೊಮ್ಮಿರುವ ನಟಿಯ ವೈಯಕ್ತಿಕ ವಿಚಾರವೀಗ ಸುದ್ದಿಯಾಗಿದೆ.

'ಕಲ್ಯಾಣಕ್ಕೆ ಸಜ್ಜಾದ್ರಾ ಸ್ಯಾಂಡಲ್​ವುಡ್ ಪದ್ಮಾವತಿ?', 'ಲಕ್ಕಿಸ್ಟಾರ್ ರಮ್ಯಾ ಎಂಗೇಜ್' ಅನ್ನೋ ರೂಮರ್​​​ಗಳು ಸೋಷಿಯಲ್​ ಮೀಡಿಯಾಗಳಲ್ಲಿ ಹಬ್ಬಿದೆ. ಬೆಂಗಳೂರಿನ ಹೋಟೆಲ್​​ನಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ನಿಶ್ಚಿತಾರ್ಥ ನಡೆದಿದೆ. ದೆಹಲಿ ಮೂಲದ ಹುಡುಗನ ಜೊತೆ ಎಂಗೇಜ್​​ ಆಗಿದ್ದಾರೆ. ಚೌಧರಿ ಗಾರ್ಮೆಂಟ್ಸ್ ಮಾಲೀಕ ಪ್ರಭವ್ ಚೌಧರಿ ಎಂಬವರ ಜೊತೆ ರಮ್ಯಾ ಮದುವೆಯಾಗುತ್ತಿದ್ದಾರೆ ಎಂಬೆಲ್ಲ ಸುದ್ದಿ ಹರಿದಾಡುತ್ತಿದೆ. ಆದ್ರೆ ಈ ಬಗ್ಗೆ ನಟಿಯಾಗಲಿ, ಅವರ ತಂಡದವರಾಗಲಿ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ. ಹಾಗಾಗಿ ಸದ್ಯಕ್ಕಿದು ವದಂತಿಯಷ್ಟೇ.

ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ಕೇಸ್: ನಟ ದರ್ಶನ್, ಸಹಚರರ ನ್ಯಾಯಾಂಗ ಬಂಧನ ಸೆ.12ರವರೆಗೆ ವಿಸ್ತರಣೆ - Renukaswamy Murder Case

ಇದೇ ವೇಳೆ, ರಮ್ಯಾ ಮದುವೆ ವದಂತಿಗಳನ್ನು ಅವರ ಆಪ್ತರೋರ್ವರು ನಿರಾಕರಿಸಿದ್ದಾರೆ. 'ಇವು ಫೇಕ್'​​ ಎಂದು ಸ್ಪಷ್ಟಪಡಿಸಿದ್ದಾರೆ. ಈವರೆಗೆ ನಟಿಯ ಹೆಸರು ಕೆಲವರ ಜೊತೆ ತಳುಕು ಹಾಕಿಕೊಂಡಿತ್ತು. ಮದುವೆ ಬಗ್ಗೆ ಈಗಾಗಲೇ ತರತರವಾದ ಊಹಾಪೋಹಗಳೆದ್ದಿದ್ದವು. ಆದ್ರೆ ಈವರೆಗೆ ಮದುವೆ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ನಟಿ ಅಥವಾ ಅವರ ತಂಡ ಹಂಚಿಕೊಂಡಿಲ್ಲ. ಮೋಹಕತಾರೆ ರಮ್ಯಾ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದು, ಸೋಷಿಯಲ್​ ಮೀಡಿಯಾದಲ್ಲೀಗ ಅಧಿಕೃತ ಮಾಹಿತಿ ಕೊಡುವಂತೆ ಒತ್ತಾಯಿಸುತ್ತಿದ್ದಾರೆ. ಇದು ನಿಜವೋ ಸುಳ್ಳೋ ಎಂಬ ಗೊಂದಲದಲ್ಲಿ ಫ್ಯಾನ್ಸ್ ಇದ್ದಾರೆ.

ಇದನ್ನೂ ಓದಿ: ವಿಚ್ಛೇದನ ಘೋಷಿಸಿದ ತಮಿಳಿನ ಜನಪ್ರಿಯ ನಟ ಜಯಂ ರವಿ: ಆರತಿ ಜೊತೆಗಿನ 15 ವರ್ಷಗಳ ದಾಂಪತ್ಯಕ್ಕೆ ವಿರಾಮ - Jayam Ravi Aarti Divorce

ನಟಿಯ ಸಿನಿಮಾಗಾಗಿ ಅಭಿಮಾನಿಗಳು ಕಾತರರಾಗಿದ್ದಾರೆ. ಕೊನೆಯದಾಗಿ ಆರ್ಯನ್​​, ನಾಗರಹಾವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. 2023ರಲ್ಲಿ ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕಳೆದ ನವೆಂಬರ್​ನಲ್ಲಿ ಬಂದ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನಟರಾಕ್ಷಸ ಖ್ಯಾತಿಯ ಡಾಲಿ ಧನಂಜಯ್‌ ಅಭಿನಯದ ಉತ್ತರಕಾಂಡ ಚಿತ್ರದ ಮೂಲಕ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡುತ್ತಾರೆಂದು ಅಭಿಮಾನಿಗಳು ಕಾತರರಾಗಿದ್ದರು. ಆದ್ರೆ ಕಾರಣಾಂತರಗಳಿಂದ ನಟಿ ಈ ಚಿತ್ರದಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಮುಂದೆ ಅದ್ಯಾವ ಸಿನಿಮಾದಲ್ಲಿ ನಟಿ ರಮ್ಯಾ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.