ETV Bharat / entertainment

ಗೋಪಿಲೋಲ ಚಿತ್ರದ ಹಾಡು ಬಿಡುಗಡೆ: ಹೊಸಬರ ಸಿನಿಮಾ ತಂಡಕ್ಕೆ ಶಿವಣ್ಣ ಸಾಥ್ - Shivarajkumar - SHIVARAJKUMAR

ಗೋಪಿಲೋಲ ಚಿತ್ರದ ಹಾಡೊಂದನ್ನು ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರು ಬಿಡುಗಡೆ ಮಾಡಿದ್ದಾರೆ. ಈ ಚಿತ್ರ ಅಕ್ಟೋಬರ್ 4 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಹೊಸಬರ ಸಿನಿಮಾ ತಂಡಕ್ಕೆ ಶಿವಣ್ಣ ಸಾಥ್
ಹೊಸಬರ ಸಿನಿಮಾ ತಂಡಕ್ಕೆ ಶಿವಣ್ಣ ಸಾಥ್ (ಗೋಪಿಲೋಲ ಚಿತ್ರತಂಡ)
author img

By ETV Bharat Karnataka Team

Published : Sep 8, 2024, 11:22 AM IST

ಗೋಪಿಲೋಲ ಚಿತ್ರದ ಗೋಪಿಲೋಲ ಓ ಶೋಕಿವಾಲ ಎಂಬ ಶೀರ್ಷಿಕೆ ಗೀತೆ ಗೌರಿ ಹಬ್ಬದ ಶುಭದಿನದಂದು ಬಿಡುಗಡೆಯಾಗಿದೆ. ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಈ ಹಾಡನ್ನು ಬಿಡುಗಡೆ ಮಾಡಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದ್ದಾರೆ. ಆರ್ ರವೀಂದ್ರ ನಿರ್ದೇಶನದ ಚಿತ್ರವು ಸುಕೃತಿ ಚಿತ್ರಾಲಯ ಲಾಂಛನದಲ್ಲಿ ನಿರ್ಮಾಪಕ ಎಸ್ ಆರ್ ಸನತ್ ಕುಮಾರ್ ಮತ್ತು ಸಹ ನಿರ್ಮಾಪಕ ಮಂಜುನಾಥ್ ಅರಸು ಅವರ ನಿರ್ಮಾಣದಲ್ಲಿ ಮೂಡಿಬಂದಿದೆ.

ಕೇಶವ ಚಂದ್ರ ಅವರು ಬರೆದಿರುವ ಈ ಹಾಡನ್ನು ಹೇಮಂತ್ ಕುಮಾರ್ ಹಾಗೂ ವಾರಿಜಶ್ರೀ ಹಾಡಿದ್ದಾರೆ. ಮಿಥುನ್ ಅಶೋಕನ್ ಚೆನ್ನೈ ಸಂಗೀತ ನೀಡಿದ್ದಾರೆ. ಸದಾಚಾರ್ಯ ನೃತ್ಯ ನಿರ್ದೇಶನದಲ್ಲಿ ಮಂಜುನಾಥ್ ಅರಸು ಹಾಗೂ ನಿಮಿಷ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ‌. ಸುಕೃತಿ ಮ್ಯೂಸಿಕ್ ಯೂಟ್ಯೂಬ್ ಚಾನಲ್​​ನಲ್ಲಿ ಬಿಡುಗಡೆಯಾಗಿದೆ.

ಗೋಪಿಲೋಲ, ನೈಸರ್ಗಿಕ ಕೃಷಿಯೇ ಶ್ರೇಷ್ಠ ಎಂಬ ಮಂತ್ರವನ್ನು ಬಲವಾಗಿ ನಂಬಿರುವ ರೈತನೊಬ್ಬನ ಕಥೆ ಇದು. ಭೂಮಿಯನ್ನು ನಂಬಿದ ರೈತನು ಎಂದೂ ಹಾಳಾಗುವುದಿಲ್ಲ ಎಂದು ಅರಿತಿರುವ ಧರ್ಮೇಗೌಡ ಎಂಬ ರೈತನ‌ ಕಥೆಯೂ ಹೌದು‌. ರಾಸಾಯನಿಕ ಆಹಾರ ಪೂರೈಕೆಯ ವಿರುದ್ಧವಾಗಿ, ನೈಸರ್ಗಿಕ ಕೃಷಿಯನ್ನೇ ನಂಬಿಕೊಂಡು ಆತ ಜೀವನ‌ ಸಾಗಿಸುತ್ತಿರುತ್ತಾನೆ‌. ರಾಸಾಯನಿಕ ಆಹಾರ ಪೂರೈಕೆ ಹಾಗೂ ನೈಸರ್ಗಿಕ ಕೃಷಿಕರ ನಡುವೆ ನಡೆಯುವ ಸಂಘರ್ಷದ ನಡುವೆ ಗೋಪಿ ಮತ್ತು ಲೀಲಾ ನಡುವೆ ಅರಳುವ ಪ್ರೇಮಕಥೆ ಇದಾಗಿದೆ.

ಯುವ ನಟ ಮಂಜುನಾಥ್ ಅರಸು ಅವರೇ ನಾಯಕರಾಗಿ ನಟಿಸಿದ್ದು, ನಾಯಕಿಯಾಗಿ ನಿಮಿಷ ಕೆ ಅಭಿನಯಿಸಿದ್ದಾರೆ. ಎಸ್ ನಾರಾಯಣ್, ಸಪ್ತಗಿರಿ(ತೆಲುಗು, ತಮಿಳು ಖ್ಯಾತ ನಟ), ಜಾಹ್ನವಿ, ಜೋಸೈಮನ್, ನಾಗೇಶ್ ಯಾದವ್, ಪದ್ಮಾ ವಾಸಂತಿ, ಸ್ವಾತಿ, ಹನುಮಂತೇ ಗೌಡ, ಡಿಂಗ್ರಿ ನಾಗರಾಜ್, ಕೆಂಪೇಗೌಡ, ಸಚಿನ್, ರಾಧ ರಾಮಚಂದ್ರ, ರೇಖಾದಾಸ್, ಸತೀಶ್ ಮುಂತಾದವರು ತಾರಾ ಬಳಗದಲ್ಲಿದ್ದಾರೆ.

ಆರ್ ರವೀಂದ್ರ ನಿರ್ದೇಶನದ ಗೋಪಿಲೋಲ ಚಿತ್ರಕ್ಕೆ ನಿರ್ಮಾಪಕ ಎಸ್ ಆರ್ ಸನತ್ ಕುಮಾರ್ ಅವರು ಕಥೆ ಬರೆದಿದ್ದಾರೆ. ಚಿತ್ರಕಥೆ ಹಾಗೂ ಸಂಭಾಷಣೆ ಕೇಶವಚಂದ್ರ ಅವರದು. ಸೂರ್ಯಕಾಂತ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನವಿರುವ ಈ ಚಿತ್ರಕ್ಕೆ ಮಿಥುನ್ ಅಶೋಕನ್ ಚೆನ್ನೈ ಸಂಗೀತ ನೀಡಿದ್ದಾರೆ. ಹಿನ್ನೆಲೆ ಸಂಗೀತ ರಾಕೇಶ್ ಆಚಾರ್ಯ ಅವರದು. ಗೋಪಿ - ಲೀಲಾ ರ ಪ್ರೇಮಕಥೆಯ ಹಿನ್ನೆಲೆಯಲ್ಲಿ ನೈಸರ್ಗಿಕ ಕೃಷಿಯ ಮಹತ್ವವನ್ನು ಸಾರುವ ಗೋಪಿಲೋಲ ಚಿತ್ರ ಅಕ್ಟೋಬರ್ 4 ರಂದು ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಆರ್ಮುಗ ರವಿಶಂಕರ್ ಪುತ್ರನ ಚೊಚ್ಚಲ ಚಿತ್ರಕ್ಕೆ ಸಿಕ್ತು ಹ್ಯಾಟ್ರಿಕ್ ಹೀರೋನ ಸಾಥ್: ಮಗನ ಸಿನಿಮಾಗೆ ಅಪ್ಪ ಡೈರೆಕ್ಷನ್​ - Subrahmanya first look

ETV Bharat Logo

Copyright © 2024 Ushodaya Enterprises Pvt. Ltd., All Rights Reserved.