ETV Bharat / entertainment

'12th ಫೇಲ್' ಸಿನಿಮಾ​ಗೆ ಫಿಲ್ಮ್​ ಫೇರ್ ಪ್ರಶಸ್ತಿ​ ಗರಿ - 12th ಫೇಲ್​

ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಟ​ ಮತ್ತು ಅತ್ಯುತ್ತಮ ನಿರ್ದೇಶಕ ವಿಭಾಗಗಳಲ್ಲಿ '12th ಫೇಲ್' ಸಿನಿಮಾ 69ನೇ ಫಿಲ್ಮ್​ ಫೇರ್​ ಪ್ರಶಸ್ತಿ ಗೆದ್ದುಕೊಂಡಿದೆ.​​

12th ಫೇಲ್​ ಸಿನಿಮಾ
12th ಫೇಲ್​ ಸಿನಿಮಾ
author img

By ANI

Published : Jan 29, 2024, 8:48 AM IST

ಗಾಂಧಿನಗರ(ಗುಜರಾತ್​): ಕಳೆದ ವರ್ಷ ತೆರೆಗೆ ಬಂದು ಪ್ರೇಕ್ಷಕರ ಮನೆಗೆದ್ದ '12th ಫೇಲ್' ಸಿನಿಮಾ ​​69ನೇ ಫಿಲ್ಮ್​ ಫೇರ್​ ಪ್ರಶಸ್ತಿ ಗೆದ್ದುಕೊಂಡಿದೆ. ನಟ ವಿಕ್ರಾಂತ್ ಮಾಸ್ಸೆ ಮತ್ತು ನಟಿ ಮೇಧಾ ಶಂಕರ್ ಒಳಗೊಂಡ ಸಿನಿಮಾ ತಂಡ ಭಾನುವಾರ ಗಾಂಧಿನಗರದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದರು.

ಈ ಸಿನಿಮಾದಲ್ಲಿ ಅದ್ಭುತ ನಟನೆಗಾಗಿ ವಿಕ್ರಾಂತ್ ಮಾಸ್ಸೆ ಅಪಾರ ಮೆಚ್ಚುಗೆ ಗಳಿಸಿದ್ದರು. ಇದಕ್ಕಾಗಿ ವಿಕ್ರಾಂತ್ ಮಾಸ್ಸೆ ಅತ್ಯುತ್ತಮ ನಟ (ವಿಮರ್ಶಕರ ಆಯ್ಕೆ) ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಇದೇ ಚಿತ್ರಕ್ಕೆ ಅತ್ಯುತ್ತಮ ನಿರ್ದೇಶಕ ​​ಪ್ರಶಸ್ತಿಯೂ ಸಂದಿದ್ದು, ವಿಧು ವಿನೋದ್ ಚೋಪ್ರಾ ಈ ಗೌರವಕ್ಕೆ ಪಾತ್ರರಾದರು.

ನಟ ವಿಕ್ರಾಂತ್ ಮಾಸ್ಸೆ ಮತ್ತು ನಿರ್ದೇಶಕ ವಿಧು ವಿನೋದ್ ಚೋಪ್ರಾ
12th ಫೇಲ್‌ ಸಿನಿಮಾ ನಟ ವಿಕ್ರಾಂತ್ ಮಾಸ್ಸೆ ಮತ್ತು ನಿರ್ದೇಶಕ ವಿಧು ವಿನೋದ್ ಚೋಪ್ರಾ

ನಿರ್ದೇಶಕ ವಿಧು ವಿನೋದ್ ಚೋಪ್ರಾ 12th ಫೇಲ್ ಚಿತ್ರದ ಕಥೆ ಬರೆದು ನಿರ್ಮಿಸಿದ್ದಾರೆ. ಐಪಿಎಸ್ ಅಧಿಕಾರಿ ಮನೋಜ್ ಕುಮಾರ್ ಶರ್ಮಾ ಮತ್ತು ಪತ್ನಿ ಶ್ರದ್ಧಾ ಜೋಶಿ ಅವರ ಜೀವನಗಾಥೆಯ ಕುರಿತಾದ ಅನುರಾಗ್ ಪಾಠಕ್ ಅವರ ಕಾದಂಬರಿ ಆಧಾರಿತ ಚಿತ್ರ ಇದಾಗಿದೆ. ಚಿತ್ರದಲ್ಲಿ ಪ್ರಿಯಾಂಶು ಚಟರ್ಜಿ, ಅನಂತ್ ಜೋಶಿ, ಅಂಶುಮಾನ್ ಪುಷ್ಕರ್ ಸೇರಿದಂತೆ ಇತರರು ನಟಿಸಿದ್ದಾರೆ.

ಕಳೆದ ಅಕ್ಟೋಬರ್ 27ರಂದು 12th ಫೇಲ್ ಚಿತ್ರಮಂದಿರ​ಗಳಲ್ಲಿ ತೆರೆ ಕಂಡಿತ್ತು. ಕನ್ನಡ ಚಿತ್ರರಂಗದಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡಿರುವ ಕೆ.ಆರ್.ಜಿ ಸ್ಟುಡಿಯೋಸ್ ಈ ಸಿನಿಮಾವನ್ನು ಕನ್ನಡದಲ್ಲಿ ವಿತರಿಸಿತ್ತು. ದಕ್ಷಿಣ ಭಾರತದ ಖ್ಯಾತ ನಟ ಕಮಲ್ ಹಾಸನ್, ನಟಿ ಆಲಿಯಾ ಭಟ್, ದೀಪಿಕಾ ಪಡುಕೋಣೆ, ವಿಕ್ಕಿ ಕೌಶಲ್, ಕನ್ನಡ ಸ್ಟಾರ್​ ನಟ ರಿಷಬ್ ಶೆಟ್ಟಿ, ಸಂಜಯ್ ದತ್, ಫರ್ಹಾನ್ ಅಖ್ತರ್ ಮತ್ತು ಅನಿಲ್ ಕಪೂರ್ ಮುಂತಾದವರು ಸಿನಿಮಾ ಮೆಚ್ಚಿಕೊಂಡಿದ್ದರು.

ಇದನ್ನೂ ಓದಿ: ಕಾರ್ತಿಕ್‌ ಮಹೇಶ್‌ ಮುಡಿಗೆ ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ಕಿರೀಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.