ETV Bharat / education-and-career

ಪೋಷಕರೇ, ನಿಮ್ಮ ಮಕ್ಕಳಿಗೆ ಯಾವ ರೀತಿ ಬುಕ್​ ಇಷ್ಟ ಎಂಬ ಬಗ್ಗೆ ನಿಮಗಿದೆಯಾ ಐಡಿಯಾ? - Book Choice for children - BOOK CHOICE FOR CHILDREN

ಸಾಮಾನ್ಯವಾಗಿ ನಾವು ಪುಸ್ತಕಗಳು ಮಕ್ಕಳಿಗೆ ಇಷ್ಟವಾಗುತ್ತವೆ ಎಂದು ಖರೀದಿಸಿದರೂ ಅದು ಅವರ ಮನಗೆಲ್ಲುವಲ್ಲಿ ವಿಫಲವಾಗುತ್ತದೆ. ಈ ಬಗ್ಗೆ ಎಚ್ಚರಿಕೆ ವಹಿಸಿ, ಮಕ್ಕಳಿಗೆ ಪ್ರಯೋಜನವಾ ಎಂದು ಯೋಚಿಸಿ ನಿರ್ಧಾರ ಕೈಗೊಳ್ಳಬೇಕಿದೆ.

What kind of book are you buying for children?
ಸಾಂದರ್ಭಿಕ ಚಿತ್ರ (ಈಟಿವಿ ಭಾರತ್​​)
author img

By ETV Bharat Karnataka Team

Published : Jul 26, 2024, 5:06 PM IST

ಹೈದರಾಬಾದ್​: ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವುದು ಉತ್ತಮ. ಇದೇ ಕಾರಣಕ್ಕೆ ಮಕ್ಕಳಲ್ಲಿ ಓದಿಗೆ ಪ್ರೇರಣೆಯಾಗಲಿ ಎಂದು ಅನೇಕ ತಾಯಂದಿರು ಪುಸ್ತಕವನ್ನು ಉಡುಗೊರೆಯಾಗಿ ನೀಡುತ್ತಾರೆ. ಆದರೆ, ಮಕ್ಕಳಿಗೆ ಈ ಗಿಫ್ಟ್​ ನೋಡಿದಾಕ್ಷಣ ನಿರಾಸಕ್ತಿ ಬರುತ್ತದೆ. ಪಠ್ಯದ ಹೊರತಾದ ಮತ್ತಷ್ಟು ಓದುಗಳನ್ನು ಮಕ್ಕಳು ಇಷ್ಟ ಪಡುವುದಿಲ್ಲ. ಇದಕ್ಕೆ ಕಾರಣ ಏನು? ಅವರಲ್ಲಿ ಓದಿನ ಬಗ್ಗೆ ಆಸಕ್ತಿ ಮೂಡಿಸಬೇಕು ಎಂದ್ರೆ ಏನು ಮಾಡಬೇಕು? ಎಂದು ಯೋಚಿಸುವ ತಾಯಂದಿರು ಮೊದಲು ಮಕ್ಕಳ ಪುಸ್ತಕ ಆಯ್ಕೆ ಕುರಿತು ಕೆಲವು ಅಂಶಗಳತ್ತ ಗಮನಹರಿಸುವುದು ಸೂಕ್ತ.

ಹೌದು, ಸಾಮಾನ್ಯವಾಗಿ ನಾವು ಪುಸ್ತಕಗಳು ಮಕ್ಕಳಿಗೆ ಇಷ್ಟವಾಗುತ್ತವೆ ಎಂದು ಖರೀದಿಸಿದರೂ ಅದು ಅವರ ಮನಗೆಲ್ಲುವಲ್ಲಿ ವಿಫಲವಾಗುತ್ತದೆ. ಈ ಹಿನ್ನೆಲೆ ಮಕ್ಕಳ ವಯಸ್ಸು ಮತ್ತು ಅವರ ಓದುವಿಕೆ ಮಟ್ಟವನ್ನು ಮೊದಲು ಗಮನಿಸಿ. ಅದರ ಆಧಾರದ ಮೇಲೆ ಅವರ ಆಸಕ್ತಿ ಹೆಚ್ಚಿಸುವಂತಹ ಪುಸ್ತಕಗಳನ್ನು ಹೆಚ್ಚಿಸಿ. ವಿಶೇಷವಾಗಿ ಅವರ ಆಸಕ್ತಿಯನ್ನು ಪತ್ತೆ ಮಾಡಬೇಕು. ಬಾಲವಸ್ಥೆಯ ಮಕ್ಕಳು ಶಬ್ಧಗಳಿಲ್ಲದ, ಪಿಕ್ಚರ್​ಗಳನ್ನು ಇಷ್ಟಪಡುತ್ತಾರೆ ಎಂದು ನೆನಪಿನಲ್ಲಿಡಿ.

5 ವರ್ಷದ ಮಕ್ಕಳು ಪ್ರತಿನಿತ್ಯ ಬಳಕೆ ಮಾಡುವ ಸಾಮಾನ್ಯವಾಗಿ ಬಳಕೆಯಲ್ಲಿರುವ ಶಬ್ಧಗಳನ್ನು ಓದಲು ಇಷ್ಟಪಡುತ್ತಾರೆ. ಗೊತ್ತಿರುವ ಚಿತ್ರಗಳೊಂದಿಗಿನ ಕಥೆಗಳನ್ನು ನೋಡಿದಾಗ ಅವುಗಳ ಬಗ್ಗೆ ಆಸಕ್ತಿ ಹೊಂದುತ್ತಾರೆ.

8 ರಿಂದ 9 ವರ್ಷದ ಮಕ್ಕಳು ಸಣ್ಣ ಕಥೆ ಅಥವಾ ನೈಜ ಜಗತ್ತಿನ ಕಥೆಗಳನ್ನು ಓದುವ ಆಸಕ್ತಿ ಹೊಂದಿರುತ್ತಾರೆ. ಅವರು ಹೆಚ್ಚಾಗಿ ಫ್ಯಾಂಟಸಿ, ಸಹಾಯ ಮತ್ತು ಸ್ನೇಹದ ಅಂಶವನ್ನು ಹೊಂದಿರುವ ಕಥೆಗಳ ಬಗ್ಗೆ ಕುತೂಹಲ ಹೊಂದಿರುತ್ತಾರೆ.

10 ವರ್ಷದ ಮೇಲಿನ ಮಕ್ಕಳು ಮಿದುಳು ಚುರುಕಾಗಿರುತ್ತದೆ. ಇದನ್ನು ಪಿಕ್ಚರ್​ ವಾಕ್​ ಎನ್ನುತ್ತಾರೆ. ಅವರಲ್ಲಿ ಚಿತ್ರಕಲೆ ಮತ್ತು ಕಥೆ ಹೇಳುವ ಬಗ್ಗೆ ಆಸಕ್ತಿ ಹೊಂದಿರುತ್ತಾರೆ.

ಸಲಹೆ ಪಡೆಯಿರಿ: ಪೋಷಕರು ಮಕ್ಕಳು ಹಾಗೂ ಇತರ ಮಕ್ಕಳು ಹೊಂದಿರುವ ಆಸಕ್ತಿಯ ಬಗ್ಗೆ ಅರಿವಿರುವುದು ಅಗತ್ಯವಾಗಿದೆ. ಇದಕ್ಕಾಗಿ, ಮಕ್ಕಳ ಸ್ನೇಹಿತರು ಮತ್ತು ಶಿಕ್ಷಕರ ಮಾತುಕತೆ ನಡೆಸುವುದು. ಅವರ ಓದಿನ ಪರಾಮರ್ಶೆ ನಡೆಸುವುದು ಅಗತ್ಯ. ಜೊತೆಗೆ ಶಾಲೆಗಳಲ್ಲಿ ಮಕ್ಕಳು ಓದು ಪುಸ್ತಕಗಳ ಆಯ್ಕೆ ಕುರಿತು ಗ್ರಂಥಾಲಯ ಮೇಲ್ವಿಚಾಕರ ಮಾಹಿತಿಯನ್ನು ಪಡೆಯಬಹುದು. ಅವರಿಂದ ಕೂಡ ಪುಸ್ತಕಗಳ ಕೊಳ್ಳುವಿಕೆಗೆ ಸಲಹೆಯನ್ನು ಪಡೆಯಬಹುದು. ಮಕ್ಕಳು ಇಂದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಸಂಪರ್ಕ ಹೊಂದಿದ್ದು, ಅಲ್ಲಿ ಕೂಡ ಮಕ್ಕಳ ಹಲವು ಆಸಕ್ತಿ ವಿಚಾರಗಳನ್ನು ತಿಳಿಯಬಹುದು. ಮಕ್ಕಳು ಓದುವ ಬುಕ್​ ಬ್ಲಾಗ್ಸ್​ ಮತ್ತು ಆನ್​ಲೈನ್​ ಸ್ಟೋರ್​ಗಳ ಮೂಲಕ ಉತ್ತಮ ಮಾರಾಟದ ಪುಸ್ತಕವನ್ನು ಆಯ್ಕೆ ಮಾಡಬಹುದಾಗಿದೆ.

ಇದನ್ನೂ ಓದಿ: ಅಂಬಾನಿ ಶಾಲೆ ಬಗ್ಗೆ ನಿಮಗೆಷ್ಟು ಗೊತ್ತು: ಈ ಸ್ಕೂಲ್​​​​ನಲ್ಲಿದ್ದಾರೆ ಅತಿರಥ ಮಹಾರಥರು: ಶುಲ್ಕ ಎಷ್ಟು, ಏನೆಲ್ಲಾ ಸವಲತ್ತುಗಳಿವೆ ಗೊತ್ತಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.