ETV Bharat / entertainment

ಇದು ನನ್ನ ಕರಿಯರ್​ನ ಬೆಸ್ಟ್ ಸಿನಿಮಾ, ಖಂಡಿತಾ ಹಿಟ್‌ ಆಗುತ್ತದೆ: ವಿನೋದ್ ಪ್ರಭಾಕರ್ - Madeva Cinema - MADEVA CINEMA

'ಮಾದೇವ' ಸಿನಿಮಾ ಕುರಿತು ನಟ ವಿನೋದ್ ಪ್ರಭಾಕರ್ ಮಾತನಾಡಿದ್ದಾರೆ.

Madeva film team
ಮಾದೇವ ಸಿನಿಮಾ ತಂಡ (ETV Bharat)
author img

By ETV Bharat Karnataka Team

Published : Jun 3, 2024, 7:06 PM IST

'ಸ್ಯಾಂಡಲ್‌ವುಡ್‌ ಮರಿ ಟೈಗರ್' ಜನಪ್ರಿಯತೆಯ ವಿನೋದ್ ಪ್ರಭಾಕರ್ ಅಭಿನಯದ ಬಹುನಿರೀಕ್ಷಿತ ಚಿತ್ರವೇ 'ಮಾದೇವ'. ಮಾಸ್ ಟೀಸರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದ ಮೊದಲ ಹಾಡು ರಿಲೀಸ್ ಆಗಿದೆ. ಇತ್ತೀಚೆಗೆ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿನೋದ್ ಪ್ರಭಾಕರ್, ನಟಿ ಸೋನಲ್ ಮೊಂಥೆರೋ, ನಿರ್ದೇಶಕ ನವೀನ್ ರೆಡ್ಡಿ ಸೇರಿದಂತೆ ಇಡೀ ಚಿತ್ರತಂಡ ಭಾಗಿಯಾಗಿತ್ತು.

Madeva film team
ಮಾದೇವ ಚಿತ್ರತಂಡ (ETV Bharat)

ನಟ ವಿನೋದ್ ಪ್ರಭಾಕರ್ ಮಾತನಾಡಿ, "ಇದು ನನ್ನ ಕರಿಯರ್​ನ ಬೆಸ್ಟ್ ಸಿನಿಮಾ. ಚಿತ್ರದಲ್ಲಿ ನನ್ನದು ಡಿ ಗ್ಲಾಮರ್ ಪಾತ್ರ. ಒಬ್ಬ ನಟನಾಗಿ ಗುರುತಿಸಿಕೊಳ್ಳಲು ಬಹಳಷ್ಟಿದೆ. ಈ ಸಿನಿಮಾ ಖಂಡಿತಾ ಹಿಟ್ ಆಗುತ್ತದೆ. ಕೊನೆಯ 40 ನಿಮಿಷ ಪ್ರತಿಯೊಬ್ಬರೂ ಮಾದೇವನಾಗಿ ಸಿನಿಮಾ ನೋಡುತ್ತಾರೆ. ನಾನೇ ಆದರೂ ಈ ರೀತಿ ಸಿನಿಮಾವನ್ನು ಮತ್ತೊಮ್ಮೆ ಮಾಡಲಾಗದು. ಚಿತ್ರಕ್ಕಾಗಿ ಬಹಳಷ್ಟು ಹೋಮ್ ವರ್ಕ್ ಮಾಡಿದ್ದೇನೆ. ಆ್ಯಂಗ್ರಿ ಯಂಗ್‌ಮೆನ್ ಆಗಿ ನಟಿಸಿದ್ದೇನೆ" ಎಂದರು.

ನಟಿ ಸೋನಲ್ ಮೊಂಥೆರೋ ಮಾತನಾಡಿ, "ಮಾದೇವ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ. ನಾನು ಕಲಾವಿದೆಯಾಗಿ ಅಲ್ಲ ಆಡಿಯನ್ಸ್ ಆಗಿ ಸಿನಿಮಾ ನೋಡಲು ಕಾಯುತ್ತಿದ್ದೇನೆ. ನಾನು ಮಾಡಿರುವ ಸಿನಿಮಾಗಳಲ್ಲಿ ಇದು ನನ್ನ ಹೃದಯಕ್ಕೆ ಹತ್ತಿರವಾಗಿದೆ. ಈ ರೀತಿಯ ಪಾತ್ರದಲ್ಲಿ ನಟಿಸಿಲ್ಲ. ಇದೇ ಮೊದಲ ಬಾರಿಗೆ ಹಳ್ಳಿ ಹುಡುಗಿಯಾಗಿದ್ದೇನೆ. ನನ್ನ ವಿನೋದ್ ಸರ್ ಕೆಮಿಸ್ಟ್ರಿ ತುಂಬಾ ಚೆನ್ನಾಗಿ ಮೂಡಿಬಂದಿದೆ. ಪ್ರತಿಯೊಬ್ಬರೂ ಸಿನಿಮಾ ಎಂಜಾಯ್ ಮಾಡುತ್ತಾರೆ" ಎಂದು ತಿಳಿಸಿದರು.

Actor Vinod Prabhakar
ನಟ ವಿನೋದ್ ಪ್ರಭಾಕರ್, ನಟಿ ಸೋನಲ್ ಮೊಂಥೆರೋ (ETV Bharat)

ಶ್ರೀನಗರ ಕಿಟ್ಟಿ ಖಳನಾಯಕ!: ಎದೆಯಲ್ಲಿ ತಂಗಾಳಿ.. ಎಂಬ ಪ್ರೇಮಗೀತೆಗೆ ಪ್ರಸನ್ನ ಕುಮಾರ್ ಎಂ. ಪದ ಗೀಚಿದ್ದು, ಅನನ್ಯ ಭಟ್ ಧ್ವನಿಯಾಗಿದ್ದಾರೆ. ಪ್ರದ್ದ್ಯೋತ್ತನ್ ಸಂಗೀತ ನಿರ್ದೇಶನವಿದೆ. ಖಾಕಿ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದ ನವೀನ್ ರೆಡ್ಡಿ ಮಾದೇವನಿಗೂ ಸೂತ್ರಧಾರರು. ನೈಜ ಘಟನೆಗಳಿಂದ ಸ್ಪೂರ್ತಿ ಪಡೆದ ಈ ಸಿನಿಮಾದ ಕಥೆ 1965, 1980 ಮತ್ತು 1999ರ ಕಾಲಘಟ್ಟದಲ್ಲಿ ನಡೆಯುತ್ತದೆ. ಹಿಂದೆಂದೂ ಕಂಡಿರದ ವಿಭಿನ್ನ ಲುಕ್‌ನಲ್ಲಿ ವಿನೋದ್ ಪ್ರಭಾಕರ್ ಕಾಣಿಸಿಕೊಳ್ಳಲಿದ್ದಾರೆ. ಶ್ರೀನಗರ ಕಿಟ್ಟಿ ಖಳನಾಯಕನಾಗಿ ನಟಿಸುತ್ತಿರುವುದು ವಿಶೇಷ. ನಟಿ ಶ್ರುತಿ ಮತ್ತು ಅಚ್ಯುತ್ ಕುಮಾರ್, ಕಾಕ್ರೋಚ್ ಸುಧಿ ಇನ್ನಿತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಬಾಹುಬಲಿ, ಆರ್‌ಆರ್‌ಆರ್ ಸಿನಿಮಾಗಳ ಛಾಯಾಗ್ರಾಹಕ ಸೆಂಥಿಲ್‌ ಕುಮಾರ್ ಅವರೊಂದಿಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಬಾಲಕೃಷ್ಣ ತೋಟ ಮಾದೇವ ಸಿನಿಮಾಕ್ಕೂ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದಾರೆ. ವಿಜಯ್ ಎಂ.ಕುಮಾರ್ ಸಂಕಲನದ ಕೆಲಸ ಮಾಡಿದ್ದಾರೆ. ರಾಧಾಕೃಷ್ಣ ಬ್ಯಾನರ್‌ನಡಿ ಆರ್.ಆರ್ ಕೇಶವ ದೇವಸಂದ್ರ ಚಿತ್ರಕ್ಕೆ ಹಣ ಹಾಕಿದ್ದಾರೆ.

ಇದನ್ನೂ ಓದಿ: ಅನಿರುದ್ಧ್ ನಟನೆಯ 'CHEF ಚಿದಂಬರ' ಟ್ರೇಲರ್ ಬಿಡುಗಡೆ - CHEF Chidambara

ETV Bharat Logo

Copyright © 2025 Ushodaya Enterprises Pvt. Ltd., All Rights Reserved.