ETV Bharat / entertainment

ಹೊಸ ಪ್ರತಿಭೆಗಳ 'ಸಿಂಹಗುಹೆ' ಸಿನಿಮಾಗೆ ನಟ ಅನಿರುದ್ಧ್ ಸಾಥ್ - Simhaguhe

ಬಿಡುಗಡೆಗೆ ಸಜ್ಜಾಗಿರುವ 'ಸಿಂಹಗುಹೆ' ಚಿತ್ರತಂಡಕ್ಕೆ ನಟ ಅನಿರುದ್ಧ್ ಬೆಂಬಲ ನೀಡಿದ್ದಾರೆ.

Simhaguhe
'ಸಿಂಹಗುಹೆ' ಚಿತ್ರತಂಡ
author img

By ETV Bharat Karnataka Team

Published : Apr 2, 2024, 12:44 PM IST

ಕನ್ನಡ ಚಿತ್ರರಂಗಕ್ಕೆ ಹೊಸ ಪ್ರತಿಭೆಗಳ ಆಗಮನ ಮುಂದುವರಿದಿದೆ. ಈ ಹಿಂದೆ ಸಮರ್ಥ, ತಾಜಾ ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದ ಎಸ್​​ಜಿಆರ್ ನಿರ್ದೇಶನದ ಹಾಗೂ ಹೊಸ ಪ್ರತಿಭೆಗಳಾದ ರವಿ ಶಿರೂರು, ನಿವಿಶ್ಕಾ ಪಾಟೀಲ್ ಅಭಿನಯದ 'ಸಿಂಹಗುಹೆ' ಚಿತ್ರ ಬಹುತೇಕ ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ. ಚಿತ್ರದ ಹಾಡುಗಳನ್ನು ಇತ್ತೀಚೆಗೆ ನಟ ಅನಿರುದ್ಧ್ ಬಿಡುಗಡೆ ಮಾಡುವ ಮೂಲಕ ಹೊಸ ತಂಡಕ್ಕೆ ಸಾಥ್ ನೀಡಿದರು‌.

ಬಳಿಕ ಮಾತನಾಡಿದ‌ ಅವರು, ಹೊಸ ಚಿತ್ರತಂಡಕ್ಕೆ ಪ್ರೋತ್ಸಾಹ ನೀಡಲು ನಾನಿಲ್ಲಿ ಬಂದಿದ್ದೇನೆ. ಇವರ ಕೆಲಸ ನನಗೆ ಬಹಳ ಇಷ್ಟವಾಯ್ತು. ಹಾಡು ಚೆನ್ನಾಗಿ ಮೂಡಿಬಂದಿದೆ. ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.

Simhaguhe
'ಸಿಂಹಗುಹೆ' ಚಿತ್ರತಂಡ

ನಂತರ ನಿರ್ದೇಶಕ ಎಸ್‌ಜಿಆರ್ ಮಾತನಾಡಿ, ಇದೊಂದು ಸಸ್ಪೆನ್ಸ್, ಕ್ರೈಂ, ಮರ್ಡರ್ ಮಿಸ್ಟ್ರಿ ಚಿತ್ರ. ಜಾಗರಹಳ್ಳಿ ಎಂಬ ಊರಲ್ಲಿ ಮನೆಯೊಂದರ ಮುಂದೆ ಬಹುತೇಕ ಚಿತ್ರದ ಕಥೆ ನಡೆಯುತ್ತದೆ. ಸಿಂಹಗುಹೆ ಎನ್ನುವುದು ಆ ಮನೆಯ ಹೆಸರು. ನಾಯಕ ಕೂಡ ವಿಷ್ಣು ಅಭಿಮಾನಿ. ಹಾಸನ, ಸಕಲೇಶಪುರ, ಮೂಡಿಗೆರೆ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಿದ್ದೇವೆ. ನನ್ನ ಹಿಂದಿನ ಚಿತ್ರಗಳಿಗೆ ಕೆಲಸ ಮಾಡಿರುವ ಮಹೇಂದರ್ ಅವರೇ ಈ ಚಿತ್ರಕ್ಕೂ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.

ಚಿತ್ರದ ನಾಯಕ ರವಿ ಶಿರೂರ್ ಮಾತನಾಡಿ, ಇದೊಂದು ಚಿಕ್ಕ ಪ್ರಯತ್ನ. ಅಭಿನಯದೊಂದಿಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದೇನೆ. ಹಳ್ಳಿಯಲ್ಲಿ ಟ್ಯಾಂಕರ್ ಓಡಿಸಿಕೊಂಡಿರುವ ಹುಡುಗನ ಪಾತ್ರ ನನ್ನದು. ಆ ಹಳ್ಳಿಯಲ್ಲಿ ಒಂದು ಮರ್ಡರ್ ನಡೆದಾಗ ಅದು ಈ ಹುಡುಗನನ್ನು ಹೇಗೆ, ಎಲ್ಲೆಲ್ಲಿಗೆ ಕರೆದುಕೊಂಡು ಹೋಯಿತು ಎಂಬುದನ್ನು ಚಿತ್ರದ ಮೂಲಕ ಹೇಳಿದ್ದೇವೆ ಎಂದು ವಿವರಿಸಿದರು.

Simhaguhe
'ಸಿಂಹಗುಹೆ' ಚಿತ್ರತಂಡ

ಇದನ್ನೂ ಓದಿ: 'O2' ಚಿತ್ರ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುತ್ತದೆ: ಅಶ್ವಿನಿ ಪುನೀತ್ ರಾಜ್‌ಕುಮಾರ್ - O2 Movie

ಇನ್ನು ನಾಯಕಿ ನಿವಿಶ್ಕಾ ಪಾಟೀಲ್ ಮಾತನಾಡಿ, ಇದೇ ನನ್ನ ಮೊದಲ ಚಿತ್ರ. ಇದರ ನಂತರ ನಾಲ್ಕು ಸಿನಿಮಾ ಆಯಿತು. ಹಾಗಾಗಿ ನನಗೆ ಈ ಚಿತ್ರ ಬಹಳ ಪ್ರಮುಖವಾದದ್ದು. ಸೀರಿಯಲ್‌ನಲ್ಲಿ ಅಭಿನಯಿಸುತ್ತಿದ್ದ ನನಗೆ ರವಿ ಸರ್ ಕರೆದು ಅವಕಾಶ ನೀಡಿದರು ಎಂದು ತಿಳಿಸಿದರು. ಮತ್ತೋರ್ವ ನಾಯಕಿ ಅನುರಾಧಾ ಮಾತನಾಡಿ, ನಾನೋರ್ವ ಡ್ಯಾನ್ಸರ್. ಒಂದಷ್ಟು ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನೂ ನಿರ್ವಹಿಸಿದ್ದೇನೆ. ಈ ಚಿತ್ರದಲ್ಲಿ ಸೆಕೆಂಡ್ ಲೀಡ್ ಆಗಿ ಕಾಣಿಸಿಕೊಂಡಿದ್ದೇನೆ ಎಂದು ತಿಳಿಸಿದರು.

ಇದನ್ನೂ ಓದಿ: ನೀವು ಫಿಲ್ಮ್​ ಮೇಕರ್​ ಆಗಬೇಕೆ? ರಾಮೋಜಿ ಅಕಾಡೆಮಿಯಲ್ಲಿದೆ ಉಚಿತ ಚಲನಚಿತ್ರ ನಿರ್ಮಾಣ ಕೋರ್ಸ್‌ - Free Filmmaking Courses

ಸಂಗೀತ ನಿರ್ದೇಶಕ ಸತೀಶ್ ಆರ್ಯನ್ ಮಾತನಾಡಿ, ಈ ಸಿನಿಮಾ ಪ್ರಾರಂಭವಾದಾಗ ನಾನಿರಲಿಲ್ಲ. ಮ್ಯೂಸಿಕ್ ಮಾಡಿಕೊಡಿ ಎಂದು ನಿರ್ದೇಶಕರು ನನ್ನ ಬಳಿ ಬಂದರು. ಮೊದಲು 3 ಹಾಡು ಎಂದಿತ್ತು. ನಂತರ ಅದು 4 ಆಯ್ತು. ನಾನೂ ಸಹ 2 ಹಾಡುಗಳನ್ನು ಹಾಡಿದ್ದೇನೆ ಎಂದರು. ಸಾಹಿತಿ ಶಿವನಂಜೇಗೌಡ ಮಾತನಾಡಿ, ಚಿತ್ರದಲ್ಲಿ ನಾನು ಭೂಮಿ ತಿರುಗುವುದು ಎಂಬ ಹಾಡನ್ನು ಬರೆದಿದ್ದೇನೆ ಎಂದರು. ಚಿತ್ರಕ್ಕೆ ಎ.ಸಿ ಮಹೇಂದರ್ ಅವರ ಛಾಯಾಗ್ರಹಣವಿದೆ. ಸದ್ಯ ಹಾಡುಗಳನ್ನು ಬಿಡುಗಡೆ ಮಾಡಿರುವ ಚಿತ್ರತಂಡ ಸಿನಿಮಾವನ್ನು ಜುಲೈ ಮೊದಲ ವಾರದಲ್ಲಿ ಬಿಡುಗಡೆಗೊಳಿಸಲು ಸಿದ್ಧತೆ ನಡೆಸುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.