ಕನ್ನಡ ಚಿತ್ರರಂಗದ ಹಾಲ್ಗೆನ್ನೆ ಚೆಲುವೆ ಪ್ರಣಿತಾ ಸುಭಾಷ್ ಶೀಘ್ರದಲ್ಲೇ ತಮ್ಮ ಸಿಹಿ ಸುದ್ದಿ ನೀಡಲಿದ್ದಾರೆ. ಕಿರಿವಯಸ್ಸಿನಲ್ಲೇ ಬಹುಭಾಷಾ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಈ ಚೆಂದುಳ್ಳಿ ಚೆಲುವೆ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಜುಲೈ 25ರಂದು ಸ್ವತಃ ನಟಿಯೇ ಈ ವಿಚಾರವನ್ನು ಅಧಿಕೃತವಾಗಿ ಹಂಚಿಕೊಂಡಿದ್ದರು.
ದಂಪತಿಗೆ ಈಗಾಗಲೇ ಒಂದು ಹೆಣ್ಣು ಮಗುವಿದ್ದು, ಮತ್ತೊಂದು ಕಂದನನ್ನು ಬರಮಾಡಿಕೊಳ್ಳಲು ಸಜ್ಜಾಗಿದ್ದಾರೆ. ಜುಲೈ ತಿಂಗಳಲ್ಲಿ ಗುಡ್ ನ್ಯೂಸ್ ಹಂಚಿಕೊಂಡಿದ್ದ ನಟಿ ಇಂದು ಬೇಬಿ ಶವರ್ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಪ್ರತೀ ಫೋಟೋಗಳು ಸಖತ್ ಅಟ್ರ್ಯಾಕ್ಟಿವ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಅಭಿಮಾನಿಗಳು ತಮ್ಮ ಮೆಚ್ಚಿನ ತಾರೆಗೆ ಪ್ರೀತಿಯ ಧಾರೆಯೆರೆಯುತ್ತಿದ್ದಾರೆ.
ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಸೀಮಂತ ಶಾಸ್ತ್ರದ ಫೋಟೋಗಳನ್ನು ಹಂಚಿಕೊಂಡ ಬಹುಭಾಷಾ ನಟಿ ಪೋಸ್ಟ್ಗೆ 'A baby shower to remember' ಎಂಬ ಕ್ಯಾಪ್ಷನ್ ಕೊಟ್ಟಿದ್ದಾರೆ. ಸಖತ್ ಮಾರ್ಡನ್ ಆಗಿ ಬೇಬಿ ಶವರ್ ಪ್ರೊಗ್ರಾಮ್ ಸೆಲೆಬ್ರೇಟ್ ಮಾಡಲಾಗಿದೆ. ಕುಟುಂಬಸ್ಥರು, ಆತ್ಮೀಯರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.
ಪ್ರಣಿತಾ ವೈಟ್ ಗೌನ್ನಲ್ಲಿ ಸಖತ್ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿದ್ದಾರೆ. ಮಿನಿಮಮ್ ಮೇಕ್ ಅಪ್, ಫ್ರೀ ಹೇರ್ಸ್ಟೈಲ್ ನಟಿಯ ಸೊಬಗನ್ನು ದ್ವಿಗುಣಗೊಳಿಸಿದೆ. ಪತಿ ಕೂಡಾ ನಟಿಗೆ ಹೊಂದಿಕೆಯಾಗುವಂತೆ ವೈಟ್ ಟೀ ಶರ್ಟ್, ಬ್ಲ್ಯಾಕ್ ಜೀನ್ಸ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಮಗಳು ಕೂಡಾ ವೈಟ್ ಫ್ರಾಕ್ನಲ್ಲಿ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಸಮಾರಂಭಕ್ಕೆ ಸಾಕ್ಷಿಯಾದವರು ಕೂಡಾ ಕಂಪ್ಲೀಟ್ ಮಾರ್ಡನ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಫೋಟೋಗಳಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಸೋಷಿಯಲ್ ಮೀಡಿಯಾ ಬಳಕೆದಾರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಪೋಸ್ಟ್ಗೆ ಪ್ರತಿಕ್ರಿಯಿಸಿದ ಅಭಿಮಾನಿಯೋರ್ವರು, ''ಇದು ಆಕರ್ಷಕ ಬೇಬಿ ಶವರ್. ನೀವು ಗೊಂಬೆಯಂತೆ ಕಾಣುತ್ತಿದ್ದೀರಿ" ಎಂದು ತಿಳಿಸಿದ್ದಾರೆ. ಮತ್ತೋರ್ವರು ಅಭಿನಂದನೆಗಲು ಎಂದು ತಿಳಿಸಿದ್ದಾರೆ. ಇಬ್ಬರು ಬಾರ್ಬಿಯರು ಒಂದೇ ಫ್ರೇಮ್ನಲ್ಲಿ ಎಂದು ನೆಟ್ಟಿಗರೋರ್ವರು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕ್ಯೂಟಿ, ಬ್ಯೂಟಿಫುಲ್ ಎಂಬ ಗುಣಗಾನಗಳ ಜೊತೆಗೆ ರೆಡ್ ಹಾರ್ಟ್ ಸಿಂಬಲ್ನೊಂದಿಗೆ ಅಬಿಮಾನಿಗಳು ತಮ್ಮ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: 'ಅಣ್ಣ From Mexico' ಆದ್ರೂ ಅಪ್ಪಟ ಕನ್ನಡಿಗ: ಡಾಲಿ ಧನಂಜಯ್ ಜನ್ಮದಿನಕ್ಕಿದು ಸ್ಪೆಷಲ್ ಗಿಫ್ಟ್ - Anna From Mexico
ಜುಲೈ 25ರಂದು ಪ್ರಣಿತಾ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ಗರ್ಭಿಣಿ ಆಗಿರುವ ವಿಚಾರವನ್ನು ಹಂಚಿಕೊಂಡಿದ್ದರು. ಅಂದು ಐದು ಫೋಟೋಗಳನ್ನು ಹಂಚಿಕೊಂಡಿದ್ದ ಬಹುಭಾಷಾ ತಾರೆ, ಪೋಸ್ಟ್ಗೆ ರೌಂಡ್ 2, ಪ್ಯಾಂಟ್ ಫಿಟ್ ಅಗುತ್ತಿಲ್ಲ ಎಂಬ ಕ್ಯಾಪ್ಷನ್ ಕೊಟ್ಟಿದ್ದರು. ಜೀನ್ಸ್ ಪಾಂಟ್, ಬ್ಲ್ಯಾಕ್ ಸ್ಲೀವ್ಲೆಸ್ ಟಾಪ್ ಧರಿಸಿದ್ದರು. ಫೋಟೋಗಳಲ್ಲಿ ಬೇಬಿ ಬಂಪ್ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಮತ್ತೊಮ್ಮೆ ತಾಯಿಯಾಗುತ್ತಿರುವ ಖುಷಿ ಮತ್ತು ಕಳೆ ನಟಿ ಮೊಗದಲ್ಲಿ ಎದ್ದು ಕಾಣುತ್ತಿತ್ತು.
ಇದನ್ನೂ ಓದಿ: 'ಜಿಂಗೋ' ಆದ ಡಾಲಿ: ವೇದಿಕೆಯಲ್ಲಿ ಅಬ್ಬರಿಸಿದ ಧನಂಜಯ್; ಹೊಸ ಅವತಾರದಲ್ಲಿ ನಟರಾಕ್ಷಸ - JINGO Glimpse
2010ರಲ್ಲಿ 'ಪೊರ್ಕಿ' ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ನಟಿ ಪ್ರಣಿತಾ ಸುಭಾಷ್ ಕನ್ನಡದ ಜೊತೆ ಜೊತೆಗೆ ತೆಲುಗು, ತಮಿಳು ಹಾಗೂ ಹಿಂದಿ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. 2021ರ ಮೇ ತಿಂಗಳಲ್ಲಿ ಬೆಂಗಳೂರು ಮೂಲದ ಉದ್ಯಮಿ ನಿತಿನ್ ರಾಜ್ ಅವರೊಂದಿಗೆ ಹಸೆಮಣೆ ಏರಿದರು. 2022ರ ಜೂನ್ನಲ್ಲಿ ಮೊದಲ ಮಗುವಿಗೆ ಜನ್ಮ ನೀಡಿ ತಾಯಿಯಾಗಿ ಭಡ್ತಿ ಪಡೆದಿದ್ದಾರೆ. ಶೀಘ್ರದಲ್ಲೇ ಎರಡನೇ ಕಂದನ ಜನನವಾಗಲಿದೆ.