ETV Bharat / entertainment

ಯುವ ಪ್ರತಿಭೆ ಹರೀಶ್ ಸೀನಪ್ಪರ 'ಕ್ರೆಡಿಟ್ ಕುಮಾರ'ನಿಗೆ ಆ್ಯಕ್ಷನ್ ಪ್ರಿನ್ಸ್‌ ಸಾಥ್ - Credit Kumara - CREDIT KUMARA

'ಕ್ರೆಡಿಟ್ ಕುಮಾರ' ಅದ್ದೂರಿ ಮುಹೂರ್ತ ಸಮಾರಂಭಕ್ಕೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಾಕ್ಷಿಯಾಗೋ ಮೂಲಕ ಯುವ ಪ್ರತಿಭೆಗೆ ಸಾಥ್ ನೀಡಿದ್ದಾರೆ. ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಿನಿಮಾ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದ ಹರೀಶ್ ಅವರೀಗ ಬೆಳ್ಳಿ ಪರದೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ.

'Credit Kumara' film team
'ಕ್ರೆಡಿಟ್ ಕುಮಾರ' ಮುಹೂರ್ತ ಕಾರ್ಯಕ್ರಮ (ETV Bharat)
author img

By ETV Bharat Entertainment Team

Published : Aug 15, 2024, 8:14 PM IST

'ಕ್ರೆಡಿಟ್ ಕುಮಾರ' ಸ್ಯಾಂಡಲ್​ವುಡ್​ನಲ್ಲಿ ಸೆಟ್ಟೇರಿರುವ ಹೊಸ ಸಿನಿಮಾ. ಬಾಂಡ್ ರವಿ ಖ್ಯಾತಿಯ ನಿರ್ದೇಶಕ ಪ್ರಜ್ವಲ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಎರಡನೇ ಸಿನಿಮಾ. ಈ ಸಿನಿಮಾ ಮೂಲಕ ನಾಯಕನಾಗಿ ಯುವ ಪ್ರತಿಭೆ ಹರೀಶ್ ಸೀನಪ್ಪ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಿನಿಮಾ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದ ಹರೀಶ್ ಅವರೀಗ ಬೆಳ್ಳಿ ಪರದೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ.

'Credit Kumara' film team
'ಕ್ರೆಡಿಟ್ ಕುಮಾರ' ಚಿತ್ರತಂಡ (ETV Bharat)

ಮೊದಲ ಹೆಜ್ಜೆಯಾಗಿ 'ಕ್ರೆಡಿಟ್ ಕುಮಾರ' ಚಿತ್ರಕ್ಕೆ ಮುಹೂರ್ತ ನೆರವೇರಿಸುವ ಮೂಲಕ ಅಧಿಕೃತ ಚಾಲನೆ ಸಿಕ್ಕಿದೆ. ಕಂಠೀರವ ಸ್ಟುಡಿಯೋದಲ್ಲಿ ನಡೆದ ಅದ್ದೂರಿ ಮುಹೂರ್ತ ಸಮಾರಂಭಕ್ಕೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಾಕ್ಷಿಯಾಗೋ ಮೂಲಕ ಯುವ ಪ್ರತಿಭೆಗೆ ಸಾಥ್ ನೀಡಿದ್ದಾರೆ. ಈ ಸಂದರ್ಭದಲ್ಲಿ ನಿರ್ದೇಶಕ ಎಸ್.ಮಹೇಂದರ್, ನಿರ್ಮಾಪಕ ಉದಯ್ ಮೆಹ್ತಾ, ಬಾಂಡ್ ರವಿ ಸ್ಟಾರ್ ಪ್ರಮೋದ್ ಹಾಗೂ ನಿರ್ಮಾಪಕ ನರಸಿಂಹ, ಸೆಲೆಬ್ರಿಟಿ ಜಿಮ್ ಟ್ರೈನರ್ ಪಾನಿಪುರಿ ಕಿಟ್ಟಿ, ಮಾಸ್ತಿ, ಅಣಜಿ ನಾಗರಾಜ್ ಸೇರಿಂದೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಈ ಸಿನಿಮಾಗೆ ಕ್ಲ್ಯಾಪ್ ಮಾಡಿ ಮಾತನಾಡಿದ ಧ್ರುವ ಸರ್ಜಾ, "ಹರೀಶ್ ಅವರಿಗೆ ಒಳ್ಳೆದಾಗಬೇಕು, ತುಂಬಾ ಕಷ್ಟಪಟ್ಟಿದ್ದಾರೆ" ಎಂದು ಹೇಳಿದರು. ಎಸ್.ಮಹೆಂದರ್ ಮಾತನಾಡಿ, "ಪಾಸಿಟಿವ್ ವೈಬ್ ಇದೆ. ಟೈಟಲ್ ತುಂಬಾ ಚೆನ್ನಾಗಿದೆ. ನಿರ್ದೇಶಕ ಪ್ರಜ್ವಲ್ ನಮ್ಮ ಹುಡುಗ. ನನ್ನ ಜೊತೆ ಕೆಲಸ ಮಾಡಿದ ಹುಡುಗ. ಸೆನ್ಸಿಬಲ್ ಇದ್ದಾರೆ. ಹರೀಶ್ ಕೂಡ ಬಹಳ ಸಮಯದಿಂಂದ ನೋಡಿಕೊಂಡು ಬಂದ ಹುಡುಗ. ನಿರ್ಮಾಪಕರಿಗೆ ನಾನು ಭರವಸೆ ನೀಡುತ್ತೇನೆ, ಖಂಡಿತವಾಗಿಯೂ ಈ ಸಿನಿಮಾ ಚೆನ್ನಾಗಿ ಮೂಡಿಬರಲಿದೆ" ಎಂದು ತಿಳಿಸಿದರು.

'Credit Kumara' film team
'ಕ್ರೆಡಿಟ್ ಕುಮಾರ' ಚಿತ್ರತಂಡ (ETV Bharat)

ನಟ ಪ್ರಮೋದ್ ಮಾತನಾಡಿ, "ನಿರ್ದೇಶಕ ಪ್ರಜ್ವಲ್ ಉತ್ತಮ ಕೆಲಸಗಾರ ಹಾಗೂ ಹರೀಶ್ ನನ್ನ ಗೆಳೆಯ. ಅವರಿಗೆ ಒಳ್ಳೆಯದಾಗಲಿ" ಎಂದರು.

'ಕ್ರೆಡಿಟ್ ಕುಮಾರ' ಒನ್ ಲೈನ್ ಸ್ಟೋರಿ ಹೇಳುವುದಾದರೆ ಸಾಲ ಮಾಡಿಕೊಂಡು ಒದ್ದಾಡುವ ಒಬ್ಬ ಕ್ಯಾಬ್ ಡ್ರೈವರ್​​ನ ಕಥೆ. ಕ್ರೆಡಿಟ್ ಕುಮಾರನಾಗಿ ಹರೀಶ್​​​ ಸೀನಪ್ಪ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿ ಪಾತ್ರದಲ್ಲಿ ಪಾಯಲ್ ಚಂಗಪ್ಪ ನಟಿಸಲಿದ್ದಾರೆ. ಕಿರುಚಿತ್ರಗಳ ಮೂಲಕ ಖ್ಯಾತಿ ಗಳಿಸಿರುವ ಪಾಯಲ್ ಇದೀಗ ಮೊದಲ ಬಾರಿಗೆ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಲು ಸಜ್ಜಾಗಿದ್ದಾರೆ.

'Credit Kumara' film team
'ಕ್ರೆಡಿಟ್ ಕುಮಾರ' ಚಿತ್ರತಂಡ (ETV Bharat)

ಕ್ರೆಡಿಟ್ ಕುಮಾರ ಸಿನಿಮಾ ಮೂಲಕ ನಿರ್ಮಾಪಕರಾಗಿ ವಾಗೀಶ್ ಮುತ್ತಿಗೆ ಸ್ಯಾಂಡಲ್​​ವುಡ್​ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ನಿರ್ಮಾಪಕ ವಾಗೀಶ್, "2 ತಿಂಗಳ ಹಿಂದಷ್ಟೇ ಬ್ಯಾನರ್ ರಿಜಿಸ್ಟರ್ ಮಾಡಿಸಿದ್ದೆ. ಉತ್ತಮ ಸಿನಿಮಗಾಗಿ ಕಾಯುತ್ತಿದ್ದೆ. ಕ್ರೆಡಿಟ್ ಕುಮಾರ ಸಿನಿಮಾ ಸಿಕ್ಕಿದೆ. ಉತ್ತಮ ಕಂಟೆಂಟ್ ಇರುವ ಚಿತ್ರವಿದು. ಗೆದ್ದೆ ಗೆಲ್ಲುತ್ತದೆ ಎನ್ನುವ ವಿಶ್ವಾಸವಿದೆ" ಎಂದರು‌.

ನಾಯಕಿ ಪಾಯಲ್ ಮಾತನಾಡಿ, "ಭೂಮಿ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಮಿಡ್ಲ್ ಕ್ಲಾಸ್ ಹುಡುಗಿ ಬ್ಯೂಟಿಶಿಯನ್ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಈಗಾಗಲೇ ಶಾರ್ಟ್ ಸಿನಿಮಾ ಮಾಡಿದ್ದೇನೆ. ಬಹಳ ಪ್ರೀತಿ ಕೊಟ್ಟಿದ್ದೀರ. ಇದೀಗ ಸಿನಿಮಾ ಮಾಡುತ್ತಿದ್ದೇನೆ. ಎಲ್ಲರ ಪ್ರೀತಿ ಇರಲಿ" ಎಂದು ಕೇಳಿಕೊಂಡರು.

ನಿರ್ದೇಶಕ ಪ್ರಜ್ವಲ್ ಮಾತನಾಡಿ, "ಬಾಂಡ್ ರವಿ ಅನ್ನೋ ಸಿನಿಮಾ ಮಾಡಿದ್ದೆ. ಆ ಸಿನಿಮಾಗೆ ಸಿಕ್ಕ ಪ್ರಶಂಸೆಯಿಂದ ಈಗ ಮತ್ತೊಂದು ಸಿನಿಮಾ ಮಾಡುವಂತಾಗಿದೆ. ಸಾಲ ಮಾಡಿಕೊಂಡು ಬದುಕುವ ಒಬ್ಬ ಯುವಕನ ಕಥೆ. ಹರೀಶ್ ಅವರಿಗಂತನೇ ಈ ಕಥೆ ಮಾಡಿದ್ದು" ಎಂದರು.

ಇದನ್ನೂ ಓದಿ: ಯುವಕರಿಗೆ ಸ್ಫೂರ್ತಿಯ ಸಂದೇಶವಿರುವ ಇಂದ್ರಜಿತ್​ರ 'ಗೌರಿ': ಚೊಚ್ಚಲ ಚಿತ್ರದಲ್ಲೇ ಭರವಸೆ ಹುಟ್ಟಿಸಿದ ಸಮರ್ಜಿತ್ - Gowri

ಯುವ ನಟ ಹರೀಶ್ ಮಾತನಾಡಿ, "ಇಡೀ ಸಿನಿಮಾರಂಗ ಸಹಾಯ ಮಾಡಿದೆ. ಇದು ಮೊದಲ ಹೆಜ್ಜೆ. 2009ರಲ್ಲಿ ಕೇಬಲ್ ಚಾನನ್​ನಲ್ಲಿ ಕೆಲಸ ಮಾಡುವಾಗ ಬಣ್ಣ ಹಚ್ಚಿದ್ದು. ಅಂದು ಆರ್ಟಿಸ್ಟ್ ಆಗಬೇಕು ಅಂತಾ ಅಂದುಕೊಂಡಿದ್ದೆ. ಈಗ ಆ ಕನಸು ನನಸಾಗಿದೆ. ಈ ಅನುಭವ ನನಗೆ ಬೇಕಿತ್ತು. ಈ ಅನುಭವ ಇಲ್ಲ ಅಂದಿದ್ರೆ ನನ್ನ ಜೀವನ ಅಪೂರ್ಣ ಆಗುತ್ತಿತ್ತು" ಎಂದರು.

'Credit Kumara' film team
'ಕ್ರೆಡಿಟ್ ಕುಮಾರ' ಚಿತ್ರತಂಡ (ETV Bharat)

ಇದನ್ನೂ ಓದಿ: 'ಕೃಷ್ಣಂ ಪ್ರಣಯ ಸಖಿ'ಗೆ ಮೆಚ್ಚುಗೆ: ಪ್ರೇಕ್ಷಕರು, ಚಿತ್ರತಂಡ ಹೇಳಿದ್ದೇನು? ವಿಡಿಯೋ ನೋಡಿ - Krishnam Pranaya Sakhi

ಇನ್ನೂ ಈ ಸಿನಿಮಾಗೆ ಧರ್ಮ ವಿಶ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಮೂರು ಹಾಡುಗಳು ಇರಲಿದ್ದು ವಿ ನಾಗೇಂದ್ರ ಪ್ರಸಾದ್, ಪ್ರಮೋದ್ ಮರುವಂತೆ ಹಾಗೂ ಭರ್ಜರಿ ಚೇತನ್ ಅವರ ಸಾಹಿತ್ಯ ಇರಲಿದೆ ಎಂದು ಧರ್ಮ ವಿಶ್ ಹೇಳಿದರು. ಸದ್ಯ ಮುಹೂರ್ತ ಮಾಡಿಕೊಂಡಿರುವ ಸಿನಿಮಾ ಚಿತ್ರೀಕರಣ ಹೊರಡಲು ಸಜ್ಜಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.