ETV Bharat / entertainment

ಅಪಾಯಕಾರಿ ಸ್ಟಂಟ್‌: ಬಾಲಿವುಡ್​ ನಟ ವಿದ್ಯುತ್​ ಜಮ್ವಾಲ್​ ರೈಲ್ವೆ ಪೊಲೀಸ್​ ವಶಕ್ಕೆ

author img

By ETV Bharat Karnataka Team

Published : Feb 11, 2024, 10:14 AM IST

ನಟ ವಿದ್ಯುತ್​ ಜಮ್ವಾಲ್​ ಅವರನ್ನು ರೈಲ್ವೆ ಪೊಲೀಸರು​ ವಶಕ್ಕೆ ಪಡೆದಿರುವ ಫೋಟೋ ಸೋಷಿಯಲ್​ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.

Vidyut Jammwal Detained By Railway Police
ವಿದ್ಯುತ್​ ಜಮ್ವಾಲ್​ ರೈಲ್ವೆ ಪೊಲೀಸ್​ ವಶಕ್ಕೆ

ಮುಂಬೈ: ಅಪಾಯಕಾರಿ ಸ್ಟಂಟ್​​ ಪ್ರದರ್ಶಿಸಿದ ಆರೋಪದಡಿ ಬಾಲಿವುಡ್ ನಟ ವಿದ್ಯುತ್ ಜಮ್ವಾಲ್ ಅವರನ್ನು ಮುಂಬೈನಲ್ಲಿ ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಗಳು ತಿಳಿಸಿವೆ. ಬಾಂದ್ರಾದಲ್ಲಿರುವ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಕಚೇರಿಯಲ್ಲಿ ಜಮ್ವಾಲ್ ಗಂಭೀರ ಸ್ಥಿತಿಯಲ್ಲಿ ಕುಳಿತಿರುವ ಫೋಟೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಇನ್ನೊಂದು ಫೋಟೋದಲ್ಲಿ ನಟ ಅಲ್ಲಿಂದ ಹೊರಟಿರುವುದನ್ನೂ ತೋರಿಸಿದೆ.

ವರದಿಗಳಂತೆ, ಬಾಂದ್ರಾ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ 1ರಲ್ಲಿ ಆರ್‌ಪಿಎಫ್ ಕಚೇರಿ ಇದೆ. ಅಪಾಯಕಾರಿ ಸ್ಟಂಟ್​​ನಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ನಟನನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಂದಿಲ್ಲ. ವೈರಲ್​ ಫೋಟೋ ಶೂಟಿಂಗ್​ನ ಭಾಗವೂ ಆಗಿರಬಹುದು ಎನ್ನಲಾಗುತ್ತಿದೆ. ಹೀಗಾಗಿ, ಅಧಿಕೃತ ಮಾಹಿತಿ ನೀಡುವಂತೆ ವಿದ್ಯುತ್ ಜಮ್ವಾಲ್ ಮತ್ತು ಆರ್‌ಪಿಎಫ್ ಬಳಿ ನೆಟ್ಟಿಗರು ಬೇಡಿಕೆ ಇಟ್ಟಿದ್ದಾರೆ.

ವಿದ್ಯುತ್ ಜಮ್ವಾಲ್ ತಮ್ಮ ಮುಂದಿನ ಚಿತ್ರ 'ಕ್ರಾಕ್-ಜೀತೇಗಾ ತೋ ಜಿಯೇಗಾ' ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಸಿನಿಮಾದ ಪ್ರಮೋಶನ್​ ನಡೆಯುತ್ತಿದೆ. ಫೆಬ್ರವರಿ 9ರಂದು ಟ್ರೇಲರ್ ಅನಾವರಣಗೊಳಿಸಲಾಗಿತ್ತು. ಇದೀಗ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ.

ಈ ಚಿತ್ರದಲ್ಲಿ ಅರ್ಜುನ್ ರಾಂಪಾಲ್, ನೋರಾ ಫತೇಹಿ ಮತ್ತು ಆ್ಯಮಿ ಜಾಕ್ಸನ್ ಮುಖ್ಯಭೂಮಿಕೆಯಲ್ಲಿದ್ದಾರೆ. ಆದಿತ್ಯ ದತ್​​​ ನಿರ್ದೇಶನದ ಚಿತ್ರ ಫೆಬ್ರವರಿ 23ರಂದು ಚಿತ್ರಮಂದಿರ ಪ್ರವೇಶಿಸಲಿದೆ. ಟ್ರೇಲರ್ ಬಿಡುಗಡೆಯಾದ ಸಂದರ್ಭದಲ್ಲಿ ಸೋಷಿಯಲ್​ ಮೀಡಿಯಾಗಳಲ್ಲಿ ನಟನ ನಟನಾ ಕೌಶಲ್ಯವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದರು.​ ಸಿನಿಮಾ ನೋಡುವ ತಮ್ಮ ಕುತೂಹಲ ವ್ಯಕ್ತಪಡಿಸಿದ್ದರು. ವಿದ್ಯುತ್ ಜಮ್ವಾಲ್​​ ನಿಜವಾದ ಆ್ಯಕ್ಷನ್ ಹೀರೋ, ಸೂಪರ್​ ಆ್ಯಕ್ಷನ್​ ಸ್ಟಾರ್, ಫಿಟ್ನೆಸ್​​ ಐಕಾನ್​​ ಎಂದೆಲ್ಲಾ ಬಣ್ಣಿಸಿದ್ದರು.

ಇದನ್ನೂ ಓದಿ: ಸಿನಿಮಾಗೆ ಮರಳಲು ಸಮಂತಾ ರೆಡಿ; ಪಾಡ್‌ಕಾಸ್ಟ್​​ನಲ್ಲಿ ಭಾಗಿ

ಪರ್ಫೆಕ್ಟ್​​ ಫಿಟ್ನೆಸ್​ ಐಕಾನ್​ ಎಂದು ಕರೆಸಿಕೊಳ್ಳುವ ಕೆಲವೇ ಕಲಾವಿದರ ಪೈಕಿ ವಿದ್ಯುತ್ ಜಮ್ವಾಲ್ ಕೂಡ ಒಬ್ಬರು. ಫಿಟ್ನೆಸ್​, ಸ್ಟಂಟ್​ಗೆ ಹೆಸರುವಾಸಿಯಾದ ಇವರು ಸೋಷಿಯಲ್​ ಮೀಡಿಯಾ ಪೋಸ್ಟ್​ ಮೂಲಕವೂ ಗಮನ ಸೆಳೆಯುತ್ತಿರುತ್ತಾರೆ. ಈಗಾಗಲೇ ಶೇರ್ ಮಾಡಲಾದ ಹಲವು ವಿಡಿಯೋಗಳು ಸೋಷಿಯಲ್​ ಮೀಡಿಯಾಗಳಲ್ಲಿ ಜಾಗ ಪಡೆದಿವೆ. ಪಾಕೃತಿಕ ಸೌಂದರ್ಯ ಸವಿಯುವುದೂ ಕೂಡ ನಟನಿಗೆ ಇಷ್ಟ. ಸ್ಟಂಟ್​, ಆ್ಯಕ್ಷನ್​​ ಸಲುವಾಗಿಯೂ ಸದ್ದು ಮಾಡುವ ಜಮ್ವಾಲ್ ಅಭಿನಯದ ''ಕ್ರಾಕ್ - ಜೀತೇಗಾ ತೋ ಜಿಯೇಗಾ'' ಅತಿ ಶೀಘ್ರದಲ್ಲೇ ತೆರೆಗಪ್ಪಳಿಸಲಿದೆ.

ಇದನ್ನೂ ಓದಿ: ಸೈಕಲ್‌ನಲ್ಲೇ​ ಏಷ್ಯಾ ಯಾತ್ರೆ ಕೈಗೊಂಡ ಅಪ್ಪು ಅಭಿಮಾನಿ: 1,111 ದಿನಗಳ ಪ್ರಯಾಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.