ETV Bharat / entertainment

ಪ್ರಿಯಾಂಕಾ ಚೋಪ್ರಾ ನಟನೆಯ ಹಾಲಿವುಡ್​​ ಚಿತ್ರ ಪೂರ್ಣ: ಸೆಟ್‌ನಿಂದ ಮಗಳೊಂದಿಗಿನ ವಿಡಿಯೋ ಶೇರ್ - Priyanka Chopra - PRIYANKA CHOPRA

'ಹೆಡ್ಸ್ ಆಫ್ ಸ್ಟೇಟ್‌'ನ ಚಿತ್ರೀಕರಣ ಪೂರ್ಣಗೊಳಿಸಿರುವ ನಟಿ ಪ್ರಿಯಾಂಕಾ ಚೋಪ್ರಾ ಸೋಷಿಯಲ್​ ಮೀಡಿಯಾದಲ್ಲಿ ಒಂದು ಕುತೂಹಲಕಾರಿ ಪೋಸ್ಟ್ ಶೇರ್ ಮಾಡಿದ್ದಾರೆ.

Priyanka Chopra
ಪ್ರಿಯಾಂಕಾ ಚೋಪ್ರಾ (Photo: Priyanka Instagram)
author img

By ETV Bharat Karnataka Team

Published : May 8, 2024, 5:08 PM IST

ಗ್ಲೋಬಲ್​ ಐಕಾನ್​​ ಪ್ರಿಯಾಂಕಾ ಚೋಪ್ರಾ ತಮ್ಮ ಮುಂದಿನ ಬಹುನಿರೀಕ್ಷಿತ ಹಾಲಿವುಡ್​​ ಚಿತ್ರ 'ಹೆಡ್ಸ್ ಆಫ್ ಸ್ಟೇಟ್‌'ನ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಬಹುಬೇಡಿಕೆ ತಾರೆ ತಮ್ಮ ಅಭಿಮಾನಿಗಳೊಂದಿಗೆ ಸೊಷಿಯಲ್​ ಮೀಡಿಯಾ ಪೋಸ್ಟ್ ಮೂಲಕ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಇಂದು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಶೂಟಿಂಗ್​ ಕ್ಷಣಗಳು, ಮಗಳು ಮಾಲ್ತಿ ಮೇರಿ ಚೋಪ್ರಾ ಜೋನಾಸ್‌ ಜೊತೆಗಿರುವ ಸೆಟ್‌ನಲ್ಲಿನ ಕ್ಷಣಗಳನ್ನು ಒಳಗೊಂಡಿರುವ ಹೃದಯಸ್ಪರ್ಶಿ ವಿಡಿಯೋವನ್ನು ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಜಾಗ ಗಿಟ್ಟಿಸಿಕೊಂಡಿದೆ.

ಪ್ರಿಯಾಂಕಾ ಹಂಚಿಕೊಂಡಿರುವ ವಿಡಿಯೋ, ಪುಟ್ಟ ಮಗಳೊಂದಿಗಿನ ಉಲ್ಲಾಸಕರ ದೃಶ್ಯವನ್ನೂ ಒಳಗೊಂಡಂತೆ ಶೂಟಿಂಗ್​ ಲೋಕೇಶನ್​ನ ಕ್ಷಣಗಳನ್ನು ಒಳಗೊಂಡಿದೆ. ಪ್ರಿಯಾಂಕಾ ಶೂಟಿಂಗ್​ಗೆ ರೆಡಿ ಆಗೋ ಸಂದರ್ಭ ಮಾಲ್ತಿ ತಾಯಿಯ ಮಡಿಲಲ್ಲಿ ಕುಳಿತಿರುವುದನ್ನೂ ಈ ವಿಡಿಯೋದಲ್ಲಿ ಕಾಣಬಹುದು. ತಾಯಿ ಮಗಳಿಬ್ಬರು ಕೋಲು ಹಿಡಿದು ಮೋಜು ಮಾಡುತ್ತಿರುವ ತಮಾಷೆಯ ಕ್ಷಣವನ್ನೂ ಸಹ ಈ ವಿಡಿಯೋ ಒಳಗೊಂಡಿದೆ.

ಇಲ್ಯಾ ನೈಶುಲ್ಲರ್ ಆ್ಯಕ್ಷನ್​ ಕಟ್​ ಹೇಳಿರುವ 'ಹೆಡ್ಸ್ ಆಫ್ ಸ್ಟೇಟ್'ನ ಪ್ರಮುಖ ಪಾತ್ರಗಳಲ್ಲಿ ಇದ್ರಿಸ್ ಎಲ್ಬಾ, ಜಾನ್ ಸೆನಾ ಮತ್ತು ಜ್ಯಾಕ್ ಕ್ವೈಡ್ ಸೇರಿದಂತೆ ಹಲವರು ನಟಿಸಿದ್ದಾರೆ. ಪ್ರಿಯಾಂಕಾ ಅವರು, ವೃತ್ತಿಪರತೆ ಮತ್ತು ಸೌಹಾರ್ದತೆಯನ್ನು ಶ್ಲಾಘಿಸಿ ಚಿತ್ರತಂಡಕ್ಕೆ ಕೃತಜ್ಞತೆ ಸಲ್ಲಿಸೋ ಜೊತೆಗೆ ಮೆಚ್ಚುಗೆ ಸೂಚಿಸಿದ್ದಾರೆ. "ಲೆಜೆಂಡ್ಸ್ ಜೊತೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ಗೌರವಕರ ಕ್ಷಣ" ಎಂಬುದನ್ನು ತಮ್ಮ ಪೋಸ್ಟ್​​ನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಟಿ-20 ವಿಶ್ವಕಪ್​​​​ ಪ್ರಚಾರಕ್ಕೆ ಅಶ್ವತ್ಥಾಮನ ಪಾತ್ರದಲ್ಲಿ ಬಂದ ಅಮಿತಾಭ್​​ ಬಚ್ಚನ್: ರೋಮಾಂಚಕ ವಿಡಿಯೋ ನೋಡಿ - Amitabh Bachchan

'ಹೆಡ್ಸ್ ಆಫ್ ಸ್ಟೇಟ್' ಹೊರತಾಗಿ, ಪ್ರಿಯಾಂಕಾ ಚೋಪ್ರಾ ಹಲವು ಇಂಟ್ರೆಸ್ಟಿಂಗ್​​ ಪ್ರೊಜೆಕ್ಟ್​ಗಳನ್ನು ಒಳಗೊಂಡಿದ್ದಾರೆ. ಫ್ಯಾಂಕ್​​ ಇ ಫ್ಲವರ್ಸ್‌, ದಿ ಬ್ಲಫ್‌ನಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಬ್ಯಾರಿ ಅವ್ರಿಚ್‌ನ ಹೊಸ ಸಾಕ್ಷ್ಯಚಿತ್ರ ಬಾರ್ನ್ ಹಂಗ್ರಿ ನಿರ್ಮಿಸುತ್ತಿದ್ದಾರೆ. ಅಲ್ಲದೇ ಬಾಲಿವುಡ್‌ನಲ್ಲಿ, ಫರ್ಹಾನ್ ಅಖ್ತರ್ ನಿರ್ದೇಶನದ ಜೀ ಲೇ ಜರಾದಲ್ಲಿಯೂ ಕೆಲಸ ಮಾಡಲಿದ್ದಾರೆ. ಈ ಚಿತ್ರದಲ್ಲಿ ಕತ್ರಿನಾ ಕೈಫ್ ಮತ್ತು ಆಲಿಯಾ ಭಟ್ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ.

ಇದನ್ನೂ ಓದಿ: 'ಸಲಾರ್ 2' ಶೂಟಿಂಗ್​ನಲ್ಲಿ ಪ್ರಶಾಂತ್​​ ನೀಲ್​: ಜೂ. ಎನ್‌ಟಿಆರ್ ಜೊತೆಗಿನ ಚಿತ್ರ ಸೆಟ್ಟೇರೋದು ಯಾವಾಗ? - PRASHANTH NEEL

ಕತ್ರಿನಾ ಕೈಫ್ ಮತ್ತು ಆಲಿಯಾ ಭಟ್ ಬಾಲಿವುಡ್​ನಲ್ಲಿ ಬೇಡಿಕೆ ಹೊಂದಿರುವ ತಾರೆಯರು. ಪ್ರಿಯಾಂಕಾ ಚೋಪ್ರಾ ಜನಪ್ರಿಯತೆ ಬಗ್ಗೆ ವಿಶೇಷ ಪರಿಚಯ ಬೇಕೆನಿಸದು. ಈ ಮೂವರೂ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿರುವ ಇ ಚಿತ್ರ ಮೇಲೆ ಅಭಿಮಾನಿಗಳು ಸಾಕಷ್ಟು ನಿರಿಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಅಲ್ಲದೇ ಬಹು ಸಮಯದ ಬಳಿಕ ಬರುತ್ತಿರುವ ಪ್ರಿಯಾಂಕಾ ಅವರ ಭಾರತೀಯ ಸಿನಿಮಾ. ಸದ್ಯ ಅವರು ಹಾಲಿವುಡ್​ನಲ್ಲಿ ನೆಲೆಯೂರಿದ್ದಾರೆ ಎಂಬುದು ನಿಮಗೆ ತಿಳಿದಿರುವ ವಿಚಾರವೇ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.