ETV Bharat / entertainment

ಜನಮನ ಗೆದ್ದ ಕನ್ನಡ ಸಿನಿಮಾ: 50 ದಿನದ ಸಂಭ್ರಮದಲ್ಲಿ 'ಕೆರೆಬೇಟೆ' - Kerebete Success Celebration - KEREBETE SUCCESS CELEBRATION

ಕೆರೆಬೇಟೆ ಚಿತ್ರತಂಡ 50 ದಿನಗಳ ಸಂಭ್ರಮಾಚರಣೆ ಕಾರ್ಯಕ್ರಮ ಆಯೋಜಿಸಿತ್ತು.

Kerebete movie team
ಕೆರೆಬೇಟೆ ಸಕ್ಸಸ್ ಸೆಲೆಬ್ರೇಶನ್​ (ETV Bharat)
author img

By ETV Bharat Karnataka Team

Published : May 28, 2024, 12:58 PM IST

2022ರಲ್ಲಿ ಇಡೀ ಭಾರತೀಯ ಸಿನಿಮಾ ರಂಗವನ್ನೇ ತನ್ನತ್ತ ಸೆಳೆದ ಕನ್ನಡ ಚಿತ್ರರಂಗದಲ್ಲೀಗ ಸಿನಿಮಾಗಳು ಸಕ್ಸಸ್ ಕಾಣುತ್ತಿಲ್ಲವೆಂಬ ಮಾತುಗಳು ಕೇಳಿ ಬರುತ್ತಿವೆ. ಆದ್ರೆ ಈ ಮಧ್ಯೆ ಗೌರಿಶಂಕರ್ ಮುಖ್ಯಭೂಮಿಕೆಯ, ರಾಜ್ ಗುರು ನಿರ್ದೇಶನದ 'ಕೆರೆಬೇಟೆ' ಸಿನಿಮಾ 50 ದಿನಗಳನ್ನು ಪೂರೈಸಿದೆ. ಸಿನಿಮಾಗಳು ಹಿಟ್ ಆಗುತ್ತಿಲ್ಲ, ಚಿತ್ರಮಂದಿರಕ್ಕೆ ಪ್ರೇಕ್ಷಕರು ಬರುತ್ತಿಲ್ಲವೆಂಬ ಈ ಪರಿಸ್ಥಿತಿಯಲ್ಲಿ 'ಕೆರೆಬೇಟೆ' 50 ದಿನ ಪೂರೈಸಿರುವುದು ಖುಷಿಯ ವಿಚಾರ.

ರಾಜ್​​ಗುರು, ಗೌರಿಶಂಕರ್ ಸೇರಿದಂತೆ ಸಂಪೂರ್ಣ ಚಿತ್ರತಂಡ ಕಷ್ಟಪಟ್ಟು, ಇಷ್ಟಪಟ್ಟು ಮಾಡಿದ ಸಿನಿಮಾವೇ 'ಕೆರೆಬೇಟೆ'. ಭಾರಿ ನಿರೀಕ್ಷೆ, ಕುತೂಹಲದೊಂದಿಗೆ ಚಿತ್ರಮಂದಿರಕ್ಕೆ ಎಂಟ್ರಿ ಕೊಟ್ಟಿತ್ತು. ಕುತೂಹಲಕ್ಕೆ ತಕ್ಕಂತೆ ಸಿನಿಮಾ ಕೂಡ ಅದ್ಭುತವಾಗಿ ಮೂಡಿ ಬಂದಿತ್ತು. ಆದರೆ ಕಮರ್ಷಿಯಲ್​ ಆಗಿ ಸಿನಿಮಾ ಯಾಕೋ ದೊಡ್ಡಮಟ್ಟದ ಸಕ್ಸಸ್ ಕಾಣಲಿಲ್ಲ. ಈ ಬೇಸರ ಕೂಡಾ ತಂಡಕ್ಕಿದೆ. ಕಮರ್ಷಿಯಲ್ ಆಗಿ ದೊಡ್ಡಮಟ್ಟದ ಸಕ್ಸಸ್ ಆಗದಿದ್ದರೂ, ಜನರ ಮನ ಗೆದ್ದಿರುವುದು ತಂಡದ ಶ್ರಮಕ್ಕೆ ಸಿಕ್ಕ ಫಲವಾಗಿದೆ.

Kerebete movie team
ಕೆರೆಬೇಟೆ ಸಕ್ಸಸ್ ಸೆಲೆಬ್ರೇಶನ್​ (ETV Bharat)

ಇದೇ ಖುಷಿಯಲ್ಲಿ ಚಿತ್ರತಂಡ ಮಾಧ್ಯಮದ ಮುಂದೆ ಹಾಜರಾಗಿತ್ತು. ಸಿನಿಮಾಗಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ಮೊಮೆಂಟೋಗಳನ್ನು ಕೊಡುವ ಮೂಲಕ ಚಿತ್ರತಂಡ 50 ದಿನಗಳನ್ನು ಪೂರೈಸಿದ ಸಂಭ್ರಮವನ್ನು ಆಚರಿಸಿತು. ಕೆರೆಬೇಟೆ ಸಕ್ಸಸ್ ಸಂಭ್ರಮಾಚರಣೆಗೆ ಖ್ಯಾತ ನಿರ್ದೇಶಕರಾದ ಶಶಾಂಕ್, ದಯಾಳ್ ಪದ್ಮನಾಭ್ ಮತ್ತು ನಿರ್ಮಾಪಕ ಉದಯ್ ಮೆಹ್ತಾ, ನಟ ಪ್ರಥಮ್ ಸಾಕ್ಷಿಯಾದರು.

ಕಾರ್ಯಕ್ರಮದಲ್ಲಿ ಮಾತನಾಡಿದ ನಾಯಕ ಗೌರಿ ಶಂಕರ್, ಸಿನಿಮಾ ಕಮರ್ಷಿಯಲಿ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿಲ್ಲ. ಆದರೆ ಜನ ಒಳ್ಳೆಯ ರಿವ್ಯೂವ್ ಕೊಟ್ಟಿದ್ದಾರೆ. ಎಲ್ಲೇ ಹೋದರೂ ಕೆರೆಬೇಟೆ ಹೀರೋ ಅಂತಾ ಗುರುತಿಸುತ್ತಾರೆ. ಕರ್ನಾಟಕದ ಅನೇಕ ಚಿತ್ರಮಂದಿರಗಳಲ್ಲಿ ಕೆರೆಬೇಟೆ 50 ದಿನ ಓಡಿದೆ. ಇನ್ನೂ ಕೆಲ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನವಾಗುತ್ತಿದೆ. ಈ ಖುಷಿಯನ್ನು ನಿಮ್ಮ ಜೊತೆ ಹಂಚಿಕೊಳ್ಳಬೇಕು ಎನ್ನುವ ಕಾರಣಕ್ಕೆ 50 ದಿನದ ಸಂಭ್ರಮವನ್ನು ಇಟ್ಟುಕೊಂಡಿದ್ದೇವೆ. 'ಕೆರೆಬೇಟೆ' ನನ್ನ ದೊಡ್ಡ ಕನಸಾಗಿತ್ತು. ಆದರೆ ಕಮರ್ಷಿಯಲ್​ಆಗಿ ಸಕ್ಸಸ್ ಆಗದೇ ಇರುವ ಬೇಸರವೂ ಇದೆ. ಇನ್ಮುಂದೆ ಒಳ್ಳೆಯ ಕಥೆ ಬಂದರೆ ನಟಿಸುತ್ತೇನೆ ಅಷ್ಟೇ, ಆದರೆ ಪ್ರೊಡಕ್ಷನ್ ಸದ್ಯಕ್ಕೆ ಮಾಡಲ್ಲ ಎಂದು ತಿಳಿಸಿದರು.

Kerebete movie team
50 ದಿನದ ಸಂಭ್ರಮದಲ್ಲಿ 'ಕೆರೆಬೇಟೆ' (ETV Bharat)

ನಿರ್ದೇಶಕ ರಾಜ್​​ಗುರು ಮಾತನಾಡಿ, ನನ್ನ ಕನಸನ್ನು ನನಸು ಮಾಡಿದ ಜನಮನ ಸಿನಿಮಾ ಸಂಸ್ಥೆಗೆ ಧನ್ಯವಾದಗಳು. ಈ ಸಿನಿಮಾಗೆ ದೊಡ್ಡ ದೊಡ್ಡ ಡೈರೆಕ್ಟರ್ಸ್, ಹೀರೋ ಹಾಗೂ ಹೀರೋಯಿನ್ಸ್ ಸಪೋರ್ಟ್ ಮಾಡಿದ್ದಾರೆ. ಎಲ್ಲರಿಗೂ ಧನ್ಯವಾದಗಳು ಎಂದರು.

ನಾಯಕಿ ಬಿಂದು ಗೌಡ ಮಾತನಾಡಿ, ಈ ಸಿನಿಮಾ ನೋಡಿದ ಎಲ್ಲರೂ ಉತ್ತಮ ವಿಮರ್ಷೆ ಕೊಟ್ಟಿದ್ದಾರೆ. ಆ ಖುಷಿ ಇದೆ. ಚಿತ್ರತಂಡಕ್ಕೆ ಧನ್ಯವಾದಗಳು ಎಂದರು. ನಟಿ ಹರಣಿ ಕೂಡ ಸರ್ವರಿಗೂ ಧನ್ಯವಾದ ಅರ್ಪಿಸಿದರು.

ಇದನ್ನೂ ಓದಿ: ಡೈನಾಮಿಕ್ ಪ್ರಿನ್ಸ್ 'ಕರಾವಳಿ' ಅಡ್ಡಕ್ಕೆ 'ಮಿಸ್ಟರ್ ದುಬೈ' ಎಂಟ್ರಿ - Karavali Movie Villain

ನಿರ್ದೇಶಕರಾದ ದಯಾಳ್ ಪದ್ಮನಾಭ್, ಶಶಾಂಕ್, ನಿರ್ಮಾಪಕ ಉದಯ್ ಮೆಹ್ತಾ ಸಿನಿಮಾರಂಗದಲ್ಲಿನ ತಮ್ಮ ಅನುಭವವನ್ನು ಇದೇ ಕಾರ್ಯಕ್ರಮದಲ್ಲಿ ಬಿಚ್ಚಿಟ್ಟರು. ಸಿನಿಮಾ ಸಕ್ಸಸ್ ಆಗಿಲ್ಲ ಎನ್ನುವ ಬೇಸರದಲ್ಲಿದ್ದ ನಾಯಕ ಗೌರಿಶಂಕರ್​​ಗೆ ಸಮಾಧಾನ ಮಾಡಿದರು. ಸಿನಿಮಾವನ್ನು ಜನ ಒಪ್ಪಿಕೊಂಡಿದ್ದಾರೆ, ಉತ್ತಮ ರಿವ್ಯೂ ಕೊಟ್ಟಿದ್ದಾರೆ. ಇದಕ್ಕಿಂತ ಇನ್ನೇನು ಬೇಕು ಎಂದು ಹೇಳಿದರು. ನಟ ಪ್ರಥಮ್ ಕೂಡ ಮಾತನಾಡಿ, 50 ದಿನದ ಸಂಭ್ರಮದಲ್ಲಿ ಬೇಸರದ ಮಾತುಗಳು ಬೇಡ ಎಂದು ಗೌರಿಶಂಕರ್​​ಗೆ ಧೈರ್ಯ ತುಂಬಿದರು.

Kerebete movie team
'ಕೆರೆಬೇಟೆ' ನಾಯಕ ನಾಯಕಿ (ETV Bharat)

ಇದನ್ನೂ ಓದಿ: 'ಮೈ ಮ್ಯಾರೇಜ್ ಇಸ್ ಫಿಕ್ಸ್ಡ್' ಅಂತಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್ - Krishnam Pranaya Sakhi Song

ಕೆರೆಬೇಟೆ ಸಿನಿಮಾ ಬಗ್ಗೆ ಹೇಳುವುದಾದರೆ ಅಪ್ಪಟ ಹಳ್ಳಿ ಸೊಗಡಿನ ಚಿತ್ರ. ಮಾರ್ಚ್ 15ಕ್ಕೆ ರಾಜ್ಯಾದ್ಯಂತ ರಿಲೀಸ್ ಆಗಿತ್ತು. ಜನಮನ ಸಿನಿಮಾ ಸಂಸ್ಥೆಯಲ್ಲಿ ಮೂಡಿ ಬಂದಿದ್ದ ಈ ಸಿನಿಮಾ ಮಲೆನಾಡಿನ ಮೀನು ಬೇಟೆ ಸಂಸ್ಕೃತಿಯನ್ನು ಪರಿಚಯಿಸಿತ್ತು. ಸಿನಿಮಾದಲ್ಲಿ ನಾಯಕ ಗೌರಿಶಂಕರ್, ನಾಯಕಿ ಬಿಂದು ಗೌಡ ಜೊತೆಗೆ ಗೋಪಾಲ್ ದೇಶಪಾಂಡೆ, ಸಂಪತ್ ಕುಮಾರ್ ಹರಿಣಿ ಸೇರಿದಂತೆ ಅನೇಕ ದೊಡ್ಡ ಕಲಾವಿದರು ಬಣ್ಣಹಚ್ಚಿದ್ದಾರೆ. ಚಿತ್ರ ತೆರೆಕಂಡು 50 ದಿನ ಪೂರೈಸಿದೆ. ಸದ್ಯ ಕೆಲ ಚಿತ್ರಮಮದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಆದ್ರೀಗ, ಬೆಂಬಲ ಸೂಚಿಸಿದ ಸರ್ವರಿಗೂ ಧನ್ಯವಾದ ಅರ್ಪಿಸಲು 50 ದಿನದ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಚಿತ್ರತಂಡ ಇಟ್ಟುಕೊಂಡಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.