ETV Bharat / entertainment

ಚಿರಂಜೀವಿ ಸರ್ಜಾ 4ನೇ ವರ್ಷದ ಪುಣ್ಯಸ್ಮರಣೆ: ಕುಟುಂಬಸ್ಥರಿಂದ ಸಮಾಧಿಗೆ ಪೂಜೆ - Chiranjeevi Sarja

author img

By ETV Bharat Karnataka Team

Published : Jun 7, 2024, 9:08 PM IST

ನಟ ಚಿರಂಜೀವಿ ಸರ್ಜಾ ಅವರ 4ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಇಂದು ಕುಟುಂಬಸ್ಥರು ಸಮಾಧಿಗೆ ಪೂಜೆ ಸಲ್ಲಿಸಿದರು.

CHIRANJEEVI SARJA DEATH ANNIVERSARY
ಚಿರಂಜೀವಿ ಸರ್ಜಾ ಸಮಾಧಿಗೆ ಕುಟುಂಬಸ್ಥರಿಂದ ಪೂಜೆ (ETV Bharat)

ನಟ ಚಿರಂಜೀವಿ ಸರ್ಜಾ ಅವರ 4ನೇ ವರ್ಷದ ಪುಣ್ಯಸ್ಮರಣೆ (ETV Bharat)

ಕನ್ನಡ ಚಿತ್ರರಂಗದ ಯುವ ಸಾಮ್ರಾಟ್ ಆಗಿ ಬೆಳ್ಳಿ ತೆರೆ ಮೇಲೆ ವಿಜೃಂಭಿಸಿದ ನಟ ಚಿರಂಜೀವಿ ಸರ್ಜಾ ಇಹಲೋಕ ತ್ಯಜಿಸಿ ಇಂದಿಗೆ ನಾಲ್ಕು ವರ್ಷ. ಇಂದು ಪುಣ್ಯಸ್ಮರಣೆ ನಿಮಿತ್ತ ಚಿರು ಸಮಾಧಿಗೆ ಕುಟುಂಬಸ್ಥರು ಪೂಜೆ ಸಲ್ಲಿಸಿದರು.

ಕನಕಪುರ ರಸ್ತೆಯ ನೆಲಗುಳಿಯ ಧ್ರುವ ಫಾರ್ಮ್ ಹೌಸ್​ನಲ್ಲಿರುವ ಸಮಾಧಿಗೆ ಪತ್ನಿ ಮೇಘನಾ ರಾಜ್, ಸಹೋದರ ಧ್ರುವ ಸರ್ಜಾ, ಪತ್ನಿ ಪ್ರೇರಣಾ, ಚಿರು ಪುತ್ರ ರಾಯನ್ ಸರ್ಜಾ, ಸುಂದರ ರಾಜ್, ಪ್ರಮೀಳಾ ಜೋಷಾಯ್, ಚಿರು ತಂದೆ ವಿಜಯ್, ತಾಯಿ ಅಮ್ಮಾಜಿ ಸೇರಿದಂತೆ ಮೇಘನಾ ರಾಜ್ ಹಾಗೂ ಧ್ರುವ ಸರ್ಜಾ ಕುಟುಂಬದವರು ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಚಿರು ಪತ್ನಿ ಮೇಘನಾ ರಾಜ್ ಭಾವುಕರಾದರು‌.

ಚಿರು ಅಂತ್ಯಸಂಸ್ಕಾರ ಮಾಡಿರುವ ಸ್ಥಳದಲ್ಲಿ ಸ್ಮಾರಕ ನಿರ್ಮಿಸಲಾಗಿದ್ದು, ಸಮಾಧಿ ಬಳಿ ಅವರ ಹೆಸರನ್ನು ದೊಡ್ಡ ಅಕ್ಷರಗಳಲ್ಲಿ ಕೆತ್ತಿಸಲಾಗಿದೆ. ಅಭಿಮಾನಿಗಳಿಗೂ ಸಮಾಧಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

2020ರಲ್ಲಿ ಜೂನ್ 7ರಂದು ಚಿರಂಜೀವಿ ಸರ್ಜಾ ಸಾವನ್ನಪ್ಪಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.