ETV Bharat / entertainment

ಸಿನಿಮಾ, ರಾಜಕೀಯ ಎರಡೂ ಇಲ್ಲ: ಅಚ್ಚರಿ ಮೂಡಿಸಿದ ನಟಿ ರಮ್ಯಾ ನಡೆ - Ramya - RAMYA

ಡಾಲಿ ಧನಂಜಯ್‍ ಅಭಿನಯದ ಉತ್ತರಕಾಂಡ ಚಿತ್ರದಿಂದ ಮೋಹಕತಾರೆ ರಮ್ಯಾ ಹೊರ ನಡೆದಿದ್ದಾರೆ.

sandalwood Actress Ramya
ಮೋಹಕತಾರೆ ರಮ್ಯಾ
author img

By ETV Bharat Karnataka Team

Published : Mar 27, 2024, 7:37 PM IST

ಮೋಹಕ ತಾರೆ ರಮ್ಯಾ ಕನ್ನಡ ಚಿತ್ರರಂಗದಲ್ಲಿ ಒಂದು ಸಮಯದಲ್ಲಿ ನಂಬರ್​ ಒನ್​ ನಟಿಯಾಗಿ ಮಿಂಚಿದವರು. ಬ್ಯೂಟಿಫುಲ್ ಅಂಡ್​ ಬೋಲ್ಡ್ ನಟಿ. ಕನ್ನಡ ಮಾತ್ರವಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯ ಕೆಲ ಸ್ಟಾರ್ ನಟರ ಜೊತೆ ಅಭಿನಯಿಸಿ ಸೈ ಎನ್ನಿಸಿಕೊಂಡ ಸ್ಯಾಂಡಲ್​​ವುಡ್ ಕ್ವೀನ್. ರಾಜಕೀಯ ಪ್ರವೇಶಿಸಿ, ಒಂದು ಬಾರಿ ಸಂಸದೆ ಆದ ರಮ್ಯಾ ಕೆಲಕಾಲ ಚಿತ್ರರಂಗದಿಂದ ದೂರು ಉಳಿದಿದ್ದರು. ಕನ್ನಡ ಚಿತ್ರರಂಗ ಭಾರತದಾದ್ಯಂತ ಸದ್ದು ಮಾಡಿದ ಸಮಯದಲ್ಲಿ ಕಂಟೆಂಟ್ ಆಧಾರಿತ ಸಿನಿಮಾಗಳಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ, ಒಂದು ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರನ್ನು ನಿರ್ಮಾಣ ಮಾಡುವ ಮೂಲಕ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡರು.

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಎಂಬ ಚಿತ್ರದಲ್ಲಿ ಅತಿಥಿ ಪಾತ್ರ ನಿರ್ವಹಿಸಿ ಗಮನ ಸೆಳೆದರು. ಆದರೆ, ಡಾಲಿ ಧನಂಜಯ್‌ ಅಭಿನಯದ ಉತ್ತರಕಾಂಡ ಚಿತ್ರದಲ್ಲಿ ನಟಿಯಾಗಿ ಕಾಣಿಸಿಕೊಳ್ಳುವ ಮೂಲಕ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡ್ತಾರೆ ಅಂತಾ ಅಂದುಕೊಂಡವರಿಗೀಗ ಒಂದು ಸ್ಯಾಡ್ ನ್ಯೂಸ್ ಸಿಕ್ಕಿದೆ.

ಹೌದು, ನಟರಾಕ್ಷಸ ಖ್ಯಾತಿಯ ಧನಂಜಯ್‍ ಅಭಿನಯದ ಉತ್ತರಕಾಂಡ ಚಿತ್ರದಿಂದ ರಮ್ಯಾ ಹೊರನಡೆದಿದ್ದಾರೆ. ಡೇಟ್ಸ್ ಸಮಸ್ಯೆಯಿಂದಾಗಿ ಚಿತ್ರದಲ್ಲಿ ನಟಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಚಿತ್ರತಂಡದವರಿಗೆ ಒಳ್ಳೆಯದಾಗಲಿ ಎಂದು ಶುಭ ನುಡಿದು, ಸೋಷಿಯಲ್ ಮೀಡಿಯಾದಲ್ಲಿ ಒಂದು ನೋಟ್‍ ಹಾಕಿದ್ದಾರೆ. ಅಲ್ಲಿಗೆ, ರಮ್ಯಾ ಬದಲಿಗೆ ಮತ್ತೋರ್ವ ನಾಯಕಿ ಹುಡುಕಿ ತರುವ ಜವಾಬ್ದಾರಿ ಚಿತ್ರತಂಡದ ಹೆಗಲೇರಿದೆ.

sandalwood Actress Ramya
ಮೋಹಕತಾರೆ ರಮ್ಯಾ

ಅದ್ಯಾಕೋ ರಮ್ಯಾ ಕಂಬ್ಯಾಕ್‍ ಕಗ್ಗಂಟಾಗುತ್ತಿದೆ. ಆರ್ಯನ್‍ ಚಿತ್ರದ ನಂತರ ರಮ್ಯಾ ಯಾವೊಂದು ಹೊಸ ಚಿತ್ರವನ್ನೂ ಒಪ್ಪಿಕೊಂಡಿರಲಿಲ್ಲ. ಅವರು ಮತ್ತೆ ಚಿತ್ರರಂಗಕ್ಕೆ ಬರಬೇಕು, ಇನ್ನಷ್ಟು ಚಿತ್ರಗಳಲ್ಲಿ ನಟಿಸಬೇಕು ಎಂಬುದು ಅಭಿಮಾನಿಗಳ ಆಸೆಯಾಗಿತ್ತು. ಈ ಆಸೆಯನ್ನು ಅವಕಾಶ ಸಿಕ್ಕಾಗಲೆಲ್ಲಾ ಸೋಷಿಯಲ್‍ ಮೀಡಿಯಾ ಮೂಲಕ ಹೇಳಿಕೊಳ್ಳುತ್ತಲೇ ಇದ್ದರು. ಆದರೆ, ರಮ್ಯಾ ಮಾತ್ರ ಚಿತ್ರರಂಗದಿಂದ ದೂರವೇ ಇದ್ದಾರೆ.

ಉತ್ತರಕಾಂಡ ಚಿತ್ರದ ಮುಹೂರ್ತ ಸಮಾರಂಭದಲ್ಲಿ ರಮ್ಯಾ ಭಾಗವಹಿಸುವ ಮೂಲಕ ಗಮನ ಸೆಳೆದಿದ್ದರು. ಆದರೆ, ಚಿತ್ರ ಘೋಷಣೆಯಾಗಿ ಒಂದೂವರೆ ವರ್ಷ ಕಳೆದರೂ, ಚಿತ್ರೀಕರಣ ಪ್ರಾರಂಭವಾಗಿಲ್ಲ. ಇತ್ತೀಚೆಗಷ್ಟೇ, ಚಿತ್ರತಂಡದವರು ಉತ್ತರ ಕರ್ನಾಟಕದಲ್ಲಿ ಆಡಿಷನ್‍ ಮಾಡುತ್ತಿರುವುದಾಗಿ ಘೋಷಿಸಿದ್ದರು. ಕಲಾವಿದರ ಆಯ್ಕೆ ಮುಗಿದು, ಇನ್ನೇನು ಚಿತ್ರೀಕರಣಕ್ಕೆ ಹೋಗಬೇಕು ಎನ್ನುವಷ್ಟರಲ್ಲಿ ರಮ್ಯಾ ಚಿತ್ರತಂಡದಿಂದ ಹೊರನಡೆದಿದ್ದಾರೆ. ತಮ್ಮ ಜಾಗಕ್ಕೆ ಮತ್ತೋರ್ವ ನಾಯಕಿಯನ್ನು ಹುಡುಕುವ ಹೊಸ ಜವಾಬ್ದಾರಿಯನ್ನು ಚಿತ್ರತಂಡದವರಿಗೆ ವಹಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ನೀರಿನ ಸಮಸ್ಯೆ: ಕನ್ನಡದಲ್ಲೇ ಟ್ವೀಟ್ ಮಾಡಿ ಪರಿಹಾರ ತಿಳಿಸಿದ ನಟ ಚಿರಂಜೀವಿ - Chiranjeevi

ರಮ್ಯಾ ಉತ್ತರಕಾಂಡದಿಂದ ಹೊರಬಂದರೂ, ರಾಜಕೀಯದಲ್ಲಿ ತೊಡಗಿಸಿಕೊಳ್ಳಬಹುದು ಎಂಬ ನಿರೀಕ್ಷೆ ಹಲವರಿಗಿತ್ತು. ಅದರಲ್ಲೂ ಈಗ ಚುನಾವಣಾ ಸಮಯ. ಸ್ಟಾರ್ ಪ್ರಚಾರಕಿಯಾಗಿ ರಮ್ಯಾ ಚುನಾವಣೆಗಳಲ್ಲಿ ತೊಡಗಿಸಿಕೊಳ್ಳಬಹುದು ಎಂಬ ಅಂದಾಜಿತ್ತು. ಆದರೆ, ರಮ್ಯಾ ಸದ್ಯ ಸಿನಿಮಾ ಮತ್ತು ರಾಜಕೀಯ ಬಗ್ಗೆ ತಲೆ ಹಾಕುವುದಿಲ್ಲ ಎಂದು ದಿಟ್ಟ ನಿರ್ಧಾರ ತೆಗೆದುಕೊಂಡಂತಿದ್ದು, ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ದೇವಸ್ಥಾನದಲ್ಲಿ ಮದುವೆಯಾದ ಸಿದ್ಧಾರ್ಥ್ - ಅದಿತಿ ರಾವ್ ಹೈದರಿ ಜೋಡಿ ; ವರದಿ - Aditi Siddharth Marriage

ಹಾಗಾದರೆ ಮುಂದೇನು? ಈ ಪ್ರಶ್ನೆಗೆ ರಮ್ಯಾ ಸದ್ಯ ಇನ್ನೂ ಉತ್ತರಿಸಿಲ್ಲ. ಬೇರೆ ಯಾವುದಾದರೂ ಹೊಸ ಸಾಹಸದೊಂದಿಗ ಅವರು ವಾಪಸ್​ ಆಗುತ್ತಾರಾ? ಅಥವಾ ಒಂದಿಷ್ಟು ಬ್ರೇಕ್‍ನ ನಂತರ ಬೇರೆ ಚಿತ್ರದಲ್ಲಿ ನಟಿಸುತ್ತಾರಾ? ಎಂಬ ಪ್ರಶ್ನೆಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.