ಹೈದರಾಬಾದ್: ಖ್ಯಾತ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಅವರ ಮ್ಯೂಸಿಕಲ್ ಡಾಕ್ಯುಮೆಂಟರಿ ಚಿತ್ರ ಆಗಿರುವ 'ಹೆಡ್‌ಹಂಟಿಂಗ್ ಟು ಬೀಟ್‌ಬಾಕ್ಸಿಂಗ್' ಇದೀಗ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್ (ಐಎಫ್ಎಫ್ಎಂ) 2024ರಲ್ಲಿ ಪ್ರದರ್ಶನ ಕಾಣಲಿದೆ. ಇದೇ ಮೊದಲ ಬಾರಿಗೆ ಚಿತ್ರ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರದರ್ಶನ ಕಾಣುತ್ತಿರುವುದಕ್ಕೆ ಚಿತ್ರತಂಡ ಸಂತಸ ವ್ಯಕ್ತಪಡಿಸಿದೆ. ಆಸ್ಟ್ರೇಲಿಯಾದಲ್ಲಿ ಆಗಸ್ಟ್ 15 ರಿಂದ 25ರ ವರೆಗೆ ನಡೆಯಲಿರುವ 15ನೇ ಈ ಚಿತ್ರೋತ್ಸವದಲ್ಲಿ ಬಹು ನಿರೀಕ್ಷೆಯ ಸಾಕ್ಷ್ಯಚಿತ್ರದ ಪ್ರದರ್ಶನ ನಡೆಯಲಿದೆ.
ಮೇಯಲ್ಲಿ ನಡೆದ 77ನೇ ಕೇನ್ಸ್ ಫಿಲ್ಮ್ ಫೆಸ್ಟಿವಲ್ನಲ್ಲಿ ಮೊದಲ ಬಾರಿಗೆ 'ಹೆಡ್‌ಹಂಟಿಂಗ್ ಟು ಬೀಟ್‌ಬಾಕ್ಸಿಂಗ್' ಚಿತ್ರದ ಟ್ರೈಲರ್ ಅನ್ನು ಪ್ರದರ್ಶಿಸಲಾಗಿತ್ತು. ನಾಗಾಲ್ಯಾಂಡ್ನ ಅದ್ಭುತ ಸಂಗೀತ ತಾಳ ಮತ್ತು ಶಬ್ದಗಳ ಅದ್ಭುತ ಪಯಣ ಕಥೆಯನ್ನು ಇದು ಹೊಂದಿದೆ. ಅಲ್ಲಿನ ಪೀಳಿಗೆ, ಬುಡಕಟ್ಟು ಮತ್ತು ಸಂಸ್ಕೃತಿಗಳಲ್ಲಿ ಸಂಗೀತ ಬೆಳವಣಿಗೆಯನ್ನು ಪರಿಚಯಿಸಲಿದೆ. ನಾಗಾಲ್ಯಾಂಡ್ನಲ್ಲಿನ ಸಂಗೀತ ಉಸಿರಾಗಿಸಿರುವ ಪ್ರಾಚೀನ ಬುಡಕಟ್ಟಿನ ಕುರಿತ ಪರಿಚಯ ಸಿಗಲಿದೆ. ಸಂಗೀತದ ಗಾನ ಸುಧೆಯ ಜ್ಞಾನದ ಜೊತೆಗೆ ಪ್ರೇಕ್ಷಕರನ್ನು ಚಿತ್ರ ತಲ್ಲೀನಗೊಳಿಸಲಿದೆ ಎಂದು ಎಎಫ್ಎಫ್ ಸಂಘಟನೆ ತಿಳಿಸಿದೆ.
🎬 Fresh from Cannes! 🌟 We're thrilled to unveil the first look of our documentary, 'Headhunting to Beatboxing,' now in post-production. Stay tuned for more updates!
— A.R.Rahman (@arrahman) May 19, 2024
Director: Rohit Gupta
Producer: AR Rahman
Executive producers: Abu Metha, Adam J. Greig, Theja Meru, Rohit… pic.twitter.com/DmJkeSydJI
ರೋಹಿತ್ ಗುಪ್ತಾ ನಿರ್ದೇಶನದ ಈ ಚಿತ್ರ ಮೆಲ್ಬೋರ್ನ್ನಲ್ಲಿ ಪ್ರೀಮಿಯರ್ ಪದರ್ಶನ ಕಾಣುತ್ತಿರುವ ಹಿನ್ನೆಲೆ ನಿರ್ದೇಶಕರು ಮತ್ತು ನಾನು ಉತ್ಸಾಹಿಗಳಾಗಿದ್ದೇವೆ ಎಂದು ರೆಹಮಾನ್ ತಿಳಿಸಿದ್ದಾರೆ. ಈ ಚಿತ್ರವೂ ನನಗೆ ಬಲು ವಿಶೇಷವಾಗಿದೆ. ಇದು ನಾಗಾಲ್ಯಾಂಡ್ ರಾಜ್ಯದ ಸುಂದರತೆ ಬಗ್ಗೆ ಬೆಳಕು ಚೆಲ್ಲುವ ಜೊತೆಗೆ ಅಲ್ಲಿನ ಶ್ರೀಮಂತ ಸಂಸ್ಕೃತಿ ಮತ್ತ ಸಂಗೀತ ಇತಿಹಾಸವನ್ನು ಇದು ಹೊಂದಿರಲಿದೆ ಎಂದು ಎ ಆರ್ ರೆಹಮಾನ್ ತಿಳಿಸಿದ್ದಾರೆ.
ನಾವು ಐಎಫ್ಎಫ್ಎಂ ಸ್ಪರ್ಧೆಗೆ ಆಯ್ಕೆಯಾಗಿರುವುದಕ್ಕೆ ಥ್ರಿಲ್ ಆಗಿದ್ದೇವೆ. ಐದು ವರ್ಷಗಳ ಶ್ರಮದ ಫಲ ಈ ಚಿತ್ರವಾಗಿದೆ. ಇದೀಗ ಚಿತ್ರದ ಕುರಿತು ಪ್ರೇಕ್ಷಕರ ಪ್ರತಿಕ್ರಿಯೆ ಬಗ್ಗೆ ಉತ್ಸಾಹಿಯಾಗಿದ್ದೇನೆ. ನಾಗಾಲ್ಯಾಂಡ್ನ ಶ್ರೀಮಂತ ಸಂಸ್ಕೃತಿ ಮತ್ತು ಸಂಗೀತದ ಅನ್ವೇಷಣೆ ಚಿತ್ರದಲ್ಲಿದೆ ಎಂದು ಗುಪ್ತಾ ತಿಳಿಸಿದ್ದಾರೆ.
ಐಎಫ್ಎಫ್ಎಂ ಚಿತ್ರೋತ್ಸವ ನಿರ್ದೇಶಕ ಮಿಟು ಬೋವ್ಮಿಕ್ ಲಾಂಗೆ ಮಾತನಾಡಿ, ಇಷ್ಟು ದೊಡ್ಡ ಕಾರ್ಯಕ್ರಮದಲ್ಲಿ ಈ ಚಿತ್ರ ಚೊಚ್ಚಲ ಪ್ರದರ್ಶನಕ್ಕೆ ಸಜ್ಜಾಗಿರುವುದು ಸಂತಸದ ವಿಚಾರವಾಗಿದೆ ಎಂದಿದ್ದಾರೆ. ಇನ್ನು ಈ ಚಿತ್ರದ ಪ್ರದರ್ಶನದ ವೇಳೆ ಎ ಆರ್ ರೆಹಮಾನ್ ಮತ್ತು ನಿರ್ದೇಶಕರು ಹಾಜರಿರಲಿದ್ದಾರೆ.
ಇದನ್ನೂ ಓದಿ: ಮೊದಲ ಗೌರವಕ್ಕೆ ಪಾತ್ರವಾದ 'ಕಲ್ಕಿ': ಅವಾರ್ಡ್ ಫೋಟೋ ಹಂಚಿಕೊಂಡ ನಿರ್ದೇಶಕ ನಾಗ್ ಅಶ್ವಿನ್